📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    108 ಆಂಬ್ಯುಲೆನ್ಸ್ ಸೇವೆಗೆ ಬ್ರೇಕ್ ಬೀಳುತ್ತಾ? ನೌಕರರ ಸಾಮೂಹಿಕ ರಾಜೀನಾಮೆ ಎಚ್ಚರಿಕೆ…

    108 ಸಿಬ್ಬಂದಿ ಸಿಟ್ಟಿಗೆದ್ದರಾ?ಸರ್ಕಾರದ ಮುಂದಿದೆ ದೊಡ್ಡ ಸವಾಲು…

    ಬೆಂಗಳೂರು: ರಾಜ್ಯದ ತುರ್ತು ಆರೋಗ್ಯ ಸೇವೆಯ ಪ್ರಮುಖ ಭಾಗವಾಗಿರುವ ಆರೋಗ್ಯ ಕವಚ 108 ಆಂಬ್ಯುಲೆನ್ಸ್ ಸೇವೆಗೆ ವ್ಯತ್ಯಯದ ಆತಂಕ ಎದುರಾಗಿದೆ. ವೇತನ ಪರಿಷ್ಕರಣೆ ಹಾಗೂ ಕರ್ತವ್ಯದ ವೇಳಾಪಟ್ಟಿ ಬದಲಾವಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು 8 ಗಂಟೆಯೊಳಗೆ ಈಡೇರಿಸದಿದ್ದರೆ ಸಾಮೂಹಿಕ ರಾಜೀನಾಮೆ ನೀಡುವುದಾಗಿ 108 ಆಂಬ್ಯುಲೆನ್ಸ್ ನೌಕರರ ಸಂಘ ಎಚ್ಚರಿಕೆ ನೀಡಿದೆ.

    ನೌಕರರ ಬೇಡಿಕೆಗಳ ಕುರಿತು ಮಂಗಳವಾರ ಆರೋಗ್ಯ ಇಲಾಖೆ ಹಾಗೂ ಗುತ್ತಿಗೆ ಸಂಸ್ಥೆ ಜಿವಿಕೆ ನಡುವೆ ಸಭೆ ನಡೆಯುವ ನಿರೀಕ್ಷೆಯಿದೆ. ಸಭೆಯಲ್ಲಿ ಸಿಬ್ಬಂದಿ ಪರವಾಗಿ ಸಕಾರಾತ್ಮಕ ನಿರ್ಧಾರ ಕೈಗೊಳ್ಳದಿದ್ದರೆ ಸೇವೆಗೆ ವ್ಯತ್ಯಯ ಉಂಟಾಗುವ ಸಾಧ್ಯತೆಯಿದೆ ಎಂದು ಸಂಘ ತಿಳಿಸಿದೆ.

    ವೇತನ ಕಡಿತ, ಕರ್ತವ್ಯ ವೇಳಾಪಟ್ಟಿಗೆ ವಿರೋಧ

    ವೇತನ ವ್ಯವಸ್ಥೆಯಲ್ಲಿ ವಲಯವಾರು ವ್ಯತ್ಯಾಸವನ್ನು ತೆಗೆದುಹಾಕಿ ರಾಜ್ಯಾದ್ಯಂತ ಏಕರೂಪ ವೇತನ ಜಾರಿಗೊಳಿಸಬೇಕು ಎಂಬುದು ನೌಕರರ ಪ್ರಮುಖ ಬೇಡಿಕೆ. ಜೊತೆಗೆ ಕರ್ತವ್ಯದ ಸಮಯವನ್ನು ಹಿಂದಿನ ವೇಳಾಪಟ್ಟಿಯಂತೆ ಮರುನಿಗದಿಪಡಿಸಬೇಕು ಎಂದು ಒತ್ತಾಯಿಸಿದ್ದಾರೆ.

    Also Read  ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು

    ಮೂರು ಪಾಳಿಗಳಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗೆ ವಾಹನ ನಿಗದಿಪಡಿಸುವ ವ್ಯವಸ್ಥೆ ಸೇರಿದಂತೆ ಕೆಲಸದ ಪರಿಸ್ಥಿತಿಗೆ ಸಂಬಂಧಿಸಿದ ಕೆಲವು ಬೇಡಿಕೆಗಳನ್ನೂ ಸಂಘ ಮುಂದಿಟ್ಟಿದೆ.

    ‘ಯಾವ ಬೆದರಿಕೆಗೂ ಬಗ್ಗುವುದಿಲ್ಲ’

    ಕರ್ನಾಟಕ ರಾಜ್ಯ ಆರೋಗ್ಯ ಕವಚ 108 ನೌಕರರ ಸಂಘದ ಅಧ್ಯಕ್ಷ ಪರಮಶಿವಯ್ಯ, “108 ನೌಕರರು ಜೀತಕ್ಕೆ ಬಂದವರಲ್ಲ. ಯಾವುದೇ ಬೆದರಿಕೆಗೂ ನಾವು ಬಗ್ಗುವುದಿಲ್ಲ” ಎಂದು ಹೇಳಿದ್ದಾರೆ.

    ಬೇಡಿಕೆ ಈಡೇರಿಸಲು ಈಗಾಗಲೇ ಕಂಪನಿಗೆ ಗಡುವು ನೀಡಲಾಗಿತ್ತು. ಆದರೆ ಬೇಡಿಕೆಗಳ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ ಚಾಲಕರು, ಸ್ಟಾಫ್ ನರ್ಸ್ ಸೇರಿದಂತೆ ಸುಮಾರು 3,200 ಸಿಬ್ಬಂದಿ ಸಾಮೂಹಿಕ ರಾಜೀನಾಮೆ ನೀಡಿ ಪರ್ಯಾಯ ಉದ್ಯೋಗ ಹುಡುಕುವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

    ಸಚಿವರ ಮಧ್ಯಪ್ರವೇಶ

    ಈ ಹಿನ್ನೆಲೆಯಲ್ಲಿ 108 ನೌಕರರ ಸಂಘದ ನಿಯೋಗ ಆರೋಗ್ಯ ಸಚಿವ ಯು.ಟಿ. ಖಾದರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಪರಿಹಾರಕ್ಕೆ ಮಧ್ಯಪ್ರವೇಶಿಸುವಂತೆ ಮನವಿ ಮಾಡಿದೆ.

    Also Read  ರಾಜ್ಯದ 800 ಶಾಲೆಗಳನ್ನು ಕರ್ನಾಟಕ ಪಬ್ಲಿಕ್ ಸ್ಕೂಲ್ ಗಳಾಗಿ ಉನ್ನತೀಕರಿಸಲು 3900 ಕೋಟಿ ಮೀಸಲು

    ಸಚಿವರು ಜಿವಿಕೆ ಸಂಸ್ಥೆಯೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸುವಂತೆ 108 ಕಮಾಂಡ್ ಸೆಂಟರ್ ಕಾರ್ಯಕಾರಿ ನಿರ್ದೇಶಕ ದಿನೇಶ್ ಕುಮಾರ್ ಅವರಿಗೆ ಸೂಚಿಸಿದ್ದಾರೆ.

    ಮುಂದೇನು?

    ಇದೀಗ ಆರೋಗ್ಯ ಇಲಾಖೆ ಮತ್ತು ಗುತ್ತಿಗೆ ಸಂಸ್ಥೆಯ ಸಭೆಯತ್ತ ಎಲ್ಲರ ಗಮನ ನೆಟ್ಟಿದೆ. ನೌಕರರ ಬೇಡಿಕೆಗಳಿಗೆ ಪರಿಹಾರ ಸಿಗುತ್ತದೆಯೇ, ಅಥವಾ ಸಾಮೂಹಿಕ ರಾಜೀನಾಮೆಯ ಎಚ್ಚರಿಕೆ ನಿಜವಾಗುತ್ತದೆಯೇ? ಎಂಬುದು ಕುತೂಹಲ ಮೂಡಿಸಿದೆ.

    ಒಂದು ವೇಳೆ ದೊಡ್ಡ ಪ್ರಮಾಣದಲ್ಲಿ ಸಿಬ್ಬಂದಿ ಕರ್ತವ್ಯದಿಂದ ಹಿಂದೆ ಸರಿದರೆ ತುರ್ತು ವೈದ್ಯಕೀಯ ಸೇವೆಯ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಸರ್ಕಾರದ ಮುಂದಿನ ನಿರ್ಧಾರ ಮಹತ್ವ ಪಡೆದಿದೆ.

    ##108Ambulance #ArogyaKavacha #KarnatakaHealth #AmbulanceService #KarnatakaNews #HealthWorkers #BengaluruNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಆದಾಯ ತೆರಿಗೆ ಬದಲಾವಣೆಗಳನ್ನು ತಿಳಿದುಕೊಳ್ಳಿ, ತಪ್ಪುಗಳನ್ನು ತಪ್ಪಿಸಿ…ಹೊಸ ITR ನಿಯಮಗಳು
    ಮಹಿಳಾ ಕ್ರಿಕೆಟ್ ವಿಶ್ವಕಪ್ 2026 ಆರಂಭ:ಗಾಯ, ನೋವು, ಟೀಕೆ… ಎಲ್ಲವನ್ನೂ ಮೀರಿ ವಿಶ್ವಕಪ್‌ನಲ್ಲಿ ಭಾರತದ ಮಹಿಳಾ ಪಡೆ!
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ಕೆಪಿಎಸ್‌ಸಿ ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್‌, ಸದಸ್ಯೆ ಗೀತಾ ಇ.ಡಿ. ಬಂಧನ
    ಮಾಜಿ ಮುಖ್ಯಮಂತ್ರಿಯ ಮೇಲೆ ಗುಂಡಿನ ದಾಳಿ,- Z+ ಭದ್ರತೆಯ ನಡುವೆ ದಾಳಿಕೋರ ಹೇಗೆ  ಬಂದ?
    ಬ್ರಹ್ಮಾವರ, ಮಂದಾರ್ತಿ ವ್ಯವಸಾಯ ಸೇವಾ ಸಹಕಾರಿ ಸಂಘಕ್ಕೆ ಹೇಳೋರು ಕೇಳೋರು ಯಾರು ಇಲ್ವಾ?
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ
    ರಾಂಚಿ ‘ಜೆನ್-ಜಿ’ ಸಂಗ್ರಾಮ: ಪರೀಕ್ಷಾ ಅಕ್ರಮದ ವಿರುದ್ಧ ಉದ್ಯೋಗಾಕಾಂಕ್ಷಿಗಳ ರಣಕಹಳೆ…
    ಇನ್ನು ಮುಂದೆ ದೇವಸ್ಥಾನ ಆಸ್ತಿಗೆ ದಾಖಲೆಗಳಲ್ಲಿ ದೇವರ ಹೆಸರೇ ಮಾಲೀಕ….34 ಸಾವಿರಕ್ಕೂ ಹೆಚ್ಚುಮುಜರಾಯಿ ದೇವಸ್ಥಾನಗಳ ಆಸ್ತಿ ರಕ್ಷಣೆ:
    ರಸ್ತೆ ಮಧ್ಯೆಯೇ ದೌರ್ಜನ್ಯ! ಸೇಫ್ ಇಂಡಿಯಾ’ ಮಾತು vs ಜಮುಯಿ ಸತ್ಯ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಇಸ್ರೇಲ್ ಸ್ಥಿತಿ ಶೋಚನೀಯ ಸೈನ್ಯದಲ್ಲೇ ಅಸಮಾಧಾನ
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    ಎಸ್.ಎಸ್.ಎಲ್.ಸಿ. ಪರೀಕ್ಷೆ: ಮಂಗಳೂರಲ್ಲಿ ನಿಷೇಧಾಜ್ಞೆ ಜಾರಿ
    ಸೋಮನಾಥ ಪುತ್ರನ್ ಪ್ರಕರಣಕ್ಕೆ ಮಹತ್ವದ ತಿರುವು! ಇದೀಗ ನಿಷ್ಪಕ್ಷಪಾತ CID ತನಿಖೆಯ ನಿರೀಕ್ಷೆ….!
    ಮತ್ತೆ ಜಾರುತ್ತಿದೆ ಕೆತ್ತಿಕಲ್ ಗುಡ್ಡ: ಕೋಟ್ಯಂತರ ವೆಚ್ಚದ ತಡೆ ಕಾಮಗಾರಿಯೂ ವಿಫಲವೇ? ಹೆದ್ದಾರಿ 169ರ ಸುರಕ್ಷತೆ ಮತ್ತೆ ಪ್ರಶ್ನಾರ್ಥಕ
    ಧಾರವಾಡದಲ್ಲಿ ಭೀಕರ LPG ಸಿಲಿಂಡರ್ ಸ್ಫೋಟ , ಹಲವು ಮೀಟರ್ ದೂರಕ್ಕೆ ಹಾರಿದ ಬೈಕ್‌! ಹಲವರಿಗೆ ಗಾಯ CCTVಯಲ್ಲಿ ಶಾಕಿಂಗ್ ದೃಶ್ಯ
    ಮಹಿಳಾ ಕ್ರೀಡಾಪಟುಗಳ ಹೋರಾಟಕ್ಕೆ ಹೊಸ ತಿರುವು ಕೊಟ್ಟ ದೆಹಲಿ ಹೈಕೋರ್ಟ್!
    ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
    TCS ಜಿಹಾದ್..ಗಂಭೀರ ತಿರುವು… ಟೀಮ್ ಲೀಡರ್ಸ್ ನಿಂದ subordinates ಗಳನ್ನ ಮಲೇಷ್ಯಾಕ್ಕೆ ಎತ್ತಂಗಡಿ ಮಾಡುವ ಪ್ಲಾನ್ ಇತ್ತಾ..?!ದಿನಕ್ಕೊಂದು ಮಹತ್ವದ ಸುಳಿವು…
    ಉಡುಪಿ ಜಿಲ್ಲೆಯಲ್ಲಿ ಕಟಾವಿಗೆ ಬಂದ ಭತ್ತದ ಗದ್ದೆಗೆ ನೀರು ರೈತನಿಗೆ ನಷ್ಟ… ಜಿಲ್ಲಾಡಳಿತ ಪರಿಹಾರ ಕೊಡುತ್ತದೆಯೇ?
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ತಮಿಳುನಾಡು ರಾಜಕೀಯದಲ್ಲಿ ಮೆಗಾ ಟ್ವಿಸ್ಟ್…ಸ್ಟಾಲಿನ್ DMKತಂಡದ ವಾಕ್‌ಔಟ್ ರಾಜಕೀಯ ಲೆಕ್ಕಾಚಾರವಾ?
    ಹಲವು ಗಂಭೀರ ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿ ಕಳೆದ 8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಕೊನೆಗೂ ಪತ್ತೆ ಹಚ್ಚಲಾಗಿದೆ.
    ದಕ್ಷಿಣ ಕನ್ನಡದ ಸರ್ಕಾರಿ ಶಾಲೆಗಳು …ಮಕ್ಕಳ ಶಾಲೆಯಾ? ನ್ಯೂಸ್ ಚಾನೆಲ್ಲಾ? ಬ್ರೇಕಿಂಗ್ ನ್ಯೂಸ್…ಪಠ್ಯಪುಸ್ತಕದಿಂದ ಪ್ರೈಮ್‌ಟೈಮ್‌ವರೆಗೆ..!
    ಮಾಜಿ ಸಚಿವರಿಂದ ಮಂಗಳೂರು ವೈಭವಕ್ಕೆ ಬೃಹತ್ ಕೊಡುಗೆ
    ಹೈ ಪ್ರೋಫೈಲ್ ಕೇಸ್ ಬಿಹಾರದಿಂದ UPವರೆಗೆ CID ಚೇಸ್… ಕೊನೆಗೂ ಸಿಕ್ಕಿದ ಸುಪಾರಿ ಕಿಲ್ಲರ್ಸ್!ಸಿನಿಮಾ ಸ್ಟೈಲ್ ಮರ್ಡರ್ ಮಿಸ್ಟರಿ: ಹೈಟೆಕ್ ಪ್ಲಾನ್ ಮಾಡಿದ ಹಂತಕರು… 
    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ