📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ

    ಕಾಸರಗೋಡು: ಕನ್ನಡ ಶಾಲೆಗಳನ್ನು ಉಳಿಸಿ ಬೆಳೆಸುವ ಉದ್ದೇಶದಿಂದ ನಡೆಯುತ್ತಿರುವ **‘ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನ’**ದ ವತಿಯಿಂದ ಹಮ್ಮಿಕೊಂಡಿರುವ ಕನ್ನಡ ಯಾತ್ರೆಯ ಅಂಗವಾಗಿ ಕಾಸರಗೋಡು ಜಿಲ್ಲಾಧಿಕಾರಿ ಶ್ರೀಧನ್ಯ ಸುರೇಶ್ ಅವರನ್ನು ಭೇಟಿಯಾಗಿ ವಿವಿಧ ಕನ್ನಡಪರ ಬೇಡಿಕೆಗಳ ಕುರಿತು ಚರ್ಚಿಸಿ ಮನವಿ ಸಲ್ಲಿಸಲಾಯಿತು.

    ಕಾಸರಗೋಡು ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಮಲಯಾಳಂ ಶಿಕ್ಷಕರನ್ನು ನೇಮಕ ಮಾಡುವ ಕ್ರಮದ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ ಅಭಿಯಾನದ ಪ್ರಮುಖರು, ಕನ್ನಡ ಶಾಲೆಗಳಲ್ಲಿ ಕನ್ನಡ ಭಾಷೆಯ ಬೋಧನೆ ಹಾಗೂ ಕನ್ನಡ ಮಾಧ್ಯಮದ ಸಂರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.

    ಅದೇ ರೀತಿ, ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನಾಮಫಲಕಗಳನ್ನು ಕಡ್ಡಾಯಗೊಳಿಸುವುದು, ಕನ್ನಡದ ಊರುಗಳ ಹೆಸರುಗಳನ್ನು ಬದಲಾವಣೆ ಮಾಡುವುದನ್ನು ತಡೆಯುವುದು ಹಾಗೂ ಜಿಲ್ಲೆಯ ಕನ್ನಡ ಭಾಷೆ ಮತ್ತು ಸಂಸ್ಕೃತಿಯ ಅಸ್ತಿತ್ವವನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಮನವಿಯಲ್ಲಿ ಒತ್ತಾಯಿಸಲಾಯಿತು.

    Also Read  ಅರ್ಹ ಮತದಾರರಿಗೆ ರಿಲೀಫ್‌: ಹೆಸರು ಬಿಟ್ಟವರಿಗೆ ಮತ್ತೆ ಅವಕಾಶ!

    ಈ ಸಂದರ್ಭದಲ್ಲಿ ಅಭಿಯಾನದ ರಾಜ್ಯಾಧ್ಯಕ್ಷ ಉನೈಸ್ ಪೆರಾಜೆ, ಕಾಸರಗೋಡು ಅಧ್ಯಕ್ಷ ವಸಂತ ಬಾರಡ್ಕ, ಈಶ್ವರ್ ಮಾಸ್ಟರ್ ಬದಿಯಡ್ಕ ಸೇರಿದಂತೆ ಕನ್ನಡಪರ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

    ಕಾಸರಗೋಡು ಜಿಲ್ಲೆಯ ಕನ್ನಡಿಗರ ಭಾಷಾ ಹಕ್ಕುಗಳು, ಕನ್ನಡ ಶಾಲೆಗಳ ಅಸ್ತಿತ್ವ ಮತ್ತು ಕನ್ನಡದ ಸಾಂಸ್ಕೃತಿಕ ಪರಂಪರೆಯನ್ನು ಉಳಿಸುವ ನಿಟ್ಟಿನಲ್ಲಿ ನಿರಂತರವಾಗಿ ಹೋರಾಟ ಹಾಗೂ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅಭಿಯಾನದ ಪ್ರಮುಖರು ತಿಳಿಸಿದರು.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ
    “ಯೋಗೇಶ್ ಗೌಡ ಪ್ರಕರಣದಲ್ಲಿ ಕಾನೂನು ಗರ್ಜನೆ!”ಕಾನೂನು ಕಾಯುವವರೇ ಬೂಟು ನೆಕ್ಕಿಕಾನೂನು ಮುರಿದಾಗ-7 ವರ್ಷಗಳ ಜೈಲು!ಕಾನೂನು ಇನ್ನೂ ಜೀವಂತ!”
    ಗಂಡನ ಮನೆಯಿಂದ ಯುವತಿಯನ್ನು ಎಳೆದೊಯ್ದರು
    ಉಡುಪಿಯಲ್ಲಿ ಟ್ರೇಡಿಂಗ್ ಹೆಸರಲ್ಲಿ ಲಕ್ಷಗಟ್ಟಲೆ ಧೋಕಾ….
    ಬಿಡದಿ ಟೌನ್‌ಶಿಪ್‌ಗೆ ಮರುಜೀವ: ವಿಶ್ವದರ್ಜೆಯ ‘ಎಐ ಸಿಟಿ’ ನಿರ್ಮಾಣಕ್ಕೆ ಸರ್ಕಾರದ ಮಹತ್ವದ ಹೆಜ್ಜೆ .. ಜನರನ್ನು ಉದ್ದೇಶಿಸಿ ಮಾತನಾಡಿದ ಸಿಎಂ
    ಮೂಗಿನಿಂದ ಸೋರಿದ್ದು ಶೀತವಲ್ಲ…ಮೆದುಳಿನ ದ್ರವ! 2 ವರ್ಷ ಕಾಡಿದ ಸಮಸ್ಯೆ…10 ವರ್ಷದ ಬಾಲಕನಿಗೆ ಬೆಂಗಳೂರಿನಲ್ಲಿ ಅಪರೂಪದ skull ಡಿಫೆಕ್ಟ್ ಚಿಕಿತ್ಸೆ…!
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    ಬರ್ಗಿ ಅಣೆಕಟ್ಟಿನಲ್ಲಿ ಭೀಕರ ದುರಂತ-ಕರುಳು ಹಿಂಡುವ ದೃಶ್ಯ ಅಮ್ಮ-ಮಗು ಅಪ್ಪಿಕೊಂಡೇ ಜಲಸಮಾದಿ ಸಂತೋಷದ ಪ್ರವಾಸದಿಂದ ಶೋಕದ ಸಾಗರಕ್ಕೆ
    ಸಿಲಿಂಡರ್ ಪಡೆಯಲು ಹೊಸ ಶರತ್ತುಗಳು – ಈಗಲೇ ತಿಳಿದುಕೊಳ್ಳಿ, …
    ಅಹಿಂಸೆ, ಸತ್ಯ ಮತ್ತು ತ್ಯಾಗದ ಮಾರ್ಗವೇ ಮಹಾವೀರರ ದರ್ಶನ — ಇದೇ ಸುಖಿ ಜೀವನದ ಗುಟ್ಟು.
    ಕಾರ್ಕಳದ ವಂಚನೆ ಪ್ರಕರಣ, ದೂರುದಾರನ ಮೇಲೂ ಶಂಕೆ
    2047ರ ಕನಸಿನ ಭಾರತಕ್ಕಾಗಿ ದೆಹಲಿಯಲ್ಲಿ ಮೆಗಾ ಮಂಥನ… ಏನಿದೆ ಈ ಮಾಸ್ಟರ್ ಪ್ಲಾನ್‌ನಲ್ಲಿ?
    ಇಂದು ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ನಿಂದ ಪ್ರತಿಭಟನೆ
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಹಾರ್ಮುಜ್‌ನಲ್ಲಿ ಹಡಗು ಸಂಚಾರ ಹೆಚ್ಚಳ—ಇಂಧನ ಪೂರೈಕೆಗೆ ದೊಡ್ಡ ಮುನ್ನಡೆ 🚢
    ಅಮಿತ್ ಶಾ- “UCC ಜಾರಿಗೆ ತಂದು ನಾಲ್ಕು ಮದುವೆ ಪದ್ಧತಿ ನಿಷೇಧ” — ಪಶ್ಚಿಮ ಬಂಗಾಳದಲ್ಲಿ ದೊಡ್ಡ ಘೋಷಣೆ
    KGF, ಕಾಂತಾರ ಬ್ಯಾನರ್‌ನಲ್ಲಿ ಕಾಲಿವುಡ್ ‘ಜೈ ಭೀಮ್’..!ಹೊಂಬಾಳೆ ಜೊತೆ ಕೈಜೋಡಿಸಿದ ಸೂರ್ಯ, ಬಾಕ್ಸ್ ಆಫೀಸ್ ಧೂಳೀಪಟ ಖಚಿತ!
    ಹೆಚ್ಚು ಜಾಗೃತರಾಗಿ..!ಕೀನ್ಯಾದಿಂದ ವಾಟ್ಸಾಪ್ ಕರೆ, ಅಪ್ಪಟ ತುಳುವಿನಲ್ಲಿ ಮಾತಾಡಿ ಮಂಗಳೂರಿನ ಮಹಿಳೆಗೆ ₹57 ಲಕ್ಷ ದೋಖಾ !
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ಕರುನಾಡ ವಿದ್ಯಾರ್ಥಿಗಳಿಗೆ ವಿದೇಶಿ ಶಿಕ್ಷಣದ ಬಾಗಿಲು ಓಪನ್! 18 ದೇಶಗಳ 80 ವಿವಿಗಳಿಂದ ಭರ್ಜರಿ ಆಫರ್
    ಗೋವಾದಲ್ಲಿ ಪ್ರವಾಸಿಗರ ಬೋಟ್ ಮುಳುಗಡೆ?!!??ವೈರಲ್ ವಿಡಿಯೋದ ಹಿಂದಿನ ಅಸಲಿ ಸತ್ಯ ಬಿಚ್ಚಿಟ್ಟ ಗೋವಾ ಪೊಲೀಸರು!
    ಮಂಗಳೂರು ಶಾಲಾ ದಾಖಲಾತಿ ಅಂದೋಲನ-ಎಲ್ಲ ಮಕ್ಕಳಿಗೂ ಶಾಲೆಯ ಹಕ್ಕು …
    ನೇಪಾಳದಲ್ಲಿ ಭೀಕರ ಫ್ಲ್ಯಾಶ್ ಫ್ಲಡ್: 95 ಮಂದಿ ಸಾವು, 384 ಪ್ರಯಾಣಿಕರು ನಾಪತ್ತೆ; 105 ಭಾರತೀಯರೂ ಸಂಪರ್ಕಕ್ಕೆ ಸಿಗದೆ ಆತಂಕ!
    ಮಂಗಳೂರು ಶಾಕ್ ! ನೇತ್ರಾವತಿ ತೀರದ ನದಿಯಲ್ಲಿ ತೇಲಿ ಬಂದ ರಾಶಿ ರಾಶಿ ಆಧಾರ್ ಕಾರ್ಡ್‌ಗಳು !!!ಹೊಣೆ ಯಾರು?
    ಜನರ ಹಾಹಾ ಕಾರಕ್ಕೆ ಬೆಚ್ಚಿಬಿದ್ದ ಸರ್ಕಾರ –  ಎಸ್ಮ ಕಾಯ್ದೆ ಜಾರಿಗೆ
    30 ವರ್ಷದ ಕನಸು ಸಾಕಾರ: ಮಾಣಿಲ–ಪೆರ್ಲ ಸಂಪರ್ಕಕ್ಕೆ ಸಿರಿಯ ನದಿಗೆ ಸೇತುವೆ ನಿರ್ಮಾಣಕ್ಕೆ ಗ್ರೀನ್ ಸಿಗ್ನಲ್!
    ಎಲ್ಲೆಡೆ LPG ಗ್ಯಾಸ್ ಸಿಲಿಂಡರ್ ಸಂಕಷ್ಟ: ಇದು ಜೀವನೋಪಾಯದ ಪ್ರಶ್ನೆ… ತಕ್ಷಣ ಸಮರ್ಪಕ ಕ್ರಮ ಸರ್ಕಾರದ ಹೊಣೆ.
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    ಫ್ಲೆಕ್ಸ್‌ಗಳ ಹೊಳಪಿನ ನಡುವೆ ಕಡಲನಗರಿಗೆ ಆಡಳಿತ ಯಂತ್ರ!
    ಮಂಗಳೂರು ದಸರಾ ಜಾತ್ರೆಯಲ್ಲಿ ನಕಲಿ ₹500 ನೋಟಿನ ವಂಚನೆ!! ಮದುವೆ ಹಾಲ್‌ನಲ್ಲಿ ಮಗುವಿನ ಚಿನ್ನದ ಸರ ಕದ್ದ ಕಳ್ಳಿ ಅಂದರ್‌!ಮಂಗಳೂರಿನಲ್ಲಿ ನಡೆಯುತ್ತಿದೆಯೇ ವಂಚಕರ ಜಾಲ?