📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ತುಮಕೂರಿನಲ್ಲಿ 10 ಲಕ್ಷದ ವಜ್ರಾಭರಣ ಕದ್ದ ಈ ಮಹಾಚೋರನ ಕಥೆ ಕೇಳಿದರೆ ನಿಜಕ್ಕೂ ಶಾಕ್ ಆಗ್ತೀರಾ!”

    “ಕಳ್ಳ ಯಾರು ಅನ್ನೋದು ಗೊತ್ತಿದೆ… ಸಾಕ್ಷಿಯೂ ಇದೆ… ಸಿಸಿಟಿವಿಯಲ್ಲೇ ಕಳ್ಳತನದ ದೃಶ್ಯ ಸೆರೆಯಾಗಿದೆ… ಆದರೆ ಬಂಧಿಸಲು ಆಗಲ್ಲ! ಪೊಲೀಸರಿಗೆ ದೂರು ಕೊಡಲು ಆಗುತ್ತಿಲ್ಲ! ಯಾಕೆ ಗೊತ್ತಾ?

    ವಜ್ರಾಭರಣ ಕದ್ದ ಮಹಾಚೋರನ ಸುಳಿವು ಕೊನೆಗೆ ಬಯಲಾಯ್ತು …ಆ ಕಳ್ಳ ಯಾರು ಅಂತ! ತಿಳಿದು ಜ್ಯುವೆಲರಿ ಮಾಲೀಕ ಮತ್ತು ತುಮಕೂರಿನ ಪೊಲೀಸರೇ ಬೆಚ್ಚಿಬಿದ್ದ ರಹಸ್ಯ ಘಟನೆ ನಡೆದಿದ್ದು 

    ತುಮಕೂರು ನಗರದ ಕಾಲ್‌ಟೆಕ್ಸ್ ಸರ್ಕಲ್ ಸಮೀಪದ ಜ್ಯುವೆಲರಿ ಅಂಗಡಿಯಲ್ಲಿ. ರಾತ್ರಿ ಕತ್ತಲೆ… ಜ್ಯುವೆಲರಿ ಅಂಗಡಿ ಸಂಪೂರ್ಣ ಬಂದ್… ಬೆಳಗ್ಗೆ ಅಂಗಡಿ ತೆರೆದ ಸಿಬ್ಬಂದಿಗೆ ಎದುರಾದ ದೃಶ್ಯ ಮಾತ್ರ ಸಿನಿಮಾವನ್ನೂ ಮೀರಿಸುವಂತಿತ್ತು. ಡಿಸ್‌ಪ್ಲೇಯಲ್ಲಿ ಇಟ್ಟಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಖಚಿತ ಚಿನ್ನಾಭರಣಗಳು ನಾಪತ್ತೆ! ಶಟರ್ ಮುರಿದಿಲ್ಲ… ಬೀಗ ಒಡೆದಿಲ್ಲ… ಯಾರೂ ಒಳನುಗ್ಗಿದ ಗುರುತು ಇಲ್ಲ. ಹಾಗಾದರೆ ಆಭರಣಗಳು ಎಲ್ಲಿಗೆ ಹೋದವು? ಇದೇ ಪ್ರಶ್ನೆ ಅಂಗಡಿ ಮಾಲೀಕರನ್ನಷ್ಟೇ ಅಲ್ಲ, ಪೊಲೀಸರನ್ನೂ ಕಂಗಾಲಾಗುವಂತೆ ಮಾಡಿತು.

    Also Read  ಸತೀಶ್' ಆಗಿ ಹೋದವ, 'ಸಲೀಂ' ಆಗಿ ವಾಪಸ್ …!26 ವರ್ಷಗಳ ಬಳಿಕ ತಾಯಿಯ ಮಡಿಲಿಗೆ ಮರಳಿದ ಮಗನ ಭಾವುಕ ಕಥೆ

    ಸುಮಾರು 50 ಗ್ರಾಂಗೂ ಅಧಿಕ ತೂಕದ ವಜ್ರಖಚಿತ ಚಿನ್ನಾಭರಣಗಳು, ಅಂದರೆ 10 ಉಂಗುರಗಳು ಮತ್ತು 3 ಸರಗಳು, ಒಟ್ಟು ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಒಡವೆಗಳು ಕಾಣೆಯಾಗಿದ್ದವು.

    ಮೊದಲಿಗೆ ಎಲ್ಲರ ಅನುಮಾನ ಒಳಗಿನ ಸಿಬ್ಬಂದಿಯ ಮೇಲೆಯೇ ಬಿತ್ತು. ಆದರೆ ಯಾವುದೇ ಸುಳಿವು ಸಿಗಲಿಲ್ಲ. ಕೊನೆಗೆ ಸಿಸಿಟಿವಿ ದೃಶ್ಯ ಪರಿಶೀಲಿಸಲು ಮುಂದಾದರು. ಕ್ಯಾಮೆರಾ ದೃಶ್ಯ ನೋಡಿದ ಕ್ಷಣ ಎಲ್ಲರೂ ದಂಗಾದರು ಯಾಕೆಂದರೆ ಅಲ್ಲಿ ಕಾಣಿಸಿಕೊಂಡಿದ್ದ ಕಳ್ಳ ಮನುಷ್ಯನಲ್ಲ!

    ಪರದೆ ಮೇಲೆ ಪುಟ್ಟದೊಂದು ಇಲಿ ಸದ್ದಿಲ್ಲದೆ ಓಡಾಡುತ್ತಾ, ಒಂದೊಂದೇ ವಜ್ರಾಭರಣವನ್ನು ತನ್ನ ಬಾಯಲ್ಲಿ ಕಚ್ಚಿಕೊಂಡು ಎಳೆದುಕೊಂಡು ಹೋಗುತ್ತಿರುವುದು ಸ್ಪಷ್ಟವಾಗಿ ದಾಖಲಾಗಿತ್ತು. ಆ ಇಲಿ ಅಚ್ಚುಕಟ್ಟಾಗಿ ಆಭರಣಗಳನ್ನು ತನ್ನ ಬಿಲದೊಳಗೆ ಸಾಗಿಸುತ್ತಿರುವ ದೃಶ್ಯ ನೋಡಿ ಸಿಬ್ಬಂದಿ ಮತ್ತು ಮಾಲೀಕರು ಬೆಚ್ಚಿಬಿದ್ದರು.

    Also Read  ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಹೊಸ ತಿರುವು: ದರ್ಶನ್ ಆಪ್ತರ ‘ಮಾಫಿ ಸಾಕ್ಷಿ’ ಅರ್ಜಿ ಏಕೆ ಮಹತ್ವದ್ದು?

    ಆದರೆ ನಿಜವಾದ ಟ್ವಿಸ್ಟ್ ಇನ್ನೂ ಬಾಕಿ ಇತ್ತು.

    ಸಿಸಿಟಿವಿ ಆಧರಿಸಿ ಇಲಿಯ ಜಾಡು ಹಿಡಿದ ಸಿಬ್ಬಂದಿ, ಅದು ಹೋಗಿದ್ದ ಬಿಲವನ್ನು ತೋಡಲು ಆರಂಭಿಸಿದರು. ಕೆಲವೇ ಕ್ಷಣಗಳಲ್ಲಿ ಬಿಲದೊಳಗಿಂದ ಹೊಳೆಯುವ ಚಿನ್ನದ ಕಿರಣಗಳು ಕಾಣಿಸತೊಡಗಿದವು. ಬಿಲವನ್ನು ಸಂಪೂರ್ಣ ತೆರೆಯುತ್ತಿದ್ದಂತೆ ಎಲ್ಲರೂ ಕಂಗಾಲಾದರು. ಕಳ್ಳತನವಾಗಿದ್ದ ಎಲ್ಲಾ 10 ಉಂಗುರಗಳು ಮತ್ತು 3 ಸರಗಳು ಅಲ್ಲಿ ಭದ್ರವಾಗಿ ಇಟ್ಟಿದ್ದವು! ಒಂದೂ ಮಿಸ್ ಆಗಿರಲಿಲ್ಲ.

    ಸುಮಾರು 10 ಲಕ್ಷ ರೂಪಾಯಿ ಮೌಲ್ಯದ ಎಲ್ಲಾ ವಜ್ರಾಭರಣಗಳು ಸುರಕ್ಷಿತವಾಗಿ ವಾಪಸ್ ಸಿಕ್ಕಿದ್ದರಿಂದ ಅಂಗಡಿ ಮಾಲೀಕರು ನಿಟ್ಟುಸಿರು ಬಿಟ್ಟರು.

    ಈ ವಿಚಿತ್ರ ಘಟನೆ ಈಗ ತುಮಕೂರಿನಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಈ ಸಿಸಿಟಿವಿ ದೃಶ್ಯ ವೈರಲ್ ಆಗಿದ್ದು, ಜನರು ಇದನ್ನು ‘ಟಾಮ್ ಅಂಡ್ ಜೆರಿ’ ಸಿನಿಮಾದ ನೈಜ ದೃಶ್ಯ ಎಂದು ಹೋಲಿಕೆ ಮಾಡುತ್ತಿದ್ದಾರೆ.

    Also Read  ಅಧಿಕಾರಕ್ಕಿಂತ ಕೆಲಸ ಮುಖ್ಯ ಎನ್ನುವ ನಾಯಕ? ಕೃಷ್ಣ ಬೈರೇಗೌಡರ ನಡೆ, ಕೆಲಸ ಈಗ ಎಲ್ಲರ ಗಮನ ಸೆಳೆತಿದೆ..

    ಕಳ್ಳತನ ಎಂದರೆ ಮನುಷ್ಯನೇ ಮಾಡುತ್ತಾನೆ ಎಂಬ ಕಲ್ಪನೆಯನ್ನು ಈ ಘಟನೆ ಸಂಪೂರ್ಣವಾಗಿ ತಲೆಕೆಳಗಾಗಿಸಿದೆ. ಲಕ್ಷಾಂತರ ರೂಪಾಯಿ ಮೌಲ್ಯದ ವಜ್ರಾಭರಣಗಳನ್ನು ಬಿಲಕ್ಕೆ ಸೇರಿಸಿದ ಈ ಪುಟ್ಟ ಇಲಿ, ಕೊನೆಗೆ ಸಿಸಿಟಿವಿ ಮುಂದೆ ತನ್ನದೇ ರಹಸ್ಯವನ್ನು ಬಯಲು ಮಾಡಿತು. ಒಂದೊಮ್ಮೆ cctv ಇಲ್ಲದೇ ಹೋಗಿದ್ದರೆ ಎಷ್ಟೋ ಜನರ ಮೇಲೆ ಧರ್ಮಕ್ಕೆ ಅನುಮಾನ ಅವಮಾನ ಅಪಮಾನ …!

    ##Tumkur #JewelleryTheft #DiamondJewellery #CCTVFootage #ViralNews #KarnatakaNews #MouseThief

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಕಾರ್ಮಿಕನ ಸುಳಿವಿನಿಂದ ₹4.91 ಕೋಟಿ ನಕಲಿ ಔಷಧ ಪತ್ತೆ!ಔಷಧದ ಹೆಸರಿನಲ್ಲಿ ಭಯಾನಕ ದಂಧೆ!
    ಜಯದೇವ ಆಸ್ಪತ್ರೆಯಲ್ಲಿ ಒಂದೇ ದಿನ 11 ರೋಗಿಗಳಿಗೆ heartattack !!!..ಐಸಿಯು ಮತ್ತು ಸಿಸಿಟಿವಿ ದೃಶ್ಯಗಳಲ್ಲಿದೆ ಕ್ಲಾರಿಟಿ!
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ಅಂಡಮಾನ್ boat ದುರಂತ-250 ಕ್ಕೂ ಹೆಚ್ಚು ಮಂದಿ ಕಾಣೆ..
    ಸುಬ್ರಹ್ಮಣ್ಯದಲ್ಲಿ ಭಟ್ಟರಿಗೆ ದಕ್ಷಿಣೆ ಕೊಡುವoತಿಲ್ಲ- ಸಿಟ್ಟಿಗೆಳುತ್ತಿರುವ ಪುರೋಹಿತರು
    ಡೆಲಿವರಿ ಬಾಯ್‌ಗೆ ಅಡ್ಡಗಟ್ಟಿ ಹಲ್ಲೆ – ಪ್ರಕರಣ ದಾಖಲು
    ಚುನಾವಣಾ ಆಯೋಗದ ಪರ ನಿಂತ 42 ನಿವೃತ್ತ ನ್ಯಾಯಮೂರ್ತಿಗಳು,…!ವಿರುದ್ಧ ಬೀದಿಗಿಳಿದ ಪ್ರತಿಪಕ್ಷಗಳು ಹಾಗೂ ಸಂಘಟನೆಗಳು
    ಹಾಸನದಲ್ಲಿ ಮೀಸಲಾತಿ ವಿಚಾರಕ್ಕೆ ವಾಕ್ಸಮರ: ರೇವಣ್ಣ–ಶಿವಲಿಂಗೇಗೌಡ ತಿರುಗೇಟು
    ಕ್ಯಾಷ್‌ಲೆಸ್ ಭಾರತ… ಮತ್ತೆ ಕ್ಯಾಶ್‌ಗೇ ಮರಳುತ್ತಾರಾ?
    ಖಾಸಗಿ ಆಸ್ಪತ್ರೆ ವೈದ್ಯರಿಗೆ ಬ್ಲ್ಯಾಕ್‌ಮೇಲ್: 2 ಕೋಟಿಗೂ ಅಧಿಕ ಹಣ ವಸೂಲಿ ಮಾಡಿದ ನರ್ಸ್‌ ಬಂಧನ
    ₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
    ‘ಮೇಡ್ ಇನ್ ಮಂಗಳೂರು’ ಹಡಗು ಜರ್ಮನ್ ಸಂಸ್ಥೆಯ ತೆಕ್ಕೆಗೆ; ವಿಶ್ವದ ಗಮನ ಸೆಳೆದ ಚೌಗುಲೆ ಶಿಪ್‌ಯಾರ್ಡ್!
    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಕೊನೆಗೂ ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿದ ನಿತೀಶ್ ಕುಮಾರ್
    ಇದು IPLನಲ್ಲಿ ಹೊಸ ಹೀರೋ ಹುಟ್ಟಿದಂತೇ…ಆದ್ರೆ ಕ್ರಿಕೆಟ್ ಅಲ್ಲ, ಬಾಕ್ಸಿಂಗ್‌ನಲ್ಲಿ! 🥊🔥
    ಮೂಡಬಿದ್ರೆ: ಅಕ್ರಮ ಜಾನುವಾರು ಸಾಗಾಟ -ಆರೋಪಿಗಳ ಬಂಧನ, ವಾಹನ ಹಾಗೂ ಕರು ವಶಕ್ಕೆ.
    ‘ಆಪ್ ಕಿ ಅದಾಲತ್’ ಕಟಕಟೆಯಲ್ಲಿ ಯಶ್ ಮೊದಲ ಕನ್ನಡಿಗನೆಂಬ ಹೆಗ್ಗಳಿಕೆ….!
    ನಿವೇಶನ ಮೋಸದ ಆರೋಪ: ಶಾಸಕ ಎಸ್ ಟಿ ಸೋಮಶೇಖರ್ ಬೆಂಬಲಿಗ ಕೇಬಲ್ ಕೃಷ್ಣನ ಮೇಲೆ ಹಿಗ್ಗಾಮುಗ್ಗಾ ಹಲ್ಲೆ..!
    ಚಾಟ್‌ಜಿಪಿಟಿ ಹುಡುಕಾಟದ ಬಳಿಕ ಡಬಲ್ ಮರ್ಡರ್..!ತಾಯಿ-ಸಹೋದರನ ಹತ್ಯೆಗೆ AI ಹುಡುಕಾಟ..
    ಮಹಿಳೆಯ ಮೇಲೆ ಮಾರಣಾಂತಿಕ ಹಲ್ಲೆ
    ಲಾಲ್‌ಬಾಗ್ ಸಿಗ್ನಲ್ ಬಳಿ ಚಾಕು ಇರಿತದ ಘಟನೆ…!
    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
    ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …
    ಷೇರು ವ್ಯವಹಾರದ ಲಾಭವೂ ಆದಾಯವೇ: ಜೀವನಾಂಶ ₹50 ಸಾವಿರದಿಂದ ₹1.20 ಲಕ್ಷಕ್ಕೆ ಏರಿಸಿದ ಹೈಕೋರ್ಟ್
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    AI ವಿಶ್ವವಿದ್ಯಾಲಯಕ್ಕೂ ಮೊದಲು AI ಪರಿಣಾಮಗಳ ಅಧ್ಯಯನ ಅಗತ್ಯವೇ?
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು…