📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶಾಲಾ ಶಿಕ್ಷಕಿಯರ ಹೆಸರಿನಲ್ಲಿ ಡ್ರಗ್ಸ್ ಜಾಲ ..! ತನಿಖೆಯಲ್ಲಿ ಬೆಚ್ಚಿಬೀಳಿಸುವ ಕೊಂಡಿಗಳು ಇನ್‌ಸ್ಟಾಗ್ರಾಮ್‌ನಿಂದ ಗ್ರಾಹಕರ ಸೆಳೆತ, ಗಲ್ಫ್ ನಂಬರ್ ಮೂಲಕ ಬುಕ್ಕಿಂಗ್

    ಕೋಝಿಕೋಡ್: ಸಮಾಜದಲ್ಲಿ ಗೌರವದ ಸ್ಥಾನದಲ್ಲಿರುವ ಶಿಕ್ಷಕಿಯರ ಹೆಸರಿನಲ್ಲಿ ನಡೆಯುತ್ತಿದ್ದ ಎಂಡಿಎಂಎ (MDMA) ಮಾದಕ ದ್ರವ್ಯ ಜಾಲದ ತನಿಖೆಯಲ್ಲಿ ಮತ್ತೊಂದು ಸ್ಫೋಟಕ ಮಾಹಿತಿ ಹೊರಬಿದ್ದಿದೆ. ಹೊರಗಿನಿಂದ ಸಾಮಾನ್ಯ ಶಿಕ್ಷಕಿಯರ ಜೀವನದಂತೆ ಕಂಡಿದ್ದ ಈ ಪ್ರಕರಣದ ಹಿಂದೆ ಅಂತರರಾಜ್ಯ ಮತ್ತು ಅಂತರರಾಷ್ಟ್ರೀಯ ಡ್ರಗ್ಸ್ ಜಾಲದ ಕೊಂಡಿ ಇರಬಹುದೇ? ಎಂಬ ಅನುಮಾನ ಈಗ ಬಲವಾಗುತ್ತಿದೆ. ತನಿಖೆ ಮುಂದುವರಿದಂತೆ ಇನ್ನಷ್ಟು ದೊಡ್ಡ ಹೆಸರುಗಳು ಬಹಿರಂಗವಾಗುವ ಸಾಧ್ಯತೆಯಿದೆ.

    ಪೆರಂಬ್ರಾ ಬಿಆರ್‌ಸಿಯ ವಿಶೇಷ ಶಿಕ್ಷಕಿ ವಿ.ಪಿ. ನೀಶ್ಮಾ (30) ಅವರನ್ನು ಎಸ್‌ಐಟಿ ಬಂಧಿಸಿದ್ದು, ಪ್ರಕರಣದಲ್ಲಿ ಸಿಕ್ಕಿಬಿದ್ದ ಶಿಕ್ಷಕಿಯರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ.

    ಈ ಹಿಂದೆ ಬಂಧಿತ ಶಿಕ್ಷಕಿಯರಾದ ಕೀರ್ತನಾ ಮತ್ತು ಕಾವ್ಯಾ ಜೊತೆಗೂಡಿ ನೀಶ್ಮಾ ಕೂಡ ಮಾದಕ ದ್ರವ್ಯ ಸೇವನೆ ಮಾಡುತ್ತಿದ್ದಷ್ಟೇ ಅಲ್ಲ, ಇನ್‌ಸ್ಟಾಗ್ರಾಮ್ ಖಾತೆಗಳ ಮೂಲಕ ಗ್ರಾಹಕರನ್ನು ಸೆಳೆದು ಹೈಟೆಕ್ ಡ್ರಗ್ಸ್ ಜಾಲ ನಡೆಸುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    Also Read  ಶಿಕ್ಷಣದ ಹೆಸರಿನಲ್ಲಿ ಡ್ರಗ್ ವ್ಯವಹಾರ! ಬೆಚ್ಚಿಬಿದ್ದ ಮಂಗಳೂರು…

    ಗಲ್ಫ್ ನಂಬರ್‌ನಿಂದ ಕಾರ್ಯಾಚರಣೆ

    ತನಿಖೆಯಲ್ಲಿ ಅತ್ಯಂತ ಗಂಭೀರವಾಗಿ ಹೊರಬಂದ ಅಂಶವೆಂದರೆ, ಈ ಜಾಲದ ಕೊಂಡಿ ಗಲ್ಫ್ ದೇಶದ ಮೊಬೈಲ್ ಸಂಖ್ಯೆಗೆ ಸಂಪರ್ಕ ಹೊಂದಿರುವುದು. ವಾಟ್ಸಾಪ್ ಮೂಲಕ ಬುಕ್ಕಿಂಗ್ ಪಡೆದು, ಕ್ಯೂಆರ್ ಕೋಡ್ ಮೂಲಕ ಹಣ ಸಂಗ್ರಹಿಸಿ, ನಂತರ ಡ್ರಗ್ಸ್ ಅಡಗಿಸಿಟ್ಟ ಸ್ಥಳದ ಫೋಟೋ ಕಳುಹಿಸಿ ಡೆಲಿವರಿ ನೀಡಲಾಗುತ್ತಿತ್ತು.

    ಆದಾಯಕ್ಕಿಂತ ಕೋಟ್ಯಾಂತರ ಶಂಕಾಸ್ಪದ ವ್ಯವಹಾರ

    ಕೀರ್ತನಾ ಖಾತೆಗೆ ಸುಮಾರು ₹14 ಲಕ್ಷ, ಕಾವ್ಯಾ ಖಾತೆಗೆ ಕೇವಲ ಐದು ತಿಂಗಳಲ್ಲಿ ₹9 ಲಕ್ಷ ಜಮೆಯಾಗಿರುವುದು ತನಿಖೆಯಲ್ಲಿ ಪತ್ತೆಯಾಗಿದೆ. ತಿಂಗಳಿಗೆ ಕೇವಲ ₹12,000 ಗುತ್ತಿಗೆ ವೇತನ ಪಡೆಯುತ್ತಿದ್ದ ಶಿಕ್ಷಕಿಯರ ಖಾತೆಗಳಲ್ಲಿ ಇಷ್ಟು ದೊಡ್ಡ ಮೊತ್ತದ ಹಣ ಹರಿದಾಡಿರುವುದು ತನಿಖಾಧಿಕಾರಿಗಳ ಅನುಮಾನವನ್ನು ಮತ್ತಷ್ಟು ಗಟ್ಟಿಗೊಳಿಸಿದೆ.

    Also Read  ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?

    ಮಂಗಳೂರು–ಬೆಂಗಳೂರು ಕೊಂಡಿ

    ಈ ಜಾಲಕ್ಕೆ ಮಂಗಳೂರಿನ ವ್ಯಕ್ತಿಯೊಬ್ಬ ಪರಿಚಯ ಮಾಡಿಸಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಶಿಕ್ಷಕಿಯರು ಬೆಂಗಳೂರುಗೆ ನಡೆಸಿದ ಸರಣಿ ಪ್ರವಾಸಗಳು, ಐಷಾರಾಮಿ ಕಾರು ಖರೀದಿ ಮತ್ತು ಹಣದ ಮೂಲ ಕುರಿತು ಎಸ್‌ಐಟಿ ತನಿಖೆಯನ್ನು ತೀವ್ರಗೊಳಿಸಿದೆ.

    ##KeralaDrugsCase #MDMA #DrugNetwork #KozhikodeNews #InstagramDrugs #CrimeNews #IndiaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಷೇರು ವ್ಯವಹಾರದ ಲಾಭವೂ ಆದಾಯವೇ: ಜೀವನಾಂಶ ₹50 ಸಾವಿರದಿಂದ ₹1.20 ಲಕ್ಷಕ್ಕೆ ಏರಿಸಿದ ಹೈಕೋರ್ಟ್
    ಕೆಪಿಎಸ್‌ಸಿ ನೇಮಕಾತಿ ಅಕ್ರಮಕ್ಕೆ ಇ.ಡಿ. ಶಾಕ್: 21 ಕಡೆ ಏಕಕಾಲದ ದಾಳಿ
    ಉಡುಪಿಯ ಹಲವು ಉದ್ಯಮಿಗಳು ಹಾಗೂ ಪುಡಿ ರಾಜಕಾರಣಿಗಳ ಎದೆಯಲ್ಲಿ ಭಯ ಸೃಷ್ಟಿಸಿದ ಹನಿಟ್ರ್ಯಾಪ್, ವಂಚನೆ ಆರೋಪಿ ಜೀನತ್ ಬಂಧನ ….!
    ಹೆಚ್.ಪಿ.ವಿ. ಚುಚ್ಚು ಮದ್ದಿನ ಬಗ್ಗೆ ಗೊಂದಲ ಬೇಡ: ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ
    “ಜೈನ ಧರ್ಮಕ್ಕೆ ಮೇನಕಾ ಗಾಂಧಿಯಿಂದ ಅಪಮಾನ!? ಹೇಳಿಕೆಗೆ ಶಿವಮೊಗ್ಗದಲ್ಲಿ ಆಕ್ರೋಶದ ಜ್ವಾಲೆ – ಬೇಷರತ್ ಕ್ಷಮೆಯಾಚನೆಗೆ ಆಗ್ರಹ”
    2027ರಿಂದ YouTube ಹೊಸ ರೂಲ್ಸ್..ಕ್ರಿಯೇಟರ್‌ಗಳಿಗೆ ಶಾಕ್!YouTube Monetization ಕಠಿಣ!
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಬಿಡದಿ “ಸಮಗ್ರ ಉಪನಗರ” ಯೋಜನೆ ಕೈಬಿಡಿ: ಸಿಎಂ ಡಿಕೆ ಶಿಗೆ ಎಚ್.ಡಿ. ದೇವೇಗೌಡ ಪತ್ರ
    ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 
    ಒಂದೂವರೆ ವರ್ಷ ಫ್ರೀ ಬಸ್  ಪ್ರಯಾಣ…ಕೊನೆಯಲ್ಲಿ ದಂಡ ಮತ್ತು ಜೈಲು ಶಿಕ್ಷೆ!
    ಪುಟಿನ್‌ ಭದ್ರತೆಯ ಈ ರಹಸ್ಯ ಕೇಳಿದ್ರೆ ಶಾಕ್ ಆಗ್ತೀರಾ!ಪುಟಿನ್‌ಗೆ ಇಷ್ಟೊಂದು ಭದ್ರತೆನಾ? ‘ಸುಸು–ಕಕ್ಕಾ’ ಕೂಡ ರಷ್ಯಾಕ್ಕೆ ವಾಪಸ್!
    ಉಮ್ಮತ್ತಿ ಹಣ್ಣು ಆನ್‌ಲೈನ್‌ನಲ್ಲೂ ಸಿಗುತ್ತಾ? ಗ್ರಾಹಕರೇ ಎಚ್ಚರ!
    Top 5, ಹೆಚ್ಚು ಅನುದಾನ ಪಡೆದ ಇಲಾಖೆಗಳು ಯಾವವು ಗೊತ್ತಾ?
    AI ಡೀಪ್‌ಫೇಕ್ ಕೇವಲ ಸಿನಿಮಾ ನಟಿಯರಿಗೆ ಸೀಮಿತವಾಗಿಲ್ಲ .
    ದಂಡ ಕಟ್ಟದವರಿಗೆ ಕರೆಂಟ್ ಬಿಲ್ ಜೊತೆ ಟ್ರಾಫಿಕ್ ದಂಡ….! ಸುಪ್ರೀಂ ಕೋರ್ಟ್‌
    ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
    ಬ್ರಿಜ್‌ಭೂಷಣ್ ಸಿಂಗ್ ಖುಲಾಸೆಗೆ ಸವಾಲ್; ನಾಲ್ವರು ಮಹಿಳಾ ಕುಸ್ತಿಪಟುಗಳಿಂದ ಮೇಲ್ಮನವಿ—ಸೆ.28ಕ್ಕೆ ವಿಚಾರಣೆ
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    ಜನಗಣತಿ 2026–27 – Self Enumeration ಮುಗಿದು ಈಗ ಮನೆ ಮನೆ ಭೇಟಿ ಹಂತ ಆರಂಭ!ನಮ್ಮ ಮಾಹಿತಿ = ನಮ್ಮ ದೇಶದ ಬೆಳವಣಿಗೆ…
    ವಿಡಿಯೋ ಕಾಲ್‌ನಲ್ಲಿ ತಂದೆಗೆ ಅಂತಿಮ ವಿದಾಯ!ಸಂಸ್ಕಾರ ಸೋತಿತೇ….ಸೌಲಭ್ಯ ಗೆದ್ದಿತೇ?ವೃದ್ಧಾಶ್ರಮದಿಂದ ಚಿತೆಯವರೆಗೆ ಒಂಟಿ ಪಯಣ…
    ಕೆಲವೊಮ್ಮೆ ದೇಹದ ಶತ್ರು “ಲೂಪಸ್ “ಹೊರಗಿಲ್ಲ… ಒಳಗೇ ಇರುತ್ತದೆ.ಮಹಿಳೆಯರ ದಣಿವು, ಸಂಧಿ ನೋವು, ತೂಕ ಇಳಿಕೆ —. ನಿರ್ಲಕ್ಷ್ಯ ಬೇಡ. ‘ಸಾಮಾನ್ಯ’ ಎಂದು ಕಡೆಗಣಿಸಬೇಡಿ.
    ಸರ್ಕಾರಿ ಮಕ್ಕಳ ಶೂ ಕಳಪೆ…!ಸರ್ಕಾರಿ ಯೋಜನೆಗಳಲ್ಲಿ ಗುಣಮಟ್ಟ ಕೊರತೆಗೆ ಪರಿಹಾರವೇ ಇಲ್ವಾ ?
    ಕರಾವಳಿ ಪ್ರತ್ಯೇಕ ರಾಜ್ಯಕ್ಕೆ ಒತ್ತಾಯ: “ಕರಾವಳಿ ಪಡೆ” ಹೋರಾಟ ತೀವ್ರಗೊಳಿಸಲು ನಿರ್ಧಾರ
    ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ