📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ನೈಸ್ ಟೋಲ್ ವಿವಾದ: ಕುಮಾರಸ್ವಾಮಿ ಹೇಳಿಕೆಗೆ ಅಶೋಕ್ ಖೇಣಿ ತಿರುಗೇಟು.. ಇವರಿಬ್ಬರಲ್ಲಿ ಸತ್ಯವಂತರು ಯಾರು?

    ಬೆಂಗಳೂರು: ಬೆಂಗಳೂರು-ಮೈಸೂರು ಇನ್‌ಫ್ರಾಸ್ಟ್ರಕ್ಚರ್ ಕಾರಿಡಾರ್ (ನೈಸ್) ರಸ್ತೆಯ ಟೋಲ್ ಸಂಗ್ರಹದ ವಿಚಾರ ಇದೀಗ ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ಭಾರಿ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸಚಿವ ಹಾಗೂ ಜೆಡಿಎಸ್ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು, “ನೈಸ್ ರಸ್ತೆಯಲ್ಲಿ ಯಾರೂ ಟೋಲ್ ಕಟ್ಟಬೇಡಿ, ಉಚಿತವಾಗಿ ಸಂಚರಿಸಿ. ಕೋರ್ಟ್ ಆದೇಶವಿದೆ” ಎಂದು ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ.

    ಕುಮಾರಸ್ವಾಮಿ ಅವರ ಹೇಳಿಕೆಯಿಂದ ಟೋಲ್ ಪಾವತಿಸುವ ವಿಚಾರದಲ್ಲಿ ವಾಹನ ಸವಾರರಲ್ಲಿ ಗೊಂದಲ ಉಂಟಾಗಿರುವ ಹಿನ್ನೆಲೆಯಲ್ಲಿ, ಮಾಧ್ಯಮದವರು ನೈಸ್ ಯೋಜನೆಯ ರೂವಾರಿ ಅಶೋಕ್ ಖೇಣಿ ಅವರನ್ನು ಪ್ರಶ್ನಿಸಿದರು.

    ಈ ವೇಳೆ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಖೇಣಿ, “ಫಾಲೋ ಮಾಡ್ರಿ ಕುಮಾರಸ್ವಾಮಿ ಅವರನ್ನು” ಎಂದು ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು. ಟೋಲ್ ಕಟ್ಟಬೇಕೋ ಬೇಡವೋ ಎಂಬ ಪ್ರಶ್ನೆಗೆ, “ಅವರನ್ನೇ ಕೇಳಿ ” ಎಂದು ಉತ್ತರಿಸಿದರು.

    Also Read   ಆಸ್ಪತ್ರೆಯಲ್ಲಿ ಡಾಕ್ಟರ್ “mistakeಎಡವಟ್”…ಅಚ್ಚರಿಯೂ ಮೀರಿದ ಆಘಾತ!

    ಕೋರ್ಟ್ ಆದೇಶವಿದೆ ಎಂಬ ಕುಮಾರಸ್ವಾಮಿ ಅವರ ಹೇಳಿಕೆ ಕುರಿತು ಸ್ಪಷ್ಟನೆ ಕೇಳಿದಾಗ, ಖೇಣಿ, “ಕೋರ್ಟ್ ಆದೇಶ ಇದ್ದರೆ ನಾನು ಪಾಲಿಸುತ್ತೇನೆ. ನಾನು ಯಾವಾಗಲೂ ಕಾನೂನನ್ನು ಪಾಲಿಸಿಕೊಂಡೇ ಬಂದಿದ್ದೇನೆ. ಆ ಆದೇಶ ಎಲ್ಲಿದೆ ತೋರಿಸಿ, ನಾನು ಅದನ್ನು ಫಾಲೋ ಮಾಡುತ್ತೇನೆ” ಎಂದು ಸವಾಲು ಹಾಕಿದರು.

    ನೈಸ್ ಟೋಲ್ ಪ್ಲಾಜಾಗಳಲ್ಲಿ ವಾಹನ ಸವಾರರು ಟೋಲ್ ಪಾವತಿಸುವ ವಿಚಾರದಲ್ಲಿ ಸಿಬ್ಬಂದಿಯೊಂದಿಗೆ ಗಲಾಟೆ ಮಾಡುತ್ತಿರುವ ಬಗ್ಗೆ ಮಾಧ್ಯಮದವರು ಪ್ರಶ್ನಿಸಿದಾಗಲೂ ಖೇಣಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

    ಕುಮಾರಸ್ವಾಮಿ ಅವರು ಕೇಂದ್ರ ಸಚಿವರಾಗಿದ್ದು, ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು ನೈಸ್ ಟೋಲ್ ಅಕ್ರಮ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ನೀವು ಜವಾಬ್ದಾರಿಯಿಂದ ಪ್ರತಿಕ್ರಿಯಿಸಬೇಕು ಎಂದು ಪತ್ರಕರ್ತರು ಪ್ರಶ್ನಿಸಿದಾಗ, ಖೇಣಿ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿ ಅಲ್ಲಿಂದ ತೆರಳಿದರು.

    Also Read  ಜಾರಕಿಹೊಳಿ ಮನೆಗೆ ED ದಾಳಿ; ಕರ್ನಾಟಕ ರಾಜಕಾರಣದಲ್ಲಿ ಮತ್ತೆ ಕಾವು!

    ಒಟ್ಟಿನಲ್ಲಿ, ನೈಸ್ ಟೋಲ್ ವಿಚಾರದಲ್ಲಿ ಕುಮಾರಸ್ವಾಮಿ ಹಾಗೂ ಅಶೋಕ್ ಖೇಣಿ ನಡುವಿನ ಹೇಳಿಕೆ-ಪ್ರತಿಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ. ಒಂದು ಕಡೆ ಕುಮಾರಸ್ವಾಮಿ ಅವರು ಕೋರ್ಟ್ ಆದೇಶದ ಉಲ್ಲೇಖದೊಂದಿಗೆ ಟೋಲ್ ಪಾವತಿಸಬಾರದು ಎಂದು ಹೇಳುತ್ತಿದ್ದರೆ, ಮತ್ತೊಂದೆಡೆ ಖೇಣಿ ಅವರು “ಕೋರ್ಟ್ ಆದೇಶವಿದ್ದರೆ ತೋರಿಸಿ, ಕಾನೂನು ಪಾಲಿಸುತ್ತೇನೆ” ಎಂದು ಪ್ರತಿಕ್ರಿಯಿಸಿದ್ದಾರೆ. ಹಾಗಿದ್ದರೆ ಇವರಿಬ್ಬರಲ್ಲಿ ಸುಳ್ಳು ಹೇಳುತ್ತಿರುವವರು ಯಾರು? ಕುಮಾರಸ್ವಾಮಿ ಅವರು ಹೇಳಿದ ಹಾಗೆ ಕೋರ್ಟ್ ಆದೇಶ ಇದೆಯಾ ಅಥವಾ ಕೇಣಿಯವರು ಹೇಳಿದ ಹಾಗೆ ಕೋರ್ಟ್ ಆದೇಶವೇನು ಇಲ್ಲವಾ?

    ಇಬ್ಬರ ನಡುವಿನ ಈ ವಾಕ್ಸಮರದ ನಡುವೆ ನೈಸ್ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರಿಗೆ ಟೋಲ್ ಪಾವತಿ ಕುರಿತು ಗೊಂದಲ ಮುಂದುವರಿದಿದ್ದು, ಈ ವಿವಾದ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕಾಮನ್‌ವೆಲ್ತ್‌ನಲ್ಲಿ ಹೊಸ ಇತಿಹಾಸ ಬರೆದ ಆಟಗಾರರು..ವಿಶ್ವದ ಮುಂದೆ ತ್ರಿವರ್ಣದ ಘರ್ಜನೆ!ತೇಜಸ್ವಿನ್ ಶಂಕರ್ ಟ್ರೆಂಡಿಂಗ್ ಹೀರೋ!
    MRPL ಭೀಕರ ಸ್ಫೋಟ: ಮನೀಶ್ ಕರ್ಕೇರ ಬಲಿ; ರಾಜೇಶ್‌ಗೆ 35% ಸುಟ್ಟ ಗಾಯ, 8 ಮಂದಿಗೆ ಗಾಯ
    5.5 ವರ್ಷದ ಹೆಣ್ಣುಮಗಳ ಕೊಲೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್!ಮಗು ಸತ್ತು 3 ತಿಂಗಳು…ಆದ್ರೆ FIR ಇಲ್ಲ! 3 ಪೊಲೀಸರು ಸಸ್ಪೆಂಡ್
    ಬೆಂಗಳೂರಲ್ಲಿ Bowring Hospital ಬಳಿ ಗೋಡೆ ಕುಸಿತ ಮನ ಕಲುಕುವ ಘಟನೆ ಬಿಸಿಲಿನಿಂದ ತಪ್ಪಿಸಿಕೊಳ್ಳಲು ನಿಂತವರು… ಏಳು ಮಂದಿಯ ದುರಂತ ಅಂತ್ಯ.!
    ಮೈ ಜುಮ್ಮೆನ್ನಿಸುವ ಬೈಕ್–ಲಾರಿ ಡಿಕ್ಕಿ ಅಪಘಾತ… ಕ್ಷಣಾರ್ಧದಲ್ಲೇ ಜೀವ ಹೋದ ಹೃದಯವಿದ್ರಾವಕ ರಸ್ತೆ ದುರಂತ
    ಡೇಟಾದಲ್ಲಿ ಸತ್ತಿದ್ದಾರೆ: ಬಡ ಮಹಿಳೆ ತಾನು ಜೀವಂತ ಸಾಬೀತುಪಡಿಸಲು ಹರಸಾಹಸ…ಬಡಜನರು “ಡೇಟಾ” ಅಲ್ಲ — ಅವರು ಜೀವಂತ ಮಾನವರು. 
    ಕಾಂಗ್ರೆಸ್‌ಗೆ ದಾವಣಗೆರೆ ಬಿಸಿ ತುಪ್ಪ!..“ಸಮುದಾಯದ ಹೆಸರಿನಲ್ಲಿ ರಾಜಕೀಯ… ಅಥವಾ ರಾಜಕೀಯದ ಹೆಸರಿನಲ್ಲಿ ಸಮುದಾಯ?”
    ಅಣ್ಣಾಮಲೈ ಸಿಡಿಸಿದ ಬಾಂಬ್: ವಿಜಯ್ ಸರ್ಕಾರದ ಸಚಿವರ ವಿರುದ್ಧ 2–4% ಕಿಕ್‌ಬ್ಯಾಕ್ ಆರೋಪ!
    🚨 ಬ್ರೇಕಿಂಗ್ ‼️ದಕ್ಷಿಣ ಕನ್ನಡದಲ್ಲಿ ಭಾರೀ ಮಳೆ: ಜುಲೈ 2 (ಗುರುವಾರ) ರಜೆ ಘೋಷಣೆ
    ಕುಂದಾಪುರ ಗಂಗೊಳ್ಳಿಯಲ್ಲಿ ಕತ್ತಿ  ದೊಣ್ಣೆಗಳಿಂದ ಮಾರಾಮಾರಿ; ವೈರಲ್ ವಿಡಿಯೋದಿಂದ ಪ್ರಕರಣಕ್ಕೆ ಹೊಸ ತಿರುವು?
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    ಗೃಹಿಣಿ ಅಲ್ಲ, ರಾಷ್ಟ್ರ ನಿರ್ಮಾಣಕಾರಿ”ಮನೆಯ ಕೆಲಸ ಕೆಲಸವೇ ಅಲ್ಲ ಎನ್ನುವವರೇ… ಈ ಸುದ್ದಿ ಒಮ್ಮೆ ಓದಿ!ಆಕೆಯ ಶ್ರಮಕ್ಕೆ-₹30,000 ಮೌಲ್ಯ!– ಸುಪ್ರೀಂ ಕೋರ್ಟ್ ಮಹತ್ವದ ಸಂದೇಶ
    ನೇಪಾಳ ಪ್ರವಾಹ: ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ- ನೇಪಾಳ ಪ್ರಧಾನಿಗೆ ಸಹಕಾರದ ಭರವಸೆ
    ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
    “ಕಾಂತರಾ” ಖ್ಯಾತಿಯ ಸಪ್ತಮಿ ಗೌಡ, ದುಮುಕಿದ್ದು  ಹೋರಾಟದ ಅಂಗಳಕ್ಕೆ
    ರೆಸ್ಯೂಮ್ ಅಲ್ಲ, ಪ್ರಾಜೆಕ್ಟ್ ಮಾತಾಡಿತು! ಒಂದೇ ವರ್ಷದಲ್ಲಿ ₹10 ಲಕ್ಷ ಸಂಬಳದಿಂದ ₹80 LPA ಗಳಿಸಿದ ಯುವತಿಯ ಯಶಸ್ಸಿನ ಸೂತ್ರ ವೈರಲ್..!!
    ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
    ಕೂದಲೆಳೆ ಅಂತರದಲ್ಲಿ ಪಾರಾದ ಗುಜರಾತ್ ಟೈಟಾನ್ಸ್!ಕ್ಷಣಾರ್ಧ ತಡವಾಗಿದ್ದರೂ ಸಂಭವಿಸುತ್ತಿತ್ತು ಘೋರ ಅಗ್ನಿ ದುರಂತ!
    ಇಬ್ಬರ ಸಣ್ಣ ಜಗಳದ ಎಫೆಕ್ಟ್ ನೋಡಿ..ಕಡಬದಲ್ಲಿ ಹೈಡ್ರಾಮಾ!ಸಿಲ್ಲಿAngry ಮೂಡ್‌ನಲ್ಲಿ ಎಸೆದ car ಕೀ ಚರಂಡಿಗೆ…
    ಆಸ್ತಿ ಬರೆದುಕೊಟ್ಟ ಅಪ್ಪ ಬೇಡವಾದನಾ?92ರ ತಂದೆ ಕೋರ್ಟ್‌ನಲ್ಲಿ ಗೆದ್ದ ಕಥೆ!
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    ಇನ್ನು ಹೈವೇಯಲ್ಲಿ ಲಿಮಿಟ್ ಗಿಂತ ವೇಗವಾಗಿ ಹೋಗುವವರು ಹುಷಾರಾಗಿರಿ…
    ಉಡುಪಿಯಲ್ಲಿ  ಬೆಟ್ಟಿಂಗ್ ಮಾಫಿಯಾದ ಚಟುವಟಿಕೆಯನ್ನು ಡೆತ್ ನೋಟ್ ರಿವಿಲ್ ಮಾಡಿತೇ?
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
    ಮಧ್ಯಪ್ರಾಚ್ಯದಲ್ಲಿ ಯುದ್ಧ– ಸಂಕಷ್ಟದಲ್ಲಿ ಜಗತ್ತು-ಉಸಿರು ತಡೆದ ಪರಿಸ್ಥಿತಿ!ಏನಾಗ್ತಾ ಇದೆ…
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!