📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಆಸ್ಪತ್ರೆಗಳಲ್ಲಿ ಔಷಧ ಬೆಲೆ ಸುಲಿಗೆ? ಸುಪ್ರೀಂ ಕೋರ್ಟ್ ಗರಂ

    ಹೊಸದಿಲ್ಲಿ: ಆರೋಗ್ಯ ಸಮಸ್ಯೆ ಬಂದರೆ ಸಾಕು, ಸಾಮಾನ್ಯ ಕುಟುಂಬಕ್ಕೆ ಆಸ್ಪತ್ರೆ ಬಿಲ್‌ ದೊಡ್ಡ ಆರ್ಥಿಕ ಹೊರೆ. ಅದರಲ್ಲೂ ಕ್ಯಾನ್ಸರ್‌ನಂತಹ ಗಂಭೀರ ಕಾಯಿಲೆಗಳ ಚಿಕಿತ್ಸೆಯಲ್ಲಿ ಔಷಧಗಳ ಬೆಲೆ ಹೆಚ್ಚಾದರೆ ರೋಗಿ ಮತ್ತು ಕುಟುಂಬದ ಸಂಕಷ್ಟ ಮತ್ತಷ್ಟು ಹೆಚ್ಚುತ್ತದೆ. ಇದೇ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ ಮಂಗಳವಾರ ಔಷಧಗಳ ಬೆಲೆ ವ್ಯತ್ಯಾಸದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

    ಕ್ಯಾನ್ಸರ್‌ ಚಿಕಿತ್ಸೆಯಲ್ಲಿ ಬಳಸುವ ಔಷಧವೊಂದು ವ್ಯಾಪಾರಿಗೆ ಸುಮಾರು ₹2,700ಕ್ಕೆ ಸಿಗುತ್ತಿದ್ದರೂ, ರೋಗಿಗೆ ₹27,000ಕ್ಕೆ ಮಾರಾಟವಾಗುತ್ತಿರುವ ಉದಾಹರಣೆಯನ್ನು ನ್ಯಾಯಾಲಯದ ಮುಂದೆ ಉಲ್ಲೇಖಿಸಲಾಯಿತು. ಅಂದರೆ ಖರೀದಿ ಬೆಲೆ ಮತ್ತು ರೋಗಿಗೆ ವಿಧಿಸುವ ದರದ ನಡುವೆ ಸುಮಾರು ಹತ್ತು ಪಟ್ಟು ವ್ಯತ್ಯಾಸ. ಇಂತಹ ಭಾರಿ ಅಂತರದ ಹಣ ಎಲ್ಲಿಗೆ ಹೋಗುತ್ತಿದೆ ಎಂದು ನ್ಯಾಯಪೀಠ ಪ್ರಶ್ನಿಸಿದೆ.

    ಸಾಮಾನ್ಯ ರೋಗಿಗೆ ಏಕೆ ದೊಡ್ಡ ಹೊರೆ?

    ಆಸ್ಪತ್ರೆಗೆ ದಾಖಲಾಗುವಾಗ ರೋಗಿಯ ಕುಟುಂಬಕ್ಕೆ ವೈದ್ಯರ ಶುಲ್ಕ, ಪರೀಕ್ಷೆಗಳ ವೆಚ್ಚ, ಬೆಡ್‌ ಶುಲ್ಕ ಸೇರಿದಂತೆ ಹಲವು ಖರ್ಚುಗಳು ಎದುರಾಗುತ್ತವೆ. ಅದರ ಜೊತೆಗೆ ಔಷಧಗಳ ದರವೂ ನಿರೀಕ್ಷೆಗೂ ಮೀರಿ ಹೆಚ್ಚಾದರೆ, ಚಿಕಿತ್ಸೆ ಮುಂದುವರಿಸುವುದೇ ಕುಟುಂಬಕ್ಕೆ ಕಷ್ಟವಾಗಬಹುದು.

    ವಿಶೇಷವಾಗಿ ಕ್ಯಾನ್ಸರ್‌, ಹೃದಯ ಕಾಯಿಲೆ ಅಥವಾ ಇತರ ಗಂಭೀರ ಕಾಯಿಲೆಗಳಿಗೆ ದೀರ್ಘಕಾಲ ಚಿಕಿತ್ಸೆ ಅಗತ್ಯವಿರುವ ಸಂದರ್ಭಗಳಲ್ಲಿ ಔಷಧ ವೆಚ್ಚ ನಿರಂತರವಾಗಿ ಬರುತ್ತಿರುತ್ತದೆ. ಒಂದು ಔಷಧಕ್ಕೆ ಸಾವಿರಾರು ರೂಪಾಯಿ ಹೆಚ್ಚುವರಿ ಪಾವತಿಸಬೇಕಾದ ಪರಿಸ್ಥಿತಿ ಕುಟುಂಬದ ಉಳಿತಾಯ ಬಿಡಿ ಇದ್ದ ಬದ್ಧವೆಲ್ಲಾ ಖಾಲಿಯಾಗಿ ಕೈ ಸಾಲಗಳ ಸುಳಿಯಲ್ಲಿ ಜೀವನವನ್ನೇ ಕರಗಿಸಬಹುದು.

    ಆಸ್ಪತ್ರೆಯಲ್ಲೇ ಔಷಧ ಖರೀದಿಸಬೇಕಾದ ಅನಿವಾರ್ಯತೆ?

    ವಿಚಾರಣೆ ವೇಳೆ ಮತ್ತೊಂದು ಪ್ರಮುಖ ಸಮಸ್ಯೆಯನ್ನೂ ನ್ಯಾಯಾಲಯ ಗಮನಿಸಿದೆ. ಕೆಲವು ಸಂದರ್ಭಗಳಲ್ಲಿ ರೋಗಿಗಳು ಆಸ್ಪತ್ರೆಯ ಆವರಣದಲ್ಲಿರುವ ಮೆಡಿಕಲ್‌ ಸ್ಟೋರ್‌ನಿಂದಲೇ ಔಷಧ ಖರೀದಿಸುವ ಪರಿಸ್ಥಿತಿ ಎದುರಾಗುತ್ತದೆ.

    ಹೊರಗಿನ ಅಂಗಡಿಯಲ್ಲಿ ಅದೇ ಔಷಧ ಕಡಿಮೆ ಬೆಲೆಗೆ ಸಿಕ್ಕರೂ, ಗುಣಮಟ್ಟ ಅಥವಾ ಔಷಧದ ಅಸಲಿತನದ ಬಗ್ಗೆ ಕುಟುಂಬಕ್ಕೆ ಅನುಮಾನ ಮೂಡುವ ಸಾಧ್ಯತೆ ಇರುತ್ತದೆ. ಚಿಕಿತ್ಸೆಯ ಜವಾಬ್ದಾರಿಯ ಪ್ರಶ್ನೆಯನ್ನೂ ಮುಂದಿಟ್ಟುಕೊಂಡು ಆಸ್ಪತ್ರೆಯಿಂದಲೇ ಔಷಧ ಖರೀದಿಸುವ ಒತ್ತಡ ಉಂಟಾದರೆ, ರೋಗಿಯ ಕುಟುಂಬಕ್ಕೆ ಆಯ್ಕೆಯ ಅವಕಾಶ ಕಡಿಮೆಯಾಗುತ್ತದೆ ಎಂದು ನ್ಯಾಯಾಲಯದ ವಿಚಾರಣೆಯಲ್ಲಿ ಚರ್ಚಿಸಲಾಯಿತು.

    ‘ಶೇ.16 ಲಾಭಾಂಶ’ ಮಿತಿ ಏಕೆ?

    ಔಷಧಗಳ ಬೆಲೆ ನಿಯಂತ್ರಣಕ್ಕೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಪೀಠ, ಅಗತ್ಯ ಔಷಧಗಳ ಮೇಲೆ ಏಕರೂಪವಾಗಿ ಶೇ.16ರಷ್ಟು ಲಾಭಾಂಶದ ಮಿತಿ ನಿಗದಿಪಡಿಸುವ ಬಗ್ಗೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತು.

    ಔಷಧಗಳು ಮತ್ತು ವೈದ್ಯಕೀಯ ಉಪಕರಣಗಳು ಅಗತ್ಯ ವಸ್ತುಗಳ ವ್ಯಾಪ್ತಿಗೆ ಬರುತ್ತವೆ ಎಂಬುದನ್ನು ಉಲ್ಲೇಖಿಸಿದ ನ್ಯಾಯಾಲಯ, ಇವುಗಳ ಬೆಲೆ ನಿಯಂತ್ರಣದ ವ್ಯಾಪ್ತಿಯ ಬಗ್ಗೆ ಸರ್ಕಾರದಿಂದ ಸ್ಪಷ್ಟತೆ ಬಯಸಿತು.

    ಕೇಂದ್ರ ಸರ್ಕಾರದ ಪರವಾಗಿ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ರಾ, ಔಷಧ ಬೆಲೆ ವಿಚಾರದಲ್ಲಿ ಸಮತೋಲಿತ ಪರಿಹಾರವನ್ನು ಸರ್ಕಾರ ಪರಿಶೀಲಿಸುತ್ತಿದೆ ಎಂದು ತಿಳಿಸಿದರು. ನ್ಯಾಯಾಲಯ ಸೂಚಿಸಿರುವ ಶೇ.16ರ ಮಿತಿ ಕುರಿತ ಸಲಹೆಯನ್ನೂ ಸರ್ಕಾರ ಪರಿಗಣಿಸುತ್ತಿದೆ ಎಂದು ಹೇಳಿದರು.

    ಆರೋಗ್ಯವೇ ದೊಡ್ಡ ಖರ್ಚಾಗಬಾರದು!

    ಸಾಮಾನ್ಯ ಕುಟುಂಬಕ್ಕೆ ಅನಿರೀಕ್ಷಿತ ಆರೋಗ್ಯ ಸಮಸ್ಯೆಯೇ ದೊಡ್ಡ ಆರ್ಥಿಕ ಆಘಾತವಾಗಬಹುದು. ಚಿಕಿತ್ಸೆ ಅಗತ್ಯವಾಗಿರುವ ಸಂದರ್ಭದಲ್ಲಿ ಬೆಲೆ ಪರಿಶೀಲಿಸಲು, ಬೇರೆ ಅಂಗಡಿಯಲ್ಲಿ ಔಷಧ ಹುಡುಕಲು ಅಥವಾ ಆಸ್ಪತ್ರೆಯ ಆಯ್ಕೆಯನ್ನು ಪ್ರಶ್ನಿಸಲು ಕುಟುಂಬಕ್ಕೆ ಹೆಚ್ಚಿನ ಅವಕಾಶ ಇರುವುದಿಲ್ಲ.

    ಹೀಗಾಗಿ ಜೀವ ಉಳಿಸುವ ಔಷಧಗಳು ಕೈಗೆಟುಕುವ ದರದಲ್ಲಿ ಸಿಗಬೇಕು, ಬೆಲೆ ನಿಗದಿಯಲ್ಲಿ ಪಾರದರ್ಶಕತೆ ಇರಬೇಕು ಮತ್ತು ರೋಗಿಗಳಿಗೆ ಅನಗತ್ಯ ಆರ್ಥಿಕ ಒತ್ತಡ ಬೀಳಬಾರದು ಎಂಬುದು ಈ ವಿಚಾರಣೆಯ ಪ್ರಮುಖ ಸಾರ್ವಜನಿಕ ಹಿತಾಸಕ್ತಿಯ ಪ್ರಶ್ನೆಯಾಗಿದೆ.

    ##SupremeCourt #MedicinePrices #Healthcare #CancerTreatment #PatientRights #HospitalCharges #IndiaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್: ಸ್ವಾಮೀಜಿ, ಧಾರ್ಮಿಕ ಮುಖಂಡರ ಶಿಫಾರಸುಗಳಿಗೆ ಸಿಗಲ್ಲ ಮನ್ನಣೆ!
    ವೈರಲ್ ‘Reservation Hatao Movement’ ಹಿಂದೆ ಏನಿದೆ? 7 ಗಂಟೆಗಳಲ್ಲಿ 90 ಸಾವಿರದಿಂದ 4 (40ಲಕ್ಷ) ಮಿಲಿಯನ್ ಫಾಲೋವರ್ಸ್‌! ಮೀಸಲಾತಿ ವಿರುದ್ಧದ ಅಭಿಯಾನಕ್ಕೆ ದೇಶಾದ್ಯಂತ ಭಾರೀ ಬೆಂಬಲ..
    ಅಸ್ಸಾಂನಲ್ಲಿ ಪ್ರವಾಹದ ಆರ್ಭಟಕ್ಕೆ ಸಾವಿನ ಸಂಖ್ಯೆ 61ಕ್ಕೆ, 7 ಲಕ್ಷಕ್ಕೂ ಹೆಚ್ಚು ಮಂದಿ ಸಂಕಷ್ಟದಲ್ಲಿ …!
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಹೈಕೋರ್ಟ್ ಸಂಚಾರಿ ಪೀಠ ಸ್ಥಾಪನೆ ನಿರ್ಧಾರ ಬದಲಾಗುತ್ತದೆಯೇ? ಕರಾವಳಿ ಕಾದಿದೆ ಉಸಿರು ಹಿಡಿದು!
    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!
    “ಜಾಗತಿಕ ಸವಾಲುಗಳ ನಡುವೆಯೂ ಭಾರತದ GDP ರಾಕೆಟ್ ವೇಗ! 7.8% ಬೆಳವಣಿಗೆಗೆ ವಿಶ್ವವೇ ಬೆರಗು!”
    ಮಂಗಳೂರಿಗೆ ಮತ್ತೊಂದು ದೊಡ್ಡ ಯೋಜನೆ: 17.5 ಲಕ್ಷ ಮೆಟ್ರಿಕ್ ಟನ್ ತೈಲ ಸಂಗ್ರಹಾಗಾರಕ್ಕೆ ಅನುಮೋದನೆ – ಕರಾವಳಿಗೆ ಅಭಿವೃದ್ಧಿಯ ಹೊಸ ಅಧ್ಯಾಯ
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ವೇಣೂರಿನಲ್ಲಿ ಬಾಲಕಿಗೆ ಶಾಲಾ ರಿಕ್ಷಾಚಾಲಕನಿಂದಲೇ ಲೈಂಗಿಕದೌರ್ಜನ್ಯ: ಮಕ್ಕಳಿಗೆ ಯಾರನ್ನು ನಂಬಬೇಕು? ಯಾರಿಗೆ ಹೇಳಬೇಕು? — ಪೋಷಕರೇ ಎಚ್ಚರ
    ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
    ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
    ಮುಂಬೈನಲ್ಲಿ ಮಳೆ ರುದ್ರನರ್ತನ: ಕುರ್ಲಾದಲ್ಲಿ ಭೂಕುಸಿತ, ಇಬ್ಬರು ಬಲಿ!
    Tata Consultancy Services (TCS) ನಾಶಿಕ್ ವಿವಾದ-ಬೆಚ್ಚಿಬೀಳಿಸಿದ 30 ದಿನಗಳ ಗುಪ್ತ ಪೊಲೀಸ್ ಆಪರೇಷನ್‌ ರಹಸ್ಯಗಳು…!
    ಉಡುಪಿಯಲ್ಲಿ ಆಡಳಿತ ನಡೆಸುತ್ತಿರುವುದು ಜನವಿರೋಧಿ ಜಿಲ್ಲಾಡಳಿತವೇ?
    ಪಶ್ಚಿಮ ಬಂಗಾಳದಲ್ಲಿ ಗುಂಡಾಗಿರಿ ಮುಂದುವರಿಕೆ
    🔴ಬ್ರೇಕಿಂಗ್ ನ್ಯೂಸ್: ದಕ್ಷಿಣ ಕನ್ನಡ ಜಿಲ್ಲೆಯ ಶಾಲಾ ಕಾಲೇಜುಗಳಿಗೆ ನಾಳೆ ಜುಲೈ 8 ರಜೆ ಘೋಷಣೆ!
    ಗಂಜಿಮಠದತ್ತಿರ ಕಣ್ಣಿಗೆ ಖಾರದ ಪುಡಿ ಎರಚಿ ಹಣ ದೋಚಿ ಪರಾರಿಯಾದ ಆರೋಪಿಗಳು ರಸ್ತೆ ಮಧ್ಯೆ ಯೋಜಿತ ದರೋಡೆ …!
    ಕುಡಿತದ ಅಮಲಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಮಗಳು, ಮೊಮ್ಮಗ: ಕೆಂಗೇರಿಯಲ್ಲಿ ಕರುಳು ಹರಿಯುವ ಕೃತ್ಯ!
    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    ದರ್ಬೆ ಗಲಾಟೆ: ಸಾಕ್ಷ್ಯಾಧಾರದ ಆಧಾರದಲ್ಲೇ ಕಾನೂನು ಕ್ರಮ – ಎಸ್ಪಿ ಅರುಣ್ ಕೆ
    5 ವರ್ಷ ನೀರಿನೊಳಗೆ ಬದುಕಿದ 16 ರ ಬಾಲಕ…!ಈತನ ವಿಚಿತ್ರ ಕಾಯಿಲೆ ಕಂಡು ಬೆಚ್ಚಿಬಿದ್ದ ದೇಶ!ಈಗ ಅನಂತ್ ಅಂಬಾನಿ ನೆರವು!
    ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ AQIS ಸಂಪರ್ಕ: UNSC ವರದಿಯಿಂದ ಬೆಚ್ಚಿಬಿದ್ದ ಭದ್ರತಾ ವಲಯ
    ಇಂದು ಮಾಜಿ ಸಚಿವರಿಂದ ಸೌಹಾರ್ದ ಇಫ್ತಾರ್ ಕೂಟ 
    ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
    50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ
    ಬೀಡಿ, ಗೋಡಂಬಿ ಮತ್ತು ಸ್ಕೀಮ್ ಕಾರ್ಮಿಕರಿಗೆ ಕನಿಷ್ಠ ಕೂಲಿ ನೀಡಿ: ಮಂಗಳೂರಿನಲ್ಲಿ ಬೃಹತ್ ಪ್ರತಿಭಟನೆ.