📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ‘ಮೈ ಭಾರತ್’-ದಕ್ಷಿಣ ಕನ್ನಡದ ಯುವ(ಕ/ತಿ)ಯರೇ, ರಾಷ್ಟ್ರಮಟ್ಟದ ವೇದಿಕೆಗೆ ಇದು ನಿಮ್ಮ ಅವಕಾಶ!

    ‘ಮೈ ಭಾರತ್’ ಪೋರ್ಟಲ್‌ನಲ್ಲಿ ಆನ್‌ಲೈನ್ ರಸಪ್ರಶ್ನೆ | ಗೆದ್ದವರಿಗೆ ಪ್ರಬಂಧ, ರಾಜ್ಯ–ರಾಷ್ಟ್ರೀಯ ಮಟ್ಟಕ್ಕೆ ಅವಕಾಶ..ಅದರಲ್ಲೂ ವಿಶೇಷವೆಂದರೆ, ಪ್ರಧಾನಿ, ಕೇಂದ್ರ ಸಚಿವರು ಹಾಗೂ ಕೇಂದ್ರ ಸರಕಾರದ ಹಿರಿಯ ಕಾರ್ಯದರ್ಶಿಗಳ ಮುಂದೆ ತಮ್ಮ ಆಲೋಚನೆಗಳನ್ನು ಹಂಚಿಕೊಳ್ಳುವ ವೇದಿಕೆ ಸಿಗಲಿದೆ.

    ಮಂಗಳೂರು: ದಕ್ಷಿಣ ಕನ್ನಡದ ಯುವಕರ ಪ್ರತಿಭೆ, ಜ್ಞಾನ ಮತ್ತು ಆಲೋಚನೆಗಳಿಗೆ ಇದೀಗ ರಾಷ್ಟ್ರಮಟ್ಟದ ವೇದಿಕೆಯ ಬಾಗಿಲು ತೆರೆದಿದೆ. ಓದು, ಉದ್ಯೋಗದ ತಯಾರಿ, ದಿನನಿತ್ಯದ ಬ್ಯುಸಿ ಜೀವನದ ನಡುವೆ ನಿಮ್ಮ ಜ್ಞಾನವನ್ನು ಪರೀಕ್ಷಿಸಿಕೊಳ್ಳಲು ಹಾಗೂ ದೇಶದ ಪ್ರಮುಖ ವಿಚಾರಗಳ ಬಗ್ಗೆ ನಿಮ್ಮ ಅಭಿಪ್ರಾಯವನ್ನು ಮಂಡಿಸಲು ‘ಮೈ ಭಾರತ್’ ಪೋರ್ಟಲ್‌ನಲ್ಲಿ ಜಿಲ್ಲಾ ಮಟ್ಟದ ಆನ್‌ಲೈನ್ ರಸಪ್ರಶ್ನೆ ಅಭಿಯಾನ ಆರಂಭಿಸಲಾಗಿದೆ.

    ವಿಕಸಿತ್ ಭಾರತ್ ಲೀಡರ್ಸ್ ಡೈಲಾಗ್ ವತಿಯಿಂದ ನಡೆಯುತ್ತಿರುವ ಈ ಅಭಿಯಾನದಲ್ಲಿ 15ರಿಂದ 29 ವರ್ಷದೊಳಗಿನ ದಕ್ಷಿಣ ಕನ್ನಡ ಜಿಲ್ಲೆಯ ಯುವಕರು ಭಾಗವಹಿಸಬಹುದು. ಜಿಲ್ಲೆಯಲ್ಲಿ ವಾಸಿಸುವವರು ಮಾತ್ರವಲ್ಲದೆ, ಜಿಲ್ಲೆಯಲ್ಲಿ ಅಧ್ಯಯನ ಮಾಡುತ್ತಿರುವ ಅರ್ಹ ಯುವಕರಿಗೂ ಅವಕಾಶವಿದೆ.

    ಮೊದಲ ಹಂತದಲ್ಲೇ ನಿಮ್ಮ ಜ್ಞಾನಕ್ಕೆ ಪರೀಕ್ಷೆ

    ‘ಮೈ ಭಾರತ್’ ಪೋರ್ಟಲ್‌ನಲ್ಲಿ ಲೈವ್ ಇರುವ ಹಂತ-1ರ ಆನ್‌ಲೈನ್ ರಸಪ್ರಶ್ನೆಯಲ್ಲಿ ಭಾಗವಹಿಸಿ ನಿಮ್ಮ ಜ್ಞಾನವನ್ನು ಪ್ರದರ್ಶಿಸಬೇಕು. ನೋಂದಣಿ ಮಾಡಿಕೊಂಡ ಬಳಿಕ ಆಯ್ಕೆ ಮಾಡಿಕೊಂಡ ಆದ್ಯತೆಯ ಭಾಷೆಯಲ್ಲಿ ರಸಪ್ರಶ್ನೆಯನ್ನು ಪೂರ್ಣಗೊಳಿಸಬಹುದು.

    ಇಲ್ಲಿ ಅಂಕ ಗಳಿಸುವುದಷ್ಟೇ ಗುರಿಯಲ್ಲ. ಹೆಚ್ಚು ಅಂಕ ಗಳಿಸುವವರಿಗೆ ಮುಂದಿನ ಹಂತಕ್ಕೆ ಕಾಲಿಡುವ ಅವಕಾಶ ಸಿಗಲಿದೆ. ಪ್ರಮುಖ ವಲಯಗಳ ವಿಷಯಗಳ ಕುರಿತು 500 ಪದಗಳ ಪ್ರಬಂಧ ಬರೆಯುವ ಮೂಲಕ ತಮ್ಮ ವಿಚಾರ ಮತ್ತು ಚಿಂತನಾ ಸಾಮರ್ಥ್ಯವನ್ನು ಪ್ರದರ್ಶಿಸಬೇಕು.

    ದ.ಕ.ದಿಂದ ಇಬ್ಬರಿಗೆ ರಾಜ್ಯಮಟ್ಟದ ಅವಕಾಶ

    ಈ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಇಬ್ಬರು ಸ್ಪರ್ಧಿಗಳು ರಾಜ್ಯ ಮಟ್ಟಕ್ಕೆ ಪ್ರವೇಶ ಪಡೆಯಲಿದ್ದಾರೆ. ಅಲ್ಲಿಂದ ಮುಂದೆ ಪ್ರಾದೇಶಿಕ ಮಟ್ಟದಲ್ಲಿ ವಿಜೇತರಾಗುವವರಿಗೆ ಹೊಸದಿಲ್ಲಿಯಲ್ಲಿ ನಡೆಯುವ ರಾಷ್ಟ್ರೀಯ ಕಾರ್ಯಕ್ರಮದಲ್ಲಿ ತಮ್ಮ ವಿಚಾರಗಳನ್ನು ಮಂಡಿಸುವ ಅಪರೂಪದ ಅವಕಾಶ ಸಿಗಲಿದೆ.

    ಮಂಗಳೂರಿನ ಕಾಲೇಜು ವಿದ್ಯಾರ್ಥಿಗಳು, ಯುವ ಉದ್ಯೋಗಾಕಾಂಕ್ಷಿಗಳು, ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯಲ್ಲಿರುವವರು ಹಾಗೂ ದೇಶದ ಅಭಿವೃದ್ಧಿ ವಿಚಾರಗಳಲ್ಲಿ ಆಸಕ್ತಿ ಹೊಂದಿರುವ ಯುವಕರಿಗೆ ಇದು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಳ್ಳಲು ಉತ್ತಮ ವೇದಿಕೆಯಾಗಿದೆ.

    ಹೇಗೆ ಭಾಗವಹಿಸಬೇಕು?

    ದಕ್ಷಿಣ ಕನ್ನಡದಲ್ಲಿ ವಾಸಿಸುವ ಅಥವಾ ಅಧ್ಯಯನ ಮಾಡುತ್ತಿರುವ 15ರಿಂದ 29 ವರ್ಷದ ಯುವಕರು ಮೊದಲು mybharat.gov.inಪೋರ್ಟಲ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆದ್ಯತೆಯ ಭಾಷೆಯನ್ನು ಆಯ್ಕೆ ಮಾಡಿಕೊಂಡು ಹಂತ-1ರ ಆನ್‌ಲೈನ್ ರಸಪ್ರಶ್ನೆಯನ್ನು ಪೂರ್ಣಗೊಳಿಸಬೇಕು.

    ಒಂದು ಆನ್‌ಲೈನ್ ಕ್ವಿಜ್‌ನಿಂದ ಆರಂಭವಾಗುವ ಈ ಅವಕಾಶ, ರಾಜ್ಯಮಟ್ಟದಿಂದ ರಾಷ್ಟ್ರಮಟ್ಟದ ವೇದಿಕೆಯವರೆಗೆ ಕರೆದೊಯ್ಯಬಹುದು. ಹೀಗಾಗಿ ದಕ್ಷಿಣ ಕನ್ನಡದ ಯುವಕರೇ—ನಿಮ್ಮ ಜ್ಞಾನಕ್ಕೆ ಒಂದು ಪರೀಕ್ಷೆ ನೀಡಿ, ನಿಮ್ಮ ಆಲೋಚನೆಗೆ ಒಂದು ವೇದಿಕೆ ಪಡೆದುಕೊಳ್ಳಿ!

    ಈ ಕುರಿತು ಮೈ ಭಾರತ್ ಅಧಿಕಾರಿ ಉಲ್ಲಾಸ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ದಕ್ಷಿಣ ಕನ್ನಡ ಎನ್ನೆಸ್ಸೆಸ್ ಸೀಮಾ ಹಾಗೂ ಆಡಳಿತಾಧಿಕಾರಿ ಜಗದೀಶ್ ಉಪಸ್ಥಿತರಿದ್ದರು.

    ##MyBharat #YouthIndia #ViksitBharat #YouthLeadership #Mangaluru #DakshinaKannada #OnlineQuiz

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಹೇಶ್ ಶೆಟ್ಟಿ ತಿಮರೋಡಿಗೆ ಮೂರನೇ ಬಾರಿ ಗಡಿಪಾರು ಆದೇಶ….
    ವಿಮಾನದಲ್ಲಿ ಭಾರೀ ಟರ್ಬುಲೆನ್ಸ್:300 ಅಡಿ ಹಠಾತ್ ಕುಸಿದ ಏರ್ ಇಂಡಿಯಾ ವಿಮಾನ..!ಪ್ರಯಾಣಿಕರು-ಸಿಬ್ಬಂದಿಗೆ ಗಾಯ..
    ಸಿಖ್ ವಿರೋಧಿ ದಂಗೆಯ ಆರೋಪಿ, ಸಜ್ಜನ್ ಕುಮಾರ್ ಜೈಲಿನಲ್ಲಿ ನಿಧನ
    ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    ಪ್ರಕೃತಿಯ ಮುನಿಸಿಗೆ ಕರಗುತ್ತಿದೆ ಯುರೋಪ್ ….!ತಂತ್ರಜ್ಞಾನದ ಅಹಂಕಾರವನ್ನು ಸುಟ್ಟು ಬೂದಿ ಮಾಡುತ್ತಿರುವ ಯುರೋಪ್ ಹೀಟ್‌ವೇವ್!
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
    ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
    ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    80 ಲಕ್ಷ ವಂಚನೆ ಪ್ರಕರಣ ದೂರು ದಾಖಲು
    ಅರ್ಧ ಸಂಬಳ ಸಾಕು ಮತ್ತು VIP ಸೌಲಭ್ಯಕ್ಕೆ ‘ನೋ’ ಎಂದ ನ್ಯಾಯಾಧೀಶ!
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ರೆಸ್ಯೂಮ್ ಅಲ್ಲ, ಪ್ರಾಜೆಕ್ಟ್ ಮಾತಾಡಿತು! ಒಂದೇ ವರ್ಷದಲ್ಲಿ ₹10 ಲಕ್ಷ ಸಂಬಳದಿಂದ ₹80 LPA ಗಳಿಸಿದ ಯುವತಿಯ ಯಶಸ್ಸಿನ ಸೂತ್ರ ವೈರಲ್..!!
    ಆಮಾದ್ಮಿ ಪಕ್ಷದ ಏಳು ಸಂಸದರು ಬಿಜೆಪಿಯ ತೆಕ್ಕೆಗೆ ರೈಟೋ?  ರಾಂಗೋ?
    ಮಾಜಿ ಮುಖ್ಯಮಂತ್ರಿಗೆ ಉಂಡೇನಾಮ ತಿಕ್ಕಿದ ಸಚಿವ ಯಾರು?
    ‘₹1ಕ್ಕೆ ಫ್ಯಾಷನ್’ ಜಾಹೀರಾತು ವೈರಲ್… ಮಾಲಾಡ್ ಮಾಲ್‌ನಲ್ಲಿ ನಿಯಂತ್ರಣ ತಪ್ಪಿದ ಜನಸಾಗರ-ಸ್ಟ್ಯಾಂಪೀಡ್ ಭೀತಿ ಮೂಡಿಸಿದ ಜನಸಂದಣಿ!
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
    ದೇಶಕ್ಕಾಗಿ ಹಾರಿದ ಯುವ ಪೈಲಟ್: ಅಸ್ಸಾಂ ದುರಂತದಲ್ಲಿ ಐಎಎಫ್ ಅಧಿಕಾರಿ ವೀರಮರಣ
    ರಾಷ್ಟ್ರೀಯ ಹೆದ್ದಾರಿ ಪೊಳಲಿ ದ್ವಾರದ ಸಮೀಪ ಭಾರೀ ಗಾತ್ರದ ಮರ ಬಿದ್ದು ಕಾರ್ ಜಖಂ, ಚಾಲಕ ಆಸ್ಪತ್ರೆಗೆ ದಾಖಲು
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಅನಾಥ ಪುಟ್ಟ ಬಾಲಕಿಯರ ಮೇಲೆ ವರ್ಷಗಳ ಕಾಲ ಲೈಂಗಿಕ ದೌರ್ಜನ್ಯ:ರಾಕ್ಷಸ ಮನಸ್ಸುಗಳಿಗೆ ಅಂತ್ಯ ಯಾವಾಗ?
    Forex ಟ್ರೇಡಿಂಗ್ ಹೆಸರಲ್ಲಿ 3.5 ಲಕ್ಷ ವಂಚನೆ – ಆರೋಪಿ ವಿರುದ್ಧ ಪ್ರಕರಣ ದಾಖಲು
    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ