📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಅಪ್ಪನ ಶವದ ಪಕ್ಕದಲ್ಲೇ ರಕ್ತದ ಮಡುವಿನಲ್ಲಿ ಮಗು…!ಧಾರವಾಡದಲ್ಲಿ ಬೆಚ್ಚಿಬೀಳಿಸಿದ ವೈದ್ಯ ಕುಟುಂಬ ದುರಂತ..!ಪತ್ನಿ ಪೊಲೀಸ್ ವಶದಲ್ಲಿ, ತನಿಖೆ ತೀವ್ರ .

    ಧಾರವಾಡದಲ್ಲಿ ನಡೆದ ಹೃದಯವಿದ್ರಾವಕ ಘಟನೆಯೊಂದು ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ಖಾಸಗಿ ಆಸ್ಪತ್ರೆಯಲ್ಲಿ ಅರಿವಳಿಕೆ ತಜ್ಞ (ಅನಸ್ಥೆಷಿಯಾಲಜಿಸ್ಟ್) ಆಗಿ ಕಾರ್ಯನಿರ್ವಹಿಸುತ್ತಿದ್ದ ಡಾ. ಕಿರಣ್ ಹೊನ್ನಣ್ಣವರ (45) ಅವರು ತಮ್ಮ ಅಪಾರ್ಟ್‌ಮೆಂಟ್‌ನಲ್ಲೇ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಅವರ 8 ವರ್ಷದ ಪುತ್ರನಿಗೆ ಚಾಕುವಿನಿಂದ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರಂಭಿಕ ತನಿಖೆಯ ಭಾಗವಾಗಿ ವೈದ್ಯೆಯಾಗಿರುವ ಅವರ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.

    ಪ್ರಾಥಮಿಕ ಮಾಹಿತಿಯ ಪ್ರಕಾರ, ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿ ಡಾ. ಕಿರಣ್, ಅವರ ಪತ್ನಿ ಮತ್ತು ಪುತ್ರ ಮಾತ್ರ ಇದ್ದರುಎಂದು ಪೊಲೀಸರು ತಿಳಿಸಿದ್ದಾರೆ. ಘಟನೆ ನಡೆದಿರುವ ಅಪಾರ್ಟ್‌ಮೆಂಟ್ ಉನ್ನತ ಭದ್ರತೆಯ ವಸತಿ ಸಮುಚ್ಚಯವಾಗಿರುವುದರಿಂದ ಹೊರಗಿನ ವ್ಯಕ್ತಿಯ ಪ್ರವೇಶವಾಗಿರುವ ಸುಳಿವು ಇದುವರೆಗೆ ಸಿಕ್ಕಿಲ್ಲ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

    Also Read  ಮಾರ್ಕ್ಸ್ 90%, ಆದರೆ 19ಕ್ಕೆ ಕ್ರೂರ ಅಪರಾಧಿ!ಕನಸುಗಳಿದ್ದ ಹುಡುಗನೊಬ್ಬ ಕಟುಕನಾದ ದುರಂತ ಕಥೆ”

    ಕುಟುಂಬದವರು ಹಲವು ಗಂಟೆಗಳ ಕಾಲ ಡಾ. ಕಿರಣ್ ಅವರನ್ನು ಸಂಪರ್ಕಿಸಲು ಪ್ರಯತ್ನಿಸಿದರೂ ಸಾಧ್ಯವಾಗದ ಹಿನ್ನೆಲೆಯಲ್ಲಿ ಮನೆಗೆ ತೆರಳಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆಯಲ್ಲಿ ಡಾ. ಕಿರಣ್ ರಕ್ತದ ಮಡುವಿನಲ್ಲಿ ಪತ್ತೆಯಾಗಿದ್ದು, ಪುತ್ರ ಗಾಯಗೊಂಡ ಸ್ಥಿತಿಯಲ್ಲಿ ಕಂಡುಬಂದಿದ್ದಾನೆ. ತಕ್ಷಣವೇ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು, ಘಟನಾ ಸ್ಥಳಕ್ಕೆ ಧಾವಿಸಿದ ಹುಬ್ಬಳ್ಳಿ-ಧಾರವಾಡ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಅವರು, ರಕ್ತದ ಮಡುವಿನಲ್ಲಿ ಇನ್ನೂ ಉಸಿರಾಡುತ್ತಿದ್ದ ಬಾಲಕನನ್ನು ಕಂಡ ತಕ್ಷಣ ಸಮಯ ವ್ಯರ್ಥ ಮಾಡದೆ ಸ್ವತಃ ತೋಳಿನಲ್ಲಿ ಎತ್ತಿಕೊಂಡು, ಆದಷ್ಟು ಬೇಗ ಆಸ್ಪತ್ರೆಗೆ ಸಾಗಿಸುವಂತೆ ಸೂಚಿಸಿದರು. ಪೊಲೀಸ್ ತಂಡ ಕೂಡಲೇ ಬಾಲಕನನ್ನು ತುರ್ತು ಆಸ್ಪತ್ರೆಗೆ ದಾಖಲಿಸುವಲ್ಲಿ ಪ್ರಮುಖ ಪಾತ್ರವಹಿಸಿತು. 

    ಸಂಕಷ್ಟದ ಕ್ಷಣದಲ್ಲಿ ಅಧಿಕಾರಿಯಾಗಿ ಮಾತ್ರವಲ್ಲ, ಮಾನವೀಯತೆಯಿಂದ ಸ್ಪಂದಿಸಿದ ಈ ನಡೆ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ. “ಜೀವ ಉಳಿಸುವುದೇ ಮೊದಲ ಆದ್ಯತೆ” ಎಂಬ ಅವರ ಧೋರಣೆ ಅನೇಕರು ಪ್ರಶಂಸಿಸಿದ್ದಾರೆ.

    Also Read  🚢 “ಹಾರ್ಮುಝ್‌ನಿಂದ ಮಂಗಳೂರುವರೆಗೆ – 46,000 MT ಎಲ್‌ಪಿಜಿ ಯಮಹಾಯಾತ್ರೆ!

    ಪೊಲೀಸರು ಪತ್ನಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಕೆಲವು ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿರುವ ಹಿನ್ನೆಲೆಯಲ್ಲಿ ಸಿಸಿಟಿವಿ ದೃಶ್ಯಗಳು, ಕರೆ ವಿವರಗಳು, ವಿಧಿವಿಜ್ಞಾನ (ಫೊರೆನ್ಸಿಕ್) ಸಾಕ್ಷ್ಯಗಳು ಹಾಗೂ ಮರಣೋತ್ತರ ಪರೀಕ್ಷೆಯ ವರದಿಯನ್ನು ಪರಿಶೀಲಿಸಲಾಗುತ್ತಿದೆ. ಈ ಹಂತದಲ್ಲಿ ಪೊಲೀಸರು ತನಿಖೆ ಮುಂದುವರಿಸುತ್ತಿದ್ದು, ಈ ಘಟನೆ ವೈದ್ಯಕೀಯ ವಲಯ ಮತ್ತು ಸಾರ್ವಜನಿಕರಲ್ಲಿ ತೀವ್ರ ಆಘಾತ ಉಂಟುಮಾಡಿದೆ. ಕುಟುಂಬದೊಳಗಿನ ಕಲಹ, ಮಾನಸಿಕ ಒತ್ತಡ ಅಥವಾ ಇತರೆ ಕಾರಣಗಳಿವೆಯೇ ಎಂಬ ಎಲ್ಲ ಆಯಾಮಗಳಿಂದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.ದುರ್ಘಟನೆಗೆ ನಿಖರ ಕಾರಣ ಅಥವಾ ಆರೋಪಿಯ ಬಗ್ಗೆ ಹೆಚ್ಚಿನ ಮಾಹಿತಿ ಇನ್ನಷ್ಟೇ ಗೊತ್ತಾಗಬೇಕಿದೆ . 

    ##Dharwad #DoctorMurderCase #KarnatakaNews #CrimeNews #PoliceInvestigation

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
    MLC ಐವನ್ ಡಿಸೋಜಾರಿಂದ ಕಾಮಗಾರಿ ಸ್ಥಳ ಪರಿಶೀಲನೆ
    ಮದುವೆ -ಜೀವನ ಬೇಸರವಾಯ್ತು ಆಸಕ್ತಿ ಇಲ್ಲ ಅಂದ್ರೆ ವಿಚ್ಛೇದನ ಸಿಗುತ್ತಾ ..! ಮಗಳು18 ದಾಟಿದರೂ ಶಿಕ್ಷಣದ ಹೊಣೆ ಯಾರಿಗೆ?
    50 ಸಾವಿರ ಸಾಲಕ್ಕೆ ಸವಣೂರು ಪೇಟೆಯಲ್ಲಿ ರಕ್ತಸಿಕ್ತ ಘರ್ಷಣೆ ..
    ರಾಜಕೀಯದಲ್ಲಿ ಅನುಭವ ಎಷ್ಟು ಮುಖ್ಯ?…  ತಮಿಳುನಾಡು ರಾಜಕಾರಣ ತೋರಿಸುತ್ತಿದೆ ನೋಡಿ
    ದಸರಾ ರಜೆಯಲ್ಲೂ ಶಾಲೆ! ಮಳೆ ರಜೆ ಹೊಂದಾಣಿಕೆಗೆ ವಿಶೇಷ ತರಗತಿ
    AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
    ಜಸ್ಟ್ one click ನಲ್ಲೇ ಎಲ್ಲಾ ಸರ್ಟಿಫಿಕೇಟ್…!2026–27ರಿಂದ ಅಂಕಪಟ್ಟಿ ಹಾರ್ಡ್ ಕಾಪಿ ಇಲ್ಲ..
    ಸತೀಶ್’ ಆಗಿ ಹೋದವ, ‘ಸಲೀಂ’ ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ
    ಯುದ್ಧ ನಿಂತಿತು,ಕಚ್ಚಾ ತೈಲ 78 ಡಾಲರ್‌ಗೆ ಕುಸಿತ!LPG, ಪೆಟ್ರೋಲ್, ಡೀಸೆಲ್ ದರ  ಇಳಿಯುತ್ತದೆಯೇ? 
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಗೃಹ ಸಚಿವರಾದ ಜಿ ಪರಮೇಶ್ವರ್ ರವರ ಒಡೆತನದ ಸಂಸ್ಥೆಯಲ್ಲಿ ನಡೆದಿದೆ ಎಂಬ ವಿಡಿಯೋ ವೈರಲ್….!
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    “ವಕೀಲರೇ ಎಚ್ಚರ! ಕೋರ್ಟ್‌ನಲ್ಲಿ ನಕಲಿ AI ರೆಫರೆನ್ಸ್ ನೀಡಿದರೆ ಕಠಿಣ ಶಿಸ್ತು ಕ್ರಮ: BCIಗೆ ಸುಪ್ರೀಂ ಕೋರ್ಟ್ ಮಹತ್ವದ ನಿರ್ದೇಶನ”
    ಜಾಗತಿಕ ಸಂಘರ್ಷದ ಮಧ್ಯೆ ಭಾರತ–ಯುಎಇ ಬಿಗ್ ಡೀಲ್! ತಂತ್ರಜ್ಞಾನ, ಇಂಧನ ಮತ್ತು ಭದ್ರತೆಯಲ್ಲಿ ಐತಿಹಾಸಿಕ ಒಗ್ಗಟ್ಟು.
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    “ತಲೈವಾ”ಗೂ ಭಯವಾ? ಹೂವಿನ ಚೆಂಡು ಕಂಡು ವಿಜಯ್ ರನ್! ಒಂದು ಕ್ಷಣದ ಥ್ರಿಲ್ಲರ್!
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    ಫ್ಲೈದುಬೈ ವಿಮಾನ ಘಟನೆ ಪ್ರಾರ್ಥನೆ ನೆಪದಲ್ಲಿ ಹಮ್ಮಾಮಿ ದಾಳಿ; ಅಲ್‌ಖೈದಾ ಬೆಂಬಲ-ನಂಟು ಬಹಿರಂಗ ! ಇತ್ತ ಸ್ಮಿತ್ ಮಚ್ಚಾರ್‌ಗೆ ಇಸ್ರೇಲ್ ವಿಶೇಷಗೌರವ ಮೋದಿ ಜೊತೆಗೆ ಆಹ್ವಾನ…!!
    ಕುಂದಾಪುರದಲ್ಲಿ ಶಾಕಿಂಗ್ ಘಟನೆ..ಪತ್ನಿಗೆ ವಿಷ ನೀಡಿ ಬಳಿಕ ಪ್ರೇಮಿಯೊಂದಿಗೆ ಆತ್ಮಹತ್ಯೆ..!
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..
    ರಾಪಿಡೊ ಚಾಲಕನ ಖಾತೆಯಲ್ಲಿ 300 ಕೋಟಿ ರೂ. ವಹಿವಾಟು! ಶಾಕ್ ಅದ ED
    ಫಾರ್ಮ್-7 ವಿವಾದ ಸ್ಫೋಟ: 52 ಮಂದಿಯ ವಿರುದ್ಧ FIR-ಮತದಾರರ ಹೆಸರು ಅಳಿಸುವ ಆರೋಪಕ್ಕೆ ತನಿಖೆ ಆಗ್ರಹ
    ‘ಸೈಯಾರಾ’ ಶೀರ್ಷಿಕೆ ಗೀತೆಗೆ ಸಿಕ್ಕ ರಾಯಲ್ಟಿ ನಿರಾಶಾದಾಯಕ: ಸಂಗೀತ ಸಂಯೋಜಕ ತನಿಷ್ಕ್ ಬಾಗ್ಚಿ ಬೇಸರ
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
     ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!
    ಬೆಂಗಳೂರು ಮಾತ್ರವಲ್ಲ… ಮಂಗಳೂರಿನಿಂದಲೂ Startup ಹಾರಾಟ! ₹9.5 ಕೋಟಿಗೂ ಅಧಿಕ ಹೂಡಿಕೆಯ K-Combinatorಗೆ ಚಾಲನೆ
    ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ಪ್ರತೀಕಾರದ ದಾಳಿಗೆ ‘ ರೌಡಿಶೀಟರ್ ಟ್ಯಾಬ್ಲೆಟ್’ ಆರೀಫ್ ಖತಂ .!