📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಉಡುಪಿಯ ಹಲವು ಉದ್ಯಮಿಗಳು ಹಾಗೂ ಪುಡಿ ರಾಜಕಾರಣಿಗಳ ಎದೆಯಲ್ಲಿ ಭಯ ಸೃಷ್ಟಿಸಿದ ಹನಿಟ್ರ್ಯಾಪ್, ವಂಚನೆ ಆರೋಪಿ ಜೀನತ್ ಬಂಧನ ….!

    ಉಡುಪಿ, ಜುಲೈ 2026: ವಂಚನೆ, ಹನಿ ಟ್ರ್ಯಾಪ್ ಮತ್ತು ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ಜೀನತ್ ಎಂಬ ಮಹಿಳೆಯನ್ನು ಬಂಧಿಸಿರುವುದು ನಗರದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಈ ಬಂಧನದಿಂದ ಉಡುಪಿಯ ಹಲವು ಉದ್ಯಮಿಗಳು ಮತ್ತು ಪುಡಿ ರಾಜಕಾರಣಿಗಳಲ್ಲಿ ಆತಂಕ ಮೂಡಿದೆ ಎಂದು ಮೂಲಗಳು ತಿಳಿಸಿವೆ.

    ಪ್ರಕರಣದ ಹಿನ್ನೆಲೆ
    ದೂರುದಾರ ವಿಜಯ್ ನೀಡಿದ ದೂರಿನ ಅನ್ವಯ ಜೀನತ್ ವಿರುದ್ಧ ವಂಚನೆ ಮತ್ತು ಬೆದರಿಕೆ ಹಾಕಿದ ಆರೋಪದ ಮೇಲೆ ಪ್ರಕರಣ ದಾಖಲಾಗಿ ಬಂಧನವಾಗಿದೆ. ಬಂಧಿತೆಯ ಬಳಿ ಮತ್ತು ದೂರುದಾರರ ಬಳಿ ಕೆಲವು “ಸೀಕ್ರೆಟ್ ಎವಿಡೆನ್ಸ್”ಗಳಿದ್ದು ಅವನು ಪೋಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ.

    ಏನಿದೆ ಆ ಸೀಕ್ರೆಟ್?
    ಬಂಧನದ ಬಳಿಕ ಆಡಿಯೋ ರೆಕಾರ್ಡ್‌ಗಳು, ವಿಡಿಯೋ ಮತ್ತು ಫೋಟೋಗಳು ಸೇರಿದಂತೆ ಹಲವು ದಾಖಲೆಗಳು ಪೊಲೀಸರ ಪರಿಶೀಲನೆಗೆ ಒಳಗಾಗಿವೆ ಎಂಬ ಮಾಹಿತಿ ಇದೆ. ಈ ದಾಖಲೆಗಳ ಆಧಾರದ ಮೇಲೆ ಉಡುಪಿಯ ಹಲವು ಪ್ರಮುಖ ವ್ಯಕ್ತಿಗಳಿಗೆ ಬೆದರಿಕೆ ಹಾಕಲಾಗುತ್ತಿತ್ತು ಎಂಬ ಅನುಮಾನ ವ್ಯಕ್ತವಾಗಿದೆ. ಹಲವರನ್ನು ಈ ಒಂದು ಇಟ್ಟುಕೊಂಡು ಜೀನತ್ ತನ್ನ ತಾಳಕ್ಕೆ ತಕ್ಕಂತೆ ಕುಣಿಸುತ್ತಿದ್ದಳು ಎಂಬ ಅನುಮಾನವೂ ಇದೆ. ಈ ಹಿನ್ನೆಲೆಯಲ್ಲಿ ಕೆಲವು ಉದ್ಯಮಿಗಳು ಮತ್ತು ರಾಜಕಾರಣಿಗಳು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿರುವ ಬಗ್ಗೆಯೂ ಚರ್ಚೆ ನಡೆಯುತ್ತಿದೆ.

    Also Read  ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!

    ರಾಜಕೀಯ ಒತ್ತಡದ ಆರೋಪ
    ಒಂದು ಮೂಲದ ಪ್ರಕಾರ, ಜೀನತ್‌ನ ಬಳಿಯಿರುವ ಎಲ್ಲಾ ಎವಿಡೆನ್ಸ್‌ಗಳನ್ನು ಕೂಡಲೇ ವಶಕ್ಕೆ ಪಡೆಯುವಂತೆ ಹಿರಿಯ ರಾಜಕಾರಣಿಯೊಬ್ಬರು ಹಿರಿಯ ಪೊಲೀಸ್ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎಂಬ ಆರೋಪವೂ ಕೇಳಿಬಂದಿದೆ. ಆದಾಗ್ಯೂ ಈ ಬಗ್ಗೆ ಪೊಲೀಸರಿಂದ ಅಧಿಕೃತ ದೃಢೀಕರಣ ಬಂದಿಲ್ಲ.

    ಸಂಘದ ಹುದ್ದೆ
    ಬಂಧಿತ ಜೀನತ್ ಇತ್ತೀಚೆಗಷ್ಟೇ ಪ್ರತಿಷ್ಠಿತ ಸೀನಿಯರ್ ಚೇಂಬರ್ಸ್ ಉಡುಪಿಯ ಅಧ್ಯಕ್ಷ ಸ್ಥಾನವನ್ನು ಇನ್ನೊಬ್ಬರಿಗೆ ಹಸ್ತಾಂತರಿಸಿದ್ದಾರೆ. ಆ ಸಂಬಂಧಿತ ದಾಖಲೆಗಳೂ ತನಿಖೆಯ ವ್ಯಾಪ್ತಿಗೆ ಬರುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.

    ಪೊಲೀಸ್ ಕ್ರಮ
    ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ. ಬಂಧಿತೆಯ ಮೊಬೈಲ್, ಪೆನ್ ಡ್ರೈವ್ ಮತ್ತು ಇತರ ಡಿಜಿಟಲ್ ಸಾಧನಗಳನ್ನು ಪರಿಶೀಲಿಸಲಾಗುತ್ತಿದೆ. ಹೆಚ್ಚಿನ ವಿವರಗಳು ತನಿಖೆಯ ಬಳಿಕವಷ್ಟೇ ಹೊರಬರಲಿವೆ ಎಂದು ಪೊಲೀಸರು ಹೇಳಿದ್ದಾರೆ.

    Also Read  ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ

    ಈ ಬಂಧನಕ್ಕೆ ಸಂಬಂಧಿಸಿದಂತೆ ಉಡುಪಿಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆಯುತ್ತಿದ್ದು, ಪೊಲೀಸರ ಕ್ರಮಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ…. ಈ ಬಗ್ಗೆ ಸವಿವರವಾದ ವಿಚಾರವನ್ನು ಮಾತ್ರ ಸಂಸ್ಥೆಯಾದ ಕರಾವಳಿ ಮಾರುತದಲ್ಲಿ ಸಚಿತ್ರ ವರದಿ ಪ್ರಕಟಿಸಲಾಗುವುದು.

    ವರದಿ: ಉಡುಪಿ ಅಪರಾಧ ಪತ್ರಿಕೋದ್ಯಮ ವಿಭಾಗ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಇ.ಡಿ. ಶಾಕ್: 21 ಕಡೆ ಏಕಕಾಲದ ದಾಳಿ
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ಸಾಯಿ ಚಿರಾಗ್ ಚಿಕಿತ್ಸೆಗೆ ಹರಿದುಬಂತು 2 ಕೋಟಿ ರೂ. ಜನಸಾಗರದ ನಿಧಿ!
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಲೈಂಗಿಕ ಕಿರುಕುಳ ನೀಡಿದ ಬಾಸ್‌ಗೆ ಪೊಲೀಸರ ಮುಂದೆಯೇ ಮುಖಕ್ಕೆ ಮಸಿ ಬಳಿದು ಕೆನ್ನೆಗೆ ಬಾರಿಸಿದ ಮಹಿಳೆ!
    ಟ್ರಂಪ್-“Strait of Hormuz ತಕ್ಷಣ ತೆರೆಯಿರಿ…! “ ಇರಾನ್-“ಕೀ ಗಳನ್ನು ಕಳೆದುಕೊಂಡಿದ್ದೇವೆ…!”
    ಟೂರಿಸಂ ಡೆವಲಪ್‌ಮೆಂಟ್‌ಗೆ ಅಧಿಕಾರಿಗಳೇ ಮಾರಕ
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಲಕ್ಷ ಫೀಸ್ ಕೊಟ್ಟರೂ ಸಿಗದ ಶಿಕ್ಷಣ ಇಲ್ಲಿ ಉಚಿತ! 15 ಮಕ್ಕಳ ಪುಟ್ಟ ಶಾಲೆಯ ದೊಡ್ಡ ಸಾಧನೆ
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    60 ದಿನಗಳ ಸ್ಟಾಕ್ – ಭಾರತಕ್ಕೆ ಎಲ್‌ಪಿಜಿ ಚಿಂತೆ ಇಲ್ಲ!
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ಮಲ್ಪೆ ಬಂದರಿನಲ್ಲಿ ಮೀನುಗಾರ ಕಾರ್ಮಿಕನ ಬರ್ಬರ ಹತ್ಯೆ: ಗಲಾಟೆ ವಿಕೋಪಕ್ಕೆ ತಿರುಗಿ ಚೂರಿ ಇರಿತ…!
    ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್
    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..
    ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ರಾಜ್ಯ ಪೊಲೀಸ್ ಇಲಾಖೆಯಲ್ಲಿ “ಕಲೋನಿಯಲ್ ಆರ್ಡರ್ಲಿ” ‘ಆಡಲ್’ (Adal) ಪದ್ದತಿ ರದ್ದು
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ತೇಹಲ್ಕಾ ಮಾಜಿ ಸಂಪಾದಕ ತರುಣ್ ತೇಜ್‌ಪಾಲ್ ಅತ್ಯಾಚಾರ ಪ್ರಕರಣಕ್ಕೆ 13 ವರ್ಷಗಳ ಬಳಿಕ ಗೋವಾ ಹೈಕೋರ್ಟ್ ಮಹತ್ವದ ತೀರ್ಪು….!
    ಸಾರ್ವಜನಿಕರಲ್ಲಿ ವಿನಂತಿ …!
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!