📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಶಾಸಕ ಸ್ಥಾನಕ್ಕೆ ರಾಜೀನಾಮೆ, ಯಶ್ವಂತರಾಯಗೌಡರ ನಡೆ  ಸಸ್ಪೆನ್ಸ್


    ರಾಜೀನಾಮೆ ಬಳಿಕ ವಿಜಯಪುರಕ್ಕೆ ಶಾಸಕ ಯಶವಂತರಾಯಗೌಡ ಪಾಟೀಲ ಆಗಮನ: ಇಂದು ಮೌನ, ನಾಳೆ ಸ್ಫೋಟಕ ಹೇಳಿಕೆ?

    ಸಚಿವ ಸ್ಥಾನ ಕೈತಪ್ಪಿದ ಹಿನ್ನೆಲೆ, ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿರುವ ಇಂಡಿ ಕ್ಷೇತ್ರದ ಹಿರಿಯ ಕಾಂಗ್ರೆಸ್ ನಾಯಕ ಯಶವಂತರಾಯಗೌಡ ಪಾಟೀಲ ಅವರು ಬುಧವಾರ ವಿಜಯಪುರಕ್ಕೆ ಆಗಮಿಸಿದರು. ಈ ವೇಳೆ ಮಾಧ್ಯಮ ಪ್ರತಿನಿಧಿಗಳು ಪ್ರತಿಕ್ರಿಯೆ ಪಡೆಯಲು ಪ್ರಯತ್ನಿಸಿದರೂ, ಯಾವುದೇ ಹೇಳಿಕೆ ನೀಡಲು ಅವರು ನಿರಾಕರಿಸಿದರು.
    ಮಾಧ್ಯಮಗಳೊಂದಿಗೆ ಸಂಕ್ಷಿಪ್ತವಾಗಿ ಮಾತನಾಡಿದ ಅವರು, “ನಾಳೆ ವಿಜಯಪುರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸುತ್ತೇನೆ. ಆಗ ಎಲ್ಲ ವಿಷಯಗಳನ್ನು ಬಹಿರಂಗವಾಗಿ ಹೇಳುತ್ತೇನೆ,” ಎಂದು ತಿಳಿಸಿದರು. ಇದಕ್ಕಿಂತ ಹೆಚ್ಚಿನ ಪ್ರತಿಕ್ರಿಯೆ ನೀಡದೆ ಸ್ಥಳದಿಂದ ತೆರಳಿದರು.
    ಯಶವಂತರಾಯಗೌಡ ಪಾಟೀಲ ಅವರ ಈ ನಡೆ ರಾಜಕೀಯ ವಲಯದಲ್ಲಿ ಕುತೂಹಲಕ್ಕೆ ಕಾರಣವಾಗಿದೆ. ನಾಳೆಯ ಸುದ್ದಿಗೋಷ್ಠಿಯಲ್ಲಿ ಅವರು ಶಾಸಕ ಸ್ಥಾನಕ್ಕೆ ಸಲ್ಲಿಸಿರುವ ರಾಜೀನಾಮೆಯನ್ನು ಹಿಂಪಡೆಯುವ ಕುರಿತು ಘೋಷಣೆ ಮಾಡಲಿದ್ದಾರೆಯೇ ಅಥವಾ ತಮ್ಮ ರಾಜಕೀಯ ಮುಂದಿನ ಹೆಜ್ಜೆಯ ಬಗ್ಗೆ ಮಹತ್ವದ ನಿರ್ಧಾರ ಪ್ರಕಟಿಸಲಿದ್ದಾರೆಯೇ ಎಂಬ ಚರ್ಚೆಗಳು ಜೋರಾಗಿವೆ.
    ಇದರೊಂದಿಗೆ ಸಚಿವ ಸ್ಥಾನದಿಂದ ವಂಚಿತರಾದ ಬಗ್ಗೆ ತಮ್ಮ ಅಸಮಾಧಾನವನ್ನು ಬಹಿರಂಗಪಡಿಸುವ ಸಾಧ್ಯತೆಯೂ ಇದೆ. ವಿಜಯಪುರ ಜಿಲ್ಲಾ ರಾಜಕೀಯ ಬೆಳವಣಿಗೆಗಳು ಹಾಗೂ ಸಚಿವ ಎಂ.ಬಿ. ಪಾಟೀಲ ಅವರೊಂದಿಗಿನ ರಾಜಕೀಯ ಭಿನ್ನಾಭಿಪ್ರಾಯಗಳ ಕುರಿತು ಅವರು ಸ್ಪಷ್ಟನೆ ನೀಡುವ ನಿರೀಕ್ಷೆಯೂ ರಾಜಕೀಯ ವಲಯದಲ್ಲಿದೆ.
    ಸದ್ಯಕ್ಕೆ ಮೌನ ವಹಿಸಿರುವ ಯಶವಂತರಾಯಗೌಡ ಪಾಟೀಲ ಅವರ ನಾಳೆಯ ಸುದ್ದಿಗೋಷ್ಠಿ ವಿಜಯಪುರ ಜಿಲ್ಲೆಯ ರಾಜಕೀಯದ ಜೊತೆಗೆ ರಾಜ್ಯ ರಾಜಕೀಯದಲ್ಲಿಯೂ ಮಹತ್ವದ ಬೆಳವಣಿಗೆಗಳಿಗೆ ಕಾರಣವಾಗುವ ಸಾಧ್ಯತೆ ಇದೆ. ಹೀಗಾಗಿ ಅವರ ಮುಂದಿನ ನಡೆ ಹಾಗೂ ಘೋಷಣೆಯತ್ತ ರಾಜಕೀಯ ವಲಯ ಮತ್ತು ಸಾರ್ವಜನಿಕರ ಚಿತ್ತ ನೆಟ್ಟಿದೆ.

    Also Read  ರಾಷ್ಟ್ರೀಯ ಭದ್ರತೆಗೆ ಎದುರಾಗುವ ಬೆದರಿಕೆಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಭದ್ರತಾ ಪಡೆ ಮುಖ್ಯಸ್ಥರಿಗೆ ಗೃಹ ಸಚಿವ 'ಶಾ' ಸೂಚನೆ

    ಕೃಪೆ R..N

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
    ಪ್ರಧಾನಿ ಮೋದಿ ಯವರಿಗೆ ಡೈರೆಕ್ಟ್ ಬೆದರಿಕೆ ಹಾಕಿದ ಹೆಂಗಸು!!
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ಜಿಮ್,“ಫಿಟ್ನೆಸ್ ಸೆಂಟರ್‌ಗಳಲ್ಲಿ ಹೆಚ್ಚುತ್ತಿರುವ ಅಪಾಯಕಾರಿ ಸಂಬಂಧಗಳು: ಜಿಮ್ ಟ್ರೈನರ್ ಆತ್ಮಹತ್ಯೆ
    ನಿಮ್ಮ ಪ್ರೊಫೈಲ್ ಪಿಕ್ಚರ್ ಸೇಫ್ ಇದೆಯೇ?ಸ್ಮಾರ್ಟ್‌ಫೋನ್ ಬಳಕೆದಾರರೇ ಎಚ್ಚರ! AI ಡೀಪ್‌ಫೇಕ್ ಮಾಯಾಜಾಲ, ಸೈಬರ್ ಕ್ರೈಂ ಪೊಲೀಸರ ಅಧಿಕೃತ ವಾರ್ನಿಂಗ್!
    ಚುನಾವಣಾ ಆಯೋಗದ ಪರ ನಿಂತ 42 ನಿವೃತ್ತ ನ್ಯಾಯಮೂರ್ತಿಗಳು,…!ವಿರುದ್ಧ ಬೀದಿಗಿಳಿದ ಪ್ರತಿಪಕ್ಷಗಳು ಹಾಗೂ ಸಂಘಟನೆಗಳು
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”
    ಉಡುಪಿ ಸಬ್ ರಿಜಿಸ್ಟರ್ ಕಚೇರಿಯಲ್ಲಿ ಕಾನೂನುಬಾಹಿರ ಚಟುವಟಿಕೆ
    “ನಾವು ಭಾರತೀಯರು” ಎಂಬ ಹೋರಾಟಕ್ಕೆ ಗೆಲುವು
    ಗ್ರಾಮೀಣ ಅಭಿವೃದ್ಧಿಯಲ್ಲಿ ಉಡುಪಿ ನಂ.1: ಐದು ಪಂಚಾಯಿತಿಗಳಿಗೆ ರಾಷ್ಟ್ರ ಗೌರವ-ಉಡುಪಿ ಬರೆದ ಸುವರ್ಣ ಇತಿಹಾಸ!
    ಮನೆಯ ಲಾಕ್ ವ್ಯವಸ್ಥೆ ಇದ್ದರೂ, ಸುರಕ್ಷತೆ ಭೇದಿಸಲಾಗಿದೆ….!ಕುಟುಂಬ ದೇವಸ್ಥಾನಕ್ಕೆ -ಕಳ್ಳರು ಅದೇ ಮನೆ ಟಾರ್ಗೆಟ್..!
    ಮೊಹಾಲಿ ಬೆಚ್ಚಿಬೀಳಿಸಿದ ಕಚೇರಿ ಕೊಲೆ: ಮಹಿಳೆ ಮೇಲೆ ಮಾರಣಾಂತಿಕ ದಾಳಿ, ದೇಶಾದ್ಯಂತ ಆಕ್ರೋಶ…
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    ಮುಳುಗುತ್ತಿರುವ ಕಾಂಗ್ರೆಸ್ಸಿಗೆ ಇನ್ನೂ ಬುದ್ಧಿ ಬಂದಂತಿಲ್ಲ… ಡಿಜೆಪಿ ರಾಮಚಂದ್ರರಾವ್  ಅಮಾನತ್ ಆದೇಶ ಹಿಂಪಡೆದ  ಸರ್ಕಾರ
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಹಾಳಾದ ಹಾಲು, ಕೊಳೆತ ತರಕಾರಿ ಪತ್ತೆ!ಫುಡ್ ಸೇಫ್ಟಿ ದಾಳಿ ಅಧಿಕಾರಿಗಳೇ ಬೆಚ್ಚಿಬಿದ್ದರು….!
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಮೂಡಬಿದ್ರಿ ಪುರಸಭೆಯ ಬೇಜವಾಬ್ದಾರಿ ಹಾಗೂ ವೇಸ್ಟ್ ಆಗುತ್ತಿರುವ ನೀರು
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    ಇತಿಹಾಸ ಸೃಷ್ಟಿಸಿದ ಈಶಾಂಕ್ ಸಮುದ್ರವನ್ನೇ ಸವಾಲಾಗಿ ತೆಗೆದುಕೊಂಡ 7 ವರ್ಷದ ಹೀರೋ ..!
    ನಿದ್ರೆಯಲ್ಲಿದ್ದ ಪುಟ್ಟ ಕಂದಮ್ಮಗಳು ಮತ್ತೆ ಏಳಲೇ ಇಲ್ಲ… ಕಾಂಪೌಂಡ್ ಗೋಡೆ ಕುಸಿದು ಮಂಗಳೂರಿನಲ್ಲಿ ಹೃದಯವಿದ್ರಾವಕ ದುರಂತ!
    ಬೆಂಗಳೂರಿನಿಂದ ಚೆನ್ನೈಗೆ ಹೊರಟ ವಿಮಾನದಲ್ಲಿ ಹೊಗೆ — ಎಲ್ಲಾ ವಿಮಾನಗಳು ವಿಳಂಬ ಪ್ರಯಾಣಿಕರಿಗೆ ತೊಂದರೆ
    ಸೋಶಿಯಲ್ ಮೀಡಿಯಾದ ವೈರಲ್ ವಿಡಿಯೋದಿಂದ ಕೋರ್ಟ್ ತನಕ..!ರಸ್ತೆ ರೇಜ್ ಪ್ರಕರಣದಲ್ಲಿ ಹೊಸ ತಿರುವು
    ಶಿರಾಡಿ ಗ್ರಾ.ಪಂ PDO ಸಹಿ ನಕಲು ….6 ತಿಂಗಳಾದರೂ ದೂರು ದಾಖಲಾಗಿಲ್ಲ!
    ಬ್ಯಾಂಕುಗಳ ಮೇಲೆ ಭೀಕರ ದಾಳಿಯ ಮುನ್ಸೂಚನೆ ನೀಡಿದ ಇರಾನ್- ಮಿನಿಮಮ್ 1000 ಮೀಟರ್ ದೂರವಿರಿ