📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    Must read…ನಾಗಪ್ರಸನ್ನರ ನ್ಯಾಯಾಲಯದಲ್ಲಿ ‘ಸುಳ್ಳು ಜಾತಿ-ಆದಾಯ ಪ್ರಮಾಣಪತ್ರ ಮುಂದಿಟ್ಟ ಸಾಹುಕಾರ್ ಪುತ್ರಿಗೆ ಕ್ಲಾಸ್! ಅರುಣ್ ಶ್ಯಾಮ್ ವಾದಕ್ಕೆ ನಾಗಪ್ರಸನ್ನರ ಒಂದೊಂದು ಪ್ರಶ್ನೆಯೂ ವ್ಯವಸ್ಥೆಗೆ ಕನ್ನಡಿಯಾಯಿತು!”

    “‘ರಿಸರ್ವೇಶನ್ ಹಟಾವೋ’ ಅಭಿಯಾನ ದೇಶಾದ್ಯಂತ ಟ್ರೆಂಡ್… ಅತ್ತ ಹೈಕೋರ್ಟ್‌ನಲ್ಲಿ ನಕಲಿ ಜಾತಿ-ಆದಾಯ ಪ್ರಮಾಣಪತ್ರ ಪ್ರಕರಣ! ವ್ಯವಸ್ಥೆ ಎಷ್ಟು ಕೊಳೆತಿದೆ?”ರಾಜಕೀಯದಲ್ಲಿ ಮೀಸಲು ಪ್ರಮುಖ ಚರ್ಚೆಯ ವಿಷಯವಾಗಿರುವಾಗ, ಮತ್ತೊಂದೆಡೆ ಅದರ ದುರುಪಯೋಗದ ಆರೋಪಗಳು ಹೊರಬರುತ್ತಿರುವುದು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಾಗಿದೆ. 

    ದೇಶಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ‘ರಿಸರ್ವೇಶನ್ ಹಟಾವೋ’ ಅಭಿಯಾನ ಭಾರೀ ಚರ್ಚೆಗೆ ಗ್ರಾಸವಾಗಿದೆ. ಲಕ್ಷಾಂತರ ಜನರು ಮೀಸಲು ವ್ಯವಸ್ಥೆಯಲ್ಲಿ ಸುಧಾರಣೆ, ಪಾರದರ್ಶಕತೆ ಮತ್ತು ನಿಜವಾದ ಅರ್ಹರಿಗೆ ನ್ಯಾಯ ಸಿಗಬೇಕು ಎಂಬ ಬೇಡಿಕೆಯನ್ನು ಮುಂದಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲೇ ಕರ್ನಾಟಕ ಹೈಕೋರ್ಟ್‌ನಲ್ಲಿ ನಡೆದ ಒಂದು ಪ್ರಕರಣ ಮತ್ತೊಮ್ಮೆ ಮೀಸಲು ವ್ಯವಸ್ಥೆಯ ದುರುಪಯೋಗದ ಬಗ್ಗೆ ತೀವ್ರ ಪ್ರಶ್ನೆಗಳನ್ನು ಎಬ್ಬಿಸಿದೆ.

    ಬೆಂಗಳೂರಿನಲ್ಲಿ ವಿಚಾರಣೆಗೆ ಬಂದ ಪ್ರಕರಣದಲ್ಲಿ, ಕೆಪಿಎಸ್‌ಸಿ ಕೈಗಾರಿಕಾ ವಿಸ್ತರಣಾಧಿಕಾರಿ ನೇಮಕಾತಿಯ ವೇಳೆ ಸುಳ್ಳು ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸಿ ಉದ್ಯೋಗ ಪಡೆದಿದ್ದಾರೆ ಎಂಬ ಆರೋಪ ಎದುರಿಸುತ್ತಿರುವ ಸುಮಾ ಎಸ್. ಸಾಹುಕಾರ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ತೀವ್ರವಾಗಿ ಪ್ರಶ್ನಿಸಿತು. ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರ ಪೀಠ, ಅರ್ಜಿದಾರರ ವಿರುದ್ಧ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸುವಂತೆ ಕೇಳಿದ್ದ ಅರ್ಜಿಯ ವಿಚಾರಣೆ ವೇಳೆ ಹಲವು ಕಟು ಪ್ರಶ್ನೆಗಳನ್ನು ಕೇಳಿತು.

    Also Read  ಅಕ್ರಮ ಪ್ರವೇಶ, ದೌರ್ಜನ್ಯ, ಹಾಗೂ ಕೃಷಿ ಚಟುವಟಿಕೆಗೆ ತಡೆಯ ಬಗ್ಗೆ ದೂರು ದಾಖಲು

    ನ್ಯಾಯಾಲಯದ ಪ್ರಶ್ನೆಗಳು ಪ್ರಕರಣದ ಗಂಭೀರತೆಯನ್ನು ಸ್ಪಷ್ಟಪಡಿಸಿದವು. “ವರ್ಷಕ್ಕೆ ಕೇವಲ ₹40 ಸಾವಿರ ಆದಾಯವಿದೆ ಎಂದು ಹೇಗೆ ತೋರಿಸಿದ್ದೀರಿ? ಕೆಪಿಎಸ್‌ಸಿ ಅಧ್ಯಕ್ಷರ ಸಂಬಳವೇ ತಿಂಗಳಿಗೆ ಲಕ್ಷಾಂತರ (ಸುಮಾರು2.70lakhs)ರೂಪಾಯಿಗಳಿರುವಾಗ ಈ ಪ್ರಮಾಣಪತ್ರವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ?” ಎಂದು ನ್ಯಾಯಪೀಠ ಪ್ರಶ್ನಿಸಿತು. ಜೊತೆಗೆ, ತಪ್ಪು ಮಾಹಿತಿ ನೀಡಿ ನಿಜವಾದ ಬಡ ಅಭ್ಯರ್ಥಿಯ ಅವಕಾಶ ಕಸಿದುಕೊಂಡಿರುವ ಆರೋಪವನ್ನು ಹೇಗೆ ಸಮರ್ಥಿಸಿಕೊಳ್ಳುತ್ತೀರಿ ಎಂದು ಕೂಡ ಕಿಡಿಕಾರಿತು.

    ಇನ್ನೂ ಒಂದು ಪ್ರಮುಖ ಪ್ರಶ್ನೆ ನ್ಯಾಯಾಲಯದಿಂದ ಕೇಳಿಬಂತು.ನಿಮ್ಮ ಅರ್ಜಿದಾರರು 3ಬಿ ಮೀಸಲು ಕೆಟಗರಿಯಲ್ಲಿ ಕುಟುಂಬದ ಒಟ್ಟು ವಾರ್ಷಿಕ ಆದಾಯ ತೋರಿಸುವ ಮೂಲಕ ಅರ್ಹ ಬಡ ಅಭ್ಯರ್ಥಿಯೊಬ್ಬರ ಭವಿಷ್ಯವನ್ನೇ ಕಿತ್ತುಕೊಂಡಿದ್ದಾರೆ,” “ನೀವು ಅಭ್ಯರ್ಥಿತನ ಹಿಂಪಡೆದರೆ ಎಲ್ಲವೂ ಸರಿಯಾಗಿಬಿಡುತ್ತದೆಯೇ? ನಿಮ್ಮಿಂದ ವಂಚನೆಗೊಳಗಾದ ನಿಜವಾದ ಅರ್ಹ ಅಭ್ಯರ್ಥಿಗೆ ನ್ಯಾಯವನ್ನು ಯಾರು ಕೊಡುತ್ತಾರೆ?”ಎಂಬ ಪ್ರಶ್ನೆ ಪ್ರಕರಣದ ಸಾಮಾಜಿಕ ಪರಿಣಾಮವನ್ನು ತೋರಿಸಿತು.

    ಅರ್ಜಿದಾರರ ಪರ ವಕೀಲರು ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿ ಕಾನೂನು ಲೋಪಗಳಿವೆ ಎಂದು ವಾದಿಸಿದರೂ, ನ್ಯಾಯಪೀಠ “ಎಫ್‌ಐಆರ್ ದಾಖಲು ಮಾಡುವಲ್ಲಿ ಯಾವ ಘನಂದಾರಿ ಕಾನೂನು ಲೋಪವಾಗಿದೆ ಎಂದು ಹೇಳುತ್ತಿದ್ದೀರಿ? “ತನಿಖೆ ನಡೆಯಲಿ. ಆರೋಪಗಳು ಸುಳ್ಳಾಗಿದ್ದರೆ ತನಿಖೆಯಲ್ಲೇ ಅದು ಹೊರಬರುತ್ತದೆ” ಎಂದು ಸ್ಪಷ್ಟಪಡಿಸಿತು.

    Also Read  ಮೋದಿ ವಿಡಿಯೋ ಡಿಲೀಟ್ ವಿವಾದ: ಭಾರತಕ್ಕೆ ಕ್ಷಮೆಯಾಚಿಸಿದ ಮಾರ್ಕ್ ಜುಕರ್‌ಬರ್ಗ್!

    ಇದೇ ವೇಳೆ, ಕೆಪಿಎಸ್‌ಸಿ ಅಧ್ಯಕ್ಷ ಸ್ಥಾನದಿಂದ ಅಮಾನತುಗೊಂಡಿರುವ ಶಿವಶಂಕರಪ್ಪ ಸಾಹುಕಾರ್ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನೂ ಹೈಕೋರ್ಟ್ ಪೂರ್ಣಗೊಳಿಸಿ ತೀರ್ಪನ್ನು ಕಾಯ್ದಿರಿಸಿದೆ….

    ಇದು ಅವರ ಮಗಳು ಸುಮಾ ಸಾಹುಕಾರ್ ಅರ್ಜಿ ವಿಚಾರಣೆಯಾಗಿತ್ತು .ತಮ್ಮ ವಿರುದ್ಧ • ದಾಖಲಾಗಿರುವ ಎಫ್‌ಐಆರ್ ರದ್ದು ಕೋರಿ ಕೆಪಿಎಸ್‌ಸಿಯಿಂದ ಅಮಾನತುಗೊಂಡಿರುವ ಈಕೆ ಸಲ್ಲಿಸಿರುವ ಅರ್ಜಿಯು ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬಂದಿತು.

    ಸುಮಾ ಎಸ್.ಸಾಹುಕಾರ್ ಅವರನ್ನು ನ್ಯಾಯಾಲಯ ತರಾಟೆಗೆ ತೆಗೆದುಕೊಂಡ ನಂತರ, ಅವರು ಅರ್ಜಿಯನ್ನು ವಾಪಸ್ ಪಡೆದ ಪ್ರಸಂಗ ಸೋಮವಾರ ನ್ಯಾಯಾಲಯದಲ್ಲಿ ನಡೆಯಿತು. 

    ಈ ಘಟನೆ ಈಗ ದೊಡ್ಡ ಸಾಮಾಜಿಕ ಪ್ರಶ್ನೆಯಾಗಿ ರೂಪುಗೊಳ್ಳುತ್ತಿದೆ. ಮೀಸಲು ವ್ಯವಸ್ಥೆಯ ಉದ್ದೇಶ ಇತಿಹಾಸಾತ್ಮಕ ಮತ್ತು ಸಾಮಾಜಿಕವಾಗಿ ಹಿಂದುಳಿದ ಸಮುದಾಯಗಳಿಗೆ ಅವಕಾಶ ಕಲ್ಪಿಸುವುದು.

    ಆದರೆ ನಕಲಿ ಜಾತಿ ಅಥವಾ ಆದಾಯ ಪ್ರಮಾಣಪತ್ರಗಳ ಮೂಲಕ ಕೆಲವರು ಅನ್ಯಾಯವಾಗಿ ಲಾಭ ಪಡೆಯುತ್ತಾರೆ ಎಂಬ ಆರೋಪಗಳು ಸಾಬೀತಾದರೆ, ಅದರ ನಷ್ಟ ನಿಜವಾದ ಅರ್ಹ ಅಭ್ಯರ್ಥಿಗಳಿಗೆ ಆಗುತ್ತದೆ.

    Also Read  ಮಧ್ಯಪ್ರಾಚ್ಯದಲ್ಲಿ ರೆಡ್ ಅಲರ್ಟ್!3 ತಿಂಗಳ ಯುದ್ಧಕ್ಕೆ ಮಹಾ ಟ್ವಿಸ್ಟ್ ಇರಾನ್ ಸೇನಾ ನೆಲೆಗಳನ್ನು ಧೂಳೀಪಟ ಮಾಡಿದ ಅಮೆರಿಕ!

    ಇಂತಹ ಘಟನೆಗಳು ಬಹಿರಂಗವಾಗುವಾಗ, ಸಾಮಾಜಿಕ ಜಾಲತಾಣಗಳಲ್ಲಿ ನಡೆಯುತ್ತಿರುವ ‘ರಿಸರ್ವೇಶನ್ ಹಟಾವೋ’ ಅಭಿಯಾನಕ್ಕೆ ಇನ್ನಷ್ಟು ಚರ್ಚೆ ಸಿಗುತ್ತಿದೆ. ಆದರೆ ಈ ಪ್ರಕರಣವೊಂದರಿಂದಲೇ ಸಂಪೂರ್ಣ ಮೀಸಲು ವ್ಯವಸ್ಥೆಯನ್ನು ತೀರ್ಮಾನಿಸಲು ಸಾಧ್ಯವಿಲ್ಲ. ನಿಜವಾದ ಪ್ರಶ್ನೆ ಮೀಸಲು ಇರಬೇಕೆ ಅಥವಾ ಬೇಡವೆ ಎನ್ನುವುದಕ್ಕಿಂತ, ದುರುಪಯೋಗ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಹೇಗೆ ಜಾರಿಯಾಗಬೇಕು, ನಕಲಿ ಪ್ರಮಾಣಪತ್ರಗಳನ್ನು ಹೇಗೆ ತಡೆಯಬೇಕು ಮತ್ತು ನಿಜವಾದ ಫಲಾನುಭವಿಗಳಿಗೆ ನ್ಯಾಯ ಹೇಗೆ ಖಚಿತಪಡಿಸಬೇಕು ಎನ್ನುವುದಾಗಿದೆ.

    ಅನೇಕ ನಾಗರಿಕರು ವ್ಯಕ್ತಪಡಿಸುತ್ತಿರುವ ಆತಂಕವೂ ಇದೇ. ವ್ಯವಸ್ಥೆಯಲ್ಲಿರುವ ಭ್ರಷ್ಟಾಚಾರ, ನಕಲಿ ದಾಖಲೆಗಳು ಮತ್ತು ಪ್ರಭಾವ ಬಳಕೆಯ ಆರೋಪಗಳು ಸಂಪೂರ್ಣ ನೇಮಕಾತಿ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನೇ ಕುಂದಿಸುತ್ತವೆ. ಆದ್ದರಿಂದ, ಪಾರದರ್ಶಕ ಪರಿಶೀಲನೆ, ತ್ವರಿತ ತನಿಖೆ ಮತ್ತು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಎಂಬುದೇ ಜನರ ಪ್ರಮುಖ ನಿರೀಕ್ಷೆಯಾಗಿದೆ. ಹೀಗೆ ಮಾತ್ರ ನಿಜವಾದ ಅರ್ಹ ಅಭ್ಯರ್ಥಿಗಳ ಹಕ್ಕು ರಕ್ಷಣೆ ಸಾಧ್ಯವಾಗುತ್ತದೆ.

    ##KPSC #KarnatakaHighCourt #JusticeMNagaprasanna #FakeCasteCertificate #FakeIncomeCertificate #ShivashankarSahukar #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರುಗೆ ಹೈಕೋರ್ಟ್ ಸರ್ಕ್ಯೂಟ್ ಬೆಂಚ್: ಕರಾವಳಿಗೆ ಐತಿಹಾಸಿಕ ನ್ಯಾಯಾಂಗ ಶಕ್ತಿ ನೀಡುವ ಮಹತ್ವದ ಹೆಜ್ಜೆ..
    ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
    ಸೂರ್ಯನ ತಾಪಕ್ಕೆ ಜೋಗ ಜಲಪಾತ ದೊಡ್ಡ ಬಂಡೆಯೇ ಒಡೆಯಿತು..ಮಾನವನಿಗೆ ಅಪಾಯ ಇನ್ನಷ್ಟು!
    ಲಖನೌ ಅಗ್ನಿ ದುರಂತದ ಕೊನೆ ಕ್ಷಣದ ಫೋನ್ ಕರೆಗಳು …”ಅಪ್ಪಾ,ಪ್ಲೀಸ್ ನನ್ನನ್ನು ಉಳಿಸು…” – “ನನ್ನ ಮಗನ ಬಳಿ ಹೋಗಲು ಬಿಡಿ…”
    ಆಸ್ಪತ್ರೆಗಳಲ್ಲಿ ಔಷಧ ಬೆಲೆ ಸುಲಿಗೆ? ಸುಪ್ರೀಂ ಕೋರ್ಟ್ ಗರಂ
    ಮೋದಿ ಪೋಸ್ಟ್‌ನಿಂದ ಮೆಟಾಗೆ ಸಮನ್ಸ್! ಡಿಜಿಟಲ್ ಸುರಕ್ಷತೆ ಕುರಿತು ಕೇಂದ್ರದ ಕಠಿಣ ಪ್ರಶ್ನೆಗಳು
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ಭಾರತದಲ್ಲಿ ಮೋದಿ-ಜಸ್ಸಿ ಹೈ-ಲೆವೆಲ್ ಮೀಟಿಂಗ್ – ಅಮೆಜಾನ್ ಬರೋಬ್ಬರಿ $48 ಬಿಲಿಯನ್ ಹೂಡಿಕೆಗೆ ಆಂಡಿ ಜಸ್ಸಿ ಮುದ್ರೆ!
    ಹಾರ್ಮುಜ್ ಬಳಿ ಹಡಗುಗಳ ಹಿಂತಿರುಗುವ ಸರಣಿ!ಜಾಗತಿಕ ತೈಲ ಸರಬರಾಜಿಗೆ ಶಾಕ್ ⚠️
    ದ್ವಿತೀಯ ಪಿ.ಯು.ಸಿ ಪರೀಕ್ಷಾ ಹಾಜರಾತಿ
    ಸಹಕಾರ ಕ್ಷೇತ್ರದ ಅಭಿವೃದ್ಧಿ ಕುರಿತು ಸಿಎಂ ಡಿಕೆಶಿ ಜೊತೆ ಸಮಾಲೋಚನೆ
    ಗುಂಡಿನ ದಾಳಿ ನಡೆಸಿದ ಹಂತಕರ ಬಂಧನ??
    Cyber ವಂಚನೆಯ ಹೊಸ ತಂತ್ರ “ಸಿಮ್ ನವೀಕರಣ,5ಜಿ ಅಪ್‌ಗ್ರೇಡ್,ಸಿಮ್ ಸ್ವಾಪ್”ಹೆಸರಲ್ಲಿ ಮಂಗಳೂರಿನ ವ್ಯಕ್ತಿಗೆ 23.98 ಲಕ್ಷ ರೂ. ನಾಮ!
    ಬ್ಯಾಂಕ್ ಸಾಲವಿದ್ದ ಮನೆ ಮಾರಾಟ ಮಾರಿ ವಂಚನೆ
    ₹5ಕ್ಕೆ ಇಡ್ಲಿ… 56 ವರ್ಷಗಳಿಂದ ಅದೇ ರುಚಿ! 70ರ ಹರೆಯದಲ್ಲೂ ಪ್ರತಿದಿನ 1,500 ಇಡ್ಲಿ ಮಾಡಿ ಜನರ ಮನ ಗೆದ್ದ ಕರ್ನಾಟಕದ ಅನ್ನದಾತ…
    ಅಣ್ಣಾ ಹಜಾರೆಗೆ ಲೈವ್, ಸೋನಂ ವಾಂಗ್ಚುಕ್‌ಗೆ ಮೌನವೇಕೆ?”  ದ್ವಂದ್ವ ನೀತಿಯ ಬಗ್ಗೆ ಪ್ರಶ್ನೆ
    ಆನ್ಲೈನ್ ವಂಚಕರಿಂದ ಮಂಗಳೂರು ಡಾಕ್ಟರ್ ಒಬ್ಬರ ಏಳು ದಿನಗಳ ಕಾಲ ಹೌಸ್ ಅರೆಸ್ಟ್
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ಮತ್ತೊಂದು ಭೀಕರ ದುರಂತ: ಬಂಡೆ ಕುಸಿದು 7 ಕಾರ್ಮಿಕರ ದುರ್ಮರಣ
    ಭಾರತೀಯ ಸೇನೆಯ ಚಲನವಲನದ ವಿಡಿಯೋಗಳು ಪಾಕಿಸ್ತಾನಕ್ಕೆ ಹೇಗೆ ತಲುಪಿದವು?
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ಸರಕಾರಿ ಆಸ್ಪತ್ರೆಗಳ ಖಾಸಗೀಕರಣ ವಿರೋಧಿಸಿ ಸಿಪಿಐಎಂ ರಣಕಹಳೆ!”
    ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
    Anticipatory Bail ಗೆ ಹೊಸ ರಕ್ಷಣೆ: ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಆಕ್ಷೇಪ
    ಪಶ್ಚಿಮ ಬಂಗಾಳ ಅಪ್ರಾಪ್ತೆಯ ಸಾವು, ಸಾರ್ವಜನಿಕರಿಂದ ಶಂಕಿತನ ಲಿಂಚಿಂಗ್ ..!ಬಾಲಕಿಯ ಹತ್ಯೆ ಬೆನ್ನಲ್ಲೇ ಭುಗಿಲೆದ್ದ ಹಿಂಸಾಚಾರ;
    ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ
    ಸಿಎಂ ಡಿಕೆ ಶಿವಕುಮಾರ್ ಕರೆದ ಸಭೆಗೆ ರಾಮಲಿಂಗಾರೆಡ್ಡಿ, ಜಮೀರ್ ಗೈರು…
    ನಾಳೆ ಮಂಗಳೂರಲ್ಲಿ ಇಡೀ ದಿನ ಕರೆಂಟಿಲ್ಲ Power Cut.. ಎಲ್ಲೆಲ್ಲಿ?
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..
    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ