📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬ್ರಹ್ಮಾವರ ಕೆಂಜೂರಿನಲ್ಲಿ ಅನ್ನಭಾಗ್ಯದ ಅಕ್ಕಿ  ಅಕ್ರಮ ದಾಸ್ತಾನು- 15 ಕ್ವಿಂಟಲ್‌ಗೂ ಅಧಿಕ ಅಕ್ಕಿ ವಶ

    ಬ್ರಹ್ಮಾವರ: ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಇರಿಸಿದ್ದ ಆರೋಪದ ಮೇಲೆ ಕೆಂಜೂರು ಗ್ರಾಮದ ಶ್ರೇಯಾ ಜನರಲ್ ಸ್ಟೋರ್‌ ಮೇಲೆ ಅಧಿಕಾರಿಗಳು ದಾಳಿ ನಡೆಸಿ 15 ಕ್ವಿಂಟಲ್‌ಗೂ ಅಧಿಕ ಅಕ್ಕಿಯನ್ನು ವಶಪಡಿಸಿಕೊಂಡಿದ್ದಾರೆ.

    ಜುಲೈ 20ರಂದು ಸಾರ್ವಜನಿಕರಿಂದ ಬಂದ ದೂರಿನ ಹಿನ್ನೆಲೆಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳ ಸೂಚನೆಯಂತೆ ಆಹಾರ ನಿರೀಕ್ಷಕ ವಸಂತ ಕುಮಾರ್ ಅವರು ಕೆಂಜೂರು ಗ್ರಾಮದ ಶ್ರೇಯಾ ಜನರಲ್ ಸ್ಟೋರ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ವೇಳೆ ಅಂಗಡಿಯ ಪಕ್ಕದ ಕೋಣೆಯಲ್ಲಿ ಅಕ್ಕಿ ಚೀಲಗಳು ಪತ್ತೆಯಾಗಿದ್ದು, ಪರಿಶೀಲಿಸಿದಾಗ ಅವು ಸರ್ಕಾರ ಪಡಿತರ ಚೀಟಿದಾರರಿಗೆ ಉಚಿತವಾಗಿ ವಿತರಿಸುವ ಅಕ್ಕಿಯಾಗಿರುವುದು ಬೆಳಕಿಗೆ ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    Also Read  ಬಂಗಾಳ ಚುನಾವಣೆ ಫಲಿತಾಂಶವೇ ಬದಲಾಗಿತ್ತಾ?ಬಂಗಾಳ ರಾಜಕೀಯದಲ್ಲಿ ಹೊಸ ಬಾಂಬ್!ಸುಪ್ರೀಂ ಕೋರ್ಟ್ ಮುಂದೆ ಬಿಜೆಪಿ ಜಯದ ಮೇಲೆ ಟಿಎಂಸಿ ದೊಡ್ಡ ಪ್ರಶ್ನೆ!

    ಅಕ್ಕಿಯನ್ನು ವಶಕ್ಕೆ ಪಡೆದು ಅಂಗಡಿ ಮಾಲೀಕರ ಕುರಿತು ವಿಚಾರಿಸಿದಾಗ, ನಾಗರಾಜ ನಾಯ್ಕ್, ತಂದೆ ಕುಪ್ಪ ನಾಯ್ಕ್, ಕೆಂಜೂರು ಗ್ರಾಮ, ಬ್ರಹ್ಮಾವರ ತಾಲೂಕು ಎಂದು ತಿಳಿದುಬಂದಿದೆ. ಅಕ್ಕಿಯನ್ನು ಸಂಗ್ರಹಿಸಿಡಲು ಅಗತ್ಯ ದಾಖಲೆಗಳಿವೆಯೇ ಎಂದು ವಿಚಾರಿಸಿದಾಗ ಯಾವುದೇ ದಾಖಲೆಗಳು ಇಲ್ಲವೆಂದು ತಿಳಿಸಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಕ್ಕಿಯನ್ನು ಎಲ್ಲಿಂದ ತಂದಿದ್ದಾರೆ ಎಂಬುದಕ್ಕೂ ಸಮರ್ಪಕ ಉತ್ತರ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

    ಬಳಿಕ ಬ್ರಹ್ಮಾವರ ಪೊಲೀಸ್ ಠಾಣೆಯ ಎಎಸ್‌ಐ ವಿಠಲ ಎಂ. ಹಾಗೂ ಪಂಚರ ಸಮ್ಮುಖದಲ್ಲಿ ಅಕ್ಕಿ ಚೀಲಗಳನ್ನು ತೂಕ ಮಾಡಲಾಗಿದ್ದು, ಒಟ್ಟು 42 ಚೀಲಗಳಲ್ಲಿ 15 ಕ್ವಿಂಟಲ್ 20 ಕೆ.ಜಿ. 62 ಗ್ರಾಂ ಅಕ್ಕಿ ಪತ್ತೆಯಾಗಿದೆ. ವಶಪಡಿಸಿಕೊಂಡ ಅಕ್ಕಿಯ ಅಂದಾಜು ಮೌಲ್ಯ ₹51,680 ಎಂದು ತಿಳಿಸಲಾಗಿದೆ.

    Also Read  ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.

    ಈ ಸಂಬಂಧ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 130/2026ರಂತೆ ಅಗತ್ಯ ವಸ್ತುಗಳ ಕಾಯ್ದೆ-1955ರ ಕಲಂ 3 ಮತ್ತು 7 ಹಾಗೂ ಅಗತ್ಯ ವಸ್ತುಗಳ ಸಾರ್ವಜನಿಕ ವಿತರಣಾ ವ್ಯವಸ್ಥೆ  ಆದೇಶ-2016ರ ಸಂಬಂಧಿತ ಕಲಂಗಳಡಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕರ್ನಾಟಕಕ್ಕೆ ಮಳೆ ಅಲರ್ಟ್‌ | ಸೆ.24ರಂದು ಕರಾವಳಿಗೆ ರೆಡ್‌ ಅಲರ್ಟ್‌
    ಗೃಹ ಜ್ಯೋತಿ ….ಯೋಜನೆ ಪರಿಶೀಲನೆಗೆ ಜುಲೈ 31 ಅಂತಿಮ ಗಡುವಲ್ಲ; ಮೆಸ್ಕಾಂ ವ್ಯಾಪ್ತಿಯಲ್ಲೂ ಆಗಸ್ಟ್ ಅಂತ್ಯದವರೆಗೆ ಸರ್ವೇ ಮುಂದುವರಿಕೆ
    ಕಂಪನಿಗೆ ಯಶಸ್ಸು ತಂದ ಇಂಟರ್ನ್‌ ಸಂಬಳ ಜಾಸ್ತಿಕೇಳಿದ್ದಕ್ಕೆ CEO ಅಂದ್ರು “Money-minded”-ಸಿಇಒ ನಡೆಗೆ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಆಕ್ರೋಶ
    ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
    ಹೊರಗೆ ಕ್ಯಾಂಟೀನ್…ಆದ್ರೆ ಒಳಗೆ ನಡೆಯುತ್ತಿತ್ತು ಬೇರೆದ್ದೇ ಆಟ..!ಬಯಲಾಯ್ತು ಬೆಚ್ಚಿಬೀಳಿಸುವ ದಂಧೆ. 
    AIಗೆ ಒಂದು ಪ್ರಶ್ನೆ ಕೇಳಿದ್ರೆ…ಲಕ್ಷಾಂತರ ಲೀಟರ್ ನೀರು ಆವಿಯಾಗುತ್ತೆ…..!ಅದೇಗೆ.??AIಜಗತ್ತನ್ನು ಬದಲಾಯಿಸುತ್ತಿದೆ… ಆದರೆ ಶುದ್ಧ ನೀರಿನ ಜಲಮೂಲಗಳನ್ನು ಖಾಲಿ ಮಾಡುತ್ತಿದೆ.
    ಕಂಬಳಕ್ಕೆ ಘೋಷಿತ ಅನುದಾನ ಕೊಡುವಂತೆ ಸಚಿವರಿಗೆ ಶಾಸಕ ಅಶೋಕ್ ರೈ ಮನವಿ..
    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
    “ವಾಹನ ಮಾರಾಟ-RC ಬದಲಾವಣೆ  ಅಗತ್ಯ.. ಇಲ್ಲವಾದರೆ ಕಾನೂನು ಸಮಸ್ಯೆಗಳು ತಪ್ಪಿದ್ದಲ್ಲ..!” ಹೈಕೋರ್ಟ್
    “ಜೈ ಶ್ರೀರಾಮ್” ಘೋಷಣೆಯಿಂದ ನಡುಗಿದ ಢಾಕಾ! 
    ಕರಾವಳಿಯಲ್ಲಿ ಅಕ್ರಮ 109 ಹೋಂಸ್ಟೇಗಳು, 21ರೆಸಾರ್ಟ್‌ಗಳಿಗೆ ಶಾಕ್ ಲೋಕಾಯುಕ್ತ ಬೀಗ!ರೆಸಾರ್ಟ್‌ಗಳು ಬಂದ್!
    ಕ್ಲೌಡ್ ಮಾರುಕಟ್ಟೆಗೆ ಮಾರ್ಕ್ ಜುಕರ್‌ಬರ್ಗ್ ಎಂಟ್ರಿ!?ಇಡೀ ಟೆಕ್ ಪ್ರಪಂಚವೇ ಬೆಚ್ಚಿಬೀಳುವಂತಿದೆ ಜುಕರ್‌ಬರ್ಗ್ ಮುಂದಿನ ನಡೆ!
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    🛑 ನಾಗರಮಠದಲ್ಲಿ ಅವೈಜ್ಞಾನಿಕ ಮರಳುಗಾರಿಕೆ ವಿರುದ್ಧ ಗ್ರಾಮಸ್ಥರ ಆಕ್ರೋಶ
    ನಕಲಿ ಲೇಡಿ PSI ಅರೆಸ್ಟ್
    ಕಾರಿನೊಳಗೆ ಇಬ್ಬರು ಪೊಲೀಸರ ಮೃತದೇಹ ಪತ್ತೆ
    ದಲಿತ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ – ಮೂವರು ಆರೋಪಿಗಳು ಬಂಧನ
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    ಬಾಲ್ಯವಿವಾಹಕ್ಕೆ ಬ್ರೇಕ್ ಹಾಕಲು ಮಹಾರಾಷ್ಟ್ರದ ಮಾಸ್ಟರ್ ಪ್ಲಾನ್: ಇನ್ವಿಟೇಶನ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ ಕಡ್ಡಾಯ!
    ಅಂದು ಮುಖ್ಯ ಮಂತ್ರಿ, ಇಂದು ಪುಟ್ಟಪಾತ್ ವ್ಯಾಪಾರಿ!!
    14ರ ಸೊಂಟಕ್ಕೆ ಕೈ ಹಾಕಿದ ಮದರಸಾ ಮೌಲ್ವಿಗೆ 20 ವರ್ಷ ಕಠಿಣ ಶಿಕ್ಷೆ
    ಐಫೋನ್ ಅಲ್ಲ… ಕಾರು ಅಲ್ಲ… 9 ವರ್ಷ ಉಳಿಸಿ ಜಮೀನು ಖರೀದಿಸಿದ ದೀಕ್ಷಾ!
    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಆರ್‌ಸಿಬಿ ಎದುರಿಸಲು ರಾಯಲ್ಸ್ ರೆಡಿ??: ಕ್ರಿಕೆಟ್ ಜಗತ್ತಿಗೆ ಶಾಕ್ ಕೊಟ್ಟ ಬಿಹಾರದ ಬಾಲಕ-ಸಚಿನ್ ತೆಂಡೂಲ್ಕರ್ ಕೂಡ ಮೆಚ್ಚಿದ ಆ 29 ಎಸೆತಗಳ ರುದ್ರತಾಂಡವ!
    “ಬಾಂಬ್‌ಗಿಂತ ಅಪಾಯಕಾರಿ ಅಹಂಕಾರ …! ಜಗತ್ತೇ ಕಾಯುತ್ತಿದೆ… ಮುಂದೇನು?”