📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಸಂಸತ್ ಕಾರಿಡಾರ್‌ನಲ್ಲಿ ವಿವಾದಿತ ಸಚಿವ ಧರ್ಮೇಂದ್ರ ಪ್ರಧಾನ್‌ಗೆ ರೇಣುಕಾ ಚೌಧರಿ ತರಾಟೆ

    ವಿದ್ಯಾರ್ಥಿಗಳ ಮೇಲಿನ ಪೊಲೀಸ್ ಕ್ರಮ ಖಂಡಿಸಿ ತೀವ್ರ ವಾಗ್ದಾಳಿ; ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್

    ನವದೆಹಲಿ: ಸಂಸತ್ತಿನ ಕಾರಿಡಾರ್‌ನಲ್ಲಿ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಕಾಂಗ್ರೆಸ್ ಸಂಸದೆ ರೇಣುಕಾ ಚೌಧರಿ ಅಡ್ಡಗಟ್ಟಿ, ದೆಹಲಿಯಲ್ಲಿ ವಿದ್ಯಾರ್ಥಿಗಳ ಮೇಲೆ ನಡೆಯುತ್ತಿರುವ ಪೊಲೀಸ್ ಕ್ರಮದ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    ತಮ್ಮ ಹಕ್ಕುಗಳಿಗಾಗಿ ಶಾಂತಿಯುತವಾಗಿ ಹೋರಾಟ ನಡೆಸುತ್ತಿರುವ ಯುವಕರು ಹಾಗೂ ವಿದ್ಯಾರ್ಥಿಗಳ ಮೇಲೆ ಅಶ್ರುವಾಯು ಪ್ರಯೋಗ ಮತ್ತು ಲಾಠಿಚಾರ್ಜ್ ಮಾಡಲಾಗುತ್ತಿದೆ ಎಂದು ಆರೋಪಿಸಿದ ರೇಣುಕಾ ಚೌಧರಿ, ಸರ್ಕಾರದ ಕ್ರಮವನ್ನು ಕಟುವಾಗಿ ಟೀಕಿಸಿದರು. ವಿದ್ಯಾರ್ಥಿಗಳು ಹಾಗೂ ಯುವಕರು ಕೇಳುತ್ತಿರುವ ನ್ಯಾಯಯುತ ಪ್ರಶ್ನೆಗಳಿಗೆ ಲಾಠಿ ಏಟೇ ಸರ್ಕಾರದ ಉತ್ತರವೇ ಎಂದು ಪ್ರಶ್ನಿಸಿದರು.

    “ವಿದ್ಯಾರ್ಥಿಗಳ ಮೇಲೆ ಬಲಪ್ರಯೋಗ ಮಾಡುವ ಇಂತಹ ಸರ್ಕಾರವನ್ನು ಹೇಡಿ ಸರ್ಕಾರ ಎನ್ನದೆ ಇನ್ನೇನು ಕರೆಯಬೇಕು?” ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು. ರೈತರ ಮೇಲಿನ ದಬ್ಬಾಳಿಕೆಯ ಬಗ್ಗೆಯೂ ಅವರು ಇದೇ ಸಂದರ್ಭದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.

    Also Read  ಮುಂಬಯಿಯಲ್ಲಿ ಪಹಲ್ಗಾಮ್ ಮಾದರಿ ದಾಳಿ ಯತ್ನ: ಉಗ್ರ ಚಟುವಟಿಕೆ ಯತ್ನ ವಿಫಲ…!

    ರೇಣುಕಾ ಚೌಧರಿ ಅವರು ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ನೇರವಾಗಿ ಪ್ರಶ್ನಿಸುತ್ತಿದ್ದ ವೇಳೆ ಸಚಿವರು ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿ ಅಲ್ಲಿಂದ ತೆರಳಿದರು ಎಂದು ಹೇಳಲಾಗಿದೆ. ಈ ಘಟನೆಗೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

    ವಿದ್ಯಾರ್ಥಿಗಳ ಪ್ರತಿಭಟನೆ ಹಾಗೂ ಸರ್ಕಾರದ ಕ್ರಮದ ಕುರಿತು ರಾಜಕೀಯ ವಲಯದಲ್ಲಿ ಚರ್ಚೆ ತೀವ್ರಗೊಂಡಿದ್ದು, ಘಟನೆಗೆ ಸಂಬಂಧಿಸಿದಂತೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಆರೋಪ-ಪ್ರತ್ಯಾರೋಪಗಳು ಮುಂದುವರಿಯುವ ಸಾಧ್ಯತೆ ಇದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಮಂಗಳೂರು ಏರ್‌ಪೋರ್ಟ್ ಬಳಿ ಬರ್ತಿದೆ ಲಕ್ಸುರಿ ಇಂಟರ್‌ನ್ಯಾಷನಲ್ ಹೋಟೆಲ್!
    ಕೊಡಗು ಬ್ರೇಕಿಂಗ್: ಮಾಜಿ ಸೈನಿಕನ ಮನೆಗೆ ನುಗ್ಗಿದ ಕಳ್ಳರು – ಚಿನ್ನ, ನಗದು ಸೇರಿ ಅಮೂಲ್ಯ ವಸ್ತುಗಳ ದೋಚಾಟ
    ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
    ಆರು ಲಕ್ಷ ರೂ. ಶುಲ್ಕದ ಸಂಕಷ್ಟಕ್ಕೆ ಮಾನವೀಯ ಸ್ಪಂದನೆ: ವಿದ್ಯಾರ್ಥಿನಿಯ ಕನಸಿಗೆ ಸಚಿವ ಬಾಲಕೃಷ್ಣ ಬೆನ್ನೆಲುಬು
    ಸಂಸತ್ತಿನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆ ವಿರುದ್ಧ ಚರ್ಚೆ-ಕಾನೂನು ಬರೋ ಮುನ್ನವೇ ಮತ್ತೊಂದು ಲೀಕ್!
    ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….
    ಹೃದಯವಿದ್ರಾವಕ ಘಟನೆ: ರಾಜಕಾಲುವೆಯಲ್ಲಿ ತೇಲಿ ಬಂದ ನವಜಾತ ಹಸುಗೂಸು
    ಸುರತ್ಕಲ್ ಹುಡುಗಿ ವಿಚಾರದಲ್ಲಿ ಹಲ್ಲೆ
    17 ವರ್ಷದ ಯುವಕ ಸಂಸತ್ತಿನ ಕದ ತಟ್ಟಬಲ್ಲ ಎಂದಾದರೆ, ನಿಮ್ಮ ಧ್ವನಿಗೆ ಎಷ್ಟು ಶಕ್ತಿಯಿದೆ ಯೋಚಿಸಿ!..ವ್ಯವಸ್ಥೆಯ ಲೋಪದ ವಿರುದ್ಧ ಧ್ವನಿ ಎತ್ತದಿದ್ದರೆ ಬದಲಾವಣೆ ಸಾಧ್ಯವಿಲ್ಲ.
    ಉಡುಪಿ ನಗರಸಭೆಗೆ ನೂತನ ಪೌರಾಯುಕ್ತರಾಗಿ ಸಂತೋಷ್ ಡಿ.ಎಸ್. ನೇಮಕ
    ಮಹಿಳೆಯ ಸ್ಕೂಟಿಯನ್ನೇ ಕದ್ದ ಕಳ್ಳರು….. ಹೆಚ್ಚುತ್ತಿರುವ ವಾಹನ ಕಳ್ಳತನ
    “ಗ್ಯಾರಂಟಿ “ಹಣದ ಮೇಲೆ ಆಯೋಗದ ಕಣ್ಣು: ಸಿಎಂ ಸಿಡಿಮಿಡಿ ..ರಾಜಕೀಯ ಕಿಡಿ!
    ಬುಡಕಟ್ಟು ಹೆಣ್ಣುಮಕ್ಕಳ ಬದುಕು ಬದಲಿಸಿದ ಗಾರ್ಗಿ ಜೈನ್ ‘ಮೇಡಂ ಕಲೆಕ್ಟರ್’ನಿಂದ ‘ಕಲೆಕ್ಟರ್ ದೀದಿ’ವರೆಗೆ…
    ಎಂಡೋಸಲ್ಫಾನ್ ಸಂತ್ರಸ್ತರಿಗೆ ವಿಶೇಷ ಆರೋಗ್ಯ ತಪಾಸಣಾ ಶಿಬಿರ
    ಸಭೆಯ ನಡುವೆ ಬ್ಲಾಕ್ ಅಧ್ಯಕ್ಷ ಕಾಣೆ …ಕಾರ್ಯಕರ್ತರು ಗುಸು ಗುಸು – ಪಿಸುಪಿಸು
    ಅಂಡಮಾನ್ ಜೈಲಿನ ಕರಾಳ ಕೋಣೆಯಿಂದ ಹೊರಬರಲಿದೆ ಕರ್ನಾಟಕದ 59 ರಕ್ತೇತಿಹಾಸ’ಯಾರೂ ಅರಿಯದ ವೀರರು’ …!
    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
    ಅಮ್ಮನ ಅಂತ್ಯಕ್ರಿಯೆಯಲ್ಲಿ ಗಳಗಳನೇ ಕಣ್ಣೀರಿಟ್ಟು,ಚಿತೆಯ ಮುಂದೆ ಕುಸಿದುಬಿದ್ದ ಚಿನ್ಮಯ್ ದಾಸ್!ಐದು ಗಂಟೆಯ ಪೆರೋಲ್… ಜೈಲಿನಿಂದ ಬಂದ ಸನ್ಯಾಸಿ ಮಗ…
    🚨4 ವರ್ಷಗಳಿಂದ ಪೊಲೀಸರಿಗೆ ತಪ್ಪಿಸಿಕೊಂಡಿದ್ದ 17 ಪ್ರಕರಣಗಳ ಆರೋಪಿಯ ಡ್ರಾಮಾಟಿಕ್ ಬಂಧನ!
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಕುತ್ತಾರಿನಲ್ಲಿ ಸ್ಪೀಕರ್‌ನ್ನೇ ಜನರು ಸುತ್ತುವರಿದ ಶಾಕಿಂಗ್ ದೃಶ್ಯ! ಏನಾಯ್ತು ನಿಜವಾಗಿಯೂ?ಸಾಮಾಜಿಕ ಮಾಧ್ಯಮದಲ್ಲಿ ಸದ್ದು ಮಾಡುತ್ತಿರುವ ಕುತ್ತಾರು ವಾದವಿವಾದ!
    ಮೋದಿ ಸಂಪುಟದ ಒಂದು ವಿಕೆಟ್ ಪತನವಾಗುತ್ತಾ?
    ಡಿಕೆಎಮುಲ್‌ನಿಂದ ₹1,270 ಕೋಟಿ ದಾಖಲೆ ಬೆಳವಣಿಗೆ ಹೊಸ ಮೈಲುಗಲ್ಲು..!
    ಬಾಗಲಕೋಟೆ ಜಿಲ್ಲೆ ಕೆರೂರು ಠಾಣೆಯಲ್ಲಿ ಪಿಎಸ್ಐ & ಪೇದೆ ₹1.70 ಲಕ್ಷ ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ!
    ಮಂಗಳೂರು ಬಸ್‌ನಲ್ಲಿ ಗುಪ್ತಾಂಗ ತೋರಿಸಿ ಕಂಡಕ್ಟರ್ ವಿಕೃತ ವರ್ತನೆ: ಕಾಲೇಜು ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ – ಬಂಧನ
    ಅರ್ಹ ಮತದಾರರಿಗೆ ರಿಲೀಫ್‌: ಹೆಸರು ಬಿಟ್ಟವರಿಗೆ ಮತ್ತೆ ಅವಕಾಶ!
     “ಮೀನುಗಾರರ ಡೀಸೆಲ್ & ಸಿಲಿಂಡರ್ ಸಮಸ್ಯೆಗೆ ಸರ್ಕಾರದ ತುರ್ತು ಹಸ್ತಕ್ಷೇಪ -ಇಂಧನ ಭರವಸೆ: ಮಂಗಳೂರು ಬಂದರಿನಲ್ಲಿ ತುರ್ತು ಕ್ರಮ”-
    ಮಂತ್ರಾಲಯದ ಮಠದ ಹೆಸರಲ್ಲಿ 3 ಲಕ್ಷ ಆಸೆ ತೋರಿಸಿ ವಂಚನೆ..!
    ಅರೆಬೈಲ್ ಘಾಟ್ ನ ಕಾರು ಅಫಘಾತ ವ್ಯವಸ್ಥಿತ ಕೊಲೆ…!
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ