📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    14ರ ಸೊಂಟಕ್ಕೆ ಕೈ ಹಾಕಿದ ಮದರಸಾ ಮೌಲ್ವಿಗೆ 20 ವರ್ಷ ಕಠಿಣ ಶಿಕ್ಷೆ

    ಇಂದು ಮಂಗಳೂರು ಜಿಲ್ಲಾ ನ್ಯಾಯಾಲಯದ ಅಂಗಳದಲ್ಲಿ ಅಪರೂಪದಲ್ಲಿಯೇ ಅಪರೂಪವಾದಂತಹ ನ್ಯಾಯ ಸಂದಾಯವಾಗಿದೆ. ಸಾಮಾನ್ಯ ಜನರಲ್ಲಿ ವ್ಯವಸ್ಥೆಯ ಬಗ್ಗೆ ನಂಬಿಕೆ ಹಾಗೂ ವಿಶ್ವಾಸ ಹೆಚ್ಚಾಗಲು ಈ ಒಂದು ನ್ಯಾಯಾಲಯದ ಆದೇಶವು ಕಾರಣವಾಗಿದೆ.
    ಮಂಗಳೂರಿನ ಜಿಲ್ಲಾ ನ್ಯಾಯಾಲಯದಲ್ಲಿ ಇಂದು ಒಬ್ಬ ಧರ್ಮ ಗುರುವಿನ ನೀಚ ಕೆಲಸಕ್ಕೆ ಶಿಕ್ಷೆ ಪ್ರಕಟವಾಗುವ ಮೂಲಕ ಸಮಾಜಕ್ಕೆ ಖಡಕ್ ಸಂದೇಶ ರವಾನೆಯಾಗಲು ಕಾರಣವಾಗಿದೆ. ನ್ಯಾಯಾಲಯದ ಈ ಶಿಕ್ಷೆಯು ಧ್ವನಿ ಇಲ್ಲದ ಸಾಮಾನ್ಯ ಜನರಲ್ಲಿ ಆಶಾಭಾವನೆಯನ್ನು ಮೂಡಿಸಿದೆ.
    ಹೌದು, ಅಬ್ದುಲ್ ಲತೀಫ್ ಅಲಿಯಾಸ್ ಲತೀಫ್ ದಾರಿಮಿ ಎಂಬ ಧರ್ಮ ಗುರುವೇ ಈಗ ನ್ಯಾಯಾಲಯದಿಂದ 20 ವರ್ಷ ಶಿಕ್ಷೆ, ಸಂತ್ರತೆಗೆ ಐದು ಲಕ್ಷದ ಇಪ್ಪತ್ತು ಸಾವಿರ ಪರಿಹಾರ ಹಾಗೂ 80 ಸಾವಿರ ದಂಡಕ್ಕೆ ಒಳಪಟ್ಟಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಕಲ್ಲಡ್ಕ ಮಸೀದಿಯಿಂದ ನಡೆಸಲ್ಪಡುತ್ತಿರುವ ಮದರಸದಲ್ಲಿ ಧರ್ಮದ ಪಾಠ ಮಾಡುತ್ತಿದ್ದ ಲತೀಫ್ ದಾರಿಮಿ, ಅದೇ ಮದರಸಕ್ಕೆ ಧಾರ್ಮಿಕ ಸಂಸ್ಕಾರ ಕಲಿಯಲು ಬರುತ್ತಿದ್ದ 14 ವರ್ಷದ ತಂದೆ ಇಲ್ಲದ ಹೆಣ್ಣು ಮಗಳೊಬ್ಬಳನ್ನು ತನ್ನ ವಿಕೃತ ಕಾಮಕ್ಕೆ ಬಳಸಿಕೊಂಡು ಸಿಕ್ಕಾಕಿಕೊಂಡಿದ್ದ ಇದೇ ವರ್ಷದ ಆದಿಯಲ್ಲಿ. ಆ ಹೆಣ್ಣು ಮಗಳ ತಂದೆಗಿಂತಲೂ ಹತ್ತು ವರ್ಷದಷ್ಟು ದೊಡ್ಡ ವಯಸ್ಸಿನ ಈ ಧರ್ಮ ಗುರು ಮಾಡಿದ ಪಾಪ ಈಗ ಅವನನ್ನು ಜೈಲಿನ ಕಂಬಿಯ ಹಿಂದೆ ತಳ್ಳಿದೆ. ಈ ಒಂದು ಪ್ರಕರಣ ನಡೆದು ಕೇವಲ ಒಂಬತ್ತು ತಿಂಗಳಷ್ಟೇ ಆಯಿತು. ಜನವರಿ ತಿಂಗಳ ಆದಿಯಲ್ಲಿ ಈ ಪ್ರಕರಣವು ಬೆಳಕಿಗೆ ಬಂದಿತ್ತು. ಈಗ ತ್ವರಿತ ಗತಿಯಾಗಿ ನಡೆದ ಕಾನೂನು ಸಮರದಲ್ಲಿ, ಧರ್ಮ ಗುರು ಲತೀಫ್ ಧಾರಿಮಿಗೆ ಶಿಕ್ಷೆ ಆಗುವ ಮೂಲಕ ಈ ಧರ್ಮ ಗುರುವಿನ ಪರವಾಗಿ ಬ್ಯಾಟ್ ಬೀಸುತ್ತಿದ್ದವರಿಗೆ ಘೋರ ಮುಖಭಂಗವಾಗಿದೆ. ಅವರ ಪ್ರತಿಷ್ಠೆಗೆ ತೀವ್ರ ತರಹದ ಧಕ್ಕೆಯಾಗಿದೆ ಅಂದರೂ ತಪ್ಪಾಗಲಿಕ್ಕಿಲ್ಲ.
    ಈ ಒಂದು ತ್ವರಿತಗತಿಯ ನ್ಯಾಯದಾನದಿಂದಾಗಿ, ನ್ಯಾಯಾಂಗದ ಮೇಲೆ ಭಯ ಭಕ್ತಿ ಎರಡೂ ಹೆಚ್ಚಾಗಿದೆ. ಹಾಗೆಯೇ ವಿಶ್ವಾಸ ಇಮ್ಮಡಿಯಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಿಂದ ಕೇಳಿ ಬರುತ್ತಿದೆ. ಈ ಪ್ರಕರಣದ ತನಿಖಾ ಅಧಿಕಾರಿಗಳಾಗಿ ಅನಂತಪದ್ಮನಾಭರವರು ಕ್ರಮಜರುಗಿಸಿ ನ್ಯಾಯಾಲಯಕ್ಕೆ ಸಂಪೂರ್ಣ ತನಿಕಾ ವರದಿಯನ್ನು ನೀಡಿದ್ದರು. ಸಂತ್ರಸ್ತೆಯ ಪರವಾಗಿ ಉಚ್ಚ ನ್ಯಾಯಾಲಯದ ನ್ಯಾಯವಾದಿಗಳಾದ ಶ್ರೀಮತಿ ಸೌದಾ ಅವರು, ವಾದಿಸಿ ಪ್ರಕರಣಕ್ಕೆ ನ್ಯಾಯ ಒದಗಿಸಲು ಹೋರಾಡಿದ್ದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    594 ಕಿಮೀ ಗಂಗಾ ಎಕ್ಸ್‌ಪ್ರೆಸ್‌ ವೇ ..!ಮೀರಟ್‌ನಿಂದ ಪ್ರಯಾಗರಾಜ್‌ವರೆಗೆ -ದೇಶದ ಪ್ರಗತಿಗೆ ಮತ್ತೊಂದು ಮೈಲುಗಲ್ಲು 
    ಕಾಕ್ರೋಜ್ ಎಫೆಕ್ಟ್, ಉನ್ನತ ಶಿಕ್ಷಣ ಇಲಾಖೆಯಲ್ಲಿ ಪ್ರಮುಖ  ಬದಲಾವಣೆ.
    2029ರೊಳಗೆ 21 ಎನ್‌ಡಿಎ ರಾಜ್ಯಗಳಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿ: ಅಮಿತ್ ಶಾ
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    NSAದುರ್ಬಳಕೆ ಆರೋಪ: ಜಿಲ್ಲಾಧಿಕಾರಿಗೆ ₹5 ಲಕ್ಷ ದಂಡ!
    ಆಯುಷ್ ಎಚ್ಚರಿಕೆ ಬಳಿಕ ಅಶ್ವಗಂಧ ನಿಯಂತ್ರಣ ಕ್ರಮಕ್ಕೆ ತಡೆ: ಹೈಕೋರ್ಟ್ ಮಹತ್ವದ ಆದೇಶ
    ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
    ಅಂದೊಮ್ಮೆ ಬಾಲಿವುಡ್‌ನಲ್ಲಿ ಕಡೆಗಣಿಸಿದ  ಪ್ರಿಯಾಂಕಾ ಚೋಪ್ರಾ ಇಂದು ವಿಶ್ವದ ಪ್ರತಿಷ್ಠಿತ ಬ್ರಾಂಡ್ ರೋಲೆಕ್ಸ್‌ನ ಅಂಬಾಸಿಡರ್! 
    ಗಂಡನನ್ನು ಕೊಂದ ಪತಿವ್ರತೆ… ಮೂರು ವರ್ಷದ ಮಗು ಅನಾಥ
    ಅಕ್ರಮವಾಗಿ ಲಕ್ಷಾಂತರ ಮೌಲ್ಯದ ಎತ್ತುಗಳನ್ನು ವಧೆಗೆ….!
    ಕನಸು ಹೊತ್ತ ಯುವತಿಯರ ಮೇಲೆ ಕಾಮುಕ ಸಮಾಜದ ಕಣ್ಣು! ಮೌನವಾಗಿರುವ ಸಾವಿರಾರು ಕಥೆಗಳಲ್ಲೊಂದು ಬೆಂಗಳೂರು ಘಟನೆ!
    ಒಂದು ಕ್ಷಣದಲ್ಲಿ ನಗು, ಇನ್ನೊಂದು ಕ್ಷಣದಲ್ಲಿ ನಿಶ್ಶಬ್ದ ಕಣ್ಣೀರು…
    ದ.ಕ ಜಿಲ್ಲಾಡಳಿತದಿಂದ ಮಂಗಳಮುಖಿಯರಲ್ಲದವರಿಗೂ ಗುರುತಿನ ಚೀಟಿ ವಿತರಣೆ – ಗಂಭೀರ ಆರೋಪ
    “ಅಪ್ರಾಪ್ತ ಅತ್ಯಾಚಾರ ಸಂತ್ರಸ್ತರಿಗೆ ಅಬಾರ್ಷನ್ ಮಾಡಲು ಆದ್ಯತೆ ,ಕಾನೂನು ತಿದ್ದುಪಡಿ”- ಸುಪ್ರೀಂ ಕೋರ್ಟ್
    ಕಾರ್ಕಳದಲ್ಲಿ 2027ರ ಬಾಹುಬಲಿ ಮಹಾ ಮಜ್ಜನದ ಮಹೋತ್ಸವಕ್ಕೆ ದಿನ ಘೋಷಣೆ!
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ಸಿಖ್ ವಿರೋಧಿ ದಂಗೆಯ ಆರೋಪಿ, ಸಜ್ಜನ್ ಕುಮಾರ್ ಜೈಲಿನಲ್ಲಿ ನಿಧನ
    ಆಸ್ಪತ್ರೆಯಲ್ಲೇ ಮೂರನೇ ಮಹಡಿಯಿಂದ ಬಿದ್ದು ಸಾವುನಿರ್ಲಕ್ಷ್ಯವೇ? ಸುರಕ್ಷತೆ ಪ್ರಶ್ನೆಗೊಳಗಾಗಿದೆ!
    ವೋಟರ್ಸ್ ಗಮನಕ್ಕೆಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ: ಸಾರ್ವಜನಿಕರು ತಿಳಿಯಲೇಬೇಕಾದ ಪ್ರಮುಖ ವರದಿ
    ರೂಪಾಯಿಗೆ ತೈಲದ ಬಿಸಿ! RBI ಅಖಾಡಕ್ಕಿಳಿಯುತ್ತಾ?ತೈಲ ಬೆಲೆ ಏರಿಕೆ ಎಫೆಕ್ಟ್ -ಡಾಲರ್ ಎದುರು ರೂಪಾಯಿ ದುರ್ಬಲ!
    ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
    ಉದ್ಯಮಿ ಧೀರಜ್ ಜೈನ್ ಗಪ್ ಚುಪ್ಪಾಗಿ ನಡೆಸಿದ ಮಾನವೀಯ ನಡೆಗೆ ಸಾಕ್ಷಿ ನೋಡಿ
    ಹಿಂದೂ ಬುಡಕಟ್ಟು ಸಮಾಜದ ರುದ್ರಾಕ್ಷಿ ಸುಂದರಿ ಮುಸ್ಲಿಂ ಹುಡುಗನ ಮದುವೆಯಾದ್ಲು