📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬೆಳ್ತಂಗಡಿಯ ಹೆಮ್ಮೆಯ ಪುತ್ರಿ ಉಷಾರಾಣಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ಕರಾವಳಿಗೆ ಗೌರವದ ಗರಿ!

    ಉಷಾರಾಣಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿಯಾಗಿ ನೇಮಕ; ಕರಾವಳಿಯ ಕಾನೂನು ಕ್ಷೇತ್ರಕ್ಕೆ ಮತ್ತೊಂದು ಗರಿಮೆ

    ಬೆಳ್ತಂಗಡಿ: ಬೆಳ್ತಂಗಡಿಯ ನೆಲದಲ್ಲಿ ಹುಟ್ಟಿ, ಕಾನೂನು ಕ್ಷೇತ್ರದಲ್ಲಿ ತಮ್ಮದೇ ಛಾಪು ಮೂಡಿಸಿರುವ ಉಷಾರಾಣಿ ಇದೀಗ ಕರ್ನಾಟಕ ಹೈಕೋರ್ಟ್‌ನ ಪ್ರಥಮ ಜೈನ ಮಹಿಳಾ ನ್ಯಾಯಮೂರ್ತಿ ಎಂಬ ಕೀರ್ತಿಯೂ ಸಲ್ಲುತದೆ . ಈ ಮಹತ್ವದ ನೇಮಕಾತಿ ಬೆಳ್ತಂಗಡಿ ಮಾತ್ರವಲ್ಲದೆ ಜೈನ ಸಮಾಜಕ್ಕೆ ಹಾಗೇ ಇಡೀ ಕರಾವಳಿ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿ ಪರಿಣಮಿಸಿದೆ.

    ಈವರೆಗೆ ಮೈಸೂರಿನ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಉಷಾರಾಣಿ ಅವರು ಇದೀಗ ರಾಜ್ಯದ ಉನ್ನತ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಅವರ ನ್ಯಾಯಾಂಗ ಅನುಭವ, ಕಾನೂನು ಜ್ಞಾನ ಹಾಗೂ ಸೇವಾ ಹಿನ್ನೆಲೆ ಈ ನೇಮಕಾತಿಗೆ ಮತ್ತಷ್ಟು ಮಹತ್ವ ನೀಡಿದೆ.

    ಉಜಿರೆಯ ಎಸ್‌ಡಿಎಂ ಕಾಲೇಜಿನ ಹಿರಿಯ ವಿದ್ಯಾರ್ಥಿನಿಯಾಗಿರುವ ಉಷಾರಾಣಿ ಅವರು ಎಸ್‌ಡಿಎಂ ಕಾನೂನು ಮಹಾವಿದ್ಯಾಲಯದಲ್ಲಿ ಕಾನೂನು ಪದವಿ ಪಡೆದಿದ್ದಾರೆ. ಬೆಳ್ತಂಗಡಿಯಲ್ಲಿ ಹಿರಿಯ ವಕೀಲ ಹಾಗೂ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದ ನೇಮಿರಾಜ ಶೆಟ್ಟಿ ಅವರ ಪುತ್ರಿ ಎಂಬ ಹೆಗ್ಗಳಿಕೆಯೂ ಅವರಿಗಿದೆ.

    ವಿಶೇಷವೆಂದರೆ, ಲಭ್ಯವಿರುವ ಮಾಹಿತಿಯಂತೆ ಕರ್ನಾಟಕ ಹೈಕೋರ್ಟ್‌ನ ಮೊದಲ ಜೈನ ಮಹಿಳಾ ನ್ಯಾಯಮೂರ್ತಿಯಾಗಿಉಷಾರಾಣಿ ಅವರು ಹೊಸ ಇತಿಹಾಸ ಬರೆಯಲಿದ್ದಾರೆ. ಅವರ ಈ ಸಾಧನೆ ಕಾನೂನು ಕ್ಷೇತ್ರದಲ್ಲಿ ಮುನ್ನಡೆಯಲು ಬಯಸುವ ಯುವತಿಯರಿಗೆ, ವಿಶೇಷವಾಗಿ ಕರಾವಳಿಯ ವಿದ್ಯಾರ್ಥಿನಿಯರಿಗೆ, ಪ್ರೇರಣೆಯ ಸಂದೇಶವಾಗಿದೆ.

    ಬೆಳ್ತಂಗಡಿಯಿಂದ ಆರಂಭವಾದ ಶಿಕ್ಷಣ ಮತ್ತು ಕಾನೂನು ಕ್ಷೇತ್ರದ ಪಯಣ ಇಂದು ಕರ್ನಾಟಕದ ಉನ್ನತ ನ್ಯಾಯಾಂಗದವರೆಗೆ ತಲುಪಿದೆ. ಪ್ರತಿಭೆ, ಪರಿಶ್ರಮ ಮತ್ತು ನ್ಯಾಯದ ಬದ್ಧತೆ ಇದ್ದರೆ ಸ್ಥಳೀಯ ನೆಲೆಯಿಂದಲೂ ಅತ್ಯುನ್ನತ ಸ್ಥಾನಕ್ಕೇರಬಹುದು ಎಂಬುದಕ್ಕೆ ಉಷಾರಾಣಿ ಅವರ ಪಯಣ ಮಾದರಿಯಾಗಿದೆ.

    ಅವರ ಮುಂದಿನ ನ್ಯಾಯಾಂಗ ಸೇವೆ ಇನ್ನಷ್ಟು ಎತ್ತರಕ್ಕೆ ಸಾಗಲಿ, ಭವಿಷ್ಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸುವ ಅವಕಾಶವೂ ದೊರಕಲಿ ಎಂಬ ಆಶಯದೊಂದಿಗೆ ಬೆಳ್ತಂಗಡಿ ಹಾಗೂ ಕರಾವಳಿಯ ಜನತೆ ಅಭಿನಂದನೆ ಸಲ್ಲಿಸಿದ್ದಾರೆ.

    ಬೆಳ್ತಂಗಡಿಯ ಮಗಳು… ಕರ್ನಾಟಕದ ನ್ಯಾಯಾಂಗದ ಹೊಸ ಶಕ್ತಿ!
    ಉಷಾರಾಣಿ ಅವರಿಗೆ ಹೃತ್ಪೂರ್ವಕ ಅಭಿನಂದನೆಗಳು. 💐

    ##Usharani #KarnatakaHighCourt #WomenJudges #Belthangady #CoastalKarnataka #JainCommunity #LegalAchievement

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ದರೆಗುಡ್ಡೆಯಲ್ಲಿ ಬಾರಿ ಅಗ್ನಿ ಅವಗಡ…!
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ಕೇವಲ ₹7ರ ದುರಾಸೆ… ₹7 ಲಕ್ಷದ ಹೊರೆ!ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಅಂಗಡಿಗೆ ಭಾರೀ ದಂಡ; ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ
    ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ತಪ್ಪುಅರ್ಥಕ್ಕೆಕ್ಷಮೆ, ಹೊಸರೂಪದಲ್ಲಿಮತ್ತೆ ‘ಸರ್ಸೆಸೆರಗು’”-ಪ್ರೇಮ್
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ರಾಮ ಮಂದಿರ ಟ್ರಸ್ಟ್‌ಗೆ ಸರ್ಕಾರದ ನಿಯಂತ್ರಣವೇ ಇಲ್ಲ! ಆರ್‌ಟಿಐಗೂ ಬಾಧ್ಯತೆ ಇಲ್ಲ ಎಂದ ಸಿಐಸಿ
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಮೂಡಿಗೆರೆ ತಾಲ್ಲೂಕಿನಲ್ಲಿ ಭಾರಿ ಗಾಳಿ-ಮಳೆ ಅಬ್ಬರ
    ಗ್ಯಾಸ್ ಅಭಾವ ಮತ್ತು ಬೆಲೆ ಏರಿಕೆ, ಸುಳ್ಳು ಎನ್ನುತ್ತಿದೆ-HPCL
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
    ರಾಜಕೀಯ ಸುದ್ದಿ ಅಂದರೆ ಬೋರ್ ಅಂತ ಅನ್ನಿಸುವರಿಗೆ ಇದು ಒಂದು ಪಕ್ಕಾ ಎಂಟರ್‌ಟೈನ್‌ಮೆಂಟ್ ಎಪಿಸೋಡ್!!!
    ನೇಪಾಳ ದುರಂತ: ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ…ಕಣ್ಣೆದುರೇ ಕೊಚ್ಚಿಹೋದ ಬದುಕು… ಲೆಕ್ಕಕ್ಕೆ ಸಿಗದ ಸಾವು, ನೋವು!ಪ್ರವಾಹದ ರೌದ್ರದ ನಡುವೆ ಮೃತದೇಹದಿಂದಲೇ ಚಿನ್ನ ಕದಿಯಲು ಯತ್ನ… ಮಾನವೀಯತೆ ಮರೆತ ಕಿರಾತಕರು!ಇಬ್ಬರು ಅರೆಸ್ಟ್!
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ವಿಷಪ್ರಾಶನ  ಪ್ರಕರಣದಲ್ಲಿ ಕಾರ್ಕಳ ಗಜರಿಯ ಹಾಸ್ಪಿಟಲ್ ತಪ್ಪು ಮಾಡಿತೇ?
    ಮೊಸಾದ್ ಏಜೆಂಟ್ ಇಸ್ಮಾಯಿಲ್ ಖಾನಿಯಿಂದ ಇರಾನಿ ಸರ್ವೋಚ್ಛ ನಾಯಕನ  ಹತ್ಯೆ
    ಮನೆಗಣತಿ ಮಂಗಳೂರು ಮಹಾನಗರ ಪಾಲಿಕೆ-ಸ್ಪೀಕರ್ ಯು ಟಿ ಖಾದರ್ ಚಾಲನೆ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ಅಕ್ರಮ ಕಸಾಯಿ ಖಾನೆಗೆ ದಾಳಿ ಇಬ್ಬರನ್ನು ಬಂಧಿಸಿದ ಬಂಟ್ವಾಳದ ಪೊಲೀಸರು
    ಕರಾವಳಿಯಲ್ಲಿ ವರುಣನ ಆರ್ಭಟ ಮುಂದುವರಿಕೆ: ಜುಲೈ 2ಕ್ಕೆ ಮೂರು ಜಿಲ್ಲೆಗಳಿಗೆ ರೆಡ್ ಅಲರ್ಟ್, ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
    40 ವರ್ಷದ ಹಳೆಯ ಕೊಲೆಕೇಸ್‌ಗೆ ಅಂತಿಮ ಕೀ ಆಗಿ ಸಾಕ್ಷಿ ಆಗಿದ್ದು ತಿಂದು ಉಗುಳಿದ ಚೂಯಿಂಗ್ ಗಮ್ …!ಏನಿದು realstory..
    ಪೆರ್ವಾಜೆ ಮಹಾಲಿಂಗೇಶ್ವರ ದೇವಸ್ಥಾನದ ಚೆಕ್‌ಗೆ ನಕಲಿ ಸಹಿ! ನಕಲಿ ಚೆಕ್‌ಗಳೊಂದಿಗೆ ಸಿಕ್ಕಿಬಿದ್ದ ಮಾಜಿ ಸಿಬ್ಬಂದಿ…
    ‘ನನ್ನ ಮೇಲ್‌ಗೆ ಉತ್ತರವೇ ಬರಲಿಲ್ಲ…’ ಸಭೆಯಲ್ಲೇ ಮಹಿಳೆಯ ಪ್ರಶ್ನೆ; ನಿಖಿಲ್ ಕಾಮತ್ ನೀಡಿದ ಪ್ರತಿಕ್ರಿಯೆಗೆ ದೇಶವೇ ಫಿದಾ!
    ಬೆಳಗ್ಗೆ ಲೈಟ್ ಆನ್ ಮಾಡಿದ್ರು… ಕ್ಷಣದಲ್ಲೇ PGಯಲ್ಲಿ ಸಿಲಿಂಡರ್ ಸ್ಫೋಟ…! 10ಕ್ಕೂ ಹೆಚ್ಚು ಮಂದಿಗೆ ಗಂಭೀರ ಗಾಯ ಬೊಮ್ಮಸಂದ್ರದ ಶ್ರೀ ಸಾಯಿ ಕಂಫರ್ಟ್ PGಯಲ್ಲಿಮುಂಜಾನೆ ಅಗ್ನಿ ದುರಂತ