📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸೋಮನಾಥ ಪುತ್ರನ್ ಪ್ರಕರಣಕ್ಕೆ ಮಹತ್ವದ ತಿರುವು! ಇದೀಗ ನಿಷ್ಪಕ್ಷಪಾತ CID ತನಿಖೆಯ ನಿರೀಕ್ಷೆ….!

    ಮಂಗಳೂರು: ಸೋಮನಾಥ ಪುತ್ರನ್ ಪ್ರಕರಣ ಸಿಐಡಿಗೆ..ಈಗ ಸತ್ಯಾಂಶ ಹೊರಬರಲು ನಿಷ್ಪಕ್ಷಪಾತ ತನಿಖೆಯ ನಿರೀಕ್ಷೆ.

    ಹೊಸಬೆಟ್ಟು ನಿವಾಸಿ ಸೋಮನಾಥ ಪುತ್ರನ್ (48) ಅವರ ಸಾವಿಗೆ ಸಂಬಂಧಿಸಿದ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಆತ್ಮಹತ್ಯೆ ಪ್ರಕರಣ ಸೇರಿದಂತೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಒಟ್ಟು ಮೂರು ಪ್ರಕರಣಗಳನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವರ್ಗಾಯಿಸಿದೆ.

    ಅಕ್ಟೋಬರ್ 27ರಂದು ಸೋಮನಾಥ ಪುತ್ರನ್ ಮೃತಪಟ್ಟಿದ್ದರು. ಈ ಸಾವಿಗೆ ಪೊಲೀಸ್ ಸಿಬ್ಬಂದಿಯ ಮಾನಸಿಕ ಕಿರುಕುಳ ಕಾರಣವೆಂದು ಮೊಗವೀರ ಸಮುದಾಯದ ಮುಖಂಡರು ಆರೋಪಿಸಿದ್ದರು. ಪ್ರಕರಣದ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಬೇಕೆಂದು ಒತ್ತಾಯಿಸಿದ್ದರು.

    ನವೆಂಬರ್ 2ರಂದು ದಕ್ಷಿಣ ಕನ್ನಡ ಮೊಗವೀರ ಸಂಯುಕ್ತ ಸಭೆಯ ಅಧ್ಯಕ್ಷ ಭರತ್ ಉಳ್ಳಾಲ್ ನೇತೃತ್ವದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸಿಐಡಿ ಅಥವಾ ನ್ಯಾಯಾಂಗ ತನಿಖೆಗೆ ಒಪ್ಪಿಸುವಂತೆ ಆಗ್ರಹಿಸಲಾಗಿತ್ತು. ಪೊಲೀಸರ ವಿರುದ್ಧ ಕ್ರಮ, ಕುಟುಂಬಕ್ಕೆ ಪರಿಹಾರ ಹಾಗೂ ಮಕ್ಕಳ ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಬೇಕು ಎಂಬ ಬೇಡಿಕೆಗಳನ್ನೂ ಮುಂದಿಡಲಾಗಿತ್ತು.

    Also Read  ಸೌಜನ್ಯಾ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಮತ್ತೆ ಶಾಕ್; ಸುಪ್ರೀಂ ಕೋರ್ಟ್ ಮಹತ್ವದ ಆದೇಶ

    ಈ ಒತ್ತಾಯಗಳ ಬೆನ್ನಲ್ಲೇ ರಾಜ್ಯ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಂ ಅವರು ನವೆಂಬರ್ 3ರಂದು ಮೂರು ಪ್ರಕರಣಗಳ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿ ಆದೇಶ ಹೊರಡಿಸಿದ್ದಾರೆ.

    ಸುರತ್ಕಲ್ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಸಂಖ್ಯೆ 142/2026, 145/2026 ಹಾಗೂ ಯುಡಿಆರ್ ಸಂಖ್ಯೆ 49/2026 ಪ್ರಕರಣಗಳು ಸಿಐಡಿ ತನಿಖೆಗೆ ಒಳಪಡಲಿವೆ. ಪ್ರಕರಣಗಳಿಗೆ ಸಂಬಂಧಿಸಿದ ಎಲ್ಲ ದಾಖಲೆಗಳನ್ನು ಸಿಐಡಿಗೆ ಹಸ್ತಾಂತರಿಸುವಂತೆ ಮಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಸೂಚಿಸಲಾಗಿದೆ.

    ಮುಂದೇನು?

    ಸೋಮನಾಥ್ ಅವರ ಸಾವಿಗೆ ಕಾರಣವಾದ ಸಂದರ್ಭಗಳು, ಪೊಲೀಸ್ ಠಾಣೆಯಲ್ಲಿನ ಘಟನೆಗಳು, ಲಭ್ಯ ದಾಖಲೆಗಳು ಹಾಗೂ ಕುಟುಂಬದವರು ಮತ್ತು ಸಮುದಾಯದವರು ಮಾಡಿರುವ ಆರೋಪಗಳನ್ನು ಸಿಐಡಿ ಪರಿಶೀಲಿಸಬೇಕಿದೆ. ತನಿಖೆಯ ನಂತರವೇ ಆರೋಪಗಳ ಸತ್ಯಾಸತ್ಯತೆ ತಿಳಿಯಲಿದೆ.

    ಈಗ ಕರಾವಳಿಯ ಜನರ ಗಮನ ಸಿಐಡಿ ತನಿಖೆಯತ್ತ ನೆಟ್ಟಿದೆ. ಕುಟುಂಬಕ್ಕೆ ನ್ಯಾಯ ಸಿಗುತ್ತದೆಯೇ ಎಂಬ ನಿರೀಕ್ಷೆ ಹೆಚ್ಚಾಗಿದೆ.

    ##SomanathPutran #MangaluruNews #Surathkal #CIDInvestigation #MogaveeraCommunity #DakshinaKannada #JusticeForSomanath

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಶೈಕ್ಷಣಿಕ ವರ್ಷ ಆರಂಭ, ನೋಟ್‌ಬುಕ್‌ನಿಂದ ಆಟೋವರೆಗೆ ಎಲ್ಲ ಖರ್ಚು ಗಗನಕ್ಕೆ….ಪೋಷಕರಿಗೆ ದುಬಾರಿ ಹೊರೆ
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಪಕ್ಷದಿಂದ ಪಕ್ಕಕ್ಕೆ? ರಾಘವ್ ಚಡ್ಡಾ ಹಿಂದೆ ಏನಿದೆ ದೊಡ್ಡ ರಾಜಕೀಯ ಆಟ!”ಮೌನಗೊಳಿಸಿದರೂ ನಿಲ್ಲದ ಧ್ವನಿ – ರಾಘವ್ ಚಡ್ಡಾ!”
    ಸಾಮಾಜಿಕ ಜಾಲತಾಣದ ಹೊಸ ಆತಂಕ!ಕೆಲಸ ಕಡಿಮೆ, Entertainment ಹೆಚ್ಚು! Kids‌ನಿಂದ Adultsವರೆಗೆ Phone ಜಾಲ…!
    Political Heatwave 2026:ದಕ್ಷಿಣದಲ್ಲಿ ಅಧಿಕಾರ ಆಟ, ಅಸ್ಸಾಂನಲ್ಲಿ ಅಬ್ಬರ..!
    ಭಾನುವಾರ ಬ್ಯಾಂಕ್ ಓಪನ್! ಸೆ.28ರಿಂದ 3 ದಿನ ಮುಷ್ಕರ
    ಜ್ಞಾನೇಶ್ ಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ PIL: SIR ವಿಚಾರಕ್ಕೆ ಹೊಸ ತಿರುವು
    ಮೂಡುಬಿದಿರೆಯಲ್ಲಿ ಖರೀದಿಸಿದ ಕೆಲವೇ ಗಂಟೆಗಳಲ್ಲಿ ಕಾರಿಗೆ ಬೆಂಕಿ! ತಪ್ಪಿದ ಭಾರೀ ದುರಂತ ..ಏಕಾಏಕಿ ಬೆಂಕಿ.ಕಾರಿನಲ್ಲಿದ್ದ ಕುಟುಂಬ ಅಪಾಯದಿಂದ ಪಾರು.
    ಮಂಗಳೂರು ಕಾಲೇಜು ರ‍್ಯಾಗಿಂಗ್: ಬಟ್ಟೆ ಬಿಚ್ಚಿಸಿ ಬೆಲ್ಟ್ ನಿಂದ ಹಲ್ಲೆ …! 9 ವಿದ್ಯಾರ್ಥಿಗಳ ವಿರುದ್ಧ FIR….
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ಚಾರ್ಮಾಡಿ ಘಾಟಿಯಲ್ಲಿ ಬಂಡೆ ಕುಸಿತ; ಅದೃಷ್ಟವಶಾತ್ ಅಪಾಯ ತಪ್ಪಿತು
    📣3 ತಿಂಗಳಲ್ಲಿ LPG ಸಂಪರ್ಕ ರದ್ದು ??– PNGಗೆ ಬದಲಾವಣೆ ಕಡ್ಡಾಯ” ಈಗಲೇ ಸತ್ಯ ತಿಳಿದುಕೊಳ್ಳಿ..! ಗ್ಯಾಸ್ ಬಗ್ಗೆ ಗೊಂದಲಕ್ಕೆ ಸ್ಪಷ್ಟ ಉತ್ತರ ಇಲ್ಲಿದೆ.
    ಮಳೆ ಮಾಯ! ಪೆಸಿಫಿಕ್ ಚಂಡಮಾರುತದಿಂದ ಮುಂಗಾರಿಗೆ ಬ್ರೇಕ್ – ದೇಶದ 70-80% ಭಾಗದಲ್ಲಿ ಒಣಹವೆ
    “ನನ್ನ ಮಗಳನ್ನೂ ಅದೇ ಕೋಟೆಯಿಂದ ಕೆಳಗೆ ತಳ್ಳಿ!” – ನಿಶ್ಚಿತ ವರನ ಹತ್ಯೆಗೈದ ಸಿಯಾ ಹೆತ್ತವರ ಆಕ್ರೋಶದ ಹೇಳಿಕೆ
    ಗೃಹಲಕ್ಷ್ಮಿಗೆ ಬ್ರೇಕ್? ₹2,000 ಹಣ ನೀರಾವರಿಗೆ ಬಳಸಿ ಎಂದ ಕಾಂಗ್ರೆಸ್‌ ಎಂಎಲ್‌ಸಿ!
    ಅಮ್ಮನ ಅಂತ್ಯಕ್ರಿಯೆಯಲ್ಲಿ ಗಳಗಳನೇ ಕಣ್ಣೀರಿಟ್ಟು,ಚಿತೆಯ ಮುಂದೆ ಕುಸಿದುಬಿದ್ದ ಚಿನ್ಮಯ್ ದಾಸ್!ಐದು ಗಂಟೆಯ ಪೆರೋಲ್… ಜೈಲಿನಿಂದ ಬಂದ ಸನ್ಯಾಸಿ ಮಗ…
    ಎರಡು ತಿಂಗಳ ಬಳಿಕ ಸಮಾಧಿಯಿಂದ ಹೊರಬಂತು ಆಲ್ಬರ್ಟ್ ರೇಗೋ …ಕೊಲೆ ರಹಸ್ಯ ಬಯಲಾಗುತ್ತಾ ?
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ಕ್ರಿಕೆಟ್ pad gloves ಒಳಗೆ ಕೋಟಿ ಕೋಟಿ ಕೊಕೇನ್!
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ಮುಂದಿನ ಮಾರ್ಚ್‌ನಲ್ಲಿ 55 ಸಾವಿರ ಸಾವುಗಳ ಆತಂಕ!ಎಲ್ ನಿನೋ ಎಫೆಕ್ಟ್ ..ಭೀಕರ ಬಿಸಿಲು? ಭಾರತಕ್ಕೆ ದೊಡ್ಡ ಅಪಾಯದ ಮುನ್ಸೂಚನೆ!
    ಬಾಲ್ಯದಲ್ಲೇ ಕಲಿಯಲಿ ಹಣದ ಲೆಕ್ಕ!ಮಕ್ಕಳಿಗಿನ್ನು ಪುಸ್ತಕದ ಜೊತೆ ‘ಹಣದ ಜ್ಞಾನ’! 956 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಪಾಠ
    ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ಆತ್ಮಹತ್ಯೆ… ಕಾರಣ ನಿಗೂಢ
    ಕರ್ನಾಟಕಕ್ಕೆ ಮಳೆ ಅಲರ್ಟ್‌ | ಸೆ.24ರಂದು ಕರಾವಳಿಗೆ ರೆಡ್‌ ಅಲರ್ಟ್‌
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    “ಕಣ್ಣು ಮುಚ್ಚಿಸಿ ಕಟ್ಟಿ ಹಾಕಿ ಬೆಂಕಿ ಹಚ್ಚಿದಳು: ರೋಲ್ ಪ್ಲೇ ಹೆಸರಿನಲ್ಲಿ ಪ್ರಿಯಕರನ ಭೀಕರ ಕೊಲೆ-ಬೆಚ್ಚಿಬೀಳಿಸುವ ಘಟನೆ”
    ಒಂದು iPhoneಗಾಗಿ ಆರಂಭವಾದ ಮಗನ ಹಠ… ಕೊನೆಗೆ ಒಂದೇ ಕುಟುಂಬದ ಮೂವರ ಜೀವವೇ ಹೋಯ್ತು!
    ಮಹಾನಗರಗಳ ಜಲಕಂಠಕ:ಸ್ಮಾರ್ಟ್ ಸಿಟಿಗಳ ಕರಾಳ ಮುಖ: ಕುಡಿಯಲು ನೀರಿಲ್ಲ, ಸಿಗುವ ನೀರು ವಿಷ!
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.