📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕರ್ನಾಟಕದಲ್ಲಿ ನೀರು–ವಿದ್ಯುತ್ ಬಿಕ್ಕಟ್ಟಿನ ಎಚ್ಚರಿಕೆ!

    ಮಳೆ ಕೈಕೊಟ್ಟಿದೆ… ಜಲಮಟ್ಟ ಕುಸಿದಿದೆ… ಮುಂದಿನ ದಿನಗಳು ಸವಾಲಿನದ್ದಾಗಬಹುದು!

    ನೀರೇ ಜೀವ, ನೀರೇ ನಿಜವಾದ ಸಂಪತ್ತು.

    ಹಣಕ್ಕಾಗಿ ಉಳಿತಾಯ ಮಾಡುತ್ತೇವೆ… ಚಿನ್ನಕ್ಕಾಗಿ ಹೂಡಿಕೆ ಮಾಡುತ್ತೇವೆ… ಜಮೀನು, ಮನೆ, ಆಸ್ತಿ ಎಂದು ಭವಿಷ್ಯ ಕಟ್ಟಿಕೊಳ್ಳುತ್ತೇವೆ. ಆದರೆ ನಮ್ಮ ಭವಿಷ್ಯವನ್ನೇ ಉಳಿಸುವ ನೀರಿನ ಬಗ್ಗೆ? ಒಂದು ಕ್ಷಣ ಯೋಚಿಸಬೇಕಾದ ಸಮಯ ಇದು. ಹಣ ಮುಗಿದರೆ ಮತ್ತೆ ಗಳಿಸಬಹುದು, ಚಿನ್ನ ಕಳೆದುಕೊಂಡರೆ ಮತ್ತೆ ಖರೀದಿಸಬಹುದು, ಆಸ್ತಿ ಹೋದರೆ ಮತ್ತೆ ಕಟ್ಟಬಹುದು. ಆದರೆ ನೀರಿನ ಹನಿ ಒಣಗಿದ ಮೇಲೆ ಅದನ್ನು ಹಣ ಕೊಟ್ಟು ಸೃಷ್ಟಿಸಲು ಸಾಧ್ಯವಿಲ್ಲ. ನೀರಿಲ್ಲದೆ ಬದುಕಿಲ್ಲ… ಕೃಷಿಯಿಲ್ಲ, ಆಹಾರವಿಲ್ಲ, ಜೀವನವೇ ಇಲ್ಲ. ಹಾಗಾಗಿ ನೀರನ್ನು ಕೇವಲ ಬಳಸುವುದಲ್ಲ, ಸಂಪತ್ತಿನಂತೆ ಕಾಪಾಡುವ ಸಮಯ ಈಗ ಬಂದಿದೆ. ಇಂದು ನಾವು ಉಳಿಸುವ ಪ್ರತಿಯೊಂದು ಹನಿಯೂ ನಾಳೆಯ ಬದುಕಿಗೆ ನಾವು ಮಾಡುವ ದೊಡ್ಡ ಹೂಡಿಕೆ. ಹಣ ಉಳಿಸಿ… ಆಸ್ತಿ ಉಳಿಸಿ… ಆದರೆ ಎಲ್ಲಕ್ಕಿಂತ ಮೊದಲು ನೀರು ಉಳಿಸಿ.

    Also Read  ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ - ದಯಾಮರಣvedio

    ಕರ್ನಾಟಕದಲ್ಲಿ ಮಳೆಯ ಕೊರತೆಯಿಂದ ಬರ ಪರಿಸ್ಥಿತಿ ಮತ್ತಷ್ಟು ಗಂಭೀರವಾಗುತ್ತಿದ್ದು, ಮುಂದಿನ ದಿನಗಳಲ್ಲಿ ಕುಡಿಯುವ ನೀರು ಹಾಗೂ ವಿದ್ಯುತ್ ಕೊರತೆ ಎದುರಾಗುವ ಸಾಧ್ಯತೆ ಇದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಎಚ್ಚರಿಸಿದ್ದಾರೆ. ಜನರು ಪರಿಸ್ಥಿತಿಯನ್ನು ಗಂಭೀರವಾಗಿ ಪರಿಗಣಿಸಿ ಮುನ್ನೆಚ್ಚರಿಕೆ ವಹಿಸುವಂತೆ ಅವರು ಸೂಚಿಸಿದ್ದಾರೆ.

    ರಾಜ್ಯದ 239 ತಾಲೂಕುಗಳ ಪೈಕಿ 200ಕ್ಕೂ ಹೆಚ್ಚು ತಾಲೂಕುಗಳು ಬರದ ಪರಿಣಾಮ ಎದುರಿಸುತ್ತಿವೆ ಎಂದು ಶಿವಕುಮಾರ್ ಹೇಳಿದ್ದಾರೆ. ಈಗಾಗಲೇ ಮೊದಲ ಹಂತದಲ್ಲಿ 101 ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದ್ದು, ಕೇಂದ್ರದ ಮಾರ್ಗಸೂಚಿಗಳ ಆಧಾರದಲ್ಲಿ ಇನ್ನಷ್ಟು ತಾಲೂಕುಗಳನ್ನು ಪಟ್ಟಿಗೆ ಸೇರಿಸುವ ಪ್ರಕ್ರಿಯೆ ನಡೆಯುತ್ತಿದೆ.

    ಮಳೆ ಕೊರತೆಯ ಪರಿಣಾಮ ಅಂತರ್ಜಲ ಮಟ್ಟ ತೀವ್ರವಾಗಿ ಕುಸಿದಿದ್ದು, ಹಲವು ಪ್ರದೇಶಗಳಲ್ಲಿ ಬೆಳೆ ನಷ್ಟವಾಗಿದೆ. ಜೂನ್‌ನಿಂದಲೇ ರಾಜ್ಯದಲ್ಲಿ ಸಾಮಾನ್ಯಕ್ಕಿಂತ ಕಡಿಮೆ ಮಳೆಯಾಗಿದ್ದು, ಸೆಪ್ಟೆಂಬರ್‌ನಲ್ಲೂ ಮಳೆ ಕೊರತೆ ಮುಂದುವರಿದಿದೆ. ಸೆಪ್ಟೆಂಬರ್‌ನಲ್ಲಿ ಇದುವರೆಗೆ ಸಾಮಾನ್ಯ 51 ಮಿ.ಮೀ. ಬದಲು ಕೇವಲ 10 ಮಿ.ಮೀ. ಮಳೆಯಾಗಿದ್ದು, ಸುಮಾರು 81% ಕೊರತೆ ದಾಖಲಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಅಂಕಿ-ಅಂಶಗಳನ್ನು ಉಲ್ಲೇಖಿಸಿ ವರದಿಯಾಗಿದೆ.

    Also Read  ಸುಳ್ಳು ಸ್ಟೇಟ್ಮೆಂಟ್ ನೀಡಿದ ಎಚ್ ಪಿ ಸಿ ಎಲ್

    ಇದರ ಪರಿಣಾಮ ವಿದ್ಯುತ್ ಕ್ಷೇತ್ರದ ಮೇಲೂ ಒತ್ತಡ ಹೆಚ್ಚಾಗಿದೆ. ಕಳೆದ ವಾರ ರಾಜ್ಯದ ಗರಿಷ್ಠ ವಿದ್ಯುತ್ ಬೇಡಿಕೆ 19,000 ಮೆಗಾವ್ಯಾಟ್‌ಗೂ ಮೀರಿದ್ದು, ಸಂಜೆ ಪೀಕ್ ಅವಧಿಯಲ್ಲಿ ಹೆಚ್ಚುವರಿ ವಿದ್ಯುತ್ ಖರೀದಿಸುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಿವಕುಮಾರ್ ತಿಳಿಸಿದ್ದಾರೆ. ಜಲಾಶಯಗಳ ನೀರಿನ ಮಟ್ಟ ಕುಸಿದಿರುವುದು ಜಲವಿದ್ಯುತ್ ಉತ್ಪಾದನೆಯ ಮೇಲೂ ಪರಿಣಾಮ ಬೀರುವ ಆತಂಕವಿದೆ.

    ಪರಿಸ್ಥಿತಿ ಎದುರಿಸಲು ಹೆಚ್ಚುವರಿ ಉಷ್ಣ ವಿದ್ಯುತ್ ಉತ್ಪಾದನೆ ಹಾಗೂ ‘ಒನ್ ನೇಷನ್, ಒನ್ ಗ್ರಿಡ್’ ಮೂಲಕ ಇತರೆ ರಾಜ್ಯಗಳಿಂದ ವಿದ್ಯುತ್ ಪಡೆಯುವ ಸಾಧ್ಯತೆಗಳನ್ನೂ ಸರ್ಕಾರ ಪರಿಶೀಲಿಸುತ್ತಿದೆ ಎಂದು ಶಿವಕುಮಾರ್ ಹೇಳಿದ್ದಾರೆ. ಕುಡಿಯುವ ನೀರಿನ ಪೂರೈಕೆಗೆ ಅಗತ್ಯ ವ್ಯವಸ್ಥೆ ಮಾಡಲಾಗುತ್ತಿದೆ ಎಂದೂ ತಿಳಿಸಿದ್ದಾರೆ.

    ಬರ ಪರಿಸ್ಥಿತಿ ಮತ್ತು ರೈತರ ಸಮಸ್ಯೆಗಳ ಕುರಿತು ಚರ್ಚಿಸಲು ಸೆಪ್ಟೆಂಬರ್ 21ರಿಂದ 23ರವರೆಗೆ ವಿಶೇಷ ವಿಧಾನಮಂಡಲ ಅಧಿವೇಶನನಡೆಯಲಿದೆ. ಇದೇ ವೇಳೆ ಸೆಪ್ಟೆಂಬರ್ 18ರಂದು ದಕ್ಷಿಣ ಕನ್ನಡದಲ್ಲಿ ಸಚಿವ ಸಂಪುಟ ಸಭೆ ನಡೆಯಲಿದ್ದು, ಕರಾವಳಿ ಭಾಗದ ಸಮಸ್ಯೆಗಳ ಕುರಿತೂ ಚರ್ಚೆ ನಡೆಯುವ ನಿರೀಕ್ಷೆಯಿದೆ.

    Also Read  🎬 ಜೈಲರ್ 2 ಸೆಟ್‌ನಲ್ಲಿ ವಿದ್ಯುತ್ ಅವಘಡ…28 ವರ್ಷದ ಕಾರ್ತಿಕೇಯನ್ ವಿದ್ಯುತ್ ಶಾಕ್‌ಗೆ ಬಲಿ..

    ಜನರಿಗೆ ಮುಖ್ಯ ಸಂದೇಶ

    ಇಂದಿನಿಂದಲೇ ಎಚ್ಚರ ವಹಿಸಿ… ನೀರು, ವಿದ್ಯುತ್ ವ್ಯರ್ಥ ಮಾಡದಿರಿ!

    ನೀರು ಮತ್ತು ವಿದ್ಯುತ್ ಕೊರತೆಯ ಸಾಧ್ಯತೆ ಹಿನ್ನೆಲೆಯಲ್ಲಿ ಈಗಿನಿಂದಲೇ ನೀರನ್ನು ಮಿತವಾಗಿ ಬಳಸುವುದು, ಸೋರಿಕೆ ತಡೆಯುವುದು ಮತ್ತು ಅಗತ್ಯವಿಲ್ಲದ ವಿದ್ಯುತ್ ಬಳಕೆ ತಪ್ಪಿಸುವುದು ಸಾರ್ವಜನಿಕರಿಗೂ ಮುಖ್ಯವಾಗಿದೆ.

    ಇಂದು ನೀರು ಉಳಿಸಿದರೆ ನಾಳೆಯ ಸಂಕಷ್ಟವನ್ನು ಕಡಿಮೆ ಮಾಡಬಹುದು.
    ವಿದ್ಯುತ್ ಉಳಿಸಿ… ನೀರು ಉಳಿಸಿ… ಸಂಕಷ್ಟಕ್ಕೆ ಮುನ್ನವೇ ಎಚ್ಚರವಾಗೋಣ!

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಕುಂಡೆ(ತಿಕ)ಯಲ್ಲಿ ಲಕ್ಷ್ಮಿ ಇರುತ್ತಾಳೆ” ಎಂಬ ಹೇಳಿಕೆ ವೈರಲ್! ಆರ್ಯವರ್ಧನ್ ಗುರೂಜಿ ವಿರುದ್ಧ ದೂರು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ
    ಹೊಟ್ಟೆಪಾಡಿಗಾಗಿ ಬಂದ ಕಾರ್ಮಿಕನ ಜೀವ ರೋಡ್ ರೋಲರ್ ಹರಿದು ರಸ್ತೆಯಲ್ಲೇ ಅಂತ್ಯ…
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ನಡುವೆ ಮಹಿಳಾ ಮಿಸಲಿಗೆ ಸೋಲು….
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ಸಿಜೆಪಿಯ ಪ್ರತಿಭಟನೆ ಬಗ್ಗೆ ತನಿಖೆ ನಡೆಸಲು ಸಲ್ಲಿಸಲಾದ ಅರ್ಜಿಯನ್ನು ಅಂಗೀಕರಿಸಿದ ನ್ಯಾಯಾಲಯ
    90 ನಿಮಿಷದ ರೋಚಕ ರಕ್ಷಣಾ ಕಾರ್ಯಾಚರಣೆ – 6 ಮೀನುಗಾರರ ಜೀವ ಉಳಿಸಿದ ಇಂಡಿಯನ್ ಕೋಸ್ಟ್ ಗಾರ್ಡ್ ಸಾಹಸ!ಪ್ರಕ್ಷುಬ್ಧ ಸಮುದ್ರಕ್ಕೂ ಸವಾಲು
    ಚುನಾವಣೆ ಗೆಲ್ಲುವುದು ಸಾಕಿನ್ನು, ರಾಷ್ಟ್ರದ ಸಣ್ಣ ಮತ್ತು ಮಧ್ಯಮ ವ್ಯವಹಾರ ಸ್ಥರ ಹಿತ ಕಾಪಾಡಿ
    ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    ಗಾಯಕನಿಗಿಂತ ದೊಡ್ಡದಾಗಿ ಕಾಣಿಸಿಕೊಂಡ ನೋಟುಗಳ ರಾಶಿ!ನೋಟುಗಳ ಮಧ್ಯೆಯೂ ನಿಲ್ಲದ ಗೋಪಾಲ್ ಸಾಧು ಗಾನಾಸುಧೆ !
    ಅಯೋಧ್ಯೆ ರಾಮ ಮಂದಿರ ಸ್ಫೋಟಿಸಲು ಹರಿಹರದಲ್ಲಿ ಪ್ಲಾನ್! ಬಂಧಿತ ಸುಹೇಲ್ ಬೆನ್ನತ್ತಿದ ಇಂಟೆಲಿಜೆನ್ಸ್; 10 ಜನರ ಟೀಮ್‌ಗಾಗಿ ತೀವ್ರ ಶೋಧ!
    2028ರ ಬಳಿಕವೂ ಡಿಕೆಶಿ ಕುರ್ಚಿ ಫಿಕ್ಸ್? ಶ್ರೀಗಳ ಭವಿಷ್ಯವಾಣಿ ವೈರಲ್!8–10 ವರ್ಷ ಸಿಎಂ ಪಟ್ಟ? 
    ಚುನಾವಣೆಯವರೆಗೆ ಮೌನ, ನಂತರ LPG ದರ ಭಾರಿ ಏರಿಕೆ –ಇದು ರಾಜಕೀಯ ಅಜೆಂಡಾನಾ?
    ಮಂಗಳೂರು :ಅಕ್ರಮ ಪಟಾಕಿ ದಾಸ್ತಾನು ಆರೋಪ!
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ಅಂಗಳ, ಶೆಡ್, ಗೋದಾಮು ಮಾತ್ರವಲ್ಲ… ಡೈನಿಂಗ್ ಹಾಲ್‌ಗೂ ಬಂದ 8 ಅಡಿ ಕಾಳಿಂಗ!
    ಕಳುವಾದ ವಾಹನ ಸಮೇತ ಕಳ್ಳರ ಬಂಧನ…!
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    ಶೋಕಿ ಜೀವನಕ್ಕೆ ಬೈಕ್ ಕಳವು! ಮೂವರು ಅಪ್ರಾಪ್ತರು ಸೇರಿ 7 ಮಂದಿ ಸೆರೆ
    “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    ಜಪ್ಪಿನಮೊಗರಿನಲ್ಲಿ  ಖಾಸಗಿ ಬಸ್, ಹಿಟ್ ಅಂಡ್ ರನ್ : ತಮಿಳುನಾಡು ಮೂಲದ ಅಪರಿಚಿತ ವ್ಯಕ್ತಿ ಸಾವು!
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ಅಸ್ಸಾಂನಲ್ಲಿ ಮತದಾನದ ಹಿನ್ನೆಲೆ ಹಿಂಸಾಚಾರ: 30ಕ್ಕೂ ಹೆಚ್ಚು ಮಂದಿ ಗಾಯ, 7 ಜನರ ಬಂಧನ
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ‘ಗಾರ್ಡನ್ ಸಿಟಿ’ ಈಗ ‘ಹಾಟ್ ಸಿಟಿ’!ದಾಖಲೆ ಮಟ್ಟಕ್ಕೆ ಏರಿದ ಬಿಸಿ…
    ಮಗನಿಗೆ IAS ಬೇಡವೇ ಬೇಡ ಎಂದ ಮುಂಡೆ ಮಾತು ಸಂಚಲನ!ವ್ಯವಸ್ಥೆಯ ವಿರುದ್ಧ ಆಕ್ರೋಶ!…..!
    ಯಕ್ಷಗಾನದಲ್ಲಿ ಶಿಳ್ಳೆ ಹಾಕ್ಲಿಕ್ಕೆ ಪರ್ಮಿಶನ್ ಬೇಕಾ..…!?