📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ‘INS Malvan’ ಲೋಕಾರ್ಪಣೆ-ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆಗೆ ಹೊಸ ಕಾವಲುಗಾರ ‘ಸೈಲೆಂಟ್ ಹಂಟರ್’ ಕಾರವಾರದಿಂದ ಭಾರತದ ಸಮುದ್ರಶಕ್ತಿಗೆ ಮತ್ತಷ್ಟು ಬಲ!

    ಒಂದೆಡೆ ಅರಬ್ಬೀ ಸಮುದ್ರದ ಅಲೆಗಳು…
    ಮತ್ತೊಂದೆಡೆ ಭಾರತದ ಸ್ವದೇಶಿ ತಂತ್ರಜ್ಞಾನದಿಂದ ನಿರ್ಮಿತ ಯುದ್ಧನೌಕೆ…
    ಮಧ್ಯದಲ್ಲಿ ದೇಶದ ಸಮುದ್ರ ಗಡಿಯನ್ನು ಕಾಪಾಡುವ ಭಾರತೀಯ ನೌಕಾಪಡೆ…ಶತ್ರು ಜಲಾಂತರ್ಗಾಮಿಗಳಿಗೆ ಮೌನವಾಗಿ ಬೇಟೆಯಾಡುವ ‘ಸೈಲೆಂಟ್ ಹಂಟರ್’! 

    Yes,‘ಕರ್ನಾಟಕದ ಕಾರವಾರದ INS ಕದಂಬ ನೌಕಾನೆಲೆಯಲ್ಲಿ ಭಾರತದ ನೌಕಾಪಡೆಗೆ ಮತ್ತೊಂದು ಶಕ್ತಿಶಾಲಿ ಯುದ್ಧನೌಕೆ ಸೇರ್ಪಡೆಯಾಗಿದೆ. ಮಾಹೆ ವರ್ಗದ ಎರಡನೇ ಆಂಟಿ-ಸಬ್‌ಮರಿನ್ ವಾರ್ಫೇರ್ ಶ್ಯಾಲೋವಾಟರ್ ಕ್ರಾಫ್ಟ್ (ASW-SWC) ‘INS Malvan’ ಅನ್ನು ಏರ್ ಚೀಫ್ ಮಾರ್ಷಲ್ ಎ.ಪಿ. ಸಿಂಗ್ ಲೋಕಾರ್ಪಣೆಗೊಳಿಸಿದರು. ಸಮುದ್ರ ಭದ್ರತೆ ಮತ್ತು ಸುರಕ್ಷಿತ ಸಮುದ್ರ ಮಾರ್ಗಗಳ ಮಹತ್ವವನ್ನು ಅವರು ಒತ್ತಿಹೇಳಿದ್ದಾರೆ. ಸಮುದ್ರ ಮಾರ್ಗಗಳು ವ್ಯಾಪಾರವನ್ನು ನಿರ್ಧರಿಸುತ್ತವೆ, ವ್ಯಾಪಾರವೇ ದೇಶದ ಆರ್ಥಿಕ ಭವಿಷ್ಯವನ್ನು ನಿರ್ಧರಿಸುತ್ತದೆ ಎಂಬ ಸಂದೇಶವನ್ನು ಅವರು ನೀಡಿದ್ದಾರೆ. 

    Also Read  ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..

    ಕಾರವಾರದ INS ಕದಂಬದಲ್ಲಿ ಯುದ್ಧನೌಕೆಯ ಲೋಕಾರ್ಪಣೆ ನಡೆದಿರುವುದು ಇದೇ ಮೊದಲ ಬಾರಿಗೆ ಎಂಬುದು ಕರ್ನಾಟಕದ ಪಾಲಿಗೂ ಹೆಮ್ಮೆಯ ಕ್ಷಣವಾಗಿದೆ.ಆಧುನಿಕ ಯುದ್ಧಗಳಲ್ಲಿ ಸಮುದ್ರ, ಆಕಾಶ ಮತ್ತು ಭೂಮಿ — ಮೂರು ಕ್ಷೇತ್ರಗಳ ನಡುವಿನ ಸಮನ್ವಯವೇ ಭಾರತದ ಭದ್ರತೆಯ ಪ್ರಮುಖ ಅಸ್ತ್ರವಾಗಲಿದೆ. 

    ಕೊಚ್ಚಿನ್ ಶಿಪ್‌ಯಾರ್ಡ್ ಲಿಮಿಟೆಡ್ ನಿರ್ಮಿಸಿರುವ ಈ ನೌಕೆಯಲ್ಲಿ ಶೇ.80ಕ್ಕೂ ಹೆಚ್ಚು ಸ್ವದೇಶಿ ಉಪಕರಣಗಳು ಬಳಕೆಯಾಗಿವೆ. 78.8 ಮೀಟರ್ ಉದ್ದ ಹಾಗೂ 1,150 ಟನ್ ತೂಕದ ಈ ಯುದ್ಧನೌಕೆ, ಕರಾವಳಿ ಕಣ್ಗಾವಲು ಮತ್ತು ಆಳವಿಲ್ಲದ ನೀರಿನಲ್ಲಿ ಶತ್ರು ಜಲಾಂತರ್ಗಾಮಿಗಳನ್ನು ಪತ್ತೆಹಚ್ಚಿ ಎದುರಿಸಲು ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ.

    30 ಎಂಎಂ ನೇವಲ್ ಗನ್, ಟಾರ್ಪಿಡೊ ಲಾಂಚರ್‌ಗಳು, ರಾಕೆಟ್ ಲಾಂಚರ್‌ಗಳು, ‘ಅಭಯ್’ ಸೋನಾರ್ ಹಾಗೂ ಅತ್ಯಾಧುನಿಕ ಯುದ್ಧ ನಿರ್ವಹಣಾ ವ್ಯವಸ್ಥೆಗಳನ್ನು ಹೊಂದಿರುವ INS Malvan, ಭಾರತದ ಸಮುದ್ರ ಭದ್ರತೆಯನ್ನು ಮತ್ತಷ್ಟು ಬಲಪಡಿಸಲಿದೆ.

    Also Read  ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು

    ಮಹಾರಾಷ್ಟ್ರದ ಐತಿಹಾಸಿಕ ಕರಾವಳಿ ಪಟ್ಟಣ ಮಾಲ್ವಣ್ ಹೆಸರನ್ನು ಪಡೆದಿರುವ ಈ ನೌಕೆ, ಛತ್ರಪತಿ ಶಿವಾಜಿ ಮಹಾರಾಜರ ಶಕ್ತಿಶಾಲಿ ಕಡಲ ಪರಂಪರೆಗೆ ಗೌರವ ಸಲ್ಲಿಸುತ್ತದೆ. ನೌಕೆಯ ಚಿಹ್ನೆಯಲ್ಲಿರುವ ‘ಬಾಘ್ ನಖ್’ ಧೈರ್ಯ ಮತ್ತು ಚುರುಕುತನದ ಸಂಕೇತವಾಗಿದೆ.ನೌಕೆಯ ಚಿಹ್ನೆಯಲ್ಲಿ ಬಳಸಲಾಗಿರುವ ‘ಬಾಘ್ ನಖ್’ ಅಥವಾ ಹುಲಿಯ ಉಗುರು ಧೈರ್ಯ, ವೇಗ ಮತ್ತು ಚುರುಕುತನದ ಸಂಕೇತವಾಗಿದೆ. ಶತ್ರುವಿನ ಮೇಲೆ ನಿಖರವಾಗಿ ದಾಳಿ ನಡೆಸುವ ಸಾಮರ್ಥ್ಯವನ್ನು ಪ್ರತಿಬಿಂಬಿಸುವ ಈ ಚಿಹ್ನೆ, ಛತ್ರಪತಿ ಶಿವಾಜಿ ಮಹಾರಾಜರ ಯುದ್ಧಪರಂಪರೆಯೊಂದಿಗೆ ಭಾವನಾತ್ಮಕ ಸಂಪರ್ಕವನ್ನೂ ಹೊಂದಿದೆ.

    ‘ಮೇಕ್ ಇನ್ ಇಂಡಿಯಾ’ ಮತ್ತು ‘ಆತ್ಮನಿರ್ಭರ ಭಾರತ’ದ ಹೆಮ್ಮೆಯ ಪ್ರತೀಕವಾಗಿರುವ INS Malvan, ಭಾರತದ ಕರಾವಳಿ ಭದ್ರತೆ, ಜಲಾಂತರ್ಗಾಮಿ ವಿರೋಧಿ ಕಾರ್ಯಾಚರಣೆ ಹಾಗೂ ಸುರಕ್ಷಿತ ಸಮುದ್ರ ವ್ಯಾಪಾರಕ್ಕೆ ಹೊಸ ಬಲ ನೀಡಲಿದೆ.

    Also Read  ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..

    ಕಾರವಾರದ ನೆಲದಿಂದ ಭಾರತದ ಸಮುದ್ರಶಕ್ತಿಗೆ ಮತ್ತೊಂದು ಬಲಿಷ್ಠ ಕವಚ ಸೇರ್ಪಡೆಯಾಗಿದೆ!

    ##INS_Malvan #IndianNavy #Karwar #INSKadamba #MakeInIndia #AtmanirbharBharat #Karnataka Proud

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ಇದು ಕಾಕ್ರೋಚ್ ಪವರ್, ಯಾರು ಮಾಡಲಾಗದ್ದನ್ನು ಮಾಡಿದ  ಸ್ಟೂಡೆಂಟ್ಸ್
    ಲಿವ್-ಇನ್ ಸಂಬಂಧಗಳಲ್ಲಿ ಕಾನೂನು ಮಿತಿ ಎಲ್ಲಿದೆ?-ಸುಪ್ರೀಂ ಕೋರ್ಟ್‌ನ ಮಹತ್ವದ ಪ್ರಶ್ನೆ
    ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ… ದೊಡ್ಡ ಜಗಳದ ವೈರಲ್ ವಿಡಿಯೋ… ಪೊಲೀಸ್ ಕೇಸ್… ಕೊನೆಗೆ ಬಂಧನ!
    ಬೆಳ್ತಂಗಡಿ ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು…
    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಹೋಟೆಲ್, ಕೆಫೆ ಬಿಸಿ ಬಿಸಿ ಪ್ಲಾಸ್ಟಿಕ್ ಲ್ಲಿ ಪಾರ್ಸೆಲ್‌ಗೆ ಬ್ರೇಕ್ –ಹಾಗೆ 5ರೂ 10ರೂ ಬೀಡಿ ಸಿಗರೇಟ್ ಗುಟ್ಕಾಕ್ಕೆ ₹1000 ದಂಡ ಕಟ್ಟಬೇಕಾದಿತು ಎಚ್ಚರ …!
    ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..
    ಮಂಗಳೂರು ಜಾರಂದಾಯ ಸ್ಥಾನದ ದೈವ ನರ್ತನ ವಿವಾದ – ಸ್ಪಷ್ಟನೆ- ಮರುಪ್ರಶ್ನೆ-ಇತ್ಯರ್ಥವಾಗುತ್ತಾ..?!
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    “ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
    ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
    ತಿಮರೋಡಿ ಸೇರಿ ನಾಲ್ವರಿಗೆ ಕೇಸ್…
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ಕನ್ನಡ ಫಿಲಂ ಇಂಡಸ್ಟ್ರಿ ಮರ್ಯಾದೆ “ಒಂದು ಬಾಟ್ಲು ಸಾರಾಯಿ, ಒಂದು ಚಮಚ ಉಪ್ಪಿನ ಕಾಯಿಗೆ”ಆನ್‌ಲೈನ್‌ನಲ್ಲಿ (Online) ಹರಾಜು..!
    ಓವರ್‌ಟೇಕ್ ಮಾಡಲು ಹೋಗಿ ಯಮನ ಬಾಯಿಗೆ! ಕಬ್ಬಿಣದ ಸರಳುಗಳು ನುಗ್ಗಿ KSRTC ಬಸ್ ಚಾಲಕ ಸಾವು..
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ಬೆಳ್ತಂಗಡಿ ಆನೆ ದಾಳಿ, ವ್ಯಕ್ತಿಯ ಬರ್ಬರ ಹತ್ಯೆ
    ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
    ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು
    ಕಾರು ಸ್ಟೀರಿಂಗ್ ಹಿಡಿದ ಬಾಲಕಿ… ಪಕ್ಕದಲ್ಲೇ ಕುಳಿತಿದ್ದ ಪೊಲೀಸ್ ಅಧಿಕಾರಿ! ವೈರಲ್ ವಿಡಿಯೋ ಎಬ್ಬಿಸಿದ ದೊಡ್ಡ ಪ್ರಶ್ನೆ
    ಉಡುಪಿ ಮಹಿಳೆಗೆ ಮುಂಬೈನಲ್ಲಿ ಕಂಬಿ! ₹3.10 ಕೋಟಿ ವಂಚನೆ ಉಡುಪಿ ಮೂಲದ ಮಹಿಳೆ ಅರೆಸ್ಟ್!
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    ಕೋಟಿ ನಕಲಿ ಔಷಧ ಜಾಲದ ವಿರುದ್ಧ ಬಿಗಿ ಕ್ರಮ..ಕಿಂಗ್‌ಪಿನ್ ಪ್ರಶಾಂತ್ ಅಜರ್‌ಬೈಜಾನ್‌ನಲ್ಲಿ ಪತ್ತೆ…!
    ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
    ಇರಾನ್ ಸಚಿವ ಅಬ್ಬಾಸ್ ಅರಾಘ್ಚಿ ಭಾರತಕ್ಕೆ… ಮಧ್ಯಪ್ರಾಚ್ಯ ಉದ್ವಿಗ್ನತೆ ನಡುವೆ BRICS ಸಭೆ ಮೇಲೆ ವಿಶ್ವದ ಗಮನ!ಜಾಗತಿಕ ಉದ್ವಿಗ್ನತೆಯ ನಡುವೆ ದೆಹಲಿ ರಾಜತಾಂತ್ರಿಕ ಕೇಂದ್ರಬಿಂದು!…