📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪೊಲೀಸ್ ಇಲಾಖೆಯ ಜಯಶ್ರೀ ನೀಡಿದ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು: ವಿಡಿಯೋ ಕಾಲ್ ಪ್ರಕರಣಕ್ಕೆ ಹೊಸ ತಿರುವು

    ವೀಡಿಯೋ ಕಾಲ್ ಪ್ರಕರಣದಲ್ಲಿ ಮತ್ತೊಬ್ಬ ರೌಡಿ ಶೀಟರ್ ಹೆಸರು ದಾಖಲಾಗಿರುವುದು ಇದೀಗ ಕುತೂಹಲಕ್ಕೆ ಕಾರಣವಾಗಿದ್ದು, ಪೊಲೀಸ್ ತನಿಖೆಯಿಂದ ಪ್ರಕರಣದ ನಿಜಾಂಶ ಹೊರಬರಬೇಕಿದೆ

    ಬೆಂಗಳೂರು: ಪೊಲೀಸ್ ಇಲಾಖೆಗೆ ಮುಜುಗರ ಉಂಟುಮಾಡಿದ್ದ ಎನ್ನಲಾದ ಜಯಶ್ರೀ ಅವರ ವಾಟ್ಸಾಪ್ ವೀಡಿಯೋ ಕಾಲ್ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪ್ರಕರಣ ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿ ಜಯಶ್ರೀ ಅವರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ಮತ್ತೊಬ್ಬ ರೌಡಿ ಶೀಟರ್‌ ಹೆಸರು ಉಲ್ಲೇಖವಾಗಿದೆ.

    ಪ್ರಸ್ತುತ ಮೆಟ್ರೋ ನಿಲ್ದಾಣದ ಭದ್ರತಾ ಉಸ್ತುವಾರಿ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ಜಯಶ್ರೀ, ಕೆಲ ವರ್ಷಗಳ ಹಿಂದೆ ರೌಡಿ ಶೀಟರ್‌ಗಳಾದ ಧರ್ಮ ಹಾಗೂ ಸಾಯಿಕುಮಾರ್ ಅವರೊಂದಿಗೆ ಆಪ್ತತೆ ಹೊಂದಿದ್ದ ಸಂದರ್ಭದಲ್ಲಿ ನಡೆದ ವೀಡಿಯೋ ಕಾಲ್ ದೃಶ್ಯಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಲಾಗಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

    Also Read  ಅಲ್ಲಿ ಸೌಮೆಂದು ಅಧಿಕಾರಿ.... ಇಲ್ಲಿ ಸಾಮ್ರಾಟ್ ಚೌದರಿ, ಹೆಲ್ತ್ ಮಿನಿಸ್ಟರ್ ನಿಶಾಂತ್....

    ನಂತರ ಆ ದೃಶ್ಯಗಳನ್ನು ಮತ್ತೊಬ್ಬ ರೌಡಿ ಶೀಟರ್ ಸಾಯಿಕುಮಾರ್‌ಗೆ ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವ ಮೂಲಕ ತಮ್ಮ ಗೌರವಕ್ಕೆ ಧಕ್ಕೆ ತರಲಾಗಿದೆ ಎಂದು ಜಯಶ್ರೀ ಆರೋಪಿಸಿದ್ದಾರೆ. ಅಲ್ಲದೆ, ವೀಡಿಯೋ ರೆಕಾರ್ಡ್ ಮಾಡಿ ವೈರಲ್ ಮಾಡಿದವರ ಹಿಂದೆ ಪ್ರಭಾವಿ ವ್ಯಕ್ತಿಗಳ ಕೈವಾಡವಿರಬಹುದು ಎಂಬ ಶಂಕೆಯನ್ನೂ ಅವರು ದೂರಿನಲ್ಲಿ ವ್ಯಕ್ತಪಡಿಸಿದ್ದಾರೆ.

    ಈ ಹಿನ್ನೆಲೆಯಲ್ಲಿ ರೌಡಿ ಶೀಟರ್‌ಗಳಾದ ಧರ್ಮ ಹಾಗೂ ಸಾಯಿಕುಮಾರ್ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ಜಯಶ್ರೀ ಪೊಲೀಸರನ್ನು ಕೋರಿದ್ದಾರೆ.

    ಜಯಶ್ರೀ ನೀಡಿದ ದೂರಿನ ಆಧಾರದ ಮೇಲೆ ಕಬ್ಬನ್ ಪಾರ್ಕ್ ಪೊಲೀಸರು ಎನ್‌ಸಿಆರ್ (NCR) ದಾಖಲಿಸಿಕೊಂಡು ಪ್ರಕರಣದ ಕುರಿತು ಮಾಹಿತಿ ಕಲೆಹಾಕುತ್ತಿದ್ದಾರೆ. ವೀಡಿಯೋವನ್ನು ಯಾರು ರೆಕಾರ್ಡ್ ಮಾಡಿದರು, ಅದು ಹೇಗೆ ಸಾಮಾಜಿಕ ಜಾಲತಾಣಗಳಿಗೆ ತಲುಪಿತು ಹಾಗೂ ಇದರ ಹಿಂದೆ ಯಾರಾದರೂ ಪ್ರಭಾವಿಗಳ ಕೈವಾಡವಿದೆಯೇ ಎಂಬ ಅಂಶಗಳ ಕುರಿತು ಪೊಲೀಸರು ಪರಿಶೀಲನೆ ನಡೆಸುವ ಸಾಧ್ಯತೆಯಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    “ಮಾಜಿ RSS ಕಾರ್ಯಕರ್ತನಿಗೆ ಮುಸ್ಲಿಂ ಮಹಿಳೆ ಅಗ್ನಿಸ್ಪರ್ಶ”ವಾಸ್ತವ ಏನು?ಮಾನವೀಯತೆಗೆ ಧರ್ಮದ ಗಡಿ ಇಲ್ಲ!
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!
    ಸಿಖ್ ವಿರೋಧಿ ದಂಗೆಯ ಆರೋಪಿ, ಸಜ್ಜನ್ ಕುಮಾರ್ ಜೈಲಿನಲ್ಲಿ ನಿಧನ
    ಹಾಡುಹಗಲೇ ಉಡುಪಿಯ ಕರಾವಳಿ ಬೈಪಾಸ್ ನಲ್ಲಿ ಗುಂಡಾಗಿರಿ
    ಬೆಂಗಳೂರಿನಲ್ಲಿ ಉದ್ಯಮಿಯ₹1.9 ಕೋಟಿ ದರೋಡೆ:ಬೆಚ್ಚಿಬೀಳಿಸಿದ ಥ್ರಿಲ್ಲರ್ ಸಿನಿಮಾವನ್ನೇ ಮೀರಿಸಿದ ಸಸ್ಪೆನ್ಸ್!
    ರಷ್ಯಾದಲ್ಲಿ ಪ್ಲೇಗ್ ಆತಂಕ! ಲ್ಯಾಬ್ ಸಿಬ್ಬಂದಿ ಸಾವು, 200 ಮಂದಿಗೆ ನಿಗಾ…!ರಷ್ಯಾದಲ್ಲಿ ಕಟ್ಟೆಚ್ಚರ!
    ಕೇಂದ್ರ ಸಚಿವ ಸೋಮಣ್ಣರ ವಿರುದ್ಧ  ವಾಗ್ದಾಳಿ: “ನಡೆದು ಬಂದ ದಾರಿ ಮರೆತು ಮಾತನಾಡಬೇಡಿ”
    ಸರ್ಕಾರಿ ಆಸ್ಪತ್ರೆಗಳಲ್ಲಿ ನಿರ್ಲಕ್ಷ್ಯಕ್ಕೆ ಬ್ರೇಕ್? ರೋಗಿಗಳ ಹಕ್ಕು ರಕ್ಷಣೆಗೆ 24×7 ನೇರ ಹೆಲ್ಪ್‌ಲೈನ್ – ಆರೋಗ್ಯ ಸಚಿವ ಯು.ಟಿ. ಖಾದರ್ ಮಹತ್ವದ ಘೋಷಣೆ
    ಡೇಟಾ ಬೇಡವೇ? ಕರೆ-SMS ಬಳಕೆದಾರರಿಗೆ ಟ್ರಾಯ್‌ನಿಂದ ಹೊಸ ಆಯ್ಕೆ
    ನೇಪಾಳ ಪ್ರವಾಹ: ಪ್ರಧಾನಿ ನರೇಂದ್ರ ಮೋದಿಯವರಿಂದ ಸಂತಾಪ- ನೇಪಾಳ ಪ್ರಧಾನಿಗೆ ಸಹಕಾರದ ಭರವಸೆ
    ₹30 ಲಕ್ಷ ಖರ್ಚಿನ ಹೊಸ ಮನೆಯಡಿಯಲ್ಲಿ ಗುಹೆ ಪತ್ತೆ; ವಾಸಕ್ಕೆ ಯೋಗ್ಯವಲ್ಲ ಎಂದ ತಜ್ಞರು …!!!ಗೃಹಪ್ರವೇಶದ ಸಂಭ್ರಮದಲ್ಲೇ ಕುಟುಂಬಕ್ಕೆ ಆಘಾತ!
    AYS TROPHY–2026 ಯಶಸ್ವಿಯಾಗಿಸಲು ನಿಮ್ಮ ಉಪಸ್ಥಿತಿ ಅಗತ್ಯ.
    ನಾರ್ವೇ ಪತ್ರಕರ್ತರಿಗೆ ತಿರುಗೇಟು: “ಭಾರತದ ವಾಸ್ತವತೆ ಅರಿವಿಲ್ಲ” ಎಂದ MEA ಕಾರ್ಯದರ್ಶಿ ಸಿಬಿ ಜಾರ್ಜ್…
    ಇ-ಸಿಗರೇಟ್‌ಗೆ ಭಾರಿ ಡಿಮ್ಯಾಂಡ್ – ಗೋಣಿ ಚೀಲದಲ್ಲಿಸಂಗ್ರಹಿಸಿಟ್ಟ ಆರೋಪಿ ಬಂಧನ..!
    ಬೆಂಗಳೂರು ಕೆಪಿಸಿಸಿ ಕಚೇರಿಯಲ್ಲಿ ಎರಡು ಬಣಗಳ ರಣರಂಗ!ಮಾತಿನ ಚಕಮಕಿ ಹೊಡೆದಾಟಕ್ಕೆ ತಿರುಗಿದ ಕ್ಷಣ…
    ದೆಹಲಿ: ₹21.40 ಕೋಟಿ ಮೌಲ್ಯದ 15 ಕೆ.ಜಿ. ಚಿನ್ನ ವಶ ಅಂತರರಾಷ್ಟ್ರೀಯ ಕಳ್ಳಸಾಗಣೆ ಜಾಲ ಭೇದಿಸಿದ DR
    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು
    ಥಾರ್ ಕಾರ್ ನಲ್ಲಿ ಬಂದು ದೇವಸ್ಥಾನದಲ್ಲಿ ವಿಕೃತಿ ಮೆರೆದ ಕಿಡಿಗೇಡಿ!
    ಇರಾನ್ ಬಿಕ್ಕಟ್ಟು ವೀಸಾ ವಿಸ್ತರಿಸಲು ವಿದೇಶಿ ಪ್ರಜೆಗಳು ಹತ್ತಿರದ FRRO ಅನ್ನು ಸಂಪರ್ಕಿಸಲು ಭಾರತ ಸಲಹೆ
    ಕರಾವಳಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಬಿಸಿಲಿಗೆ ಎಚ್ಚರ!
    ಭಾರತದಲ್ಲಿ ಎಚ್‌ಪಿವಿ (HPV) ಲಸಿಕೆ ಕಾರ್ಯಕ್ರಮ ಹೆಣ್ಣೆತ್ತವರು ತಿಳಿದುಕೊಳ್ಳಲೇಬೇಕಾದ ವಿಚಾರ
    ದಾವಣಗೆರೆ & ಬಾಗಲಕೋಟೆ ಬೈಎಲೆಕ್ಷನ್ ಬಿಗ್ ಬ್ಲಾಸ್ಟ್!
    ಮ್ಯಾರಥಾನ್ ನಲ್ಲಿ ಇರುವಾಗಲೇ ಹೃದಯಾಘಾತದಿಂದ  ಸಬ್ ಇನ್ಸ್ಪೆಕ್ಟರ್ ನಿಧನ
    ಮಂಗಳೂರಲ್ಲಿ 10ನೇ ತರಗತಿ ತಾಯಿಯಿಲ್ಲದ ಬಾಲಕಿ ಮೇಲೆ ಜಲೀಲ್ ಎಂಬಾತ 7 ತಿಂಗಳು ನಿರಂತರ ದೌರ್ಜನ್ಯ! 
    ಜೈಲಿನೊಳಗೆ ಮೊಬೈಲ್ ಮಾಫಿಯಾ: ಖತರ್ನಾಕ್ ಐಡಿಯಾ..!
    ವಿಟ್ಲ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಕಚೇರಿಯಲ್ಲಿ ಗಲಾಟೆ:
    ಕಾಂಗ್ರೆಸ್ ಹೈಕಮಾಂಡ್ ಖಡಕ್ ವಾರ್ನಿಂಗ್: ಸ್ವಾಮೀಜಿ, ಧಾರ್ಮಿಕ ಮುಖಂಡರ ಶಿಫಾರಸುಗಳಿಗೆ ಸಿಗಲ್ಲ ಮನ್ನಣೆ!
    ಪ್ರಜ್ಞೆ ಬಂದಾಗ ಎದೆಯ ಮೇಲೆ ಬಿದ್ದಿತ್ತು ಪತಿಯ ಶವ!ಹಸೆಮಣೆ ಏರಿದ ಕೆಲವೇ ಗಂಟೆಗಳಲ್ಲಿ ಕತ್ತಲಾದ ಬದುಕು..
    ಪರಿಸರ ನಾಶಕ್ಕಾಗಿ ಸುಳ್ಳು ಸರ್ಟಿಫಿಕೇಟ್ ರೆಡಿಮಾಡಿಕೊಂಡು ಒಂದು ಊರನ್ನೇ ಭಯದಲ್ಲಿರಿಸಿದ ಉಡುಪಿ ಜಿಲ್ಲಾ ಆಡಳಿತ
    ನದಿಯಲ್ಲ ರಸ್ತೆ..!ಕೈಕಂಬದ ಕಂದಾವರದ ಈ ರಸ್ತೆ ಕೆರೆಯಾಗಿ ನೀರಿನಲ್ಲಿ ಮುಳುಗಿದೆ!ಶಾಲಾ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಜೀವಭಯ!