📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಮಂಗಳೂರು ಸಚಿವ ಸಂಪುಟ ಸಭೆಗೆ ಸ್ವಾಗತದ ನಡುವೆಯೇ ‘ಜೈಲುಜಾಮರ್‌’ ಕಿರಿಕಿರಿ…! ನಾಳೆ ವಕೀಲರ ಪ್ರತಿಭಟನೆ..

    ಒಂದು ಸಮಸ್ಯೆ ತಡೆಯಲು ಹೋಗಿ… ಅನೇಕರಿಗೆ ಸಮಸ್ಯೆ!

    ಮಂಗಳೂರಿನಲ್ಲಿ ಸೆ.18ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ. ಕರಾವಳಿಯ ಅಭಿವೃದ್ಧಿ, ಹೊಸ ಯೋಜನೆಗಳು ಹಾಗೂ ಜಿಲ್ಲೆಯ ಹಲವು ಬೇಡಿಕೆಗಳ ಬಗ್ಗೆ ನಿರೀಕ್ಷೆ ಮೂಡಿರುವ ಹೊತ್ತಲ್ಲೇ, ನಗರದ ಮತ್ತೊಂದು ಗಂಭೀರ ಸಮಸ್ಯೆ ಸರ್ಕಾರದ ಗಮನ ಸೆಳೆಯುತ್ತಿದೆ.ಸಮಸ್ಯೆಗೆ ಪರಿಹಾರ ಹುಡುಕುವ ವ್ಯವಸ್ಥೆಯೇ ಮತ್ತೊಂದು ಸಮಸ್ಯೆಯಾಗಿ ಮಾರ್ಪಡಬಾರದು…!

    ಜೈಲ್‌ ರೂಲ್ಸ್‌ ಪಾಲಿಸಲಿ… ಜನರ ನೆಟ್‌ವರ್ಕ್‌ ಯಾಕೆ ನಿಲ್ಲಬೇಕು?

     ಕೊಡಿಯಾಲ್‌ಬೈಲ್‌ನ ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಅಳವಡಿಸಿರುವ ಮೊಬೈಲ್ ನೆಟ್‌ವರ್ಕ್ ಜಾಮರ್‌ನಿಂದ ಉಂಟಾಗುತ್ತಿರುವ ಸಂಪರ್ಕ ಸಮಸ್ಯೆ.ಜೈಲ್‌ ಶಿಸ್ತು ಕಾಪಾಡಿ…ಇಲ್ಲಾದ್ರೆ ತಾಂತ್ರಿಕ ವ್ಯವಸ್ಥೆ ಸರಿಪಡಿಸಿ..ಜನರಿಗೆ ತೊಂದರೆ ಕೊಡಬೇಡಿ ಎಂಬುದು ಸಾರ್ವಜನಿಕರ ಒಕ್ಕೊರಲ ಧ್ವನಿ..

    ಜೈಲಿನೊಳಗೆ ಅಕ್ರಮವಾಗಿ ಮೊಬೈಲ್ ಬಳಕೆಯನ್ನು ತಡೆಯುವುದು ಜಾಮರ್‌ನ ಉದ್ದೇಶ. ಆದರೆ ಅದರ ಪರಿಣಾಮ ಜೈಲು ಆವರಣದ ಹೊರಗೂ ವ್ಯಾಪಿಸುತ್ತಿದೆ ಎಂಬುದು ವಕೀಲರು, ಸಾರ್ವಜನಿಕರು ಹಾಗೂ ಹಲವು ಸಂಸ್ಥೆಗಳ ಆರೋಪ.

    ಮಂಗಳೂರು ವಕೀಲರ ಸಂಘದ ಅಧ್ಯಕ್ಷ ಜಗದೀಶ್ ಶೇಣವ ಅವರ ಪ್ರಕಾರ, ಮೊಬೈಲ್ ಸಂಪರ್ಕದ ಸಮಸ್ಯೆಯಿಂದ ನ್ಯಾಯಾಲಯದ ಕಲಾಪ, ವಕೀಲರ ವೃತ್ತಿ, ಕಕ್ಷಿದಾರರೊಂದಿಗೆ ಸಂಪರ್ಕ ಹಾಗೂ ಸಾರ್ವಜನಿಕರ ದೈನಂದಿನ ಚಟುವಟಿಕೆಗಳಿಗೂ ತೊಂದರೆಯಾಗುತ್ತಿದೆ. ಸುತ್ತಮುತ್ತಲಿನ ಶಿಕ್ಷಣ ಸಂಸ್ಥೆಗಳು, ಹೋಟೆಲ್‌ಗಳು ಮತ್ತು ವ್ಯಾಪಾರ ಸಂಸ್ಥೆಗಳ ಮೇಲೂ ಪರಿಣಾಮ ಬೀರುತ್ತಿದೆ ಎಂಬ ದೂರುಗಳಿವೆ.

    Also Read  ಶಾಮ್ ಇನ್ಸ್ಟಿಟ್ಯೂಶನ್ ಪ್ರಸ್ತುತ ಪಡಿಸಿದ "ಕಜ್ಜ" ತುಳು ಸಿನಿಮಾದ ಆಡಿಯೋ, ಟೇಲರ್ ಬಿಡುಗಡೆ

    ಈ ವಿಚಾರ ಈಗಾಗಲೇ ಹೈಕೋರ್ಟ್‌ವರೆಗೂ ಹೋಗಿದೆ. ತಾಂತ್ರಿಕ ಪರಿಶೀಲನೆಯಲ್ಲಿ ಜಾಮರ್‌ನ ಪರಿಣಾಮ ಜೈಲು ಆವರಣದ ಹೊರಗೂ ವ್ಯಾಪಿಸಿರುವ ಬಗ್ಗೆ ಉಲ್ಲೇಖವಾಗಿದ್ದು, ಅದರ ವ್ಯಾಪ್ತಿಯನ್ನು ಜೈಲು ಆವರಣಕ್ಕೆ ಸೀಮಿತಗೊಳಿಸುವಂತೆ ತಾಂತ್ರಿಕ ಕ್ರಮಗಳ ಅಗತ್ಯತೆ ಎದುರಾಗಿದೆ.

    ಇದರ ನಡುವೆ ಇತ್ತೀಚೆಗೆ ಜೈಲಿನೊಳಗಿನ ಪರಿಶೀಲನೆಯಲ್ಲಿ ಸುಮಾರು 10 ಮೊಬೈಲ್ ಫೋನ್‌ಗಳು ಪತ್ತೆಯಾಗಿರುವುದು ಚರ್ಚೆಗೆ ಮತ್ತಷ್ಟು ಕಾರಣವಾಗಿದೆ. ಅಂದರೆ, ಹೊರಗೆ ಇರುವ ನ್ಯಾಯಾಲಯ, ವಕೀಲರು, ವಿದ್ಯಾರ್ಥಿಗಳು, ವ್ಯಾಪಾರಿಗಳು ಮತ್ತು ಸಾರ್ವಜನಿಕರಿಗೆ ನೆಟ್‌ವರ್ಕ್ ಸಮಸ್ಯೆ… ಆದರೆ ಜೈಲಿನೊಳಗೆ ಮೊಬೈಲ್‌ಗಳು ಪತ್ತೆಯಾಗುತ್ತಿರುವುದು ಸಾರ್ವಜನಿಕರಲ್ಲಿ ಪ್ರಶ್ನೆ ಮೂಡಿಸಿದೆ.

    ಇದೇ ಈ ಪ್ರಕರಣದ ದೊಡ್ಡ ವೈಪರೀತ್ಯ!

    ಒಬ್ಬರ ಸಮಸ್ಯೆ ತಡೆಯಲು ಹೋಗಿ ನೂರಾರು ಮಂದಿಯ ಸಂಪರ್ಕ ವ್ಯವಸ್ಥೆಗೆ ತೊಂದರೆ ಆಗಬಾರದು.
    ಜೈಲು ಭದ್ರತೆ ಮುಖ್ಯ. ಅದೇ ರೀತಿ ನ್ಯಾಯಾಲಯದ ಕಾರ್ಯನಿರ್ವಹಣೆ, ಸಾರ್ವಜನಿಕರ ಸಂವಹನ, ಶಿಕ್ಷಣ ಸಂಸ್ಥೆಗಳು ಹಾಗೂ ವ್ಯಾಪಾರ-ವಹಿವಾಟುಗಳೂ ಮುಖ್ಯ.

    ಈ ಹಿನ್ನೆಲೆಯಲ್ಲಿ ಮಂಗಳೂರು ವಕೀಲರ ಸಂಘ ಸರ್ಕಾರಕ್ಕೆ ಸೆ.14ರವರೆಗೆ ಗಡುವು ನೀಡಿತ್ತು. ಪರಿಹಾರವಾಗದ ಹಿನ್ನೆಲೆಯಲ್ಲಿ ಸೆ.18ರಂದು ಬೆಳಗ್ಗೆ 9 ಗಂಟೆಗೆ ಕೋರ್ಟ್‌ ಆವರಣದಲ್ಲಿ ವಕೀಲರು ಸೇರಿ ಪಡೀಲ್ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ ನಡೆಸಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದಾರೆ. ಸುಮಾರು 250 ಮಂದಿ ವಕೀಲರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಂಘದ ಅಧ್ಯಕ್ಷ ಜಗದೀಶ್ ಶೇಣವ ತಿಳಿಸಿದ್ದಾರೆ.

    Also Read  ವಾಲ್ಮೀಕಿ ಹಗರಣಕ್ಕೆ ನಾಗೇಂದ್ರ ತಲೆದಂಡ? ರಾಜೀನಾಮೆ ಚರ್ಚೆ ನಡುವೆ ಕಾಂಗ್ರೆಸ್‌ಗೆ ಹೊಸ ಸಂಕಷ್ಟ!

    ಆದರೆ ಈ ವಿಚಾರದಲ್ಲಿ ಮತ್ತೊಂದು ಧ್ವನಿಯೂ ಕೇಳಿಬಂದಿದೆ.

    ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್‌ನ ಕಾನೂನು ಮತ್ತು ಮಾನವ ಹಕ್ಕುಗಳ ವಿಭಾಗದ ಅಧ್ಯಕ್ಷ, ವಕೀಲ ಮನೋರಾಜ್ ರಾಜೀವ್, ಜಾಮರ್ ವಿಚಾರವನ್ನು ರಾಜಕೀಯ ಆರೋಪ-ಪ್ರತ್ಯಾರೋಪದ ಬದಲು ವೈಜ್ಞಾನಿಕ ಮತ್ತು ತಾಂತ್ರಿಕ ಪರಿಶೀಲನೆಯ ಮೂಲಕ ಬಗೆಹರಿಸಬೇಕು ಎಂದು ಹೇಳಿದ್ದಾರೆ. ತಾಂತ್ರಿಕ ಸಮಸ್ಯೆ ಪರಿಹರಿಸಲಾಗಿದೆ ಎಂಬ ವಿಚಾರವನ್ನು ಹೈಕೋರ್ಟ್ ವಿಚಾರಣೆಯ ಸಂದರ್ಭದಲ್ಲಿ ತಿಳಿಸಲಾಗಿತ್ತು ಎಂದು ಅವರು ಹೇಳಿದ್ದಾರೆ. ಈ ಬಗ್ಗೆ ಹೆಚ್ಚುವರಿ ಮೊಬೈಲ್ ಟವರ್‌ಗಳಂತಹ ಪರ್ಯಾಯಗಳನ್ನೂ ಪರಿಶೀಲಿಸಬಹುದು ಎಂಬ ಅಭಿಪ್ರಾಯವನ್ನು ಅವರು ವ್ಯಕ್ತಪಡಿಸಿದ್ದಾರೆ.

    ಇನ್ನು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್ ಕೂಡ ಆಗಸ್ಟ್‌ನಲ್ಲಿ ವಿಧಾನಸಭೆಯಲ್ಲಿ ಜೈಲು ಜಾಮರ್‌ನಿಂದ ಸುತ್ತಮುತ್ತಲಿನ ವ್ಯಾಪಾರ, ಶಿಕ್ಷಣ ಸಂಸ್ಥೆಗಳು ಹಾಗೂ ಇತರ ಸಂಸ್ಥೆಗಳಿಗೆ ಆಗುತ್ತಿರುವ ಸಂಪರ್ಕ ಸಮಸ್ಯೆ ಬಗ್ಗೆ ಪ್ರಸ್ತಾಪಿಸಿದ್ದರು. ಸರ್ಕಾರ ಕೈಗೊಂಡ ಕ್ರಮಗಳಿಂದ ನಿರೀಕ್ಷಿತ ಪರಿಹಾರ ಸಿಕ್ಕಿಲ್ಲ ಎಂದು ಅವರು ಹೇಳಿದ್ದರು.

    ಹಾಗಾದರೆ ಪರಿಹಾರವೇನು?

    ಜಾಮರ್‌ ಸಂಪೂರ್ಣ ತೆರವುಗೊಳಿಸುವುದೇ ಏಕೈಕ ಮಾರ್ಗ ಎನ್ನುವುದಕ್ಕಿಂತ ಮೊದಲು ತಾಂತ್ರಿಕವಾಗಿ ಅದರ ವ್ಯಾಪ್ತಿಯನ್ನು ಜೈಲು ಆವರಣದೊಳಗೇ ಸೀಮಿತಗೊಳಿಸುವುದು ಮುಖ್ಯ.

    Also Read  ಮಂಗಳೂರು :ಅಕ್ರಮ ಪಟಾಕಿ ದಾಸ್ತಾನು ಆರೋಪ!

    ಅದರ ಜೊತೆಗೆ,

    • ಜೈಲಿನೊಳಗಿನ ಮೊಬೈಲ್ ಬಳಕೆಯನ್ನು ಪತ್ತೆಹಚ್ಚಲು ಪರಿಣಾಮಕಾರಿ ಆಂತರಿಕ ಭದ್ರತಾ ವ್ಯವಸ್ಥೆ
    • ಜಾಮರ್‌ನ ಸಿಗ್ನಲ್ ವ್ಯಾಪ್ತಿಯ ಮರುಪರಿಶೀಲನೆ
    • ಅಗತ್ಯವಿದ್ದಲ್ಲಿ ಮೊಬೈಲ್ ಆಪರೇಟರ್‌ಗಳ ಸಹಯೋಗದಲ್ಲಿ ಸುತ್ತಮುತ್ತಲಿನ ಪ್ರದೇಶಕ್ಕೆ ಸಂಪರ್ಕ ಸುಧಾರಣೆ
    • ನ್ಯಾಯಾಲಯ, ಶಿಕ್ಷಣ ಸಂಸ್ಥೆಗಳು ಮತ್ತು ಸಾರ್ವಜನಿಕರಿಗೆ ತುರ್ತು ಸಂವಹನಕ್ಕೆ ತೊಂದರೆಯಾಗದಂತೆ ವ್ಯವಸ್ಥೆ
    • ಸ್ವತಂತ್ರ ತಾಂತ್ರಿಕ ಸಂಸ್ಥೆಯಿಂದ ನಿಯಮಿತ ಪರಿಶೀಲನೆ

    ಇಂತಹ ಕ್ರಮಗಳನ್ನು ಸರ್ಕಾರ ಪರಿಗಣಿಸಬಹುದು.

    ಏಕೆಂದರೆ ಸಮಸ್ಯೆಗೆ ಪರಿಹಾರ ಹುಡುಕುವ ವ್ಯವಸ್ಥೆಯೇ ಮತ್ತೊಂದು ಸಮಸ್ಯೆಯಾಗಿ ಮಾರ್ಪಡಬಾರದು.

    ಮಂಗಳೂರಿಗೆ ಸಚಿವ ಸಂಪುಟ ಸಭೆ ಬರುತ್ತಿದೆ.
    ಅಭಿವೃದ್ಧಿಯ ನಿರೀಕ್ಷೆಯಲ್ಲಿ ಮಂಗಳೂರಿಗರು ಸರ್ಕಾರವನ್ನು ಸ್ವಾಗತಿಸುತ್ತಿದ್ದಾರೆ.

    ಆದರೆ ಇದೇ ಸಮಯದಲ್ಲಿ ನಗರದ ಒಂದು ಭಾಗದಲ್ಲಿ ಕೇಳಿಬರುತ್ತಿರುವ ಪ್ರಶ್ನೆ ಮಾತ್ರ ಸರಳವಾಗಿದೆ—

    “ಜೈಲಿನೊಳಗಿನ ಒಂದು ಸಮಸ್ಯೆ ತಡೆಯಲು, ಜೈಲಿನ ಹೊರಗಿನ ಇಡೀ ಜನಜೀವನಕ್ಕೆ ನೆಟ್‌ವರ್ಕ್ ಸಮಸ್ಯೆ ಯಾಕೆ?”

    ಒಂದು ಸಮಸ್ಯೆ ಪರಿಹರಿಸಲು ಹೋಗಿ ಹತ್ತಾರು ಸಮಸ್ಯೆ ಸೃಷ್ಟಿಸುವ ಬದಲು, ಜೈಲು ಭದ್ರತೆಯೂ ಉಳಿಯಲಿ… ಸಾರ್ವಜನಿಕರ ಸಂಪರ್ಕ ವ್ಯವಸ್ಥೆಯೂ ಉಳಿಯಲಿ.

    ಮಂಗಳೂರಿಗರ ನಿರೀಕ್ಷೆ ಒಂದೇ—ಜಾಮರ್ ಇರಲಿ, ಭದ್ರತೆಯೂ ಇರಲಿ; ಆದರೆ ಜನರ ಸಂಪರ್ಕಕ್ಕೆ ‘ಜಾಮ್’ ಆಗದ ಪರಿಹಾರ ಬೇಕು!

    ##MangaloreNews #Mangalore #DakshinaKannada #KarnatakaNews #JailJammer #MangaloreLawyers #CabinetMeeting

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು ಹಂಪನಕಟ್ಟೆಯಲ್ಲಿ ಶೂ ಅಂಗಡಿಗೆ ಬೆಂಕಿ; ಅಪಾರ ನಷ್ಟ, ಅವಘಡದಿಂದ ಎಚ್ಚೆತ್ತ ವ್ಯಾಪಾರಿಗಳು…!
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    ಕರ್ನಾಟಕ ಪ್ರವಾಸೋದ್ಯಮದ ರಾಯಭಾರಿಯಾಗಿ ರಿಷಬ್ ಶೆಟ್ಟಿ…
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    52 ಲಕ್ಷ ಪ್ರಯಾಣಿಕರು, 800 ಕಾರುಗಳಿಗೆ ಪಾರ್ಕಿಂಗ್ – ಬದಲಾಗಲಿದೆ ಮಂಗಳೂರು ಏರ್‌ಪೋರ್ಟ್!
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    ಖಾದರ್‌ ಖಡಕ್ ವಾರ್ನಿಂಗ್ ವೈರಲ್ : ಆದರೆ ಖಡಕ್ ಆಕ್ಷನ್ ಯಾವಾಗ?”ಪ್ರತಿ ಮಳೆಯಲ್ಲೂ ಅದೇ ಕಥೆ: ರಸ್ತೆ ಗುಂಡಿ, ಅಪಘಾತ, ಎಚ್ಚರಿಕೆ, ಜವಾಬ್ದಾರಿ ಹೊತ್ತವರ ಜಾಣ ಮರೆವು!
     ಮಗಳ ಗಂಡನೇ …ಅತ್ತೆಯ ಗಂಡ! ಹೌದು…ಅಳಿಯ-ಅತ್ತೆಯ ಪ್ರೇಮಕಥೆ ವೈರಲ್!ಕುಟುಂಬ ಸಂಬಂಧಗಳೇ ತಲೆಕೆಳಗು! ಉತ್ತರ ಪ್ರದೇಶದ ಈ ಮದುವೆ ಹಿಂದಿನ ರಹಸ್ಯ ಏನು?
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಸ್ಟೇಟ್ ಬ್ಯಾಂಕ್ ಮೀನು ಮಾರುಕಟ್ಟೆಗೆ ಭೇಟಿ ನೀಡಿದ ಡಾ. ನಾಗಲಕ್ಷ್ಮಿ ಚೌಧರಿ – ಮಹಿಳಾ ಮೀನುಗಾರರ ಸಮಸ್ಯೆ ಆಲಿಕೆ
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    3-ಭಾಷಾ ನೀತಿಗೆ ಬ್ರೇಕ್? CBSEಗೆ ಸುಪ್ರೀಂ ಕೋರ್ಟ್‌ ಮಹತ್ವದ ಸೂಚನೆ
    ಬೈಕಂಪಾಡಿಯಲ್ಲಿ ನಡುರಾತ್ರಿ ನಡೆದ ಸಿನೆಮಾ ಸ್ಟೈಲ್ ದರೋಡೆ: ಕೇರಳ ಉದ್ಯಮಿ ಕುಟುಂಬಕ್ಕೆ ಗನ್ ಪಾಯಿಂಟ್ ಶಾಕ್!
    ಬೆಳ್ಮಣ್ಣಿನಲ್ಲಿ ಗುಂಡಿನ ಸದ್ದು… ಮಾಜಿ ಸಚಿವರ ಶಿಷ್ಯನ ಭೀಕರ ಹತ್ಯೆ
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ಕರುನಾಡ ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣದ ಬಾಗಿಲು ಓಪನ್! 18 ದೇಶಗಳ 80 ವಿವಿಗಳಿಂದ ಭರ್ಜರಿ ಆಫರ್
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
    ‘ಹೊಸ Form 6’ಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿಲ್ಲ! CJI ಸ್ಪಷ್ಟನೆ
    ಪುತ್ತೂರಿನ ಕೃಷ್ಣ ಜೆ. ರಾವ್ ಪ್ರಕರಣಕ್ಕೆ ಹೈಕೋರ್ಟ್ ಬ್ರೇಕ್!“ಮಧ್ಯಂತರ ತೀರ್ಪು: ₹75K ತಿಂಗಳ ಸಹಾಯ ಷರತ್ತು”
    ವೃಷಣಗಳಿಗೆ ₹6 ಕೋಟಿ? ನಾ ರೀಲ್ ನಂಬಿ  16ರ ಬಾಲಕ ಹತ್ಯೆ!ಇದು ₹6 ಕೋಟಿ ಆಸೆಗೆ ನಡೆದ ಭೀಕರ ಕೃತ್ಯ…!
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    ರಾಕಿಂಗ್ ಸ್ಟಾರ್ ಯಶ್ ‘ಟಾಕ್ಸಿಕ್’ ಸಿನಿಮಾ ಅಪ್ಡೇಟ್: ಸೋಶಿಯಲ್ ಮೀಡಿಯಾದಲ್ಲಿ ಧೂಳೆಬ್ಬಿಸ್ತಿರೋ ಯಶ್ ಡೈಲಾಗ್!
    ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
    ಮೊದಲ ದಿನವೇ ಯು.ಟಿ. ಖಾದರ್ ಖಡಕ್ ನಡೆ …PF ಕೊಡದ ಗುತ್ತಿಗೆದಾರನಿಗೆ ನೋಟಿಸ್, ಅಧಿಕಾರಿಗಳಿಗೆ ತರಾಟೆ
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    ಗ್ಯಾಂಬ್ಲರ್ ಹಿಡಿತದಲ್ಲಿ ಉಡುಪಿ, ಬಚಾವ್ ಮಾಡಿ..
    ಬೆಳಕು-ನೆರಳಿನ ಕಾವ್ಯ: ಕಾಲವನ್ನೇ ಕಟ್ಟಿಹಾಕುವ ಛಾಯಾಚಿತ್ರಗಳ ವೈಭವ
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!