📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ

    ಪುತ್ತೂರು: ದರ್ಬೆಯಲ್ಲಿ ಆ.21ರಂದು ನಡೆದ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮ ಅಥವಾ ಸಾರ್ವಜನಿಕ ಒತ್ತಡದ ಆಧಾರದ ಮೇಲೆ ಯಾರನ್ನೂ ಬಂಧಿಸುವುದಿಲ್ಲ. ಲಭ್ಯವಿರುವ ಸಾಕ್ಷ್ಯಾಧಾರ, ಘಟನೆಯ ಸತ್ಯಾಸತ್ಯತೆ ಹಾಗೂ ಕಾನೂನಿನ ಅಗತ್ಯತೆಗಳನ್ನು ಆಧರಿಸಿಯೇ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

    ಆ.23ರಂದು ಬೆಳಗ್ಗೆ ಪುತ್ತೂರು ನಗರ ಪೊಲೀಸ್ ಠಾಣೆಗೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದರ್ಬೆ ಗಲಾಟೆಗೆ ಸಂಬಂಧಿಸಿದ ಸಿಸಿ ಕ್ಯಾಮೆರಾ ದೃಶ್ಯಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ. ಎರಡೂ ಕಡೆಯಿಂದ ಬಂದಿರುವ ದೂರುಗಳ ಕುರಿತು ತನಿಖೆ ಮುಂದುವರಿದಿದೆ ಎಂದು ಹೇಳಿದರು.

    ಅಂಗಡಿಯಲ್ಲಿದ್ದ ಲ್ಯಾಮಿನೇಷನ್ ಯಂತ್ರದ ತಾಂತ್ರಿಕ ಸಮಸ್ಯೆಯಿಂದ ದಾಖಲೆಯೊಂದು ಹಾನಿಗೊಳಗಾದ ಹಿನ್ನೆಲೆಯಲ್ಲಿ ವಿವಾದ ಆರಂಭವಾಗಿತ್ತು. ಈ ವಿಚಾರವನ್ನು ಶಾಂತಿಯುತವಾಗಿ ಬಗೆಹರಿಸಿಕೊಳ್ಳಬಹುದಿತ್ತು ಅಥವಾ ಪೊಲೀಸ್ ಠಾಣೆ ಹಾಗೂ ಗ್ರಾಹಕ ವೇದಿಕೆಯನ್ನು ಸಂಪರ್ಕಿಸಬಹುದಿತ್ತು. ಆದರೆ ಗ್ರಾಹಕರು ಅಂಗಡಿ ಕೆಲಸಗಾರನೊಂದಿಗೆ ಆಕ್ರೋಶದಿಂದ ವರ್ತಿಸಿದ್ದಾರೆ. ಅಂಗಡಿ ಮಾಲಕಿ ಅಂಜನಾ ಪೈ ಕೂಡ ಗಲಾಟೆಯಲ್ಲಿ ಭಾಗಿಯಾಗಿದ್ದಾರೆ. ಈ ಸಂದರ್ಭದಲ್ಲಿ ಸುದರ್ಶನ್ ಪೈ ಮಧ್ಯಪ್ರವೇಶಿಸಿ ವಿಡಿಯೋ ಚಿತ್ರೀಕರಿಸಲು ಯತ್ನಿಸಿದ ವ್ಯಕ್ತಿಯ ಮೇಲೆ ಹಲ್ಲೆ ನಡೆಸಿರುವುದು ಲಭ್ಯವಿರುವ ದೃಶ್ಯಾವಳಿಗಳಿಂದ ಕಂಡುಬರುತ್ತದೆ ಎಂದು ಎಸ್ಪಿ ವಿವರಿಸಿದರು.

    Also Read  ಕೋರ್ಟ್‌ ಮೆಟ್ಟಿಲು ಹತ್ತಿ ಸುಸ್ತಾದವರಿಗೆ ಆಸರೆಯಾದ ‘ಅದಾಲತ್‌’: ಮತ್ತೆ ಒಂದಾದ ನೂರಾರು ದಂಪತಿಗಳು,₹3,000 ಕೋಟಿ ಪರಿಹಾರ,ದಾಖಲೆಯ 78.79 ಲಕ್ಷ ಕೇಸ್‌ಗಳಿಗೆ ಶಾಶ್ವತ ಮುಕ್ತಿ!

    ಸುದರ್ಶನ್ ಪೈ ಅವರನ್ನು ಪೊಲೀಸರು ವಶಕ್ಕೆ ಪಡೆದ ಬಳಿಕವೂ ಕೆಲವರು ಅತಿರೇಕದಿಂದ ವರ್ತಿಸಿರುವುದು ಕಂಡುಬಂದಿದೆ. ಅವರ ಪೈಕಿ ನೌಶಾದ್ ಎಂಬಾತ ಪೊಲೀಸ್ ವಾಹನದೊಳಗೆ ಇಣುಕಿ ಕೃತ್ಯವೆಸಗಿರುವುದು ವಿಡಿಯೋದಲ್ಲಿ ದಾಖಲಾಗಿದೆ. ವಾಹನದಲ್ಲಿದ್ದ ಸುದರ್ಶನ್ ಪೈ ಅವರ ತಂದೆ ಸೇರಿದಂತೆ ಇತರ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿ ಘಟನೆಯ ಸ್ಪಷ್ಟ ಚಿತ್ರಣ ಪಡೆಯಲಾಗುವುದು. ಅದರ ಆಧಾರದ ಮೇಲೆಯೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

    ಹಳೆಯ ಪ್ರಕರಣಗಳ ಬಗ್ಗೆಯೂ ಮಾಹಿತಿ

    ಘಟನೆಯಲ್ಲಿ ಭಾಗಿಯಾಗಿರುವ ಕೆಲವರ ಹಿನ್ನೆಲೆಯ ಬಗ್ಗೆಯೂ ಎಸ್ಪಿ ಮಾಹಿತಿ ನೀಡಿದರು. ಸುದರ್ಶನ್ ಪೈ ವಿರುದ್ಧ ಕೊಲೆ ಯತ್ನ ಹಾಗೂ ಡ್ರಗ್ಸ್ ದಂಧೆಗೆ ಸಂಬಂಧಿಸಿದ ಹಳೆಯ ಪ್ರಕರಣಗಳಿವೆ. ನೌಶಾದ್ ಮತ್ತು ಸದಾಶಿವ ಪೈ ವಿರುದ್ಧ ರಸ್ತೆ ಜಗಳದಲ್ಲಿ ಹಲ್ಲೆ ನಡೆಸಿದ ಪ್ರಕರಣಗಳಿವೆ. ಗಲಾಟೆ ವೇಳೆ ಅಂಗಡಿ ಮುಂದೆ ಸೇರಿದ್ದ ಇತರ ಇಬ್ಬರ ವಿರುದ್ಧವೂ ತಲಾ ಒಂದು ಹಳೆಯ ಪ್ರಕರಣವಿದೆ ಎಂದು ತಿಳಿಸಿದರು.

    Also Read  ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…

    ನೌಶಾದ್, ನಿಯಾಜ್, ಅಂಜನಾ ಪೈ, ಸದಾಶಿವ ಪೈ ಸೇರಿದಂತೆ ಹಲವರ ಬಂಧನಕ್ಕೆ ಒತ್ತಾಯ ಕೇಳಿಬರುತ್ತಿರುವ ಕುರಿತು ಪ್ರತಿಕ್ರಿಯಿಸಿದ ಎಸ್ಪಿ, “ಯಾರೇ ಅಪರಾಧ ಎಸಗಿರುವುದು ಕಂಡುಬಂದರೂ ಧರ್ಮ, ಸಮುದಾಯವನ್ನು ಲೆಕ್ಕಿಸದೆ ಕಾನೂನು ಕ್ರಮ ಕೈಗೊಳ್ಳಲಾಗುವುದು. ಆದರೆ ಸಾರ್ವಜನಿಕ ಅಥವಾ ಕೋಮು ಒತ್ತಡಕ್ಕೆ ಮಣಿದು ಯಾರನ್ನೂ ಬಂಧಿಸಲು ಸಾಧ್ಯವಿಲ್ಲ. ಬಂಧನವು ಸಾಕ್ಷ್ಯಾಧಾರ ಮತ್ತು ಕಾನೂನಿನ ಅಗತ್ಯತೆಗಳನ್ನು ಆಧರಿಸಿರುತ್ತದೆ” ಎಂದು ಸ್ಪಷ್ಟಪಡಿಸಿದರು.

    ಘಟನೆಗೆ ಕೋಮು ಬಣ್ಣ ನೀಡಿ ಸಮುದಾಯಗಳ ನಡುವೆ ದ್ವೇಷ ಸೃಷ್ಟಿಸಲು ಕೆಲವರು ಯತ್ನಿಸುತ್ತಿದ್ದಾರೆ. ಸಾರ್ವಜನಿಕರು ವದಂತಿಗಳಿಗೆ ಕಿವಿಗೊಡದೆ ಶಾಂತಿ ಕಾಪಾಡಬೇಕು. ಬಂದ್‌ಗೆ ಕರೆ ನೀಡಿದರೆ ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

    ತನಿಖೆಯ ಬಗ್ಗೆ ಯಾರಿಗಾದರೂ ಸಂದೇಹವಿದ್ದರೆ, ಸತ್ಯಾಂಶ ಹಾಗೂ ಸಾಕ್ಷ್ಯಾಧಾರಗಳೊಂದಿಗೆ ಪೊಲೀಸರನ್ನು ಸಂಪರ್ಕಿಸಿ ಚರ್ಚಿಸಬಹುದು. ಕಾನೂನು ಎಲ್ಲರಿಗೂ ಸಮಾನವಾಗಿದ್ದು, ಸಾಕ್ಷ್ಯಾಧಾರದ ಆಧಾರದಲ್ಲೇ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್ಪಿ ಅರುಣ್ ಕೆ. ಪುನರುಚ್ಚರಿಸಿದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಮತದಾರರೇ…ಕರ್ನಾಟಕ SIR ನಲ್ಲಿ 47 ಲಕ್ಷ ಹೆಸರುಗಳು ಡಿಲೀಟ್…..‌! 2002ರ ಪಟ್ಟಿ ವಿವರ ಇಲ್ಲದಿದ್ದರೆ ನೋಟಿಸ್? ಮುಂದೆ ಏನು ಮಾಡಬೇಕು?
    ಏರ್ ಇಂಡಿಯಾ ವಿಮಾನ ಸೇವೆ ಸ್ಥಗಿತ…40,000ಕ್ಕೂ ಹೆಚ್ಚು ಟೆಲ್ ಅವೀವ್‌ ಭಾರತೀಯರ ಪ್ರಯಾಣ ಅತಂತ್ರ…!
    ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ
    ಉಡುಪಿಯಲ್ಲಿ  ಹರಿಕಥಾ ಕಾರ್ಯಕ್ರಮದಲ್ಲಿ ಶ್ರೀ ಜಗದ್ಗುರು ಶಂಕರಾಚಾರ್ಯರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ- ಯುಟಿಕ್ಷಮೆ ಯಾಚನೆ
    ಬೇಜವಾಬ್ದಾರಿ ಸ್ಟೇಟ್ಮೆಂಟ್ ಪಾಸ್ ಮಾಡಿದ ಕೇಂದ್ರ ಸಚಿವ- ಜೋಶಿ
    “ಅಮ್ಮಾ… ಉಸಿರಾಡಲು ಆಗ್ತಿಲ್ಲ!” — 2 ಗಂಟೆಯ ಕೊನೆಯ ಕರೆ ಬಳಿಕ 4:30ಕ್ಕೆ ಶವ… ನಿಮಿಷಾಳಿಗೆ ಏನಾಯ್ತು?
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    “ಜೆನ್‌ ಜಿಯ ಧ್ವನಿ ದೇಶದ್ರೋಹವಲ್ಲ” – ಶಿಕ್ಷಣ ಸುಧಾರಣೆಗೆ ಎದ್ದ ಯುವ ಆಕ್ರೋಶಕ್ಕೆ RSS ಮೋಹನ್ ಭಾಗವತ್ ಬೆಂಬಲ…..
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    108 ವರ್ಷಗಳ ಇತಿಹಾಸದಲ್ಲಿ ಪಾಟ್ನಾವಿಶ್ವವಿದ್ಯಾಲಯದಲ್ಲಿ ಹೊಸ ಅಧ್ಯಾಯ- ಮಹಿಳೆಯರ ಐತಿಹಾಸಿಕ ಹೆಜ್ಜೆ!
    RSS ಕಾರ್ಯಕ್ರಮಕ್ಕೆ ಹೋದದ್ದಕ್ಕೆ ಅಮಾನತು: ಸರ್ಕಾರಿ ನೌಕರನ ಪರ ನಿಂತ KAT
    ಐಸಿಸ್ ನೆರವು ಜಾಲದ ಮೇಲೆ ಇ.ಡಿ ಸರ್ಜಿಕಲ್ ಸ್ಟ್ರೈಕ್..! ಬೆಂಗಳೂರಿನ 8 ಕಡೆ ಏಕಕಾಲಕ್ಕೆ ದಾಳಿ
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    “ಹಿಜಾಬ್ ಆದೇಶಕ್ಕೆ ಕರಾವಳಿಯಲ್ಲಿ ಬಿಜೆಪಿ ಸಿಡಿದೆದ್ದಿದೆ!ಓಲೈಕೆಗಾಗಿ ಶಿಕ್ಷಣವನ್ನೇ ಬಲಿ ಕೊಟ್ಟ ಕಾಂಗ್ರೆಸ್” – ಬಿಜೆಪಿ ವಾಗ್ದಾಳಿ.
    717 ಮದ್ಯದಂಗಡಿಗಳಿಗೆ ವಿಜಯ್ ಬ್ರೇಕ್‌! ತಮಿಳುನಾಡು ಖಜಾನೆಗೆ ಸಾವಿರಾರು ಕೋಟಿ ಶಾಕ್!
    ಕರ್ನಾಟಕದಲ್ಲೇ ಮೊದಲು-ಕಿಚ್ಚ ಸುದೀಪ್ ಕೈಯಿಂದ ಗ್ರಾಂಡ್ ಓಪನಿಂಗ್!₹130 ಕೋಟಿ ವೆಚ್ಚದ ವಿಶ್ವದರ್ಜೆಯ ‘MR-Linac’ ತಂತ್ರಜ್ಞಾನ ಹೈಟೆಕ್ ಕ್ಯಾನ್ಸರ್ ಆಸ್ಪತ್ರೆ!
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    “ಶಾಲಾ ಬಸ್‌ನಲ್ಲಿ ಪ್ರಯಾಣಿಸುವ ಪ್ರತಿಯೊಂದು ಮಗುವಿನ ಸುರಕ್ಷತೆಗೆ ಶಾಲೆಯೇ ಹೊಣೆ!”
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    “ಐಡಿ ಇಲ್ಲ ಅಂದ್ರೆ ಎಂಟ್ರಿಯೇ ಇಲ್ಲ! ಎಲ್ಲಿಗೆ…..!?ಯುವಕರ ಭವಿಷ್ಯಕ್ಕಾಗಿ ಖರ್ಗೆಯ ಕಠಿಣ ಎಚ್ಚರಿಕೆ.”
    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    ಬರೋಬ್ಬರಿ ₹50 ಲಕ್ಷ ಲಂಚ! ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಮೋದಿ ಸರ್ಕಾರಕ್ಕೆ ಮತ್ತೊಂದು ಶಾಕ್ …ಕೇಂದ್ರ ಸಚಿವ ಸಂಪುಟಕ್ಕೆ ರವನೀತ್ ಸಿಂಗ್ ಬಿಟ್ಟು ರಾಜೀನಾಮೆ
    ಮೀನು ಮಾರುವ ಮಹಿಳೆಯರ ಮೇಲೆ ಹಲ್ಲೆ :ಬೈಂದೂರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಗೆ ಭರ್ಜರಿ ಒದೆ
    ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ