📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅಕ್ರಮ ಭೂಕಬಳಿಕೆ: ಡಿಸಿ ಕೋರ್ಟ್ ಆದೇಶದ ವಿರುದ್ಧದ ರಿಟ್  ಹೈಕೋರ್ಟನಲ್ಲಿ ವಜಾ

    ಉಡುಪಿ: ಸರಕಾರಕ್ಕೆ ಸೇರಬೇಕಾಗಿದ್ದ ಬಹುಕೋಟಿ ಬೆಲೆಬಾಳುವ ಭೂಮಿಯನ್ನು ಸುಳ್ಳು ಮಾಹಿತಿ ನೀಡಿ ಉಡುಪಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳಿಂದ ಪಡೆದುಕೊಂಡ ದಾಖಲೆಗಳನ್ನು ಮುಂದಿಟ್ಟುಕೊಂಡು ಅಕ್ರಮವಾಗಿ ಕಬಳಿಕೆ ಮಾಡಲು ಯತ್ನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿ ಕೋರ್ಟ್ ಆದೇಶದ ವಿರುದ್ಧ ಖಾಸಗೀ ವ್ಯಕ್ತಿಯೊಬ್ವರು ಸಲ್ಲಿಸಿದ ರಿಟ್ ಪಿಟೀಷನ್ (ನಂ. 21692 OF 2019)ನ್ನು ರಾಜ್ಯ ಉಚ್ಛ ನ್ಯಾಯಾಲಯದ ನ್ಯಾಯಮೂರ್ತಿಗಳಾದ ಇ.ಎಸ್. ಇಂದಿರೇಶ್ ಅವರ ಬೆಂಚ್ 2026 ಆಗಸ್ಟ್ 31ರಂದು ವಜಾಗೊಳಿಸಿ ಆದೇಶಿಸಿದೆ.

    ಅಕ್ರಮ ಭೂಕಬಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉಡುಪಿ ಜಿಲ್ಲಾಧಿಕಾರಿಗಳ ನ್ಯಾಯಾಲಯ (ಪ್ರಿಯಾಂಕಾ ಮೇರಿ ಪ್ರಾನ್ಸಿಸ್, ಐ.ಎ.ಎಸ್., ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ದಂಡಾಧಿಕಾರಿಗಳು)ವು ಪ್ರತಿವಾದಿ, ಉಡುಪಿಯ ಶ್ರೀರಾಮ ದಿವಾಣ ಅವರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಮಂಡಿಸಿದ ವಾದವನ್ನು ಮನ್ನಿಸಿ ಅವರ ಪರವಾಗಿ ಆದೇಶ ನೀಡಿತ್ತು (28/01/2019). ಈ ಆದೇಶದ ವಿರುದ್ದ ರಿವಿಷನ್ ಅರ್ಜಿದಾರರಾದ ಉಡುಪಿಯ ದಿವಂಗತ ಅಚ್ಯುತನ್ ರವರ ಪುತ್ರ ಅರವಿಂದ ಎಂಬವರು ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ರಿಟ್ ಪಿಟಿಷನ್ ಸಲ್ಲಿಸಿ ಡಿಸಿ ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ತಂದಿದ್ದರು.

    ಉಡುಪಿ ಜಿಲ್ಲೆ ಉಡುಪಿ ತಾಲೂಕು ಮೂಡನಿಡಂಬೂರು ಗ್ರಾಮದ ಕಾಡಬೆಟ್ಟು ನಿವಾಸಿಯಾಗಿದ್ದ ನಾರಾಯಣಿ ಅಮ್ಮಾಳ್ ಯಾನೆ ನಾರಾಯಣಿ ಬಾಯಿ ಎಂಬವರು ತಮ್ಮ ಸ್ವಾರ್ಜಿತ 2.29 ಎಕರೆ ಆಸ್ತಿಯನ್ನು 1944ರ ಎಪ್ರಿಲ್ ಒಂದರಂದು ಸರಕಾರದ ಹೆಸರಿಗೆ ವೀಲುನಾಮೆ ಬರೆದು ನೋಂದಾಯಿಸಿದ್ದರು.

    ಕಲ್ಯಾಣಿ (ಬಿನ್ ಮೈಲ್ ರಾಮ) ಎಂಬವರ ಮಗಳಾಗಿದ್ದ ನಾರಾಯಣಿ ಅವರು ಅವಿವಾಹಿತರಾಗಿದ್ದರು. ಮಹಾದಾನಿಯೂ, ಮಹಾ ಮಾನವತಾವಾದಿಯೂ, ಸ್ವಾಭಿಮಾನಿಯೂ ಆಗಿದ್ದ ನಾರಾಯಣಿ ಬಾಯಿ ಅವರು, ಆ ಕಾಲದಲ್ಲಿ ಉಡುಪಿಯಲ್ಲಿದ್ದ ಉಡುಪಿ ಲೋಕಲ್ ಫಂಡ್ ಆಸ್ಪತ್ರೆಯ ಮೂಲಕ ನಿರ್ಗತಿಕ ಮಹಿಳೆಯರಿಗಾಗಿ ಹೆರಿಗೆ ಆಸ್ಪತ್ರೆ ನಿರ್ಮಿಸಬೇಕೆಂಬ ಸದಾಶಯದಲ್ಲಿ ತಮ್ಮ ಸ್ವಾರ್ಜಿತ ಆಸ್ತಿಯನ್ನು ಸರಕಾರಕ್ಕೆ ದಾನವಾಗಿ ನೀಡಿದ್ದರು. ಇವರು 1965ರ ಜುಲೈ 14ರಂದು ನಿಧನರಾಗಿದ್ದರು.

    ನಾರಾಯಣಿ ಅವರು ನಿಧನರಾದ ಮೂರು ವರ್ಷಗಳ ನಂತರ 1968ರಲ್ಲಿ, ತಾನು ನಾರಾಯಣಿ ಅವರ ಗಂಡ ಎಂದು ಹೇಳಿಕೊಂಡು, ಎರಡನೇ ಪತ್ನಿ ಹಾಗೂ ಮಕ್ಕಳೊಂದಿಗೆ ಬಂದ ಎ. ಅಚ್ಯುತನ್ ಎಂಬವರು ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ (ಸಂಖ್ಯೆ: 31/68)ಯೊಂದನ್ನು ಹೂಡಿ, ನಾರಾಯಣಿ ಅಮ್ಮಾಳ್ ರವರು ಬರೆದ ನೋಂದಾಯಿತ ವೀಲುನಾಮೆಯನ್ನು ಅನೂರ್ಜಿತಗೊಳಿಸಬೇಕೆಂದು ಕೋರಿಕೊಂಡರು.

    ಸರಕಾರಕ್ಕೆ ದಾನ ಮಾಡಿದ ಆಸ್ತಿ ನಾರಾಯಣಿಯವರ ಸ್ವಾರ್ಜಿತ ಎನ್ನುವುದನ್ನು ಮತ್ತು ನಾರಾಯಣಿಯವರಿಗೆ ಮಕ್ಕಳಿಲ್ಲ ಎನ್ನುವುದನ್ನು ಮಾನ್ಯ ಮಾಡಿದ ನ್ಯಾಯಾಲಯವು, ಅಚ್ಯುತನ್ ಅವರ ದಾವೆಯನ್ನು ವಜಾಗೊಳಿಸಿತ್ತಲ್ಲದೆ, ನಾರಾಯಣಿಯವರು ದಾನಮಾಡಿದ ಆಸ್ತಿಯನ್ನು ಅಂದಿನ ಮೈಸೂರು ಸರಕಾರದ ಆರೋಗ್ಯ ಇಲಾಖೆಯ ಪರವಾಗಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ ಹಸ್ತಾಂತರಿಸಲು ಆದೇಶಿಸಿ ತೀರ್ಪು ನೀಡಿತ್ತು. ಉಡುಪಿ ಸಿವಿಲ್ ನ್ಯಾಯಾಲಯದಲ್ಲಿ ಅಂದು ಸರಕಾರದ ಪರವಾಗಿ ಉಡುಪಿ ನಗರದ ಹಿರಿಯ ನ್ಯಾಯವಾದಿಗಳಾಗಿದ್ದ ವೈ. ಸಿ. ಎಸ್. ಹೆಗ್ಡೆ ಅವರು ವಾದಿಸಿದ್ದರು.

    ಉಡುಪಿ ಸಿವಿಲ್ ನ್ಯಾಯಾಲಯದ ತೀರ್ಪನ್ನು ಪ್ರಶ್ನಿಸಿ ಅಚ್ಯುತನ್ ಅವರು ದ. ಕ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯದಲ್ಲಿ ಮೇಲ್ಮನವಿ (ರೆಗ್ಯುಲರ್ ಅಪೀಲ್: 05/1973, 07/1973) ಸಲ್ಲಿಸಿದರು. ಈ ಮೇಲ್ಮನವಿಯನ್ನು ಸಹ ದ. ಕ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು 1976ರ ಫೆಬ್ರವರಿ 10ರಂದು ವಜಾಗೊಳಿಸಿತ್ತು.

    1976ರಲ್ಲಿ ದ. ಕ. ಜಿಲ್ಲಾ ಹೆಚ್ಚುವರಿ ನ್ಯಾಯಾಲಯವು ಅಚ್ಯುತನ್ ಅವರ ಮೇಲ್ಮನವಿಯನ್ನು ವಜಾಗೊಳಿಸಿದ ನಂತರ ಸರಕಾರ ನಾರಾಯಣಿ ಅಮ್ಮಾಳ್ ರವರು ದಾನ ಮಾಡಿದ ಭೂಮಿಯನ್ನು ಸ್ವಾಧೀನಕ್ಕೆ ಪಡೆದುಕೊಳ್ಳಬೇಕಾಗಿತ್ತು. ಆದರೆ ಸಂಬಂಧಿಸಿದ ಅಧಿಕಾರಿಗಳು ಈ ವಿಷಯದಲ್ಲಿ ಜವಾಬ್ದಾರಿಯಿಂದ ಕರ್ತವ್ಯ ನಿರ್ವಹಿಸದೆ ನಿರ್ಲಕ್ಷಿಸಿದ ಕಾರಣ ಸಂಬಂಧಪಟ್ಟ ಭೂಮಿ ಅನಾಥವಾಯಿತು, ಅನಧಿಕೃತ ವ್ಯಕ್ತಿಗಳ ವಶದಲ್ಲಿರಲು ಕಾರಣವಾಯಿತು ಮತ್ತು ನಿಧಾನವಾಗಿ ಅಚ್ಯುತನ್ ಕುಟುಂಬದವರನ್ನು ಹೊರತುಪಡಿಸಿ ಉಳಿದವರೆಲ್ಲರೂ ಮರೆತುಬಿಡುವಂತಾಯಿತು.

    ಮ್ಯುಟೇಶನ್, ಪಹಣಿ ಬದಲಾವಣೆ ಮಾಡಿಕೊಂಡಾಗ ವಿಷಯ ಬಹಿರಂಗ !

    ಸುಧೀರ್ಘ 40 ವರ್ಷಗಳ ನಂತರ ಅಚ್ಯುತನ್ ಅವರ ಕುಟುಂಬದ ಅರವಿಂದ್ ಹಾಗೂ ಇತರರು ಸುಳ್ಳು / ತಪ್ಪು ಮಾಹಿತಿಗಳನ್ನು ನೀಡಿ, ನಕಲಿ ದಾಖಲೆಗಳನ್ನು ಸೃಷ್ಟಿಸಿ ಉಡುಪಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸಲ್ಲಿಸುವ ಮೂಲಕ, ನಾರಾಯಣಿ ಅಮ್ಮಾಳ್ ರವರು ಸರಕಾರಕ್ಕೆ ದಾನ ಮಾಡಿದ ಉಡುಪಿ ನಗರಸಭಾ ವ್ಯಾಪ್ತಿಯ ಉಡುಪಿ ನಗರದ ಕಾಡಬೆಟ್ಟುವಿನಲ್ಲಿರುವ ಬಹುಕೋಟಿ ಬೆಲೆಬಾಳುವ ಭೂಮಿಯನ್ನು ರಹಸ್ಯವಾಗಿ ತಮ್ಮ ಹೆಸರಿಗೆ ಮಾಡಿಸಿಕೊಂಡಾಗ ಪತ್ರಕರ್ತರೂ, ಜನಪರ ಹೋರಾಟಗಾರರೂ ಆದ ಶ್ರೀರಾಮ ದಿವಾಣ ಅವರ ಗಮನಕ್ಕೆ ಬಂತು. ಶ್ರೀರಾಮ ದಿವಾಣರು ಮಾಹಿತಿ ಹಕ್ಕು ಕಾಯಿದೆಯ ಮುಖಾಂತರ ಕಾಡಬೆಟ್ಟು ಭೂಮಿಗೆ ಸಂಬಂಧಿಸಿದ ಎಲ್ಲಾ ಕಡತಗಳನ್ನೂ ಪಡೆದುಕೊಂಡು ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ತನಿಖೆಗೆ ಒತ್ತಾಯಿಸುವುದರೊಂದಿಗೆ ಈ ಭೂಕಬಳಿಕೆಯ ವಿರುದ್ಧದ ಹೋರಾಟ ಆರಂಭಗೊಂಡಿತು.

    ಆರಂಭದಲ್ಲಿ ಪ್ರಕರಣದ ಪರಿಶೀಲನೆ, ತನಿಖೆ ನಡೆಸಿದ ಉಡುಪಿ ತಾಲೂಕು ಕಂದಾಯ ಅಧಿಕಾರಿಗಳು ಮ್ಯುಟೇಶನ್ ಮತ್ತು ಪಹಣಿ ಬದಲಾವಣೆ ಮಾಡಿದ್ದನ್ನು ಸಮರ್ಥಿಸಿಕೊಂಡರಾದರೂ, ನಂತರ ಕುಂದಾಪುರ ಉಪವಿಭಾಗ ಮಟ್ಟದ ಅಧಿಕಾರಿಗಳು ನಡೆಸಿದ ತನಿಖೆಯಲ್ಲಿ ಸತ್ಯ ಬಯಲಾಯಿತು.

    ಈ ಎಲ್ಲಾ ಬೆಳವಣಿಗೆಗಳ ಬೆನ್ನಿಗೆ ಪ್ರಕರಣ ಎಸಿ ಕೋರ್ಟ್ (ಕುಂದಾಪುರ ಉಪವಿಭಾಗದ ಅಸಿಸ್ಟೆಂಟ್ ಕಮಿಷನರ್ ರವರ ನ್ಯಾಯಾಲಯ / ಶಿಲ್ಪಾ ನಾಗ್ ಐ.ಎ.ಎಸ್.) ನಲ್ಲಿ ವಿಚಾರಣೆಗೆ ಬಂತು. ಮೇಲ್ಮನವಿದಾರರಾದ ಶ್ರೀರಾಮ ದಿವಾಣ ಅವರು ಎಸಿ ಕೋರ್ಟ್ ವಿಚಾರಣಾ ಪ್ರಕ್ರಿಯೆಯಲ್ಲಿ ಸಮಗ್ರ ದಾಖಲೆಗಳನ್ನು ಸಲ್ಲಿಸಿ, ಸ್ವತಹಾ ವಾದ ಮಂಡಿಸಿದರು. ಅಂತಿಮವಾಗಿ ಎ.ಸಿ. ಕೋರ್ಟ್ (ಎ.ಸಿ. ಶಿಲ್ಪಾ ನಾಗ್, ಐ.ಎ.ಎಸ್.) ಉಡುಪಿ ತಾಲೂಕು ಕಂದಾಯ ಇಲಾಖೆಯ ಅಧಿಕಾರಿಗಳು ಮಾಡಿದ ಮ್ಯುಟೇಶನ್ ಮತ್ತು ಪಹಣಿ ಬದಲಾವಣೆ ಸಹಿತ ಇತರ ಎಲ್ಲಾ ತಪ್ಪು ಪ್ರಕ್ರಿಯೆಗಳನ್ನು ರದ್ದುಪಡಿಸಿತು. ಮಾತ್ರವಲ್ಲ, ಸಂಬಂಧಿಸಿದ ಭೂಮಿ ಸರಕಾರದ್ದು ಎಂದು ಆದೇಶ ನೀಡಿದರು.

    ಎ.ಸಿ. ಕೋರ್ಟ್ ಆದೇಶದ ವಿರುದ್ಧ ದಿವಂಗತ ಎ. ಅಚ್ಯುತನ್ ಅವರ ಪುತ್ರ ಅರವಿಂದ್ ಅವರು ಡಿ.ಸಿ. ಕೋರ್ಟ್ ಗೆ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದರು. ಡಿ. ಸಿ. ಕೋರ್ಟ್ (ಪ್ರಿಯಾಂಕಾ ಮೇರಿ ಫ್ರಾನ್ಸಿಸ್, ಐ.ಎ.ಎಸ್.)ನಲ್ಲಿಯೂ ಸಾಮಾಜಿಕ ಕಾರ್ಯಕರ್ತರೂ, ಮಾನವಹಕ್ಕು ಹೋರಾಟಗಾರರೂ ಆದ ಶ್ರೀರಾಮ ದಿವಾಣ ಅವರು ಸಮಗ್ರ ಕಡತಗಳೊಂದಿಗೆ ಸ್ವತಹಾ ವಾದಿಸಿದರು ಮತ್ತು ಪ್ರಕರಣ ಗೆದ್ದು, ಕಾಡಬೆಟ್ಟುವಿನ 2. 29 ಎಕರೆ ಭೂಮಿ ಸರಕಾರಕ್ಕೆ ಸೇರಿದ್ದು ಎಂಬ ಆದೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾದರು.

    ಹೈ ಕೋರ್ಟ್ ನಿಂದ ತಡೆಯಾಜ್ಞೆ

    ಎ.ಸಿ. ಕೋರ್ಟ್ ಆದೇಶದ ವಿರುದ್ಧ ಅರವಿಂದ್ ಅವರು ಹೈ ಕೋರ್ಟ್ ಮೆಟ್ಟಿಲು ಹತ್ತಿದರು. ರಿಟ್ ಪಿಟಿಷನ್ ಸಲ್ಲಿಸಿ ಡಿ. ಸಿ. ಕೋರ್ಟ್ ಆದೇಶಕ್ಕೆ ತಡೆಯಾಜ್ಞೆ ಪಡೆದುಕೊಂಡರು. ಕೆಲ ವರ್ಷ ಕಾಲ ಪ್ರಕರಣ ಪೆಂಡಿಂಗ್ ನಲ್ಲಿತ್ತಾದರೂ, 2026ರ ಜುಲೈ ಮತ್ತು ಆಗಸ್ಟ್ ನಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಆಗಸ್ಟ್ 31ರಂದು ಹೈ ಕೋರ್ಟ್ ನ್ಯಾಯಮೂರ್ತಿಗಳಾದ ಇಂದಿರೇಶ್ ಅವರ ಬೆಂಚ್ ಅರವಿಂದ್ ಅವರ ರಿಟ್ ಪಿಟೀಷನ್ ನ್ನು ವಜಾಗೊಳಿಸಿ ತೀರ್ಪು ನೀಡಿತು.

    *ದಿವಾಣ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
    NEET ಹಂಗಾಮ ನೀಟಾಗಿ ಅಂತ್ಯ ಕಾಣುತ್ತಾ…?!ಮೋದಿಯ ‘ತಡವಾದ ಪ್ರತಿಕ್ರಿಯೆ’-ಕೊನೆಗೂ ವಾಂಗ್ಚುಕ್ ಉಪವಾಸ ಅಂತ್ಯ… ಆದರೆ … ‘ಕಾಕ್ರೋಚ್’ ಹೋರಾಟ ಮುಂದುವರಿಕೆ!ಮುಂದೇನು??
    ಮಂಗಳೂರು, ಮೈಸೂರಿಗೂ ‘Amazon Now’ 2,800 ಕೋಟಿ ಹೂಡಿಕೆ-
    ದೊಡ್ಡ ಬಜೇಟ್  ತುಳು ಸಿನಿಮಾ`ಗಜಾನನ ಕ್ರಿಕೆಟರ್ಸ್’ ಮೇ 22 ರಂದು ತೆರೆಗೆ
    ಮಕ್ಕಳಿಲ್ಲದ ನೋವನ್ನು ಮರಗಳ ಪ್ರೀತಿಯಾಗಿ ಬದಲಿಸಿ ಬರಡು ಭೂಮಿಯನ್ನು ಹಸಿರು ಕಾಡಾಗಿಸಿದ ದಂಪತಿಗಳ ಅದ್ಭುತ ಜೀವನಗಾಥೆ
    ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ ‘ಶಾ’ ಸೂಚನೆ
    ಬಂಗಾಳದಲ್ಲಿ ಈಗಲೂ ದೀದಿನೇ ಫೇವರೆಟ್, ಬಲ ಹೆಚ್ಚಿಸಿ ಕೊಂಡ ಬಿಜೆಪಿ
    ಗ್ರಾಮೀಣ ವಿದ್ಯಾರ್ಥಿಗಳಿಗೂ AI ಶಿಕ್ಷಣ: ಕರ್ನಾಟಕ ಸರ್ಕಾರದ ಐತಿಹಾಸಿಕ ಹೆಜ್ಜೆ..50 ಸರ್ಕಾರಿ ಕಾಲೇಜುಗಳಲ್ಲಿ AI ಲ್ಯಾಬ್‌ಗಳು!
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ಮಂಗಳೂರು ದಸರಾ ಮೆರವಣಿಗೆಗೆ ವಿದ್ಯುತ್ ತಂತಿಗಳ ಸಮಸ್ಯೆಗೆ ಗುಡ್‌ಬೈ!
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    ವೆಟ್-ವೆಲ್‌ಗಳ ಕಳಪೆ ನಿರ್ವಹಣೆಚರಂಡಿ-ಬಾವಿಗಳಿಗೆ ಡ್ರೈನೇಜ್ ನೀರು..
    ಗೃಹಸಚಿವ ಪ್ರಿಯಾಂಕ್ ಖರ್ಗೆಗೆ ಅವಹೇಳನ ಜಾತಿ ನಿಂದನೆ  ಆರೋಪದಲ್ಲಿ ಕಾರ್ಕಳ ವ್ಯಕ್ತಿಯ ಬಂಧನ !
    ರಾಜಕೀಯ ಬದಲಾಗುತ್ತಿದೆ -ಪಂಚರಾಜ್ಯ election ರಿಸಲ್ಟ್ “ಗೆಲುವು-ಸೋಲಿನ ಶಕ್ತಿ ಪಕ್ಷದಲ್ಲಲ್ಲ… ಜನರ ಕೈಯಲ್ಲಿ”
    2027ರಲ್ಲಿ ರಸ್ತೆಗಿಳಿಯಲಿರುವ EV ಕಾರ್ Avinya X ನೋಡಿದರೆ ಸಾಮಾನ್ಯ SUVಗಳನ್ನೇ ಮರೆತುಬಿಡುತ್ತಿರಾ…ಬರುತ್ತಿದೆ ಟಾಟಾದ ಅತ್ಯಂತ ದುಬಾರಿ ಕನಸು!
    ಮಂಗಳೂರು ಕುಕ್ಕರ್ ಬಾಂಬ್ ಪ್ರಕರಣಕ್ಕೆ ಅಂತಿಮ ತೀರ್ಪು – ಶಾರೀಕ್ ಗೆ 10 ವರ್ಷ ಜೈಲು..
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    ಕದನ ವಿರಾಮ ಚೂರುಚೂರು-ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ!ಜೋರ್ಡಾನ್, ಬಹ್ರೇನ್, ಕುವೈತ್‌ನಲ್ಲಿ ಕ್ಷಿಪಣಿ ಅಲರ್ಟ್ !!
    ಸ್ಟರ್ಲಿಂಗ್ ವಸತಿ ಶಾಲೆಯ ಶಿಸ್ತಿನ ಹೆಸರಲ್ಲಿ 12 ವರ್ಷದ ಮುಗ್ಧನ ಜೀವ ಕಸಿದ ಕ್ರೌರ್ಯ!ಅನುಮಾನಾಸ್ಪದ ಸಾವಿನ ಸುತ್ತ ಹರಡಿದ ಆಘಾತಕಾರಿ ಸತ್ಯ…ಇಲ್ಲಿದೆ
    🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್