📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬೈಕಂಪಾಡಿ ಇಲಿ ಕಾಟಕ್ಕೆ ‘ಚೀಸ್ ಬಾಲ್ ‘ಘಟಕ ಸೀಲ್!

    ಮಂಗಳೂರಿನಲ್ಲಿ ಆಹಾರ ಸುರಕ್ಷತಾ ಇಲಾಖೆಯ ದಾಳಿ:ಅಶುಚಿತ್ವ ಕಂಡು ಮಕ್ಕಳ ನೆಚ್ಚಿನ cheese ಬಾಲ್ ತಿನಿಸು food factory ಸೀಲ್!

    ಸುರತ್ಕಲ್‌ನ ಹೋಟೆಲ್‌ಗಳಲ್ಲೂ ಅವ್ಯವಸ್ಥೆ ಪತ್ತೆ – ಮೆಕ್‌ಡೊನಾಲ್ಡ್ಸ್ ಸೇರಿದಂತೆ ಹಲವು ಕಡೆ ಪರಿಶೀಲನೆ

    ಮಂಗಳೂರು: ಹೋಟೆಲ್‌ಗಳಲ್ಲಿ ನಾವು ಸೇವಿಸುವ ಆಹಾರ ಎಷ್ಟು ಸುರಕ್ಷಿತ? ತಿಂಡಿ ತಯಾರಿಸುವ ಘಟಕಗಳಲ್ಲಿ ಸ್ವಚ್ಛತೆ ಕಾಪಾಡಲಾಗುತ್ತಿದೆಯೇ? ಇಂತಹ ಪ್ರಶ್ನೆಗಳಿಗೆ ಉತ್ತರ ಹುಡುಕುವ ನಿಟ್ಟಿನಲ್ಲಿ ಆಹಾರ ಸುರಕ್ಷತಾ ಇಲಾಖೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಿಢೀರ್ ತಪಾಸಣೆ ನಡೆಸಿದೆ.

    ನವೆಂಬರ್ 16ರಂದು ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆಯಂತೆ, ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿ.ಎಚ್. ನೇತೃತ್ವದಲ್ಲಿ ಐದು ತಂಡಗಳನ್ನು ರಚಿಸಿ ಸುರತ್ಕಲ್ ಪರಿಸರದ ವಿವಿಧ ಆಹಾರ ಮಳಿಗೆಗಳು ಮತ್ತು ಘಟಕಗಳ ಮೇಲೆ ದಾಳಿ ನಡೆಸಲಾಯಿತು.

    Also Read  ಅಯೋಧ್ಯೆ ವಿವಾದದ ಬೆನ್ನಲ್ಲೇ ಬದರಿನಾಥ ದೇಗುಲದಲ್ಲೂ ಕಾಣಿಕೆ ದುರುಪಯೋಗದ ಆರೋಪ – ದೇಶಾದ್ಯಂತ ಭಕ್ತರಲ್ಲಿ ಆತಂಕ..!

    ಚೀಸ್ ಬಾಲ್ ಘಟಕದಲ್ಲಿ ಇಲಿ ಕಾಟ!

    ಬೈಕಂಪಾಡಿ ಕೈಗಾರಿಕಾ ಪ್ರದೇಶದಲ್ಲಿರುವ ಫಾರ್ಚೂನ್ ಇಂಡಸ್ಟ್ರೀಸ್‌ನ ಚೀಸ್ ಬಾಲ್ ತಯಾರಿಕಾ ಘಟಕದಲ್ಲಿ ಪರಿಶೀಲನೆ ನಡೆಸಿದಾಗ ಇಲಿಗಳು ಓಡಾಡುತ್ತಿರುವುದು ಹಾಗೂ ಸ್ವಚ್ಛತೆಯ ಕೊರತೆ ಕಂಡುಬಂದಿದೆ. ಆಹಾರ ತಯಾರಿಕಾ ಘಟಕದಲ್ಲೇ ಇಂತಹ ಪರಿಸ್ಥಿತಿ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಘಟಕಕ್ಕೆ ಬೀಗ ಜಡಿದಿದ್ದಾರೆ.

    ಹೋಟೆಲ್‌ಗಳಲ್ಲೂ ಸ್ವಚ್ಛತೆ ಕೊರತೆ

    ಸುರತ್ಕಲ್‌ನ ಸೂರಜ್ ಇಂಟರ್‌ನ್ಯಾಷನಲ್ ಹೋಟೆಲ್, ಮೆಕ್‌ಡೊನಾಲ್ಡ್ಸ್, ಮೋರ್ ರಿಟೇಲ್ ಮಳಿಗೆ, ಬ್ಲಿಂಕಿಟ್ ಹಾಗೂ ಎನ್‌ಐಟಿಕೆ ವಿದ್ಯಾರ್ಥಿ ನಿಲಯಗಳಿಗೆ ಆಹಾರ ಪೂರೈಸುವ ಅಡುಗೆಮನೆಗಳಲ್ಲೂ ಪರಿಶೀಲನೆ ನಡೆಸಲಾಗಿದೆ.

    ಸೂರಜ್ ಇಂಟರ್‌ನ್ಯಾಷನಲ್ ಹೋಟೆಲ್ ಮತ್ತು ಮೆಕ್‌ಡೊನಾಲ್ಡ್ಸ್‌ನ ಅಡುಗೆಮನೆಗಳಲ್ಲಿ ಸ್ವಚ್ಛತೆಯ ಕೊರತೆ ಪತ್ತೆಯಾಗಿದೆ. ಈ ಹಿನ್ನೆಲೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸುವ ಪ್ರಕ್ರಿಯೆ ಆರಂಭಿಸಲಾಗಿದೆ. ಎರಡೂ ಕಡೆಗಳಿಂದ ಆಹಾರದ ಮಾದರಿಗಳನ್ನು ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

    Also Read  ಕರ್ನಾಟಕಕ್ಕೆ ಮಳೆ ಅಲರ್ಟ್‌ | ಸೆ.24ರಂದು ಕರಾವಳಿಗೆ ರೆಡ್‌ ಅಲರ್ಟ್‌

    ಬಳಸಿದ ಅಡುಗೆ ಎಣ್ಣೆಯ ಮೇಲೂ ನಿಗಾ

    ಇದೇ ಸಂದರ್ಭದಲ್ಲಿ ಹೋಟೆಲ್‌ಗಳು ಮತ್ತು ರೆಸ್ಟೋರೆಂಟ್‌ಗಳಲ್ಲಿ ಒಮ್ಮೆ ಬಳಸಿದ ಅಡುಗೆ ಎಣ್ಣೆಯನ್ನು ಪದೇಪದೇ ಆಹಾರ ತಯಾರಿಕೆಗೆ ಬಳಸುವುದನ್ನು ತಡೆಯುವ ಅಭಿಯಾನವನ್ನೂ ಇಲಾಖೆ ಆರಂಭಿಸಿದೆ. ಬಳಸಿದ ಎಣ್ಣೆಯನ್ನು ಅಧಿಕೃತ ಸಂಸ್ಥೆಗಳ ಮೂಲಕ ಸಂಗ್ರಹಿಸಿ ಜೈವಿಕ ಡೀಸೆಲ್ ಉತ್ಪಾದನೆಗೆ ಕಳುಹಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

    ಗ್ರಾಹಕರ ಆರೋಗ್ಯದ ಜವಾಬ್ದಾರಿ ಯಾರದ್ದು?

    ರುಚಿ, ಬೆಲೆ ಮತ್ತು ಆಕರ್ಷಕ ಪ್ಯಾಕಿಂಗ್‌ಗೆ ಆದ್ಯತೆ ನೀಡುವ ಗ್ರಾಹಕರು ಆಹಾರದ ಗುಣಮಟ್ಟ ಹಾಗೂ ಸ್ವಚ್ಛತೆಯ ಬಗ್ಗೆಯೂ ಎಚ್ಚರಿಕೆ ವಹಿಸಬೇಕಿದೆ. ಆಹಾರ ತಯಾರಿಕಾ ಘಟಕಗಳಿಂದ ಹಿಡಿದು ಹೋಟೆಲ್‌ಗಳ ಅಡುಗೆಮನೆಯವರೆಗೆ ಸ್ವಚ್ಛತೆ ಕಡ್ಡಾಯವಾಗಬೇಕು. ಅಧಿಕಾರಿಗಳ ಇಂತಹ ದಿಢೀರ್ ತಪಾಸಣೆಗಳು ನಿರಂತರವಾಗಿ ನಡೆದಾಗ ಮಾತ್ರ ಸಾರ್ವಜನಿಕರ ಆರೋಗ್ಯಕ್ಕೆ ಸೂಕ್ತ ರಕ್ಷಣೆ ಸಿಗಲು ಸಾಧ್ಯ.

    ##Mangaluru #Baikampady #FoodSafety #Surathkal #HotelInspection #FoodHygiene #KaravaliMarutha

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    Tesla Experience Centre ಬೆಂಗಳೂರು ಈಗ EV ಕ್ರೇಜ್ ಹಬ್!car craze ಇರುವವರು ಮುಗಿಬೀಳುತ್ತಿದ್ದಾರೆ..
    ಕಾಂಗೋದಲ್ಲಿ ಎಬೋಲಾ ಅಟ್ಟಹಾಸ:ಜಗತ್ತಿಗೆ ಮತ್ತೆ ಸಾಂಕ್ರಾಮಿಕ ಭೀತಿಯ ಗಂಟೆ..!
    ಕಂದಾಯ ಸಚಿವರ ದಕ್ಷಿಣ ಕನ್ನಡ ಜಿಲ್ಲಾ ಪ್ರವಾಸ
    ಮಂಡ್ಯಒಂದೇ ಕುಟುಂಬದ ಐವರ ಜಲಸಮಾಧಿ: ಕಾವೇರಿ ಒಡಲಲ್ಲಿವಿಧಿಯ ಕ್ರೂರ ಆಟಕ್ಕೆ ಕಣ್ಣೀರ ಕಡಲಾದ ಮುತ್ತತ್ತಿ!
    ರೀಲ್ಸ್ ಮಾಡುವ ಕನಸು… ಕ್ಷಣದಲ್ಲೇ ದುರ್ಘಟನೆ,  ಜೀವವನ್ನೇ ಕಳೆದುಕೊಂಡ ಬಾಲಕ.
    ಶಿರ್ತಾಡಿ ಭಾಗದಲ್ಲಿ ಮರಗಳ್ಳತನ ಆರೋಪ:  ತನಿಖೆ ನಡೆಸಿ ಕ್ರಮ ಕೈಗೊಳ್ಳಲು ಆಗ್ರಹ
    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
    ಪೆಟ್ರೋಲ್ ಬಂಕ್‌ನಲ್ಲಿ ಅಳತೆ ಮೋಸ? ಗ್ರಾಹಕರೇ ಎಚ್ಚರ!
    ಬಡ ಕುಟುಂಬಕ್ಕೆ ವಂಚನೆ : ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಎಫ್‌ಐಆರ್ ದಾಖಲು!
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    🎬 ಸೀನ್ ಹಿಂದೆ ಇರುವ ಸೀಕ್ರೆಟ್ ಏನು?ಧುರಂಧರ್ ಚಿತ್ರದ ಈ ಸಣ್ಣ ಕ್ಷಣವೇ ಈಗ ದೊಡ್ಡ ಸೆನ್ಸೇಶನ್ ಆಗಿದೆ…ಮುಸ್ತಫಾ ಫುಲ್ ಖುಷ್
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    ಹತ್ತು ವರ್ಷದಿಂದ ಪೊಲೀಸರಿಗೆ ಬೇಕಾದ ಆರೋಪಿಯನ್ನು ಕೊನೆಗೂ ಬಂಧಿಸಿದ ಪೊಲೀಸರು
    ನೆತನ್ಯಾಹು ಎಲ್ಲಿದ್ದಾರೆ? ಬದುಕಿದ್ದರೆ ಹಿಂಬಾಲಿಸಿ ಕೊಲ್ಲುತ್ತೇವೆ ಎಂದ ಇರಾನ್
    ಪ್ರೀತಿಸಿ ಓಡಿಹೋದ ಸೇಡಿನ ಬೆಂಕಿಗೆ ಬಲಿಯಾದ ನಿರ್ದೋಷಿ ಅಣ್ಣ..!
    ರಾಜಧಾನಿಯ ಫುಟ್‌ಪಾತ್ ಮೇಲಿದ್ದ ಮಗುವನ್ನು ಎತ್ತಿಕೊಂಡು ಹೋಗಿ ಕ್ರೌರ್ಯ ಮೆರೆದ ಕಾಮುಕನ ಧೈರ್ಯ ಮತ್ತು ಭೀಕರ ಹತ್ಯೆ ಬಿಚ್ಚಿಟ್ಟ ಸತ್ಯ!
    ಉಡುಪಿಯ ಮಾರ್ಕೆಟ್‌ 99 ಮ್ಯಾನೇಜರ್‌ ವಿರುದ್ಧ ₹13.39 ಲಕ್ಷ ದುರ್ಬಳಕೆ ಪ್ರಕರಣ ದಾಖಲು…
    7 ಲಕ್ಷದ ಸುಪಾರಿ ನೀಡಿ ತಾಯಿಯನ್ನು accident ಮಾಡಿ ಕೊಂದ ಮಗಳ ವಿಕೃತ ಘಟನೆ..!
    ಕಪ್ಪು ಸಮುದ್ರದಲ್ಲಿ ಸರಕು ಹಡಗಿನ ಮೇಲೆ ರಷ್ಯಾ ದಾಳಿ: ನಾಲ್ವರು ಭಾರತೀಯರು ಸಾವು
    ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ
    ರಾಜ್ಯಮಟ್ಟದಲ್ಲಿ ಸದ್ದು ಮಾಡಿದ ತೆರಿಗೆ ವಂಚನೆ ಪ್ರಕರಣದ ನಂತರವೂ ಅಧಿಕಾರಿಗಳು ಪಾಠ ಕಲಿತಿಲ್ಲವೇ….!?
    ಕಾಂಗ್ರೆಸ್ ದೇಶದ ಹಿತಾಸಕ್ತಿಯ ವಿರುದ್ಧ ನಡೆದುಕೊಳ್ಳುತ್ತಿದೆ- ಪ್ರಧಾನಿ ಮೋದಿ ಆರೋಪ
    ರಸ್ತೆಯ ವಿಚಾರಕ್ಕೆ ನೆರೆಹೊರೆಯರ ನಡುವೆ ಬಾರಿ ಗಲಾಟೆ !
    ಸಚಿವ ಜಮೀರ್ ಕಥೆ ಗೋವಿಂದ!!!?
    ಆಸ್ತಿ ಬರೆದುಕೊಟ್ಟ ಅಪ್ಪ ಬೇಡವಾದನಾ?92ರ ತಂದೆ ಕೋರ್ಟ್‌ನಲ್ಲಿ ಗೆದ್ದ ಕಥೆ!
    ಅಹಮದಾಬಾದ್ ಬಾಂಬ್ ಸ್ಫೋಟ:38 ಮಂದಿಗೆ ಗಲ್ಲು ಎತ್ತಿಹಿಡಿದ ಹೈಕೋರ್ಟ್
    *ಬೈಕಂಪಾಡಿ ಹೆದ್ದಾರಿ ಡಕಾಯಿತಿ, 23 ಲಕ್ಷ ಮೌಲ್ಯದ ಸೊತ್ತು ದರೋಡೆ ಪ್ರಕರಣ: 3 ಆರೋಪಿಗಳು ಸೆರೆ.
    ₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
    ಪ್ರಜ್ಞಾನಂದನ ದಿಗ್ವಿಜಯ…ಚೆಸ್ ಚಕ್ರವ್ಯೂಹದಲ್ಲಿ ದಿಗ್ಗಜರನ್ನೆಲ್ಲಾ ಮಣಿಸಿ ಸಿಂಹಾಸನಕ್ಕೇರಿದ ಭಾರತೀಯ ಬಾಲಪ್ರತಿಭೆ! 
    ಜೈನ ಮುನಿ… ಇರಾನ್‌ನ ಇಸ್ಲಾಮಿಕ್ ಸರ್ವೋಚ್ಚ ನಾಯಕನ ಅಂತ್ಯಕ್ರಿಯೆಯಲ್ಲಿ?