📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಚಕ್ರಬಡ್ಡಿ ಹೆಸರಿನಲ್ಲಿ ಮಹಿಳೆಗೆ ಕಿರುಕುಳ: ₹9.37 ಲಕ್ಷ ಬಾಕಿ ಎಂದು ಬೆದರಿಕೆ ಆರೋಪ

    ಮಂಗಳೂರು: ಹಣದ ಅವಶ್ಯಕತೆಯಿದ್ದ ಮಹಿಳೆಗೆ ಪರಿಚಯದ ವ್ಯಕ್ತಿಯೊಬ್ಬರ ಮೂಲಕ ₹4.50 ಲಕ್ಷ ಸಾಲ ಕೊಡಿಸಿ, ಬಳಿಕ ಅತಿಯಾದ ಬಡ್ಡಿ ವಸೂಲಿ ಮಾಡಿರುವುದಲ್ಲದೆ ಚಕ್ರಬಡ್ಡಿ ಹೆಸರಿನಲ್ಲಿ ಮತ್ತಷ್ಟು ಹಣ ನೀಡುವಂತೆ ಬೆದರಿಕೆ ಹಾಕಿರುವ ಆರೋಪ ಕೇಳಿಬಂದಿದೆ. ಬಗ್ಗೆ ಉರುವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಕಲಾಗಿದೆ.

    ದೂರುದಾರರಾದ ಬಬಿತಾ ಅವರಿಗೆ ಹಣದ ಅಗತ್ಯವಿದ್ದ ಹಿನ್ನೆಲೆಯಲ್ಲಿ ಅವರೊಂದಿಗೆ ಕೆಲಸ ಮಾಡುತ್ತಿದ್ದ ರಾಜೇಶ್ವರಿ ಎಂಬುವರು ಪರಿಚಯದ ಕೊಟ್ಟಾರ ಚೌಕಿ ನಿವಾಸಿ ತಾನ್ ಸಿಂಗ್ ಎಂಬಾತನಿಂದ 2026ರ ಜುಲೈ ತಿಂಗಳಲ್ಲಿ ಹಂತ ಹಂತವಾಗಿ ಐದು ಬಾರಿ ಒಟ್ಟು ₹4.50 ಲಕ್ಷ ಹಣವನ್ನು ಪಡೆದು ಬಬಿತಾ ಅವರಿಗೆ ನೀಡಿದ್ದರು ಎನ್ನಲಾಗಿದೆ.

    ಆರಂಭದಲ್ಲಿ ತಿಂಗಳ ಬಡ್ಡಿ ಆಧಾರದಲ್ಲಿ ಸಾಲ ನೀಡಿದ್ದ ತಾನ್ ಸಿಂಗ್, ಬಳಿಕ ದಿನದ ಬಡ್ಡಿಯಂತೆ ಪ್ರತಿ ₹1 ಲಕ್ಷಕ್ಕೆ ₹15 ಸಾವಿರ ಬಡ್ಡಿ ನೀಡಬೇಕು ಎಂದು ರಾಜೇಶ್ವರಿ ಅವರಿಗೆ ಒತ್ತಡ ಹಾಗೂ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.

    Also Read  ಒಂದು ವಾಟ್ಸ್ಯಾಪ್ ಮೆಸೇಜ್… ಕೋರ್ಟ್ ವರೆಗೂ ಎಳೆದ ಶಾಕ್ ಘಟನೆಯ ಸುತ್ತ..

    ಈ ವಿಚಾರ ತಿಳಿದ ಬಬಿತಾ, ತಮ್ಮ ಬಳಿ ಹಣವಿಲ್ಲದ ಕಾರಣ ಪರಿಚಯಸ್ಥರಿಂದ ಸಾಲ ಪಡೆದು, ರಾಜೇಶ್ವರಿ ಮೂಲಕ ಈವರೆಗೆ ಸುಮಾರು ₹7ರಿಂದ ₹8 ಲಕ್ಷದವರೆಗೆ ಬಡ್ಡಿ ಹಣ ಪಾವತಿಸಿರುವುದಾಗಿ ತಿಳಿಸಿದ್ದಾರೆ.

    ಬಳಿಕ ಬಡ್ಡಿ ಪಾವತಿಯನ್ನು ನಿಲ್ಲಿಸಿ ಅಸಲು ಹಣವನ್ನು ವಾಪಸ್ ನೀಡುವುದಾಗಿ ರಾಜೇಶ್ವರಿ ಮೂಲಕ ತಾನ್ ಸಿಂಗ್‌ಗೆ ತಿಳಿಸಲಾಗಿತ್ತು. ಅದರಂತೆ ಜುಲೈ 17ರಂದು ₹3 ಲಕ್ಷ ಹಣವನ್ನು ರಾಜೇಶ್ವರಿ ಮೂಲಕ ನೀಡಲಾಗಿತ್ತು. ಆದರೆ, ಇನ್ನೂ ಬಡ್ಡಿ ಸೇರಿ ₹4.50 ಲಕ್ಷ ಬಾಕಿ ಇದೆ. ಅದಕ್ಕೆ ಮತ್ತೆ ₹1 ಲಕ್ಷ ಚಕ್ರಬಡ್ಡಿ ಸೇರಿಸಿ ನೀಡಬೇಕು ಎಂದು ತಾನ್ ಸಿಂಗ್ ಒತ್ತಾಯಿಸಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

    ಸಮಯಾವಕಾಶ ನೀಡುವಂತೆ ಬಬಿತಾ ಮನವಿ ಮಾಡಿಕೊಂಡರೂ, ಆರೋಪಿ ಒಪ್ಪದೆ, “ನಿಮ್ಮಿಬ್ಬರನ್ನು ಸಾಯಿಸುತ್ತೇನೆ, ನೀವು ಕೆಲಸ ಮಾಡುವ ಸ್ಥಳಕ್ಕೆ ಬರುತ್ತೇನೆ” ಎಂದು ಜೀವ ಬೆದರಿಕೆ ಹಾಕಿದ್ದಾನೆ ಎಂದು ಆರೋಪಿಸಲಾಗಿದೆ.

    Also Read  ಪೆಟ್ರೋಲ್ ಬಂಕ್‌ನಲ್ಲಿ ಅಳತೆ ಮೋಸ? ಗ್ರಾಹಕರೇ ಎಚ್ಚರ!

    ಇದಲ್ಲದೆ, ಜುಲೈ 23ರಂದು ತಾನ್ ಸಿಂಗ್ ಇನ್ನೂ ₹9.37 ಲಕ್ಷ ಹಣ ಬಾಕಿ ಇದೆ ಎಂದು ತಿಳಿಸಿದ್ದಾನೆ ಎನ್ನಲಾಗಿದೆ. ಮುಂದೆಯೂ ಚಕ್ರಬಡ್ಡಿಯ ನೆಪದಲ್ಲಿ ಬಬಿತಾ ಹಾಗೂ ರಾಜೇಶ್ವರಿ ಅವರನ್ನು ಬೆದರಿಸಿ ಹೆಚ್ಚಿನ ಹಣ ವಸೂಲಿ ಮಾಡುವ ಸಾಧ್ಯತೆ ಇರುವುದಾಗಿ ಆತಂಕ ವ್ಯಕ್ತಪಡಿಸಿರುವ ಪಿರ್ಯಾದಿದಾರರು, ಆರೋಪಿಯ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಉರ್ವ ಪೊಲೀಸರಿಗೆ ದೂರು ನೀಡಿದ್ದಾರೆ.

    ದೂರಿನ ಆಧಾರದ ಮೇಲೆ ಉರ್ವ ಪೊಲೀಸರು ದೂರು ದಾಖಲಿಸಿಕೊಂಡು ಪ್ರಕರಣದ ಆರೋಪಗಳನ್ನು ಪರಿಶೀಲಿಸಿ ಮುಂದಿನ ಕಾನೂನು ಕ್ರಮ ಕೈಗೊಳ್ಳುತ್ತಿದ್ದಾರೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಬಾಂಗ್ಲಾದೇಶದಲ್ಲಿ ನಿವೃತ್ತ ಹಿಂದೂ ಶಿಕ್ಷಕ ಕುಟುಂಬದ ನಾಲ್ವರ ನಿಗೂಢ ಸಾವು…
    ಮಂಗಳೂರಿನಲ್ಲಿ ಮುಂಜಾನೆ ನಡೆದ ರೌಡಿಶೀಟರ್ ಹತ್ಯೆ – ದುಷ್ಕರ್ಮಿಗಳ  ಜಾಡು ಬೆನ್ನಟ್ಟಿದ ಪೊಲೀಸ್‌ ಪಡೆ….ಮಹತ್ವದ ಸುಳಿವು…..!
    ಮೇ 20ರ ಬಸ್ ಸ್ಟ್ರೈಕ್‌ಗೆ ಹೈಕೋರ್ಟ್ ಬ್ರೇಕ್..! KSRTC-BMTC ಬಸ್‌ಗಳು ನಿಲ್ಲೋದಿಲ್ಲ! ಹೈಕೋರ್ಟ್ ಮಹತ್ವದ ಆದೇಶ..
    ದೆಹಲಿ ಜಂತರ್ ಮಂತರ್‌ನಲ್ಲಿ ಏನಾಗುತ್ತಿದೆ?ವಿದ್ಯಾರ್ಥಿಗಳ ಕೋಪದ ಸ್ಫೋಟಕ್ಕೆ ದೆಹಲಿ ಸಾಕ್ಷಿ!
    ಬಿಜೆಪಿ–ಕಾಂಗ್ರೆಸ್ ಕಾರ್ಯಕರ್ತರ ನಡುವೆ ತೀವ್ರ ವಾಕ್ಸಮರ, ಬಿಗುವಿನ ವಾತಾವರಣ
    ಐಪಿಎಲ್ ಇತಿಹಾಸದಲ್ಲೇ ಸುಮಾರು ₹230 ಕೋಟಿಗೂ ಅಧಿಕ ಒಟ್ಟು ಸಂಭಾವನೆ ಪಡೆದ ಆಟಗಾರನಾಗಿ ಕೊಹ್ಲಿ ದಾಖಲೆ…ಯ ಹಿಂದಿರುವ ಅಸಲಿ ಕಥೆ…!
    “ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
    ಟೆನಿಸ್ ಕೋರ್ಟ್‌ನಲ್ಲಿ ಡಿಸೈನರ್ ಉಡುಪುಗಳ ಧಮಾಕಾ!
    ಕಾಪು ಮಹಿಳೆ ಹತ್ಯೆ – ಇಬ್ಬರು ಪೊಲೀಸ್ ವಶಕ್ಕೆ
    ಕೇವಲ ₹7ರ ದುರಾಸೆ… ₹7 ಲಕ್ಷದ ಹೊರೆ!ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಅಂಗಡಿಗೆ ಭಾರೀ ದಂಡ; ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಸೈಡ್ ಕೊಡಲಿಲ್ಲ ಎಂಬ ಸಣ್ಣ ವಿಚಾರ… ದೊಡ್ಡ ಜಗಳದ ವೈರಲ್ ವಿಡಿಯೋ… ಪೊಲೀಸ್ ಕೇಸ್… ಕೊನೆಗೆ ಬಂಧನ!
    ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ
    ಏರ್ ಇಂಡಿಯಾದಿಂದ ದೈನಂದಿನ ವಿಮಾನ ಹಾರಾಟದ ಬಗ್ಗೆ ನೂತನ ಪ್ರಕಟಣೆ
    ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ಬ್ಯಾರಿ ಸಾಹಿತ್ಯ ಸಮ್ಮೇಳನಕ್ಕೆ ಸಹಕರಿಸಲು ಮನವಿ
    ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
    ಆನ್ಲೈನ್ ಶೇರಿಂಗ್ ಹಗರಣ: ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲು.
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
    ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ 400 ಬೆಡ್‌ಗಳ ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್…!
    ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
    ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    ಸಾರ್ವಜನಿಕರಲ್ಲಿ ವಿನಂತಿ …!
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR
    ಅಳಕೆ ಮಾರುಕಟ್ಟೆ ಬಳಿ ಕಸ ಸುರಿದ ಮಹಿಳೆಗೆ ₹1,000 ದಂಡ..ಸಾರ್ವಜನಿಕ ಸ್ಥಳದಲ್ಲಿ ಕಸ ಎಸೆದರೆ ದಂಡ ಖಚಿತ! 
    ಕುಂದಾಪುರದಲ್ಲಿ ಎರಡು ಮಕ್ಕಳ ತಾಯಿ ನಾಪತ್ತೆ. ಸ್ನೇಹಿತರ ಜೊತೆಯಲ್ಲಿ ಹೋಗಿರುವ ಶಂಕೆ