📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೊಪ್ಪ ತಹಸಿಲ್ದಾರ್ ಲಿಖಿತಾ ಮೋಹನ್, ಅಧಿಕಾರ ದುರುಪಯೋಗ ಮಾಡಿಕೊಂಡರಾ?

    ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ತಹಸಿಲ್ದಾರ್ ಇದೀಗ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ ಎಂಬ ಕಾರಣಕ್ಕೆ, ವೈಯಕ್ತಿಕ ದ್ವೇಷಕ್ಕೆ ತಮ್ಮ ಹುದ್ದೆಯನ್ನು ಬಳಸಿಕೊಳ್ಳುತ್ತಿದ್ದಾರೆ ಎಂಬ ವಿಚಾರವಾಗಿ, ಪ್ರತಿಭಟನೆಯನ್ನು ಎದುರಿಸುತ್ತಿದ್ದಾರೆ.

    ಸ್ಥಳೀಯ ಬಿಜೆಪಿಯ ಕಾರ್ಯಕರ್ತ ಮಂಜುನಾಥ್ ಗೌಡ ,ತಹಶೀಲ್ದಾರ್ ಅವರ ಕೆಂಗಣ್ಣಿಗೆ ಗುರಿಯಾಗಿ ಇದೀಗ ಜೈಲಿಗೆ ಸೇರುವಂತಾಗಿದೆ ಅನ್ನುವುದು ಇಲ್ಲಿನ ರೈತ ಸಂಘದವರ ಆರೋಪ ಹಾಗೂ ಇದೇ ಕಾರಣಕ್ಕೆ ಅವರು ತಹಸಿಲ್ದಾರ್ ವಿರುದ್ಧ ಪ್ರತಿಭಟನೆಯನ್ನೂ ಮಾಡುತ್ತಿದ್ದಾರೆ.

    ತಹಸಿಲ್ದಾರ್ ಲಿಖಿತ ಮೋಹನ್ ಎಂಬುವರು ಹಾಗೂ ಸ್ಥಳೀಯ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಗೌಡ ಎಂಬವರ ನಡುವೆ ಕಳೆದ ಕೆಲವು ಸಮಯಗಳಿಂದ ಒಂದಷ್ಟು ಇಂಟರ್ನಲ್ ಗುದ್ದಾಟಗಳು ನಡೆದದ್ದು ಸುಳ್ಳಲ್ಲ. ಈ ಇಂಟರ್ನಲ್ ಗುದ್ದಾಟಗಳ ವಿಚಾರವನ್ನು ಸೀರಿಯಸ್ಸಾಗಿ ತೆಗೆದುಕೊಂಡ ತಹಸಿಲ್ದಾರ್ ಲಿಖಿತ ಮೋಹನ್, ಮಂಜುನಾಥ್ ಗೌಡರ ವಿರುದ್ಧ ದೂರು ದಾಖಲಿಸುವ ಮೂಲಕ ಬಿಸಿ ಮುಟ್ಟಿಸಿದ್ದಾರೆ. ಆ ದೂರಿನ ಆಧಾರದಲ್ಲಿ ಪ್ರಕರಣ ದಾಖಲಾದ ಕಾರಣ, ಮಂಜುನಾಥಗೌಡ ನ್ಯಾಯಾಲಯದಲ್ಲಿ ಜಾಮೀನಿಗೆ ಅರ್ಜಿ ಹಾಕುತ್ತಾರೆ. ಕೇಳ ನ್ಯಾಯಾಲಯದಲ್ಲಿ ಅದು ತಿರಸ್ಕೃತವಾದ ಕಾರಣ, ಮೇಲಿನ ನ್ಯಾಯಾಲಯದಕ್ಕೆ ಮಂಜುನಾಥ್ ಗೌಡ ಅಪಿಲ್ ಹೋಗುತ್ತಾರೆ. ಅಲ್ಲಿ ಮಂಜುನಾಥ್ ಗೌಡನ ಅರ್ಜಿಯನ್ನು ಸ್ವೀಕರಿಸಿದ ನ್ಯಾಯಾಲಯ, ಜಾಮೀನು ಮಂಜೂರಿ ಮಾಡುತ್ತದೆ. ಹಾಗೆಯೇ ತಹಸಿಲ್ದಾರ್ ಸಮ್ಮುಖದಲ್ಲಿ ಶೂರಿಟಿ ನೀಡುವಂತೆ ಹೇಳಿರುತ್ತದೆ.

    Also Read  ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !

    ಅದರಂತೆಯೇ ಮಂಜುನಾಥ್ ಗೌಡ ತಹಸಿಲ್ದಾರ್ ಮುಂದೆ ಮೂರು ಲಕ್ಷದ ಶೂರಿಟಿ ನೀಡುತ್ತಾರೆ.  ಇಬ್ಬರು ಸರ್ಕಾರಿ ನೌಕರರಿಂದ ಶುರಿಟಿ ಕೇಳಲಾಗುತ್ತದೆ. ಅದಕ್ಕೂ ಸಹ ಮಂಜುನಾಥ್ ಗೌಡ, ಇಬ್ಬರು ಸರ್ಕಾರಿ ನೌಕರರನ್ನು ಕರೆದೊಯ್ಯುತ್ತಾರೆ. ಅದನ್ನು ಒಪ್ಪಿಕೊಳ್ಳದ ತಹಶೀಲ್ದಾರ್ ಲಿಖಿತ ಮೋಹನ್, A ಗ್ರೇಡ್ ಅಧಿಕಾರಿಗಳ ಶೂರೀಟಿಯೇ ಬೇಕು ಅಂತ ಪಟ್ಟು ಹಿಡಿದ ಕಾರಣ, ಮಂಜುನಾಥ್ ಗೌಡಗೆ ಅದನ್ನು ಪೂರೈಸಲು ಆಗಿಲ್ಲ. ಹಾಗಾಗಿ ಮಂಜುನಾಥ್ ಗೌಡ ಸೀದಾ ಜೈಲಿಗೆ ಹೋಗಿದ್ದಾರೆ. ಇದರಿಂದ ಕೆರಳಿದ ಸ್ಥಳೀಯ ರೈತ ಸಂಘ ಮತ್ತು ಬಿಜೆಪಿ ಕಾರ್ಯಕರ್ತರು, ಪ್ರತಿಭಟನೆಗೆ ಮುಂದಾಗಿದ್ದಾರೆ. ತಹಸಿಲ್ದಾರ್ ತಮ್ಮ ಇತಿಮಿತಿಯನ್ನು ಮೀರಿ ಮತ್ತು ತಮ್ಮ ಹುದ್ದೆಯನ್ನೂ ದುರುಪಯೋಗ ಪಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸುವ ಮೂಲಕ ಈ ಪ್ರಕರಣವು ಮತ್ತೊಂದು ಮಗ್ಗಲಿಗೆ ಟರ್ನ್ ಆಗುವಂತೆ ಮಾಡುತ್ತಿದ್ದಾರೆ.

    Also Read  ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.

    ಕೊಪ್ಪ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಸರ್ಕಾರಿ ಜಾಗ ಒಂದರಲ್ಲಿ ನಿರ್ಮಿತವಾಗಿರುವ ಕಟ್ಟಡ ಒಂದನ್ನು ಡೆಮಾಲಿಷ್ ಮಾಡಲು ಹೋದ ಸಂದರ್ಭದಲ್ಲಿ, ಸ್ಥಳೀಯ ಬಿಜೆಪಿ ಕಾರ್ಯಕರ್ತ ಮಂಜುನಾಥ್ ಗೌಡ ಹಾಗೂ ತಹಸಿಲ್ದಾರ್ ಲಿಖಿತ ಮೋಹನ್ ಮಧ್ಯೆ ವಾಕ್ ಸಮರ ನಡೆದಿತ್ತು. ಇದಾದ ನಂತರ ತಹಶೀಲ್ದಾರ್ ತಮ್ಮ ಸರ್ಕಾರಿ ವಾಹನವನ್ನು ವೈಯಕ್ತಿಕ ಉಪಯೋಗಗಳಿಗೆ ಬಳಸಿಕೊಳ್ಳುತ್ತಿದ್ದಾರೆಂದು ಮಂಜುನಾಥ್ ಗೌಡ ಆರೋಪಿಸಿದಾಗ,  ಅವರ ನಡುವಿನ ಕಂದಕ ಇನ್ನಷ್ಟು ಹೆಚ್ಚಿತ್ತು. ಇದೆಲ್ಲವುದರ ಪರಿಣಾಮ, ತಹಸಿಲ್ದಾರ್ ಲಿಖಿತ ಮೋಹನ್ ಖುದ್ದಾಗಿ ಮಂಜುನಾಥ್ ಗೌಡ ಮೇಲೆ ಪ್ರಕರಣ ದಾಖಲಿಸಿದ್ದರು. ಆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಜಾಮೀನು ಮಂಜೂರಿ ಮಾಡಿದ್ದರು, ತಹಸಿಲ್ದಾರ್ ಲಿಖಿತಮೋಹನ್ ತಮ್ಮ ಹುದ್ದೆಯನ್ನು ದುರುಪಯೋಗ ಪಡಿಸಿಕೊಳ್ಳುವ ಮೂಲಕ ಮಂಜುನಾಥ್ ಗೌಡಗೆ ಜಾಮೀನು ಸಿಗದಂತೆ ಮಾಡಿದ್ದಾರೆ ಅನ್ನುವುದು ಸ್ಥಳೀಯರ ಆರೋಪ. ಬಹುಶಹ ಇದು ರಾಜಕೀಯ ತಿರುವನ್ನು ತೆಗೆದುಕೊಳ್ಳುವ ಸಂಭವ ಜಾಸ್ತಿ ಇದೆ. ತಾಸಿಲ್ದಾರ್ ಲಿಖಿತ ಮೋಹನ್ ಒಂದಿಷ್ಟು ಬುದ್ಧಿವಂತಿಕೆ ಉಪಯೋಗಿಸಬಹುದಿತ್ತು . ಬದಲಿಗೆ ಅವರು ದೊಡ್ಡತನವನ್ನು ಮೆರೆದಿದ್ದಾರೆ ಮೇಲ್ನೋಟಕ್ಕೆ ತಹಸಿಲ್ದಾರ್ ತಮ್ಮ ಹುದ್ದೆಯನ್ನು ದುರ್ಬಳಕೆ ಮಾಡಿಕೊಂಡಂತೆ ಕಾಣುತ್ತಿದೆ ಎನ್ನುವುದು ಸ್ಥಳೀಯರ ಹೇಳಿಕೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಆನ್‌ಲೈನ್ ಕೇರಳ ಲಾಟರಿ ಹೆಸರಿನಲ್ಲಿ 1.85 ಲಕ್ಷ ವಂಚನೆ – ಸೈಬರ್ ವಂಚಕರ ಜಾಲ ಪತ್ತೆ
    ದಿಲ್ಲಿಯಲ್ಲಿ ಮತ್ತೊಂದು ನಿರ್ಭಯ ಛಾಯೆ….“ನಿರ್ಭಯಾ ಮತ್ತೆ ನೆನಪು… ಅಪರಾಧಿಗಳು ಮಾತ್ರ ನಿರ್ಭಯ!”ಅಪರಾಧಿಗಳಿಗೆ ಕಾನೂನಿನ ಭಯವೇ ಇಲ್ಲವೇ?
    ಕ್ಯಾಷ್‌ಲೆಸ್ ಭಾರತ… ಮತ್ತೆ ಕ್ಯಾಶ್‌ಗೇ ಮರಳುತ್ತಾರಾ?
    ಪುತ್ತೂರು ಅತ್ಯಾಚಾರ ಪ್ರಕರಣ: ಹೈಕೋರ್ಟ್‌ನಲ್ಲಿ ರಾಜಿ ಸಂಧಾನ ಪ್ರಸ್ತಾಪ..!
    ಕರ್ನಾಟಕದ ನಂದನ್ ನಿಲೇಕಣಿ ನೇತೃತ್ವದಲ್ಲಿ ಭಾರತದ ಪರೀಕ್ಷಾ ವ್ಯವಸ್ಥೆ ಸುಧಾರಣೆಗೆ ಮೋದಿ ಸರ್ಕಾರದ ಬಿಗ್ ಪ್ಲಾನ್!ಈಗ ರಾಷ್ಟ್ರೀಯ ಪರೀಕ್ಷೆಗಳಿಗೆ ಹೊಸ ರೂಪ ನಿಲೇಕಣಿ ಕೈಯಲ್ಲಿ!
    ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
    ಸರ್ವಜನಾಂಗದ ಶಾಂತಿಯ ತೋಟಕ್ಕೆ ಮತ್ತೊಂದು ಸೌಹಾರ್ದದ ಹೆಜ್ಜೆ
    ಶಂಕರಾಚಾರ್ಯರ ಹೊಸ ಯೋಜನೆ ದೇಶವನ್ನೇ ಚರ್ಚೆಗೆ ತಳ್ಳಿದ ಕಾರಣ ಏನು?Go-LXಒಂದು ಕ್ಲಿಕ್‌ನಲ್ಲಿ ಹಸು ಮಾರಾಟ…
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    “ನಿಮ್ಮ ಮಗಳನ್ನು ನಾನು ಸಾಯಿಸಿದ್ದೇನೆ…ನಾಳೆ ನನ್ನ ಹೆಣವನ್ನೂ ನೋಡುತ್ತೀರಿ” ಎಂದ ಚೇತನ್!ಲಾವಣ್ಯಳ ತಂದೆಗೆ ಕರೆ ಮಾಡಿ ಶಾಕ್ ನೀಡಿದ ಆರೋಪಿ ಚೇತನ್ ಪೊಲೀಸ್ ವಶಕ್ಕೆ..!
    ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
    FSSAI ಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ…!ಕಾರ್ಪೊರೇಟ್ ಒತ್ತಡಕ್ಕೆ ಮಣಿದಿರಾ?ಪ್ಯಾಕ್ ಆಹಾರಕ್ಕೆ ಎಚ್ಚರಿಕೆ ಲೇಬಲ್ ಕಡ್ಡಾಯ ಯಾಕಿಲ್ಲ? 
    ಗೃಹ ಜ್ಯೋತಿ ….ಯೋಜನೆ ಪರಿಶೀಲನೆಗೆ ಜುಲೈ 31 ಅಂತಿಮ ಗಡುವಲ್ಲ; ಮೆಸ್ಕಾಂ ವ್ಯಾಪ್ತಿಯಲ್ಲೂ ಆಗಸ್ಟ್ ಅಂತ್ಯದವರೆಗೆ ಸರ್ವೇ ಮುಂದುವರಿಕೆ
    ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    ಸೋನಂ ವಾಂಗ್ಚುಕ್ ಹೋರಾಟ ಸರ್ಕಾರದತ್ತ ಹೆಚ್ಚುತ್ತಿರುವ ಒತ್ತಡ: “ಸಂಸತ್ತಿನಲ್ಲಿ ಶಿಕ್ಷಣದ ಹೊಣೆಗಾರಿಕೆ ಬಗ್ಗೆ ಭರವಸೆ ಸಿಕ್ಕರೆ ಉಪವಾಸ ಅಂತ್ಯ!”…?
    ಕೇವಲ “Aunty” ಅಂತ ಅಂದಿದಕ್ಕೆ 2 ಲಕ್ಷ ದಂಡ…!
    ಬೆಚ್ಚಿಬಿದ್ದ ರಾಷ್ಟ್ರ ರಾಜಧಾನಿ, ಯಂಗ್ ಜಡ್ಜ್ ಆತ್ಮಹತ್ಯೆ
    21 ವರ್ಷದ ಆಡಳಿತಕ್ಕೆ ತೆರೆ: ನಿತೀಶ್ ಕುಮಾರ್ ಹೊರಟರೇ?ಸಿಎಂ ಕುರ್ಚಿ ಖಾಲಿ-ಬಿಜೆಪಿ ಹೊಸ ಮುಖ ಮುಂದಿನ ಸಿಎಂ??
    ಏನಿದು ‘ಲಾಸ್ಟ್ ಲೈವ್’ ಮತ್ತು ಅಂತಿಮ ಸಂಸ್ಕಾರದ ವಿಡಿಯೋ ಅಸಲಿ ಸಮಾಚಾರ? ವೈರಲ್ ಆದ ಬಿಹಾರದ ಭರತ್ ತಿವಾರಿ ಎನ್‌ಕೌಂಟರ್ ಕೇಸ್…
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ಆಕಾಂಕ್ಷಳ ಪತ್ರ “ಮಮ್ಮಿ-ಪಾಪಾ, ನನಗೆ ಮತ್ತೆ ನೀಟ್ ಪರೀಕ್ಷೆ ಬರೆಯುವ ಧೈರ್ಯವಿಲ್ಲ” 3 ಲಕ್ಷ ಸಾಲ, ಡಾಕ್ಟರ್ ಆಗುವ ಆ ಕನಸುಗಳು…650 ಅಂಕಗಳ ನಿರೀಕ್ಷೆ..ಆದರೆ…ಕೊನೆಗೆ ಹೀಗೊಂದು ವಿದಾಯ ಪತ್ರ!
    ಮಧ್ಯಪ್ರಾಚ್ಯದಲ್ಲಿ ರೆಡ್ ಅಲರ್ಟ್!3 ತಿಂಗಳ ಯುದ್ಧಕ್ಕೆ ಮಹಾ ಟ್ವಿಸ್ಟ್ ಇರಾನ್ ಸೇನಾ ನೆಲೆಗಳನ್ನು ಧೂಳೀಪಟ ಮಾಡಿದ ಅಮೆರಿಕ!
    ಪತ್ರಕರ್ತನ ಮೇಲೆ ಹಲ್ಲೆ ನಡೆಸಿದ ವೈದ್ಯನನ್ನು ಅಮಾನತ್ತು ಮಾಡಿದರೆ ಸಾಕೆ?
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಪುತ್ತೂರಿನ ಜಾತ್ರೆಯಲ್ಲಿ ಸುಡುಮದ್ದು ದುರಂತ-ಹಲವರಿಗೆ ಗಾಯ..
    Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
    ಕೋಟ್ಯಂತರದ ಒಡೆಯ… ಒಂದು ದಿನಕ್ಕೆ ಭಿಕ್ಷುಕನಾದ ಬಿಜಿಪಿ ಶಾಸಕ…!ಜೈನ ಮುನಿಯ ಮಾತಿಗೆ ಐಷಾರಾಮಿ ಬದುಕು ಬದಿಗಿಟ್ಟು ಬೀದಿಗಿಳಿದ ಮಹಾರಾಷ್ಟ್ರದ ಶಾಸಕ