📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಮಾಜಸೇವಕನ ಮುಖವಾಡದ ಹಿಂದೆ ಡ್ರಗ್ಸ್ ದಂಧೆ?ಅದು ಆ್ಯಂಬುಲೆನ್ಸ್ ನಲ್ಲಿ ..!ಚಾಲಕ ಜಲೀಲ್ ಬಾಬಾ ಪರಾರಿ!ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ

    ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಆ್ಯಂಬುಲೆನ್ಸ್ ಚಾಲಕ ಜಲೀಲ್ ಅಲಿಯಾಸ್ ಬಾಬಾ (42) ವಿರುದ್ಧ ಮಾದಕ ವಸ್ತು ಸಾಗಾಟ ಮತ್ತು ಪೆಡ್ಲಿಂಗ್ ಜಾಲದಲ್ಲಿ ಭಾಗಿಯಾಗಿರುವ ಆರೋಪ ಕೇಳಿಬಂದಿದೆ. ₹5.5 ಕೋಟಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡ ಪ್ರಕರಣದ ತನಿಖೆ ವೇಳೆ ಜಲೀಲ್ ಬಾಬಾ ಹೆಸರು ಪ್ರಮುಖವಾಗಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ. 

    ಜಲೀಲ್ ಬಾಬಾ ಬೆಳ್ತಂಗಡಿಯಲ್ಲಿ ಸಮಾಜಸೇವಕನಾಗಿ ಗುರುತಿಸಿಕೊಂಡಿದ್ದ….!ಈ ಹಿನ್ನೆಲೆಯಲ್ಲಿ ಈ ಪ್ರಕರಣಕ್ಕೆ ಮತ್ತಷ್ಟು ಕುತೂಹಲ ಮೂಡಿದೆ. ಸಮಾಜಸೇವೆಯ ಮುಖವಾಡದ ಹಿಂದೆ ಡ್ರಗ್ಸ್ ಜಾಲ ನಡೆಸಲಾಗುತ್ತಿತ್ತೇ? ಆ್ಯಂಬುಲೆನ್ಸ್ ಅನ್ನು ಮಾದಕ ವಸ್ತು ಸಾಗಾಟಕ್ಕೆ ಎಷ್ಟು ಕಾಲದಿಂದ ಬಳಸಲಾಗುತ್ತಿತ್ತು? ಈ ಜಾಲದಲ್ಲಿ ಇನ್ನಷ್ಟು ಮಂದಿ ಭಾಗಿಯಾಗಿದ್ದಾರೆಯೇ? ಎಂಬ ಪ್ರಶ್ನೆಗಳಿಗೆ ಸಿಸಿಬಿ ತನಿಖೆಯಿಂದ ಉತ್ತರ ಸಿಗಬೇಕಿದೆ.

    Also Read  Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ

    ಸಾಮಾನ್ಯವಾಗಿ ಕೆಲವರಲ್ಲಿ ಅನುಮಾನ ಮೂಡಿಸುವಂತದ್ದು ಎಲ್ಲಾ ಆಂಬ್ಯುಲೆನ್ಸ್ಗಳಲ್ಲೂ parient ಇರ್ತಾರಾ??? ಸೈರನ್ ಹಾಕಿದ ತಕ್ಷಣ ಯಾರು ಎಲ್ಲಿಯೂ ನಿಲ್ಲಿಸಿ ಪರೀಕ್ಷಿಸುವ ಪ್ರಮೇಯ ವಿಲ್ಲ, ಯಾಕಂದ್ರೆ ಎಮರ್ಜೆನ್ಸಿ ಅನ್ನುವ ಯೋಚನೆ ಎಲ್ಲರಲ್ಲೂ ಇರುತ್ತೆ..!

    ಇದೀಗ ಮಂಗಳೂರು ನಗರ ಸಿಸಿಬಿ ಪೊಲೀಸರು ನಡೆಸಿದ ತನಿಖೆಯಲ್ಲಿ, ಆರಂಭದಲ್ಲಿ ಮಂಗಳೂರಿನ ಕುಳಾಯಿಗುಡ್ಡೆ ವಾಟರ್ ಟ್ಯಾಂಕ್ ಸಮೀಪದ ಮನೆಯೊಂದರ ಮೇಲೆ ದಾಳಿ ನಡೆಸಿದ್ದ ಸಿಸಿಬಿ ಪೊಲೀಸರು, ಅಣ್ಣಪ್ಪ ಸ್ವಾಮಿ ಅಲಿಯಾಸ್ ಮನು ಎಂಬಾತನಿಂದ ₹1.50 ಲಕ್ಷ ಮೌಲ್ಯದ 15.17 ಗ್ರಾಂ MDMA ವಶಪಡಿಸಿಕೊಂಡಿದ್ದರು. ಆತನ ವಿಚಾರಣೆ ವೇಳೆ ದೆಹಲಿಯಿಂದ ಕರೀದಿಸಿ ಬೆಂಗಳೂರು ಮೂಲಕ ದಕ್ಷಿಣ ಕನ್ನಡ, ಉಡುಪಿ ಹಾಗೂ ಕೇರಳಕ್ಕೆ ಡ್ರಗ್ಸ್ ಪೂರೈಸುವ ಬೃಹತ್ ಜಾಲ ಬೆಳಕಿಗೆ ಬಂದಿತ್ತು.15 ರಂದು ಬಾಗಲಕೋಟೆ ಜಿಲ್ಲೆಯ ಹುನಗುಂದದ ‘ರಾಯಲ್ ಇನ್ ಲಾಡ್ಜ್’ ಮೇಲೆ ದಾಳಿ ನಡೆಸಿ, ಇಂದಬೆಟ್ಟು ಗ್ರಾಮದ ಮೊಹಮ್ಮದ್ ಅಲ್ತಾಫ್ (28), ಉಜಿರೆಯ ಮೊಹಮ್ಮದ್ ಮುಸ್ತಫಾ (28) ಹಾಗೂ ದೇವನಾರಿ ನಿವಾಸಿ ಅಲ್ಫಾಜ್ ಅವರನ್ನು ಬಂಧಿಸಿದ್ದರು. ಅವರಿಂದ ₹5.5 ಕೋಟಿ ಮೌಲ್ಯದ 5 ಕೆಜಿ 196 ಗ್ರಾಂ MDMA, ಕಾರು ಹಾಗೂ ಮೊಬೈಲ್ ಫೋನ್‌ಗಳನ್ನು ಜಪ್ತಿ ಮಾಡಲಾಗಿತ್ತು.

    Also Read  ಆನ್ ಲೈನ್ ವಂಚನೆ ಶಿರ್ವದ ಯುವತಿಗೆ ಲಕ್ಷ ಲಕ್ಷ ಉಂಡೆನಾಮ... ಬ್ಯಾಂಕ್ ನಿಯಮ ವಂಚಕರಿಗೆ  ಸಹಕಾರಿ?

    ಆರೋಪಿಗಳ ಜಾಲದಿಂದ ಮಾದಕ ವಸ್ತು ಪಡೆದು ಆ್ಯಂಬುಲೆನ್ಸ್ ಮೂಲಕ ಜಿಲ್ಲೆಯ ಯುವಕರು, ವಿದ್ಯಾರ್ಥಿಗಳು ಹಾಗೂ ಇತರರಿಗೆ ಪೂರೈಕೆ ಮಾಡುತ್ತಿದ್ದ ಆರೋಪ ಜಲೀಲ್ ಬಾಬಾ ವಿರುದ್ಧ ಕೇಳಿಬಂದಿದೆ.

    ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ಸಮೀಪದ ಲಾಡ್ಜ್ ಮೇಲೆ ದಾಳಿ ನಡೆಸಿದ ವೇಳೆ ಭಾರೀ ಪ್ರಮಾಣದ ಎಂಡಿಎಂಎ ಪತ್ತೆಯಾಗಿತ್ತು. ಈ ದಾಳಿಯ ಬಳಿಕ ತನಿಖೆ ಮತ್ತಷ್ಟು ವಿಸ್ತರಿಸಿದಾಗ ಬೆಳ್ತಂಗಡಿಯ ಜಲೀಲ್ ಬಾಬಾ ಹೆಸರು ನಾಲ್ಕನೇ ಆರೋಪಿಯಾಗಿ ದಾಖಲಾಗಿದೆ ಎಂದು ವರದಿಯಾಗಿದೆ. 

    ಆದರೆ ಬಂಧನದ ಭೀತಿ ಎದುರಾಗುತ್ತಿದ್ದಂತೆ ಜಲೀಲ್ ಬಾಬಾ ತನ್ನ ಮೊಬೈಲ್ ಫೋನ್‌ಗಳನ್ನು ಸ್ವಿಚ್ ಆಫ್ ಮಾಡಿಕೊಂಡು ಕಳೆದ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಪತ್ತೆಗಾಗಿ ಮಂಗಳೂರು ಸಿಸಿಬಿ ಪೊಲೀಸರು ಬಲೆ ಬೀಸಿದ್ದು, ಆತನಿಗೆ ಆಶ್ರಯ ಅಥವಾ ಪರಾರಿಯಾಗಲು ಸಹಾಯ ಮಾಡಿದವರ ಮೇಲೂ ಕಾನೂನು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

    Also Read  ಬೆಂಗಳೂರು ಟು ಮುಂಬೈ  ಐದೇ ಘಂಟೆ ಪ್ರಯಾಣ- ಎಕ್ಸ್ಪ್ರೆಸ್ ಹೈವೇಗೆ ಅಸ್ತು

    ##Belthangady #JaleelBaba #AmbulanceDrugRacket #MDMA #DrugRacket #CCBPolice #DakshinaKannada

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಗೋವಾದಲ್ಲಿ ಪ್ರವಾಸಿಗರ ಬೋಟ್ ಮುಳುಗಡೆ?!!??ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಗೋವಾ ಪೊಲೀಸರು!
    ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ತಲೆದಂಡ? ರಾಜೀನಾಮೆ ಚರ್ಚೆ ನಡುವೆ ಕಾಂಗ್ರೆಸ್‌ಗೆ ಹೊಸ ಸಂಕಷ್ಟ!
    ಡೇಟಾ ಬೇಡವೇ? ಕರೆ-SMS ಬಳಕೆದಾರರಿಗೆ ಟ್ರಾಯ್‌ನಿಂದ ಹೊಸ ಆಯ್ಕೆ
    2027ರಿಂದ YouTube ಹೊಸ ರೂಲ್ಸ್..ಕ್ರಿಯೇಟರ್‌ಗಳಿಗೆ ಶಾಕ್!YouTube Monetization ಕಠಿಣ!
    ಮಂಗಳೂರು ಏರ್‌ಪೋರ್ಟ್‌ನಲ್ಲಿ ಉಬರ್ …
    30 ದಿನ, 13 ನಗರಗಳು, ₹10 ಲಕ್ಷ ಖರ್ಚು! ಅಮೆರಿಕದ ದಂಪತಿಯ ಭಾರತ ಯಾತ್ರೆ ವೈರಲ್….ವೈರಲ್ ವಿಡಿಯೋದಲ್ಲಿ ಹೊರಬಿದ್ದ ಅಚ್ಚರಿಯ ಲೆಕ್ಕ!
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”
    ಸಚಿವ ಜಮೀರ್ ಅಹಮದ್ ಹಚ್ಚಿದ ಪಟಾಕಿಗೆ ಕಾಂಗ್ರೆಸ್ ಕೋಟೆಯಲ್ಲಿ ಬಿರುಕು..!?
    ಜಾರಕಿಹೊಳಿ ಮನೆಗೆ ED ದಾಳಿ; ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಕಾವು!
    ಭಾರತ ಮುಸ್ಲಿಂ ದೇಶವಾಗುವುದೇ?- ನಾಳೆ ಪುಸ್ತಕ ಬಿಡುಗಡೆಯ ಕಾರ್ಯಕ್ರಮ
    ಕಾಂಚನಾ ಟೆಕ್ಸ್‌ಟೈಲ್ಸ್ ಮ್ಯಾನೇಜರ್ ದಿನೇಶ್ ರಾಜ್ ಕೊಲೆ ಆರೋಪಿ 11 ವರ್ಷ ಬಳಿಕ ಅರೆಸ್ಟ್..!
    ಉಪಚುನಾವಣೆ ಮುಗಿಯುತಿದ್ದಂತೆಯೇ, ವಿದ್ಯುತ್ ದರ ಏರಿಸುತ್ತಿರುವ ರಾಜ್ಯ ಸರ್ಕಾರ
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    💊 ಜೀವರಕ್ಷಕ ಕ್ಯಾನ್ಸರ್ ಔಷಧಗಳು ದುಬಾರಿ: ಏಕೆ ಬೆಲೆ ಹೆಚ್ಚಳ ಅನಿವಾರ್ಯವಾಯಿತು?ಅಸಲಿ ಕಾರಣ ಗೊತ್ತೇ?
    UPಯಲ್ಲಿ ಮಳೆಯ ರುದ್ರಾವತಾರ: 81 ಸಾವು, 2,254 ಮನೆಗಳು ಜಲಾವೃತ!
    ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
    ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
    ರಾಜ್ಯವ್ಯಾಪಿ ಖೋಟಾ ನೋಟು ಜಾಲ ಭೇದಿಸಿದ ಖಾಕಿಯ ಚಾಣಾಕ್ಷ ಕಾರ್ಯಾಚರಣೆ..!
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    ಫೇಸ್‌ಬುಕ್ ಜಾಹೀರಾತು ನಂಬಿ ₹32.68 ಲಕ್ಷ ಕಳೆದುಕೊಂಡ ಕಾರ್ಕಳದ ವ್ಯಕ್ತಿ!
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ದ.ಕ ಜಿಲ್ಲಾಡಳಿತದ ಆದೇಶ “ಮಳೆ ರಜೆ “ಉಲ್ಲಂಘಿಸಿ ರಜೆ ಕೊಟ್ಟರೂ class ನಡೆಸಿದ ಹತ್ತಕ್ಕೂ ಹೆಚ್ಚು ಶಾಲೆ-ಕಾಲೇಜುಗಳು ! ಇದೀಗ ನೋಟಿಸ್ ಶಾಕ್..!
    ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
    ರಾಷ್ಟ್ರಪತಿ ಮುರ್ಮು ಅವರ ADC…ನ್ಯಾಷನಲ್ ಕ್ರಶ್ ಆಗಿದ್ದ ಮೇಜರ್ ರಿಷಭ್ ಸಂಬ್ಯಾಲ್ ಸೇನೆಗೆ ಗುಡ್‌ಬೈ!
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!