📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು

    ಬೆಳಗಾವಿ; ಸಂಘಟನೆಗಳು ಸಭೆ ಸಮಾರಂಭ ಮತ್ತು ಸನ್ಮಾನಗಳಿಗೆ ಮಾತ್ರ ಸೀಮಿತವಾಗದೆ ಸಮಾಜದ ಜಟೀಲ್ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಬೇಕು ಎಂದು ನಾಗನೂರು ರುದ್ರಾಕ್ಷಿ ಮಠದ ಪೀಠಾಧಿಕಾರಿ ಡಾ. ಅಲ್ಲಮಪ್ರಭು ಮಹಾಸ್ವಾಮಿಗಳು ನುಡಿದರು.
    ಅವರಿಂದು ಬೆಳಗಾವಿಯಲ್ಲಿ ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಟ್ರಸ್ಟ್ ಗೌರವಾಧ್ಯ ಕ್ಷರಾಗಿ ಅಧಿಕಾರ ಸ್ವೀಕಾರ ಮಾಡಿ ಆಶೀರ್ವಚನ ನೀಡುತ್ತಿದ್ದರು. ಸಂಘಟನೆಗಳಲ್ಲಿ ಸಮಾಜದ ಸಮಸ್ಯೆಗಳ ಕುರಿತು ಚಿಂತನೆ ನಡೆಯಬೇಕು ನಕಾರಾತ್ಮಕ ವಿಚಾರಗಳನ್ನು ಬದಿಗಿಟ್ಟು ಸಕಾರಾತ್ಮಕವಾಗಿ ಸ್ಪಂದನೆ ಆಗಬೇಕು ಎಂದರು.


    ಸಾಮಾಜಿಕ ಜಾಲತಾಣಗಳ ವೇಗದ ಬೆಳವಣಿಗೆಗಳು ಲಕ್ಷಾಂತರ ಹಿಂಬಾಲಕರನ್ನು ಗಳಿಸಿಕೊಂಡು ಮುನ್ನುಗ್ಗುತ್ತಿರುವುದನ್ನು ಮಾಧ್ಯಮ ಕ್ಷೇತ್ರ ಗಂಭೀರವಾಗಿ ಪರಿಗಣಿಸುವಂತೆ ವಾತಾವರಣ ನಿರ್ಮಾಣವಾಗಿದೆ, ಮುದ್ರಣ ಮಾಧ್ಯಮ ಕೂಡ ಅದೇ ನಿಟ್ಟಿನಲ್ಲಿ ಕಾರ್ಯ ಮಾಡಬೇಕಿದೆ ಎಂದರು.
    ಸಭೆಯನ್ನು ಉದ್ಘಾಟಿಸಿದ ವಿಜಯ ಕರ್ನಾಟಕ ಸ್ಥಾನಿಕ ಸಂಪಾದಕ ಸುರೇಶ್ ಶಾನುಭೋಗ ಅವರು ಮಾತನಾಡಿ ಡೋಲಾಯಮಾನ ಸ್ಥಿತಿಯಲ್ಲಿ ಪತ್ರಿಕಾರಂಗ ಇರುವಂತಹ ಈ ಘಟ್ಟದಲ್ಲಿ ಇನ್ನಷ್ಟು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸಬೇಕಿದೆ ಎಂದರು.


    ಹಿರಿಯ ಪತ್ರಕರ್ತ ಎಲ್.ಎಸ್. ಶಾಸ್ತ್ರಿ ಮಾತನಾಡಿ ದಶಕಗಳ ಕಾಲದಿಂದ ನಡೆದು ಬಂದ ಸಂಘದ ಅತ್ಯುತ್ತಮ ಕಾರ್ಯವನ್ನು ಶ್ಲಾಘಿಸಿದರು. ಕನ್ನಡ ಪ್ರಭ ದಿನಪತ್ರಿಕೆ ಹಾನಿಕ ಸಂಪಾದಕ ಬ್ರಹ್ಮಾನಂದ ಹಡಗಲಿ ಮಾತನಾಡಿ ಗ್ರಾಮೀಣ ಭಾಗದ ಪತ್ರಕರ್ತರಿಗಾಗಿ ಟ್ರಸ್ಟ್ ಮಾಡುತ್ತಿರುವ ಕಾರ್ಯ ಇನ್ನು ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆಯಲಿ ಎಂದರು.

    ಇಂಡಿಯನ್ ಎಕ್ಸ್ಪ್ರೆಸ್ ಅಸೋಸಿಯೇಟೆಡ್ ಎಡಿಟರ್ ನೌಶಾದ ಬಿಜಾಪೂರೆ ಮಾತನಾಡಿ ಗ್ರಾಮೀಣ ಪತ್ರಕರ್ತರಿಗಾಗಿ ಟ್ರಸ್ಟ್ ಇನ್ನು ಹೆಚ್ಚಿನ ಕಾರ್ಯ ನಿರ್ವಹಿಸಲಿ ಎಂದರು. ಟ್ರಸ್ಟ್ ಕಾನೂನು ಸಲಹೆಗಾರ ಬಸವರಾಜ್ ರೊಟ್ಟಿ ಮಾತಾಡಿ ಸ್ವಂತದ ಬೇಡಿಕೆಗಳಿಗಾಗಿ ಹುಟ್ಟಿದ ಸಂಘಟನೆ ಇದಲ್ಲ ಕಷ್ಟದಲ್ಲಿ ಇರುವ ಪತ್ರಕರ್ತರಿಗಾಗಿ ಹುಟ್ಟಿಕೊಂಡ ಸಂಘಟನೆಯ ಕಾರ್ಯ ಮಾದರಿಯಾಗಿದೆ ಎಂದರು.

    ಟ್ರಸ್ಟ್ ಅಧ್ಯಕ್ಷ ಮುರುಗೇಶ ಶಿವಪೂಜಿ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದು ಟ್ರಸ್ಟಿಗೆ ಹತ್ತನೆಯ ಟ್ರಸ್ಟೀಯಾಗಿ ಗದಗದ ಶಂಕರ್ ಕುದುರಿಮೋತಿ ಅವರನ್ನು ನೇಮಕ ಮಾಡಿಕೊಳ್ಳಲಾಯಿತು.ಟ್ರಸ್ಟಿಗೆ ನೂತನ ಕಾರ್ಯದರ್ಶಿಯಾಗಿ ಮಂಗಳೂರಿನ ಸುದೇಶ್ ಕುಮಾರ್ ಅವರನ್ನು ಮತ್ತು ಉಪಾಧ್ಯಕ್ಷರನ್ನಾಗಿ ಅಂಕೋಲಾದ ಮಂಜುನಾಥ ನಾಯಕ್ ಅವರನ್ನು ಆಯ್ಕೆ ಮಾಡಲಾಯಿತು.


    ಟ್ರಸ್ಟೀ ಡಾ.ರಾಜೇಂದ್ರ ಪವಾರ್ ಸ್ವಾಗತಿಸಿದರು. ಸಂಪಾದಕರ ಸಂಘದ ಉಪಾಧ್ಯಕ್ಷ ಹೀರೋಜಿ ಮಾವರ್ಕರ್, ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್ ಮುಚ್ಚಳಂಬಿ, ಲೋಕದರ್ಶನದ ಸಹಾಯಕ ಸಂಪಾದಕಿ ಜಯಲಕ್ಷ್ಮಿ ದೇಸಾಯಿ, ಸಂಘದ ರಾಜ್ಯ ಕಾರ್ಯದರ್ಶಿ ಆರ್. ಶರಣಪ್ಪ ಗುಮಗೇರಾ, ಟ್ರಸ್ಟಿಗಳಾದ ಎ.ಬಿ. ಧಾರವಾಡಕರ್,ವಸಂತ ಹೊಸಮನಿ, ಬಸವರಾಜ ಪುಟ್ಟಿ, ಕಲ್ಬುರ್ಗಿಯ ಆನಂದ ಮಣ್ಣೂರ್, ಉಪಸ್ಥಿತರಿದ್ದರು.

    ##KarnatakaJournalistUnion #JournalistsTrust #RuralJournalists #Journalism #MediaCommunity #JournalistWelfare #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಕೂತ್ಕೊಳಪ್ಪ ಡಿಕೆಶಿ ನಿಂದೆ ಖುರ್ಚಿ … ಅಂತ CM ಸಿದ್ದು ಯಾವಾಗ ಹೇಳ್ಬೇಕಿತ್ತು??ಅಹಿಂದ ಮಾಸ್ ಲೀಡರ್ ವರ್ಸಸ್ ಮನಿ ಮ್ಯಾನ್..ಕರ್ನಾಟಕ ರಾಜಕಾರಣದ ಅತಿ ದೊಡ್ಡ ಟ್ವಿಸ್ಟ್!
    ಗುಜರಾತ್ ಪೊಲೀಸರಲ್ಲಿ ಆಗದ ಕೆಲಸ, ಒಬ್ಬ ಮಂತ್ರವಾದಿಯಿಂದ ಆಯ್ತು
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    ಪಿವಿ ಎಸ್ ಸಂಸ್ಥೆಯ ಆಡಳಿತದಲ್ಲಿ ಯಾರ ಹಸ್ತಕ್ಷೇಪವು ಇಲ್ಲ – ಸರೋಜಿನಿ ಕುಶೆ
    🔴 ಪೊಲೀಸರ ಮೇಲಿನ ಹಿಡಿತ ಕಠಿಣ: PEBಗೆ ಹೆಚ್ಚಿದ ಅಧಿಕಾರ — ರಾಜ್ಯದ ದೊಡ್ಡ ಆಡಳಿತಾತ್ಮಕ ತೀರ್ಮಾನ
    ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
    ಗೃಹ ಬಳಕೆಯ LPG ಗ್ರಾಹಕರಿಗೆ Aadhaar e-KYC ಕಡ್ಡಾಯ – PMUY ಫಲಾನುಭವಿಗಳಿಗೆ ವಾರ್ಷಿಕ ಬಯೋಮೆಟ್ರಿಕ್ ಪರಿಶೀಲನೆ
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    Lokayukta Raid In Hassan: ಬಾಗಿಲು ತೆರೆಯದೆ AEE ಹೈಡ್ರಾಮಾ, ಮನೆ ಏರಿದ ಲೋಕಾ ಪೊಲೀಸರು | AEE Satyanarayan
    ನೀರು ಪೋಲು ಬೇಡ….ಈಗಲೇ ಎಚ್ಚೆತ್ತುಕೊಳ್ಳಿ!ಇಂದು ನಿರ್ಲಕ್ಷ್ಯ,ನಾಳೆ ಜಲ ಸಂಕಷ್ಟದ ಎಚ್ಚರಿಕೆ…!
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    ರಾಜ್ಯಸಭೆಗೆ ಬಿಜೆಪಿಯಿಂದ 9 ಜನರ ಪಟ್ಟಿ ಬಿಡುಗಡೆ
    ಸಿಐಡಿ ಹೆಸರಿನಲ್ಲಿ ಡಿಜಿಟಲ್ ಅರೆಸ್ಟ್: ವಂಚಕರ ಬಲೆಯಿಂದ ಜಸ್ಟ್ ಎಸ್ಕೇಪ್
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಮಹಿಳಾ ಕುಸ್ತಿಪಟುಗಳ ಲೈಂಗಿಕ ಕಿರುಕುಳ ಪ್ರಕರಣ: ಬ್ರಿಜ್ ಭೂಷಣ್ ಸಿಂಗ್‌ಗೆ ದೆಹಲಿ ಕೋರ್ಟ್‌ನಿಂದ ಖುಲಾಸೆ
    ಮಿಜಾರಿನಲ್ಲಿ ರಸ್ತೆ ಕುಸಿತ, ಸಾರ್ವಜನಿಕರಲ್ಲಿ ಆತಂಕ ಮೊದಲ ಮಳೆಯಲ್ಲೇ ಕೊಚ್ಚಿಹೋಯ್ತು ಹೆದ್ದಾರಿ! ಕೋಟಿ ಕೋಟಿ ಕಾಮಗಾರಿಯ ಅಸಲಿ ಮುಖ ಬಯಲು? 
    ದಕ್ಷಿಣ ಕನ್ನಡ–ಉಡುಪಿಯಲ್ಲಿ ಗೋಡಂಬಿ ಕ್ರಾಂತಿಗೆ ರಾಜ್ಯ ಸರ್ಕಾರ ಸಜ್ಜು..₹1 ಕೋಟಿ ಯೋಜನೆ ಘೋಷಿಸಿದ ಈಶ್ವರ್ ಖಂಡ್ರೆ…
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಅಧಿಕಾರಿಗಳಿಗೆ ಲಂಚವೋ? ಗೌರವ ಧನವೋ ….!ಶಿವಲಿಂಗೇಗೌಡ “ಹೇಳಿಕೆ”ಭಾರಿ ವಿವಾದ…!
    UPIಗೆ ಶುಲ್ಕ ಬರಲಿದೆಯೇ? – ಲೋಕಸಭೆಯಲ್ಲಿ ಅಂಗೀಕಾರವಾದ bill ಮಸೂದೆ ಏನು ಹೇಳುತ್ತದೆ?
    21 ದಿನ ಹಸಿದ ಹೋರಾಟಗಾರ ಆಸ್ಪತ್ರೆಗೆ..ಸರ್ಕಾರ ಏಕೆ ಇನ್ನೂ ಮೌನ!?????ಯುವಜನರ ಆಕ್ರೋಶದ ಕಟ್ಟೆ ಒಡೆಯುವ ಮೊದಲೇ ಮೋದಿ ಸರ್ಕಾರ ಎಚ್ಚೆತ್ತುಕೊಳ್ಳುತ್ತಾ….!!??
    ಉಡುಪಿಯಲ್ಲಿ  ಬೆಟ್ಟಿಂಗ್ ಮಾಫಿಯಾದ ಚಟುವಟಿಕೆಯನ್ನು ಡೆತ್ ನೋಟ್ ರಿವಿಲ್ ಮಾಡಿತೇ?
    ಸ್ವಯಂಪ್ರೇರಿತ ಲೈಂಗಿಕ ಕೆಲಸ -ವೇಶ್ಯಾವಾಟಿಕೆ ವೃತ್ತಿ ಅಪರಾಧವಲ್ಲ ಕಾನೂನುಬಾಹಿರವಲ್ಲ! -ಇತಿಹಾಸ ಸೃಷ್ಟಿಸಿದ ಸುಪ್ರೀಂ ಕೋರ್ಟ್!