📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸರ್ಕಾರಕ್ಕೆ CJP ಸವಾಲು…ದೆಹಲಿ ಪ್ರತಿಭಟನೆಗೆ ಹಿಂಸಾತ್ಮಕ ತಿರುವು..ಲಾಠಿಚಾರ್ಜ್, ಅಶ್ರುವಾಯು, ಇಂಟರ್ನೆಟ್ ಶಟ್‌ಡೌನ್..

    .ನಿನ್ನೆ ದೆಹಲಿಯಲ್ಲಿ ನಡೆದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿರುವ ದೃಶ್ಯಗಳಲ್ಲಿ ಪೊಲೀಸರ ಲಾಠಿಚಾರ್ಜ್, ಅಶ್ರುವಾಯು ದಾಳಿ, ಪ್ರತಿಭಟನಾಕಾರರನ್ನು ಚದುರಿಸುವ ಪ್ರಯತ್ನ ಹಾಗೂ ಗಾಯಗೊಂಡ ವಿದ್ಯಾರ್ಥಿಗಳ ದೃಶ್ಯಗಳು ವ್ಯಾಪಕವಾಗಿ ಹರಿದಾಡುತ್ತಿವೆ. ಅನೇಕರು ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಲಾಟಿಚಾರ್ಜ್ ನಡೆಯನ್ನ ಆಕ್ರೋಶದಿಂದಖಂಡಿಸಿದ್ದಾರೆ.ಪ್ರತಿಭಟನಾಕಾರರ ಪ್ರಕಾರ, ಹಲವರು ಗಾಯಗೊಂಡಿದ್ದು, ಕೆಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕನಿಷ್ಠ 38 ಮಂದಿ ಲೇಡಿ ಹಾರ್ಡಿಂಜ್ ಆಸ್ಪತ್ರೆಗೂ, ಸುಮಾರು 65 ಮಂದಿ RML ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ಗಾಯಗಳಲ್ಲಿ ತಲೆಗಾಯ, ಫ್ರ್ಯಾಕ್ಚರ್, ಕಣ್ಣಿನ ಸಮಸ್ಯೆ ಮತ್ತು ಅಶ್ರುವಾಯುವಿನಿಂದ ಉಂಟಾದ ತೊಂದರೆಗಳು ಸೇರಿವೆ ಎಂದು ವರದಿಯಾಗಿದೆ.

    “ಬ್ರೂಟಲ್ ಲಾಠಿಚಾರ್ಜ್‌ನಲ್ಲಿ ಗಾಯಗೊಂಡ ಯುವತಿ RML ಆಸ್ಪತ್ರೆಯಲ್ಲಿ ಗಂಭೀರ ಸ್ಥಿತಿಯಲ್ಲಿದ್ದಾಳೆ” ಎಂದು CJP ನಾಯಕ ಅಭಿಜೀತ್ ದಿಪ್ಕೆ ಹೇಳಿದ್ದಾರೆ. ಪ್ರತಿಭಟನಾಕಾರರಿಗೆ ವೈದ್ಯಕೀಯ ಮತ್ತು ಕಾನೂನು ನೆರವು ನೀಡುವುದಾಗಿ CJP ಘೋಷಿಸಿದೆ.

    ಈ ನಡುವೆ, ಪ್ರತಿಭಟನೆಯ ಪ್ರಮುಖ ಬೇಡಿಕೆಗಳನ್ನು ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರೊಂದಿಗೆ CJP ಪ್ರತಿನಿಧಿಗಳು ಚರ್ಚಿಸಿದ್ದಾರೆ. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ತಕ್ಷಣದ ರಾಜೀನಾಮೆ ಅಥವಾ ವಜಾ, ಸೋನಂ ವಾಂಗ್‌ಚುಕ್ ಅವರನ್ನು ಬಿಡುಗಡೆ ಮಾಡುವುದು ಹಾಗೂ NEET-UG ಪೇಪರ್ ಲೀಕ್‌ನಿಂದ ಮೃತಪಟ್ಟ ಅಭ್ಯರ್ಥಿಗಳ ಕುಟುಂಬಗಳಿಗೆ ₹1 ಕೋಟಿ ಪರಿಹಾರ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.

    Also Read  🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ

    CJP ವಕ್ತಾರ ಸೌರವ್ ದಾಸ್ ಪ್ರಕಾರ, ಜೆ.ಪಿ. ನಡ್ಡಾ ಅವರು ಬೇಡಿಕೆಗಳನ್ನು ‘ಸೂಕ್ತ ಮಟ್ಟದಲ್ಲಿ’ ಚರ್ಚಿಸುವುದಾಗಿ ಭರವಸೆ ನೀಡಿದ್ದಾರೆ. ಆದರೆ ಯಾವುದೇ ಖಚಿತ ಭರವಸೆ ಅಥವಾ ನಿರ್ಧಾರ ಇನ್ನೂ ಬಂದಿಲ್ಲ. ಹೀಗಾಗಿ ಬೇಡಿಕೆ ಈಡೇರುವವರೆಗೂ ಪ್ರತಿಭಟನೆ ಮುಂದುವರಿಸುವುದಾಗಿ CJP ಸ್ಪಷ್ಟಪಡಿಸಿದೆ.

    ಮತ್ತೊಂದೆಡೆ, ದೆಹಲಿ ಪೊಲೀಸರು ಪ್ರತಿಭಟನಾಕಾರರ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ಮತ್ತು ಇತರ ವಸ್ತುಗಳನ್ನು ಎಸೆದರು, ಬ್ಯಾರಿಕೇಡ್‌ಗಳನ್ನು ಮುರಿಯಲು ಯತ್ನಿಸಿದರು, ಪೊಲೀಸ್ ಹಾಗೂ ಸರ್ಕಾರಿ ವಾಹನಗಳಿಗೆ ಹಾನಿ ಮಾಡಿದರು ಮತ್ತು ಸಾರ್ವಜನಿಕ ಆಸ್ತಿಗೆ ನಷ್ಟ ಉಂಟುಮಾಡಿದರು ಎಂದು ಪೊಲೀಸರು ತಿಳಿಸಿದ್ದಾರೆ.

    ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಸೆಂಟ್ರಲ್ ದೆಹಲಿಯ ಹಲವು ಪ್ರದೇಶಗಳಲ್ಲಿ ಮೊಬೈಲ್ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಯಿತು. ಇದರಿಂದ ಪ್ರತಿಭಟನಾ ಸ್ಥಳದ ದೃಶ್ಯಗಳು ಮತ್ತು ಮಾಹಿತಿಯ ಹರಿವು ನಿಧಾನಗೊಂಡಿತು. ಮಾನವ ಹಕ್ಕುಗಳ ಸಂಘಟನೆಗಳು ಪೊಲೀಸರು ಸಂಯಮದಿಂದ ವರ್ತಿಸಬೇಕು ಮತ್ತು ಇಂಟರ್ನೆಟ್ ಸಂಪರ್ಕವನ್ನು ಪುನಃಸ್ಥಾಪಿಸಬೇಕು ಎಂದು ಆಗ್ರಹಿಸಿವೆ.

    Also Read  ಪಂಜಿಮೊಗರುವಿನಲ್ಲಿ ಹೆಂಡತಿಯ ಅಕ್ರಮ ಸಂಬಂಧಕ್ಕೆ, ಗಂಡ ಫಿನಿಶ್!

    ಇತ್ತ, CJP ನಾಯಕರು ಹಾಗೂ ಸರ್ಕಾರದ ನಡುವೆ ಮಾತುಕತೆ ನಡೆದರೂ, ಪ್ರತಿಭಟನಾಕಾರರು ಪ್ರಧಾನಿ ಅಥವಾ ಕೇಂದ್ರ ಸಚಿವರ ಮಟ್ಟದಲ್ಲಿ ನೇರ ಸಂವಾದಕ್ಕೆ ಒತ್ತಾಯಿಸಿದ್ದಾರೆ. ಸರ್ಕಾರ ಪ್ರತಿಭಟನೆಯನ್ನು ಅಂತ್ಯಗೊಳಿಸುವಂತೆ ಮನವಿ ಮಾಡಿದೆ. ಆದರೆ CJP ನಾಯಕರು ಬೇಡಿಕೆ ಈಡೇರುವವರೆಗೆ ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.

    ಪ್ರತಿಭಟನಾ ಸ್ಥಳದಲ್ಲಿದ್ದ ಸೋನಂ ವಾಂಗ್‌ಚುಕ್ ಅವರ ಪತ್ನಿ ಗೀತಾಂಜಲಿ ಅಂಗ್ಮೋ ಅವರ ಮೇಲೂ ಪೊಲೀಸರು ದೌರ್ಜನ್ಯ ನಡೆಸಿದ್ದಾರೆ ಎಂದು CJP ಆರೋಪಿಸಿದೆ. ಆದರೆ ದೆಹಲಿ ಪೊಲೀಸರು ಈ ಆರೋಪವನ್ನು ಸಂಪೂರ್ಣ ಸುಳ್ಳು ಮತ್ತು ದಾರಿ ತಪ್ಪಿಸುವಂತದ್ದು ಎಂದು ತಳ್ಳಿಹಾಕಿದ್ದಾರೆ.

    ರಾಜಕೀಯ ವಲಯದಲ್ಲೂ ಪ್ರತಿಭಟನೆಗೆ ಬೆಂಬಲ ಮತ್ತು ವಿರೋಧದ ಧ್ವನಿಗಳು ಕೇಳಿಬಂದಿವೆ. ರಾಹುಲ್ ಗಾಂಧಿ ಪೊಲೀಸರ ಲಾಠಿಚಾರ್ಜ್‌ನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಅವರನ್ನು “ದೇಶದ ಇತಿಹಾಸದಲ್ಲೇ ಅತ್ಯಂತ ಯುವ ವಿರೋಧಿ ಪ್ರಧಾನಿ” ಎಂದು ಟೀಕಿಸಿದ್ದಾರೆ. ಡಿ. ರಾಜಾ, ಮಮತಾ ಬ್ಯಾನರ್ಜಿ, ಉದಯನಿಧಿ ಸ್ಟಾಲಿನ್ ಸೇರಿದಂತೆ ಹಲವು ವಿರೋಧ ಪಕ್ಷದ ನಾಯಕರು ಪೊಲೀಸ್ ಕ್ರಮವನ್ನು ಖಂಡಿಸಿದ್ದಾರೆ.

    Also Read  ₹168 ಕೋಟಿ ಆದಾಯದೊಂದಿಗೆ ಕುಕ್ಕೆ ಸುಬ್ರಹ್ಮಣ್ಯ 15ನೇ ವರ್ಷವೂ ಅಗ್ರಸ್ಥಾನದಲ್ಲಿ… ಕೋಟಿ ಕೋಟಿ ಕಾಣಿಕೆ - ಭಕ್ತಿಯ ಮಹಾಪ್ರವಾಹ ಕುಕ್ಕೆ ದೇವಾಲಯ…

    ಆದರೆ ದೆಹಲಿ ಪೊಲೀಸರ ವಾದವೇ ಬೇರೆ. “ಪ್ರತಿಭಟನಾಕಾರರೇ ಹಿಂಸಾತ್ಮಕವಾಗಿ ವರ್ತಿಸಿ ಕಾನೂನು ಸುವ್ಯವಸ್ಥೆಗೆ ಧಕ್ಕೆ ತಂದರು”ಎಂದು ಪೊಲೀಸರು ಹೇಳುತ್ತಿದ್ದಾರೆ. ಹೀಗಾಗಿ, ಒಂದು ಕಡೆ ವಿದ್ಯಾರ್ಥಿಗಳ ಗಾಯಗಳ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ಹುಟ್ಟಿಸುತ್ತಿದ್ದರೆ, ಮತ್ತೊಂದೆಡೆ ಪ್ರತಿಭಟನಾಕಾರರಿಂದಲೇ ಹಿಂಸೆ ನಡೆದಿದೆ ಎಂಬ ಪೊಲೀಸ್ ಹೇಳಿಕೆ ಹೊಸ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

    ಸದ್ಯ ದೆಹಲಿಯಲ್ಲಿ ಪ್ರತಿಭಟನೆ, ಪೊಲೀಸ್ ಕ್ರಮ ಮತ್ತು ಸರ್ಕಾರದ ಪ್ರತಿಕ್ರಿಯೆ—ಮೂರೂ ಮುಖಾಮುಖಿಯಾಗಿವೆ. ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಯಾವ ನಿರ್ಧಾರ ಕೈಗೊಳ್ಳಲಿದೆ? ಪ್ರತಿಭಟನೆ ಶಾಂತವಾಗುತ್ತದೆಯೇ ಅಥವಾ ಇನ್ನಷ್ಟು ತೀವ್ರಗೊಳ್ಳುತ್ತದೆಯೇ ಎಂಬುದು ಈಗ ದೇಶದ ಗಮನ ಸೆಳೆದಿದೆ.

    ##DelhiProtest #CJPProtest #NEETPaperLeak #DharmendraPradhan #SonamWangchuk #StudentProtest #DelhiPolice

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ವಂಚಕನ ಬೆನ್ನಿಗೆ ನಿಂತರೆ, ಕೊರಳಿಗೆ ಉರುಳಾದೀತು!
    60 ಕೋಟಿ ರೂ. ಸರ್ಕಾರಿ ಹಣ ಗುಳುಂ: ಸಿಬಿಐ ಬಲೆಯಲ್ಲಿ ಹಿರಿಯ ಐಎಎಸ್ ಅಧಿಕಾರಿ!
    30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ತಡರಾತ್ರಿ ಭಟ್ಕಳದಲ್ಲಿ ವಿಚ್ಛಿದ್ರಕಾರಿ ಕೋಮುವಾದಿಗಳಿಂದ ದಾಂದಲೆ
    ಬ್ಯಾಂಕ್ ಸಾಲವಿದ್ದ ಮನೆ ಮಾರಾಟ ಮಾರಿ ವಂಚನೆ
    ಕೇರಳ ಹೈಕೋರ್ಟ್ ಬಿಗ್ ರೂಲಿಂಗ್: ಅಧಿಕೃತ ಪ್ರಮಾಣವಚನದಲ್ಲಿ ‘ದೇವತೆಗಳು’, ‘ಹುತಾತ್ಮರ’ ಹೆಸರು ಹೇಳುವಾಗಿಲ್ಲ…
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ಕದನ ವಿರಾಮ ಹೇಳಿಕೆ ಮಾತ್ರ…“Middle East ಮತ್ತೆ ಸ್ಫೋಟಕ
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ
    ಪಹಲ್ಗಾಮ್ ದಾಳಿಗೆ ವರ್ಷ : ಮೋದಿ ಶ್ರದ್ಧಾಂಜಲಿ, ಉಗ್ರರಿಗೆ ಎಚ್ಚರಿಕೆ
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
    ಮಂಗಳೂರು ಇನ್ಸ್ಟಾಮಾರ್ಟ ಕುಂಟಿಕಾನದಲ್ಲಿ ಲಿಫ್ಟ್ ದುರಂತ: ಡೆಲಿವರಿ ಸಿಬ್ಬಂದಿ ದುರ್ಮರಣ
    ಸಾಲಗಾರರಿಗೆ ಶಾಕ್ ….RBI ಬಡ್ಡಿ ಹೆಚ್ಚಳ-EMI ಮತ್ತೆ ಏರಿಕೆ..!?
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್
    ಕುಮಾರಸ್ವಾಮಿ ನೆನೆದ ಗುಬ್ಬಿ ವಾಸು: ಮತ್ತೆ ಜೆಡಿಎಸ್ ಸೇರ್ಪಡೆಗೆ ಮುನ್ನುಡಿಯೇ ಈ ಹೇಳಿಕೆ?
    ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    “ಪಾಲಕ್ಕಾಡ್‌ನಲ್ಲಿ ಮೋದಿ ಚಂಡೆ ಸದ್ದು—ಕೇರಳದಲ್ಲಿ ಚುನಾವಣಾ ಕಹಳೆ!” 
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ