📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಟ್ವಾಳ ಬಿಸಿ ರೋಡ್ ಬಸ್ ನಿಲ್ದಾಣದಲ್ಲಿ ಭೀಕರ ಹತ್ಯೆ!ಸಂಜೆ ಜನಸಂದಣಿಯಲ್ಲೇ ರಕ್ತದೋಕುಳಿ..ಬಸ್‌ಗಾಗಿ ಕಾಯುತ್ತಿದ್ದ ಯುವತಿ ಮೇಲೆ ಮಾರಕ ದಾಳಿ ಕೊಚ್ಚಿ ಕೊಲೆ..!

    ಬಂಟ್ವಾಳ, ಜು.16: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಪಟ್ಟಣ ಗುರುವಾರ ಸಂಜೆ ಭೀಕರ ಹಲ್ಲೆ ಘಟನೆಯಿಂದ ಬೆಚ್ಚಿಬಿದ್ದಿದೆ.

    ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ನೂತನ ಬಸ್ ನಿಲ್ದಾಣದ ಬಳಿ ಬಸ್‌ಗಾಗಿ ಕಾಯುತ್ತಿದ್ದ ಸುಮಾರು 21 ರಿಂದ 25 ವರ್ಷದೊಳಗಿನ ಅಪರಿಚಿತ ಯುವತಿಮೇಲೆ ಅಪರಿಚಿತ ವ್ಯಕ್ತಿಯೊಬ್ಬನು ಹರಿತವಾದ ಆಯುಧದಿಂದ ಏಕಾಏಕಿ ಮಾರಣಾಂತಿಕ ಹಲ್ಲೆ ನಡೆಸಿ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಜೆ ಸುಮಾರು 6 ಗಂಟೆ ವೇಳೆಗೆ ನಡೆದಿದ್ದು, ಬಸ್ ನಿಲ್ದಾಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಯಿತು. 

    ಹಲ್ಲೆಯಲ್ಲಿ ಯುವತಿ ತೀವ್ರ ರಕ್ತಸ್ರಾವಗೊಂಡು ರಸ್ತೆಯಲ್ಲೇ ಕುಸಿದು ಬಿದ್ದಿದ್ದಾಳೆ. ಸ್ಥಳದಲ್ಲಿದ್ದ ಸಾರ್ವಜನಿಕರು ತಕ್ಷಣವೇ ಆಕೆಯನ್ನು ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದರೂ, ಗಂಭೀರ ಗಾಯಗಳ ಪರಿಣಾಮ ಚಿಕಿತ್ಸೆ ಫಲಕಾರಿಯಾಗದೆ ಯುವತಿ ಮೃತಪಟ್ಟಿದ್ದಾಳೆ.

    Also Read  "ದಪ್ಪ, ಕಪ್ಪು ಎಂಬ ಅವಹೇಳನ... ವರದಕ್ಷಿಣೆ ಕಿರುಕುಳ... ಕೊನೆಗೆ ಕತ್ತು ಹಿಸುಕಿ ಹತ್ಯೆ! ಧಾರವಾಡದ ಘಟನೆ ಸಮಾಜದ ಮನಸ್ಸನ್ನೇ ನಡುಗಿಸಿದೆ"

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ನಗರ ಪೊಲೀಸ್ ಠಾಣೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿನ ಸಿಸಿಟಿವಿ ದೃಶ್ಯಾವಳಿ, ಪ್ರತ್ಯಕ್ಷದರ್ಶಿಗಳ ಮಾಹಿತಿ ಸೇರಿದಂತೆ ವಿವಿಧ ಆಯಾಮಗಳಲ್ಲಿ ತನಿಖೆ ಆರಂಭಿಸಿದ್ದು, ಪರಾರಿಯಾಗಿರುವ ಆರೋಪಿಯನ್ನು ಬಂಧಿಸಲು ವಿಶೇಷ ಕಾರ್ಯಾಚರಣೆ ನಡೆಸಲಾಗುತ್ತಿದೆ.

    ಸದ್ಯಕ್ಕೆ ಮೃತ ಯುವತಿಯ ಗುರುತು ಪತ್ತೆಯಾಗಿಲ್ಲ. ಆಕೆ ಯಾವ ಊರಿನವರು, ದಾಳಿಯ ಹಿಂದಿನ ಉದ್ದೇಶವೇನು, ಆರೋಪಿಗೆ ಯುವತಿಯೊಂದಿಗೆ ಯಾವುದೇ ಪರಿಚಯವಿತ್ತೇ ಅಥವಾ ವೈಯಕ್ತಿಕ ದ್ವೇಷದ ಹಿನ್ನೆಲೆ ಇದೆಯೇ ಎಂಬುದು ತನಿಖೆಯಿಂದಷ್ಟೇ ಸ್ಪಷ್ಟವಾಗಬೇಕಿದೆ. ಪೊಲೀಸರು ಈ ಕುರಿತು ಯಾವುದೇ ಅಧಿಕೃತ ಕಾರಣವನ್ನು ಇನ್ನೂ ಬಹಿರಂಗಪಡಿಸಿಲ್ಲ. ಆದ್ದರಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವದಂತಿಗಳನ್ನು ನಂಬದಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದೆ. 

    ಈ ಘಟನೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರ ಸುರಕ್ಷತೆ ಕುರಿತು ಮತ್ತೆ ಗಂಭೀರ ಪ್ರಶ್ನೆಗಳನ್ನು ಎಬ್ಬಿಸಿದ್ದು, ಜನನಿಬಿಡ ಪ್ರದೇಶದಲ್ಲೇ ಇಂತಹ ಮಾರಣಾಂತಿಕ ದಾಳಿ ನಡೆದಿರುವುದು ಸ್ಥಳೀಯರಲ್ಲಿ ಆಘಾತ ಮತ್ತು ಆತಂಕಕ್ಕೆ ಕಾರಣವಾಗಿದೆ.

    ##Bantwal #BCRoad #DakshinaKannada #CrimeNews #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
    ಮಂಗಳೂರಿಗೆ “ಅಮ್ಮ”ನ ಆಗಮನ ಭಕ್ತರಲ್ಲಿ ಸಡಗರವೂ ಸಡಗರ….. ನಾಳೆ ನಗರಕ್ಕೆ ಇಬ್ಬರು ಕೇಂದ್ರ ಸಚಿವರ ಆಗಮನ
    ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
    ಕರ್ನಾಟಕ ಎಸ್‌ಎಸ್‌ಎಲ್‌ಸಿ 2026 ಫಲಿತಾಂಶ: ಇತಿಹಾಸದ ಅತ್ಯಧಿಕ ಉತ್ತೀರ್ಣ ಪ್ರಮಾಣ ಮತ್ತು ಟಾಪರ್‌ಗಳ ಸಾಧನೆ
    ಕರ್ನಾಟಕದಲ್ಲಿ 2 ಲಕ್ಷಕ್ಕೂ ಹೆಚ್ಚು ನಾಯಿ ಕಚ್ಚಿದ ಪ್ರಕರಣಗಳು …!ನಗರಗಳಲ್ಲಿ ‘ಸ್ಟ್ರೇ ಡಾಗ್ ಟೆರರ್’ — ಜನರು ಭಯದಲ್ಲಿ ಬದುಕುತ್ತಿದ್ದಾರೆ!
    “ಮಾರಿಕೊಂಡ ಮಾಧ್ಯಮದವರು ಯಾರು?” ಪ್ರಶ್ನೆಗೆ ಪ್ರಕಾಶ್ ರಾಜ್ ನಿರುತ್ತರ”ಪತ್ರಿಕಾಗೋಷ್ಠಿಯಲ್ಲೇ ಶುರುವಾದ ಭಾರೀ ವಿವಾದ ಏನು?
    KIOCL ಮತ್ತು NDMC ವಿಲೀನಕ್ಕೆ ಶಾಸಕ ಡಾ. ಭರತ್ ಶೆಟ್ಟಿಯಿಂದ ಕೇಂದ್ರ ಸಚಿವರಿಗೆ ಮನವಿ
    ತಮಿಳುನಾಡು ರಾಜಕೀಯದಲ್ಲಿ ದಿನಕ್ಕೊಂದು ಟ್ವಿಸ್ಟ್ -TVK wave ಎಷ್ಟು ದೂರ ಸಾಗುತ್ತದೆ?
    ಹಳೆಯ ಬಟ್ಟೆಗೂ ಹಣ ಸಿಗುತ್ತಾ?! ಬೆಂಗಳೂರಿನ ಈ ಸ್ಟಾರ್ಟ್‌ಅಪ್ ನಿಜಕ್ಕೂ ಶಾಕ್ ಕೊಡುತ್ತಿದೆ!
    PTCL ಕಾಯ್ದೆ ಉಲ್ಲಂಘಿಸಿದ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮಕ್ಕೆ ಒತ್ತಾಯ – ಕಂದಾಯ ಸಚಿವರಿಗೆ ದಲಿತ ನಾಯಕರ ಮನವಿ
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ಸಚಿನ್ ತೆಂಡೂಲ್ಕರ್ ಮಗಳ ಜಪಾನೀಸ್ ಕನೆಕ್ಷನ್ ಈಗ ದೇಶದ ಗಮನ ಸೆಳೆಯುತ್ತಿದೆ…ಸಾರಾ ಹೊಸ ಒಪ್ಪಂದ ಚರ್ಚೆಯಲ್ಲಿ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಉಡುಪಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ಸಂತೋಷ್ ಡಿ.ಎಸ್. ನೇಮಕ
    ಒಂದು ದಿನ ಕೈದಿ ಆಗ್ಬೇಕಾ? ಜೈಲು ಜೀವನ ಹೇಗಿರುತ್ತೆ ಅನ್ನೋ ಕುತೂಹಲಕ್ಕೀಗ ಚಂಚಲ್‌ಗುಡ ಜೈಲು ಬಾಗಿಲು ಈಗ ಸಾರ್ವಜನಿಕರಿಗೆ ಓಪನ್!
    ಪುಲ್ವಾಮಾ ದಾಳಿಯ ಮಾಸ್ಟರ್ಮೈಂಡ್ ಹಮ್ಜಾ ಬುರ್ಹಾನ್ ಹತ್ಯೆ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ರಹಸ್ಯ ಗುಂಡಿನ ದಾಳಿ
    ಮಕ್ಕಳ ಕೈಯಿಂದ ಮೊಬೈಲ್ ಕಸಿಯಲು ಮುಂದಾದ ಬ್ರಿಟನ್!ಯುಕೆಯ ನಿರ್ಧಾರಕ್ಕೆ ವಿಶ್ವದ ಗಮನ…
    ಅಪ್ಪ -ಅಮ್ಮ ಮಕ್ಕಳ–ಬಾಂಧವ್ಯಕ್ಕೆ ಎಚ್ಚರಿಕೆಯ ಗಂಟೆ……!ಸುತ್ತಿಗೆಯಿಂದ ಹೊಡೆದು ತಂದೆ-ತಾಯಿಯನ್ನೇ ಕೊಂದ ಮಗ!
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ನನ್ನನ್ನು ದುರ್ಬಲ ವ್ಯಕ್ತಿ ಅಂದುಕೊಳ್ಳಬೇಡಿ- U.T ಖಾದರ್
    ಇತಿಹಾಸ ಸೇರಿತು ಮಂಗಳೂರಿನ ಮೋತಿ ಮಹಲ್…..
    ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಪುಟ್ಟ ಜೀವವೊಂದು ಬಲಿ.. ಕೆಲವು ಮಕ್ಕಳಿಗೆ ಗಾಯ..
    Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
    ಹಳಿಯಾಳದಲ್ಲಿ ನೀರಿನ ಹಾಹಾಕಾರ… ಮಾರ್ಚ್ 16ರಂದು ಬೃಹತ್ ಪ್ರತಿಭಟನೆ 
    “ಸಮಾಜದ ಸಮಸ್ಯೆಗಳ ಪರಿಹಾರಕ್ಕೆ ಸಂಘಟನೆಗಳು ಮುಂದಾಗಬೇಕು”: ಡಾ. ಅಲ್ಲಮಪ್ರಭು ಶ್ರೀಗಳು
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!
    ‘ಅಮರ್ ಜವಾನ್ ಪಾರ್ಕ್’ಗೆ ಯುದ್ಧ ಟ್ಯಾಂಕ್, ಯುದ್ಧವಿಮಾನ ಸ್ಥಾಪನೆಗೆ ರಕ್ಷಣಾ ಸಚಿವರಿಗೆ ಸಂಸದೆ ಪ್ರಭಾ ಮಲ್ಲಿಕಾರ್ಜುನ ಮನವಿ
    ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
    ಎಷ್ಟೇ ಚಾಣಾಕ್ಷತನ ತೋರಿದರೂ, ಡಿಜಿಟಲ್ ಕಣ್ಣುಗಳಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.” AI ಸಣ್ಣ ಸುಳಿವು’ → ‘ನಿಖರ ಪತ್ತೆ’ ಜನರ ಭದ್ರತೆಗಾಗಿ ತಂತ್ರಜ್ಞಾನವೇ ಶಕ್ತಿಯುತ ಆಯುಧ ..!