📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    MRPL ಸ್ಫೋಟ FIR… ದಾಖಲು…MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ…!

    ಮಂಗಳೂರು: MRPLನ ಫೇಸ್-3ರ Coker Hydro Treater Unitನಲ್ಲಿ ಸೆ.30ರಂದು ಮಧ್ಯಾಹ್ನ 12.15ರ ಸುಮಾರಿಗೆ ಸಂಭವಿಸಿದ ಭಾರೀ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ Crime No.132/2026ರಡಿ FIR ದಾಖಲಾಗಿದೆ. ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 287, 125(b) ಮತ್ತು 106 ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಘಟನೆ ನಡೆದ ಸ್ಥಳ MRPLನ ಬಾಲ–ಕಾಟಿಪಳ್ಳ ವ್ಯಾಪ್ತಿಯ Coker Hydro Treater Unit ಎಂದು FIRನಲ್ಲಿ ಉಲ್ಲೇಖಿಸಲಾಗಿದೆ.

    FIRನಲ್ಲಿರುವ ಮಾಹಿತಿಯ ಪ್ರಕಾರ, MRPLನ ಉದ್ಯೋಗಿಗಳಿಗೆ ಊಟ, ಉಪಹಾರ ಮತ್ತು ನೀರು ಸರಬರಾಜು ಮಾಡುವ K Star Food and Hospitality Servicesನಲ್ಲಿ ಕೆಲಸ ಮಾಡುತ್ತಿದ್ದ ದೂರುದಾರರು ಘಟನಾ ಸಮಯದಲ್ಲಿ ಸ್ಥಳದಲ್ಲಿದ್ದರು. ಮಧ್ಯಾಹ್ನ 12.15ರ ಸುಮಾರಿಗೆ Coker Hydro Treater Unitನಲ್ಲಿ ಏಕಾಏಕಿ ಸ್ಫೋಟ ಸಂಭವಿಸಿ, ಯಂತ್ರೋಪಕರಣಗಳು ಹಾಗೂ ಬಿಡಿಭಾಗಗಳು ಚಿದ್ರಗೊಂಡು ಬೆಂಕಿಯ ಜ್ವಾಲೆಯೊಂದಿಗೆ ಸುತ್ತಮುತ್ತ ಚಿಮ್ಮಿದ ಪರಿಣಾಮ ಹಲವರು ಗಾಯಗೊಂಡಿದ್ದಾರೆ ಎಂದು FIRನಲ್ಲಿ ದಾಖಲಾಗಿದೆ.

    12 ಮಂದಿ ಗಾಯ? ಮನೀಶ್ ಕರ್ಕಡ ಸಾವು

    FIRನಲ್ಲಿ ದೂರುದಾರರೊಂದಿಗೆ ರಾಜೇಶ್ ಪ್ರಸಾದ್, ಇಂದ್ರಜಿತ್, ರಮಣ್ ಕುಮಾರ್, ಲೋಕೇಶ್ ಕುಳಾಯಿ, ಜಯರಾಮ್, ಜೆರೋಮ್, ಅವಿನಾಶ್, ಅಕ್ಷಯ್, ಜಗಜೀವನ್ ಸಿಂಗ್, ಶರತ್ ಶೆಟ್ಟಿ, ರಾಜೇಶ್ ಪೂಜಾರಿ ಹಾಗೂ ಮನೀಶ್ ಕರ್ಕಡ ಸೇರಿದಂತೆ ಹಲವರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇವರಲ್ಲಿ ರಾಜೇಶ್ ಮತ್ತು ಮನೀಶ್ ಕರ್ಕಡ ಅವರಿಗೆ ಗಂಭೀರ ಗಾಯಗಳಾಗಿದ್ದವುಎಂದು FIRನಲ್ಲಿ ದಾಖಲಿಸಲಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮನೀಶ್ ಕರ್ಕಡ ಮೃತಪಟ್ಟಿದ್ದಾರೆ ಎಂದು ಪೊಲೀಸ್ ದಾಖಲೆಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ.

    Also Read  ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!

    ಮನೀಶ್ ಕರ್ಕಡ ಅವರು MRPLನಲ್ಲಿ ಗುತ್ತಿಗೆ ಕಾರ್ಮಿಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಸ್ಥಳೀಯ ಮಾಹಿತಿಯಂತೆ ತಿಳಿದುಬಂದಿದ್ದು, ಅವರ ಅಕಾಲಿಕ ಸಾವು ಕುಟುಂಬಸ್ಥರು ಹಾಗೂ ಹಳೆಯಂಗಡಿ ಸಿಎಸ್‌ಐ ಅಮ್ಮನ್ ಮೆಮೋರಿಯಲ್ ಚರ್ಚ್‌ನ ಸದಸ್ಯರು ಸೇರಿದಂತೆ ಸಮುದಾಯದಲ್ಲಿ ತೀವ್ರ ದುಃಖಕ್ಕೆ ಕಾರಣವಾಗಿದೆ.

    MRPL ಅಧಿಕಾರಿಗಳ ವಿರುದ್ಧ ನಿರ್ಲಕ್ಷ್ಯದ ಆರೋಪ

    ಘಟನೆಗೆ ಸಂಬಂಧಿಸಿದಂತೆ FIRನಲ್ಲಿ Coker Hydro Treater Unitನ ಉಪಕರಣಗಳನ್ನು ಘಟಕದ ಮುಖ್ಯಸ್ಥರು ಹಾಗೂ MRPL ಸಂಸ್ಥೆಯವರು ಸರಿಯಾಗಿ ಪರಿಶೀಲಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದಲೇ ಘಟನೆ ಸಂಭವಿಸಿದೆ ಎಂಬ ಆರೋಪ ದಾಖಲಿಸಲಾಗಿದೆ. ಈ ಆರೋಪವು FIRನಲ್ಲಿ ದಾಖಲಾದ ದೂರುದಾರರ ಹೇಳಿಕೆಯ ಭಾಗವಾಗಿದ್ದು, ಅದರ ಸತ್ಯಾಸತ್ಯತೆ ತನಿಖೆಯ ನಂತರವೇ ಅಂತಿಮವಾಗಿ ಸ್ಪಷ್ಟವಾಗಲಿದೆ.

    ಪ್ರಕರಣದಲ್ಲಿ Coker Hydro Treater Unitನ ಮುಖ್ಯಸ್ಥರನ್ನು A1 ಹಾಗೂ MRPLನನ್ನು A2 ಎಂದು ದಾಖಲಿಸಿರುವುದು FIRನಲ್ಲಿ ಕಾಣಿಸುತ್ತದೆ. ಪೊಲೀಸರು ಪ್ರಕರಣದ ತನಿಖೆ ಮುಂದುವರಿಸಿದ್ದಾರೆ.

    Also Read  ಅರ್ಧರಾತ್ರಿ ತಾಯಿ-ಮಗುವಿನ ಅಕ್ರಮ ಬಂಧನ: ಇಡೀ ಪೊಲೀಸ್ ಠಾಣೆಯನ್ನೇ ಸಸ್ಪೆಂಡ್ ಮಾಡಿದ ಜಡ್ಜ್!

    25 ಮನೆಗಳಿಗೆ ಹಾನಿ; ಪ್ರಾರ್ಥನಾ ಮಂದಿರಗಳಿಗೂ ಹೊಡೆತ

    ಸ್ಫೋಟದ ತೀವ್ರತೆಗೆ ಸುತ್ತಮುತ್ತಲಿನ ಪ್ರದೇಶಗಳಲ್ಲೂ ಹಾನಿಯಾಗಿದೆ. ಲಭ್ಯವಿರುವ ಸ್ಥಳೀಯ ಮಾಹಿತಿಯ ಪ್ರಕಾರ ಜೋಕಟ್ಟೆಯಲ್ಲಿ 25, ಕಳವಾರಿನಲ್ಲಿ 19 ಮತ್ತು ಬಾಳದಲ್ಲಿ 10 ಮನೆಗಳಿಗೆ ಹಾನಿಯಾಗಿದೆ ಎನ್ನಲಾಗಿದೆ. ಅಲ್ಲದೆ ಜೋಕಟ್ಟೆಯ 5 ಹಾಗೂ ಕಳವಾರಿನ 3 ಸೇರಿದಂತೆ ಒಟ್ಟು 8 ಪ್ರಾರ್ಥನಾ ಮಂದಿರಗಳಿಗೂ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಈ ಹಾನಿಯ ಪ್ರಮಾಣದ ಅಧಿಕೃತ ಮೌಲ್ಯಮಾಪನ ಜಿಲ್ಲಾಡಳಿತದ ಪರಿಶೀಲನೆಯ ಬಳಿಕ ಇನ್ನಷ್ಟು ಸ್ಪಷ್ಟವಾಗಲಿದೆ.

    MRPL ಸ್ಫೋಟ ಇದೀಗ ಕೇವಲ ಕೈಗಾರಿಕಾ ಘಟಕದೊಳಗಿನ ಘಟನೆ ಎಂಬುದನ್ನು ಮೀರಿ, ಕಾರ್ಮಿಕರ ಸುರಕ್ಷತೆ, ಕೈಗಾರಿಕಾ ಘಟಕಗಳ ನಿರ್ವಹಣೆ ಮತ್ತು ಸುತ್ತಮುತ್ತ ವಾಸಿಸುವ ಜನರ ಸುರಕ್ಷತೆಯ ಬಗ್ಗೆಯೂ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಒಬ್ಬ ಕಾರ್ಮಿಕನ ಜೀವ ಕಳೆದುಕೊಂಡಿರುವ ಹಿನ್ನೆಲೆಯಲ್ಲಿ ಘಟನೆಯ ಸಂಪೂರ್ಣ ತನಿಖೆ ಹಾಗೂ ಸುರಕ್ಷತಾ ಕ್ರಮಗಳ ಪರಿಶೀಲನೆಗೆ ಒತ್ತಾಯ ಹೆಚ್ಚಾಗಿದೆ.

    Also Read  ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 

    ಸುರತ್ಕಲ್ ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದು, FIR ಅನ್ನು ಸೆ.30ರಂದು ರಾತ್ರಿ 7.45ಕ್ಕೆ ನ್ಯಾಯಾಲಯಕ್ಕೆ ರವಾನಿಸಲಾಗಿದೆ.

    ##MRPLBlast #ManishKarkada #Mangaluru #Surathkal #MRPL #KarnatakaNews #BreakingNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಧರ್ಮಸ್ಥಳ-ಚಿಕ್ಕಮಗಳೂರು ಟ್ರಿಪ್‌ಗೆ ಹೊರಟ ಸ್ವಿಗ್ಗಿ ಡೆಲಿವರಿ ಬಾಯ್ಸ್… ಅರಬೈಲ್ ಘಾಟ್‌ನಲ್ಲಿ ಭೀಕರ ಅಪಘಾತ, 6 ಜೀವಗಳು ಅಂತ್ಯ!
    ಶಿರಸಿ ಮಾರಿಯಮ್ಮನ ಜಾತ್ರೆ ಪ್ರಾರಂಭ
    ಮುದ್ದಾದ ಅವಳಿ ಹೆಣ್ಣು ಮಕ್ಕಳನ್ನು ಕತ್ತು ಸೀಳಿ ಕೊಂದ ಪಾಪಿ ಅಪ್ಪ
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮೃತದೇಹ….
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    ಕಾಂಗೋದಲ್ಲಿ ಭೀಕರ ವಿಮಾನ ಅಪಘಾತ: ಇಬ್ಬರು ಸೇನಾ ಲೆಫ್ಟಿನೆಂಟ್ ಜನರಲ್ ಸೇರಿ 14 ಮಂದಿ ಸಾವು
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಮೋದಿ–ಶಾ ಆಡಳಿತದ ವಿರುದ್ಧ ಕಾಂಗ್ರೆಸ್‌ ವಾಗ್ದಾಳಿ: ತಪ್ಪಿತಸ್ಥರನ್ನು ರಕ್ಷಿಸಲು ಅಧಿಕಾರ ದುರ್ಬಳಕೆ ಆರೋಪ
    ಶಿಕ್ಷಣ ಸುಧಾರಣೆಗೆ ರಾಜ್ಯ ಸರ್ಕಾರದ ಭರ್ಜರಿ ಪ್ಲಾನ್ ಬಹಿರಂಗ!
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಮೋದಿ ನೇತೃತ್ವದಲ್ಲಿ ಇತಿಹಾಸಕ್ಕೆ ಮರಳಿದ ರಾಜರಾಜಚೋಳರ ಹೆಮ್ಮೆ — ಆನೈಮಂಗಲಂ ತಾಮ್ರಶಾಸನಗಳು! 1000 ವರ್ಷದ ಇತಿಹಾಸ 100 ವರ್ಷಗಳ ಬಳಿಕ ಚೋಳರ ಕಾಲದ ಅಪರೂಪದ ದಾಖಲೆ ನೆದರ್‌ಲ್ಯಾಂಡ್ಸ್‌ನಿಂದ ಭಾರತಕ್ಕೆ ವಾಪಸ್….
    ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!
    ಲಾಲ್‌ಬಾಗ್ ಸಿಗ್ನಲ್ ಬಳಿ ಚಾಕು ಇರಿತದ ಘಟನೆ…!
    ಧುರಂಧರ್ 2 ಕ್ರೇಜ್ ಓವರ್‌ಫ್ಲೋ ಕಲೆಕ್ಷನ್‌ನಲ್ಲಿಕರ್ನಾಟಕವೇ ಟಾಪ್… ದಕ್ಷಿಣ ಭಾರತದಲ್ಲಿ 300 ಕೋಟಿ ಕ್ಲಬ್!
    ‘ಮೇಕ್ ಇನ್ ಇಂಡಿಯಾ’ಗೆ ಮತ್ತೊಂದು ದೊಡ್ಡ ಗೆಲುವು: C295 ವಿಮಾನದ ಮೊದಲ ಯಶಸ್ವಿ ಪರೀಕ್ಷಾ ಹಾರಾಟ
    AIಗೆ ಒಂದು ಪ್ರಶ್ನೆ ಕೇಳಿದ್ರೆ…ಲಕ್ಷಾಂತರ ಲೀಟರ್ ನೀರು ಆವಿಯಾಗುತ್ತೆ…..!ಅದೇಗೆ.??AIಜಗತ್ತನ್ನು ಬದಲಾಯಿಸುತ್ತಿದೆ… ಆದರೆ ಶುದ್ಧ ನೀರಿನ ಜಲಮೂಲಗಳನ್ನು ಖಾಲಿ ಮಾಡುತ್ತಿದೆ.
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು
    35 ವರ್ಷಗಳ ಬಳಿಕ ಮತ್ತೆ ಕಾಲೇಜಿಗೆ ಬಂದ 50 ವರ್ಷದ ಮಹಿಳೆ: ಇಂಟರ್ನೆಟ್‌ಗೆ ಸ್ಫೂರ್ತಿಯಾದ ಕಥೆ
    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..
    ಮಹಿಳಾ ಟಿ20 ವಿಶ್ವಕಪ್‌ಗೂ ಮುನ್ನ ಭಾರತ-ಪಾಕ್ ಹೈಪ್ ನಡುವೆ ಮಂಧಾನಾ ಮಾತು ವೈರಲ್…
    ತಾಯಿಯನ್ನೇ ಮದುವೆಗೆ ಆಹ್ವಾನಿಸದ ಕಾರಣಕ್ಕೆ ಉದ್ಯೋಗ ಕಳೆದುಕೊಂಡ ಯುವಕ…!
    Maths hate ಮಾಡ್ತಿರಾ ? ಹಾಗಾದ್ರೆ ಈ ವರದಿ ನೋಡಿ ಸಮಸ್ಯೆ ನಿಮ್ಮಲ್ಲಿಲ್ಲ … research ಹೇಳುತ್ತೆ ಸಂಖ್ಯೆಗಳಲ್ಲಿ ಇದೆ!”
    ಮಂಗಳೂರಿಗರಿಗೆ ಎಚ್ಚರಿಕೆ: ನೀರನ್ನು ಜಾಣ್ಮೆಯಿಂದ ಬಳಸಿ –ಮಾರ್ಚ್ ನಲ್ಲೇ ರೇಷನಿಂಗ್ ಮಾಡುವ ಪರಿಸ್ಥಿತಿ ಇದೆ…
    ಟ್ರಂಪ್ ಇರಾನ್ ಡೀಲ್ ಕಥೆ ಏನು?ಒಪ್ಪಂದವಾಗುತ್ತಾ? ಅಥವಾ ಯುದ್ಧ ಮುಂದುವರೆಯುತ್ತಾ?
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ಕಿಡ್ನಿ ಕಾಯಿಲೆಯ ಬಗ್ಗೆ ಎಚ್ಚರಿಕೆ ಅಗತ್ಯ- ಡಾಕ್ಟರ್ ಅಶೋಕ್ ಭಟ್
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!