📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಜ್ಪೆ ವಿಮಾನ ನಿಲ್ದಾಣದ ಬಳಿ ಅಸ್ಥಿಪಂಜರ ಪತ್ತೆ: ಸ್ನೇಹಿತನೇ ಕೊಲೆಗಾರನೇ?

    ಮಂಗಳೂರು | ನವೆಂಬರ್ 16, 2026

    ಬದುಕು ಕಟ್ಟಿಕೊಳ್ಳಲು ಉತ್ತರ ಪ್ರದೇಶದಿಂದ ಮಂಗಳೂರಿಗೆ ಬಂದಿದ್ದ ಯುವ ಕಾರ್ಮಿಕನೊಬ್ಬ ನಿಗೂಢವಾಗಿ ನಾಪತ್ತೆಯಾಗಿದ್ದು, ಇದೀಗ ಆತನ ಅಸ್ಥಿಪಂಜರ ಬಜ್ಪೆ ವಿಮಾನ ನಿಲ್ದಾಣದ ಸಮೀಪ ಪತ್ತೆಯಾಗಿದೆ. ಸ್ನೇಹಿತನೊಂದಿಗಿನ ಹಣಕಾಸಿನ ವ್ಯವಹಾರವೇ ಕೊಲೆಗೆ ಕಾರಣವಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶದಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿರುವುದಾಗಿ ವರದಿಯಾಗಿದೆ.

    ಉತ್ತರ ಪ್ರದೇಶ ಮೂಲದ ಮನೀಶ್ ಶರ್ಮಾ (25) ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುತ್ತಿಗೆ ಆಧಾರದಲ್ಲಿ ಹಿಟಾಚಿ ಚಾಲಕನಾಗಿ ಕೆಲಸ ಮಾಡುತ್ತಿದ್ದರು. ಅಕ್ಟೋಬರ್ 27ರಂದು ರಾತ್ರಿ ಸ್ನೇಹಿತ ಶ್ರವಣ್ ಜೊತೆ ಊಟಕ್ಕೆಂದು ಬೈಕ್‌ನಲ್ಲಿ ತೆರಳಿದ್ದ ಅವರು ಮರಳಿ ಬಂದಿರಲಿಲ್ಲ.

    ಮನೀಶ್‌ನ ಮೊಬೈಲ್ ಸ್ವಿಚ್ ಆಫ್ ಆಗಿದ್ದರಿಂದ ಆತಂಕಗೊಂಡ ಸಹೋದರ ಸೋನು ಶರ್ಮಾ ಹುಡುಕಾಟ ಆರಂಭಿಸಿದ್ದರು. ನವೆಂಬರ್ 1ರಂದು ಬಜ್ಪೆ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

    Also Read  NSAದುರ್ಬಳಕೆ ಆರೋಪ: ಜಿಲ್ಲಾಧಿಕಾರಿಗೆ ₹5 ಲಕ್ಷ ದಂಡ!

    ಈ ನಡುವೆ ಮನೀಶ್ ಖಾತೆಯಿಂದ ₹63,000 ಹಾಗೂ ₹720 ಸೇರಿದಂತೆ ಒಟ್ಟು ₹63,720 ಹಣ ವರ್ಗಾವಣೆಯಾಗಿರುವುದು ಕುಟುಂಬದ ಅನುಮಾನಕ್ಕೆ ಕಾರಣವಾಗಿತ್ತು. ಈ ಹಣ ಮೊದಲು ರಾಜನ್ ಎಂಬಾತನ ಖಾತೆಗೆ ಹೋಗಿ, ಅಲ್ಲಿಂದ ಸ್ನೇಹಿತನ ಖಾತೆಗೆ ವರ್ಗಾವಣೆಯಾಗಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ ಎಂದು ವರದಿಯಾಗಿದೆ.

    ಹುಡುಕಾಟದ ವೇಳೆ ಹಳೆ ವಿಮಾನ ನಿಲ್ದಾಣ ರಸ್ತೆಯ ನಿರ್ಜನ ಪ್ರದೇಶದಲ್ಲಿ ಅಸ್ಥಿಪಂಜರದ ಅವಶೇಷಗಳು ಪತ್ತೆಯಾಗಿವೆ. ಸ್ಥಳದಲ್ಲಿ ದೊರೆತ ಬಟ್ಟೆಯನ್ನು ಮನೀಶ್ ಧರಿಸಿದ್ದ ಬಟ್ಟೆಯೆಂದು ಸಹೋದರ ಗುರುತಿಸಿದ್ದಾರೆ.

    ಹಣಕಾಸಿನ ವಿಚಾರಕ್ಕೆ ಸಂಬಂಧಿಸಿದಂತೆ ಸ್ನೇಹಿತನೇ ಮನೀಶ್‌ನನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉತ್ತರ ಪ್ರದೇಶದ ಕುಶಿನಗರದಲ್ಲಿ ಆರೋಪಿಯನ್ನು ಬಂಧಿಸಿರುವುದಾಗಿ ನವೆಂಬರ್ 15ರ ವರದಿ ತಿಳಿಸಿದೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.

    Also Read  ಪ್ರಮೋದ್ ಮಧ್ವರಾಜ್ ಅವರಿಗೆ ಕೊನೆಗೂ ಸಿಕ್ಕಿತು ಗೌರವ

    ಉದ್ಯೋಗ ಅರಸಿ ದೂರದ ಊರುಗಳಿಂದ ಬರುವ ಕಾರ್ಮಿಕರ ಸುರಕ್ಷತೆ ಮತ್ತು ಅವರ ನಾಪತ್ತೆ ಪ್ರಕರಣಗಳ ಗಂಭೀರತೆಯನ್ನು ಈ ಘಟನೆ ಮತ್ತೊಮ್ಮೆ ಎತ್ತಿ ತೋರಿಸಿದೆ. ಸ್ನೇಹ, ನಂಬಿಕೆ ಮತ್ತು ಹಣದ ವ್ಯವಹಾರಗಳ ನಡುವೆ ನಡೆದಿರುವ ಈ ದುರಂತಕ್ಕೆ ನ್ಯಾಯ ಸಿಗಬೇಕಿದೆ.

    ##Bajpe #Mangaluru #CrimeNews #MissingPerson #UttarPradesh #KarnatakaPolice #KaravaliMarutha

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಾಲದ ಹಣ ಕೇಳಿದ ವಿಚಾರಕ್ಕೆ ಚೂರಿಯಿಂದ ಕೊಲೆ ಯತ್ನ..
    ಭಾರತ ಬಗ್ಗೆ ಟ್ರಂಪ್ ಡಬಲ್ ಸ್ಟ್ಯಾಂಡ್…!ವಿವಾದ ಸೃಷ್ಟಿಸಿ, ಬಳಿಕ ಸಮಾಧಾನದ ಮಾತು
    ಒಬ್ಬರೇ ಹಾಗಾಗಿ ಕಾರಿನಲ್ಲಿ ಯಾಕೆ? ಫ್ಲೈಟ್ ಫೇರ್ ಜಾಸ್ತಿ ಇದೆ..ಟ್ರೈನ್ ಲೇಟ್ ಆಗುತ್ತೆ..so ಹೆಗೋಗೋಣ….!? ಹೀಗೂ ಹೋಗ್ಬಹುದು ತಿಳ್ಕೊಳ್ಳಿ..
    E20 ಪೆಟ್ರೋಲ್‌ನಿಂದ ಮರ್ಸಿಡಿಸ್ ಕಾರಿನ ಮೈಲೇಜ್ ಕುಸಿತವೇ? ವೈರಲ್ ವಿಡಿಯೋ ಬಳಿಕ ಕಂಪನಿಯ ಸ್ಪಷ್ಟನೆ; ನಿಜ ಏನು?
    5 ದಿನಗಳ ಬಿಡದಿ ಹೋರಾಟಕ್ಕೆ ಪೊಲೀಸರ ಬ್ರೇಕ್! ರೈತರು ವಶಕ್ಕೆ,“ಭೂಮಿ ಉಳಿಸಲು ಜೈಲಿಗೂ ಸಿದ್ಧ” ಎಂದ ದೇವೇಗೌಡ…!
    ಬಂಗಾಳದಲ್ಲಿ ಬಿಜೆಪಿಯ ಯುದ್ಧೋನ್ಮಾದ, ದೀದಿಯ ರಚ್ಚೆ…
    🚨 BREAKING: ಬಿಜೆಪಿಯಿಂದ ಅಣ್ಣಾಮಲೈ ಔಟ್?!…ರಾತ್ರೋರಾತ್ರಿ ರಾರಾಜಿಸಿದ ಬಂಡಾಯದ ಪೋಸ್ಟರ್‌ಗಳು! 
    ರೇಪ್ ಆರೋಪಿಗೆ ಹೂಮಳೆ, ಹೂವಿನಹಾರ,ಘೋಷಣೆ, ರಾಜಕೀಯ ರೀತಿ ರೋಡ್ ಶೋ! ಉತ್ತರ ಪ್ರದೇಶದ ವೈರಲ್ ವಿಡಿಯೋಗೆ ದೇಶಾದ್ಯಂತ ಆಕ್ರೋಶ
    ಗುರು ಬ್ರಹ್ಮ – ಗುರು ವಿಷ್ಣು ಅನ್ನುವ ಕಾಲ ಮುಗಿದು ಹೋಯ್ತೇ?
    ದೆಹಲಿಯಲ್ಲಿ ಬಸ್‌ನಲ್ಲಿ ನಿರ್ಭಯಾ ನೆನಪಿಸುವ ಘಟನೆ -30 ವರ್ಷದ ಮಹಿಳೆ ಗ್ಯಾಂಗ್‌ರೇಪ್ ಶಾಕ್
    ನಂದಿಬೆಟ್ಟದ ಬಳಿ ಪ್ರೇಯಸಿ ಕೊಲೆಗೈದು ಪ್ರಿಯಕರನ ಆತ್ಮಹತ್ಯೆ ಯತ್ನ?ಲವ್ ಜಿಹಾದ್’ ಆರೋಪ ಹೊರಿಸಿದ ತಾಯಿ!
    ಮುಂದಿನ ಕೆಲವು ದಿನ ಭಾರಿ ಗಾಳಿ ಮಳೆ ಗುಡುಗು -ಮಿಂಚಿನ ಎಚ್ಚರಿಕೆ 
    ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….
    ಪ್ರತಿಭಟನೆ ಜನರ ಹಕ್ಕು, ಜನರ ಧ್ವನಿ ಅಡಗಿಸಲು ಸಾಧ್ಯವಿಲ್ಲ! ದಿಲ್ಲಿ ಪೊಲೀಸರಿಗೆ ಸುಪ್ರೀಂ ಎಚ್ಚರಿಕೆ…
    ಸಚಿವ ಜಮೀರ್ ಕಥೆ ಗೋವಿಂದ!!!?
    ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
    ಗೃಹಲಕ್ಷ್ಮಿ ಹಣ ಉಳಿಸಿ ದೇವಿಗೆ ₹17 ಲಕ್ಷ ದೇಣಿಗೆ!
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    “ಭಾರತೀಯ ಕುಟುಂಬ ಆಸ್ತಿ ವಿವಾದಗಳಲ್ಲಿ ಮಧ್ಯಸ್ಥಿಕೆಯ ಮಹತ್ವವನ್ನು ಮತ್ತೊಮ್ಮೆ ಎತ್ತಿಹಿಡಿದ ಸುಪ್ರೀಂ ಕೋರ್ಟ್”
    ಕಸ ಎಸೆದರೆ ದುಪ್ಪಟ್ಟು ದಂಡ: ಬೆಂಗಳೂರು ಶುರು ಮಾಡಿದೆ, ಮಂಗಳೂರು ಯಾವಾಗ? ಈಗ ಮಾತಲ್ಲ, ಕಠಿಣ ಕಾರ್ಯಾಚರಣೆ ಬೇಕು,ಕಟ್ಟುನಿಟ್ಟಿನ ಕ್ರಮಗಳಾಗ್ಬೆಕ್ ..
    ನದಿಯಲ್ಲ ರಸ್ತೆ..!ಕೈಕಂಬದ ಕಂದಾವರದ ಈ ರಸ್ತೆ ಕೆರೆಯಾಗಿ ನೀರಿನಲ್ಲಿ ಮುಳುಗಿದೆ!ಶಾಲಾ ಮಕ್ಕಳಿಂದ ವೃದ್ಧರವರೆಗೆ ಎಲ್ಲರಿಗೂ ಜೀವಭಯ!
    ಪುತ್ತೂರಿನ ದೇವಸ್ಥಾನ ಪದಾಧಿಕಾರಿಗಳ ವಿರುದ್ಧ FIR ..!
    ಒಂದು ದಿನ ಕೈದಿ ಆಗ್ಬೇಕಾ? ಜೈಲು ಜೀವನ ಹೇಗಿರುತ್ತೆ ಅನ್ನೋ ಕುತೂಹಲಕ್ಕೀಗ ಚಂಚಲ್‌ಗುಡ ಜೈಲು ಬಾಗಿಲು ಈಗ ಸಾರ್ವಜನಿಕರಿಗೆ ಓಪನ್!
    ಜಮ್ಮು-ಕಾಶ್ಮೀರದಲ್ಲಿ ಖಾಕಿ ಮೇಲೆ ಖಾಕಿ ದಾಳಿ? ಹೈಡ್ರಾಮಾ: ಕರ್ನಲ್, ಮೇಜರ್ ಸೇರಿ 40 ಸೇನಾ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲು.
    ಬಳ್ಳಾರಿ “ಪೊಲೀಸ್ ಗನ್‌ಮನ್ ಎಕ್ಸ್‌ಟಾರ್ಷನ್”ಇಲಾಖೆಗೆ ಕಳಂಕ: ಗನ್‌ಮನ್ ಸೇರಿ ಮೂವರ ವಿರುದ್ಧ ಪ್ರಕರಣ!
    ಗರ್ಭಿಣಿ ವೇಷದಲ್ಲಿ ರಹಸ್ಯ ಕಾರ್ಯಾಚರಣೆ: ಭ್ರೂಣ ಲಿಂಗ ಪತ್ತೆ ಜಾಲಕ್ಕೆ ಬಲೆ
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    ಮಸೀದಿ ಹುಂಡಿಗೂ ಲಗ್ಗೆ ಇಟ್ಟ ಕಳ್ಳರು….!
    ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
    ಟೇಕಾಫ್‌ ಬಳಿಕ RAF ಯುದ್ಧವಿಮಾನ ಪತನ: ಪೈಲಟ್‌ಗಳು ಪಾರು