📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 400 ಬೆಡ್‌ಗಳ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್…!

    ಮಂಗಳೂರು: ಕರಾವಳಿಯ ಪ್ರಮುಖ ಸರ್ಕಾರಿ ಆಸ್ಪತ್ರೆಯಾಗಿರುವ ಮಂಗಳೂರಿನ ವೆನ್ಲಾಕ್ ಜಿಲ್ಲಾಸ್ಪತ್ರೆಗೆ ಮತ್ತಷ್ಟು ಬಲ ಸಿಗಲಿದೆ. ಆಸ್ಪತ್ರೆಯ ಹಾಸಿಗೆ ಸಾಮರ್ಥ್ಯವನ್ನು ಹೆಚ್ಚಿಸುವ ಪ್ರಸ್ತಾವನೆಗೆ ರಾಜ್ಯ ಸರ್ಕಾರದ ಹಣಕಾಸು ಇಲಾಖೆಯಿಂದ ಅನುಮೋದನೆ ದೊರೆತಿದ್ದು, ಒಟ್ಟು 400 ಹೆಚ್ಚುವರಿ ಹಾಸಿಗೆಗಳನ್ನು ಹಂತ ಹಂತವಾಗಿ ಸೇರ್ಪಡೆಗೊಳಿಸಲು ನಿರ್ಧರಿಸಲಾಗಿದೆ.

    ಮೊದಲ ಹಂತದಲ್ಲಿ 200 ಬೆಡ್

    ಯೋಜನೆಯ ಮೊದಲ ಹಂತದಲ್ಲಿ 200 ಹೆಚ್ಚುವರಿ ಹಾಸಿಗೆಗಳನ್ನು ಸೇರ್ಪಡೆ ಮಾಡಲಾಗುತ್ತದೆ. ನಂತರದ ಹಂತದಲ್ಲಿ ಮತ್ತಷ್ಟು 200 ಹಾಸಿಗೆಗಳನ್ನು ಸೇರಿಸುವ ಉದ್ದೇಶವಿದೆ. ಈಗಾಗಲೇ ಇರುವ ಕಟ್ಟಡದಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವುದರ ಜೊತೆಗೆ, ಹೊಸ ಉಪಕರಣಗಳು ಹಾಗೂ ಮೂಲಸೌಕರ್ಯಗಳನ್ನು ಒದಗಿಸಿ ಹೆಚ್ಚುವರಿ ಹಾಸಿಗೆಗಳನ್ನು ಕಾರ್ಯಗತಗೊಳಿಸುವ ಯೋಜನೆ ರೂಪಿಸಲಾಗಿದೆ.

    50 ICU ಬೆಡ್‌ಗಳು ಸೇರಿದಂತೆ 195 ಸಿಬ್ಬಂದಿ

    ಇದು ಕೇವಲ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ಯೋಜನೆಯಲ್ಲ. ಇತ್ತೀಚಿನ ಮಾಹಿತಿಯ ಪ್ರಕಾರ, ಮೊದಲ ಹಂತದ ವಿಸ್ತರಣೆಯಲ್ಲಿ 50 ICU ಬೆಡ್‌ಗಳು ಸೇರಿದಂತೆ ವಿವಿಧ ವಿಭಾಗಗಳಿಗೆ ಹೆಚ್ಚುವರಿ ಹಾಸಿಗೆಗಳ ವ್ಯವಸ್ಥೆ ಮಾಡಲಾಗುತ್ತದೆ. ಇದರ ಜೊತೆಗೆ 195 ಹೊಸ ಸಿಬ್ಬಂದಿಯನ್ನು ಒದಗಿಸುವ ಪ್ರಸ್ತಾವನೆಗೂ ಅನುಮೋದನೆ ದೊರೆತಿದೆ. ಇದರಲ್ಲಿ ವೈದ್ಯಕೀಯ, ನರ್ಸಿಂಗ್ ಮತ್ತು ಪೂರಕ ಸಿಬ್ಬಂದಿ ಸೇರಿದ್ದಾರೆ.

    Also Read  ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ -  ಎಸ್ಮ ಕಾಯ್ದೆ ಜಾರಿಗೆ

    905ರಿಂದ 1,500 ಬೆಡ್ ಸಾಮರ್ಥ್ಯಕ್ಕೆ

    ವೆನ್ಲಾಕ್ ಆಸ್ಪತ್ರೆಯ ಪ್ರಸ್ತುತ sanctioned capacity 905 ಹಾಸಿಗೆಗಳು. ಆದರೆ ಆಸ್ಪತ್ರೆಯಲ್ಲಿ ಈಗಾಗಲೇ 1,088 ಹಾಸಿಗೆಗಳು ಕಾರ್ಯನಿರ್ವಹಿಸುತ್ತಿವೆ .ಹಂತ ಹಂತವಾಗಿ ವಿಸ್ತರಣೆ ಪೂರ್ಣಗೊಂಡ ಬಳಿಕ ಆಸ್ಪತ್ರೆಯ sanctioned capacity ಅನ್ನು 1,500 ಹಾಸಿಗೆಗಳಿಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ.

    ICU, ತುರ್ತು ಚಿಕಿತ್ಸೆಗೂ ಹೆಚ್ಚಿನ ಸೌಲಭ್ಯ

    ಮೊದಲ ಹಂತದಲ್ಲಿ 200 ಹಾಸಿಗೆಗಳ ವ್ಯವಸ್ಥೆಯಲ್ಲಿ 50 ICU, 30 ventilated beds, 20 step-down beds, 10 emergency beds ಮತ್ತು 140 general beds ಒಳಗೊಂಡಿದೆ. ಇದರಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಹಾಗೂ ತುರ್ತು ಚಿಕಿತ್ಸೆಗೆ ಬರುವವರಿಗೆ ಹೆಚ್ಚುವರಿ ಸಾಮರ್ಥ್ಯ ಸಿಗಲಿದೆ.

    ಹಲವು ಜಿಲ್ಲೆಗಳ ರೋಗಿಗಳಿಗೆ ಪ್ರಮುಖ ಆಸರೆ

    ವೆನ್ಲಾಕ್ ಆಸ್ಪತ್ರೆ ದಕ್ಷಿಣ ಕನ್ನಡ ಮಾತ್ರವಲ್ಲದೆ ಸುತ್ತಮುತ್ತಲಿನ ಹಲವು ಜಿಲ್ಲೆಗಳ ರೋಗಿಗಳಿಗೆ ಪ್ರಮುಖ ಸರ್ಕಾರಿ ಚಿಕಿತ್ಸಾ ಕೇಂದ್ರವಾಗಿದೆ. ವಿಶೇಷ ಚಿಕಿತ್ಸೆಗಾಗಿ ದೂರದ ಪ್ರದೇಶಗಳಿಂದಲೂ ರೋಗಿಗಳು ಇಲ್ಲಿಗೆ ಆಗಮಿಸುತ್ತಾರೆ. ಹೀಗಾಗಿ ಹಾಸಿಗೆಗಳು, ICU, ಸಿಬ್ಬಂದಿ ಮತ್ತು ವೈದ್ಯಕೀಯ ಉಪಕರಣಗಳ ಹೆಚ್ಚಳವು ಆಸ್ಪತ್ರೆಯ ಮೇಲಿನ ಒತ್ತಡವನ್ನು ನಿರ್ವಹಿಸುವಲ್ಲಿ ಪ್ರಮುಖ ಪಾತ್ರ ವಹಿಸಬಹುದು.

    Also Read  ಅರ್ಹ ಮತದಾರರಿಗೆ ರಿಲೀಫ್‌: ಹೆಸರು ಬಿಟ್ಟವರಿಗೆ ಮತ್ತೆ ಅವಕಾಶ!

    ಇನ್ನಷ್ಟು ವಿಶೇಷ ಚಿಕಿತ್ಸಾ ವಿಭಾಗಗಳಿಗೆ ಒತ್ತು

    ಆಸ್ಪತ್ರೆಯ ವಿಸ್ತರಣೆಯೊಂದಿಗೆ ಯೂರಾಲಜಿ, ಕಾರ್ಡಿಯಾಕ್ ಕ್ಯಾಥ್ ಲ್ಯಾಬ್, ಪೀಡಿಯಾಟ್ರಿಕ್ ಸರ್ಜರಿ, DRTB, ನ್ಯೂರೋಸರ್ಜರಿ, ನ್ಯೂರಾಲಜಿ, ನೆಫ್ರಾಲಜಿ ಮತ್ತು ಸಮಗ್ರ ಕ್ಯಾನ್ಸರ್ ಚಿಕಿತ್ಸೆಯಂತಹ ವಿಶೇಷ ಸೇವೆಗಳನ್ನು ಬಲಪಡಿಸುವ ಯೋಜನೆಯೂ ಇದೆ.

    ಸೆ.18ರ ಮಂಗಳೂರು ಕ್ಯಾಬಿನೆಟ್ ಸಭೆಯ ನಿರ್ಧಾರದ ಮುಂದುವರಿದ ಹೆಜ್ಜೆ

    ಈ ವಿಸ್ತರಣೆಯ ಮೂಲ ನಿರ್ಧಾರವು ಸೆಪ್ಟೆಂಬರ್ 18ರಂದು ಮಂಗಳೂರಿನಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯ ಸಂದರ್ಭದಲ್ಲೇ ಬಂದಿತ್ತು. ಬಳಿಕ ಆರೋಗ್ಯ ಇಲಾಖೆ ಹಾಗೂ ಹಣಕಾಸು ಇಲಾಖೆಯ ಹಂತದಲ್ಲಿ ಪ್ರಸ್ತಾವನೆ ಮುಂದುವರಿದು, ಇದೀಗ ಹೆಚ್ಚುವರಿ 400 ಹಾಸಿಗೆಗಳ ಯೋಜನೆಗೆ ಅನುಮೋದನೆ ದೊರೆತಿದೆ.

    ##Mangaluru #WenlockHospital #KarnatakaHealth #Healthcare #DakshinaKannada #CoastalKarnataka #HospitalExpansion

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಾಕಿಸ್ತಾನದಲ್ಲಿ ಹಿಂದೂ ಯುವತಿಯ ಸಾಧನೆ
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ಹೈಕೋರ್ಟ್‌ನ ಅಪರೂಪದ ಆದೇಶ..ನ್ಯಾಯಾಧೀಶರಿಗೆ ಬೆದರಿಕೆ ಹಾಕಿದ ವಕೀಲನಿಗೆ ಸಿಕ್ಕ ಶಿಕ್ಷೆ ಏನ್ ಗೊತ್ತಾ…?!!!
    ಮಂಗಳೂರು ಕಾಲೇಜು ರ‍್ಯಾಗಿಂಗ್: ಬಟ್ಟೆ ಬಿಚ್ಚಿಸಿ ಬೆಲ್ಟ್ ನಿಂದ ಹಲ್ಲೆ …! 9 ವಿದ್ಯಾರ್ಥಿಗಳ ವಿರುದ್ಧ FIR….
    6 ವರ್ಷದ ಮಗಳಿಗಾಗಿ IPS ದಂಪತಿ ನಡುವೆ ಕದನ..ತಡರಾತ್ರಿ ಠಾಣೆ ಮೆಟ್ಟಿಲೇರಿದ ಪತ್ನಿ!
    ಮಗಳ ಎಡವಟ್ಟಿಗೆ ಪಿಣರಾಯಿ ಬಲಿ…..ಕೇರಳ ರಾಜಕಾರಣದಲ್ಲಿ ಹೈವೋಲ್ಟೇಜ್ ಭೂಕಂಪ
    ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಹಾಳಾದ ಹಾಲು, ಕೊಳೆತ ತರಕಾರಿ ಪತ್ತೆ!ಫುಡ್ ಸೇಫ್ಟಿ ದಾಳಿ ಅಧಿಕಾರಿಗಳೇ ಬೆಚ್ಚಿಬಿದ್ದರು….!
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು
    ‘ಕಾಮುಕರಿಗೆ ಪೊಲೀಸರ ಭಯ ಹುಟ್ಟಬೇಕು’ — ಮಹಿಳಾ ಸುರಕ್ಷತೆ ಬಗ್ಗೆ ಸುಪ್ರೀಂ ಕೋರ್ಟ್ ಕಠಿಣ ಸಂದೇಶ
    “ಅಮ್ಮ”ನ ಕಾರ್ಯಕ್ರಮದಲ್ಲಿ  ಕೇಂದ್ರ ಸಚಿವರಿಂದ ರಾಜಕೀಯ ಭಾಷಣ
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ಗೃಹಲಕ್ಷ್ಮಿಗೆ ಬ್ರೇಕ್? ₹2,000 ಹಣ ನೀರಾವರಿಗೆ ಬಳಸಿ ಎಂದ ಕಾಂಗ್ರೆಸ್‌ ಎಂಎಲ್‌ಸಿ!
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    ಹೆತ್ತ ಮಗಳನ್ನೇ ಉಸಿರುಗಟ್ಟಿಸಿ ಕೊಂದ  ಪಾಪಿ ತಾಯಿ
    ಕರ್ನಾಟಕ ಬಂದ್ LIVE: ಪ್ರತಿಭಟನಾಕಾರರು ವಶಕ್ಕೆ, ರಾಜ್ಯಾದ್ಯಂತ ಬಿಗಿ ಭದ್ರತೆ; ಶಾಲೆ, ಬ್ಯಾಂಕ್, ಬಸ್ ಸೇವೆ ಎಂದಿನಂತೆ….!
    ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾ ‘ರಾಮಾಯಣ’: ಟ್ರೇಲರ್ ಬಂದ ಕ್ಷಣದಿಂದಲೇ ದೇಶವ್ಯಾಪಿ ಚರ್ಚೆ!
    ಕರ್ನಾಟಕದಲ್ಲಿ ಅತಿ ಕನಿಷ್ಠ ಮಟ್ಟಕ್ಕೆ ಕುಸಿದ ‘ಟೀನ್ ಪ್ರೆಗ್ನೆನ್ಸಿ’! 70% ಕೇಸ್‌ಗಳು ಮಾಯವಾಗಿದ್ದು ಹೇಗೆ?
    ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ
    ಜಾನ್ಸನ್ & ಜಾನ್ಸನ್‌ನಿಂದ ₹52 ಸಾವಿರ ಕೋಟಿ ಪರಿಹಾರ? ಟಾಲ್ಕಮ್ ಪೌಡರ್ ಪ್ರಕರಣಕ್ಕೆ ಐತಿಹಾಸಿಕ ಒಪ್ಪಂದದ ಪ್ರಸ್ತಾವ
    ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
    ಟೇಕಾಫ್‌ ಬಳಿಕ RAF ಯುದ್ಧವಿಮಾನ ಪತನ: ಪೈಲಟ್‌ಗಳು ಪಾರು
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ಪ್ರಶಸ್ತಿಗಾಗಿ ಹಂಬಲಿಸಿದ ಟ್ರಂಪ್‌ಗೆ ನಿರಾಸೆ; ನ್ಯಾಯಕ್ಕಾಗಿ ಹೋರಾಡಿದ ನವಿ ಪಿಳ್ಳೆಗೆ ನೊಬೆಲ್!
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-