📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಂಟ್ವಾಳ ಬೆಚ್ಚಿಬೀಳಿಸಿದ ಯುವತಿಯಭೀಕರ ಹತ್ಯೆ: ಬಸ್ ನಿಲ್ದಾಣದಲ್ಲೇ ಬೆನ್ನಟ್ಟಿ ಇರಿದ ಕೊಲೆ ಆರೋಪಿ ಚೇತನ್ ಸುಳಿವು..!

    ಬಂಟ್ವಾಳ, ಜು.16: ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಬಿಸಿ ರೋಡ್‌ನ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಗುರುವಾರ ಸಂಜೆ ನಡೆದ ಭೀಕರ ಹತ್ಯೆ ಪ್ರಕರಣ ಇಡೀ ಕರಾವಳಿಯನ್ನೇ ಬೆಚ್ಚಿಬೀಳಿಸಿದೆ. ಕಕ್ಯಪದವು ನಿವಾಸಿ ಲಾವಣ್ಯ (ಸುಮಾರು 21–25 ವರ್ಷ) ಎಂಬ ಯುವತಿಯನ್ನು ದೂರದ ಸಂಬಂಧಿ ಏಕಪಕ್ಷೀಯವಾಗಿ ಪ್ರೀತಿಸುತ್ತಿದ್ದ ಚೇತನ್ ಎಂಬಾತ ಹರಿತವಾದ ಆಯುಧದಿಂದ ಇರಿದು ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ. ಲಾವಣ್ಯ ಅವರು ಕಲ್ಲಡ್ಕದ ಖಾಸಗಿ ನರ್ಸಿಂಗ್ ಹೋಮ್‌ನಲ್ಲಿ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

    ಕೆಲಸ ಮುಗಿಸಿಕೊಂಡು ತಮ್ಮ ಊರಿಗೆ ತೆರಳಲು ಲಾವಣ್ಯ ಅವರು ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕುಳಿತಿದ್ದರು. ಈ ವೇಳೆ ಅಪರಿಚಿತನಂತೆ ವರ್ತಿಸುತ್ತಿದ್ದ ಯುವಕನೊಬ್ಬ ಬಂದು ತಮ್ಮ ಪಕ್ಕದಲ್ಲಿ ಕುಳಿತಿದ್ದರಿಂದ ಆತಂಕಗೊಂಡ ಅವರು ತಕ್ಷಣವೇ ತಮ್ಮ ಸಂಬಂಧಿಕರೊಬ್ಬರಿಗೆ ಕರೆ ಮಾಡಿ, “ನನ್ನ ಪಕ್ಕದಲ್ಲಿ ಒಬ್ಬ ಯುವಕ ಕುಳಿತಿದ್ದಾನೆ” ಎಂದು ಮಾಹಿತಿ ನೀಡಿದ್ದಾರೆ. ಆದರೆ ಮಾತುಕತೆಯ ಮಧ್ಯೆಯೇ ಕರೆ ಏಕಾಏಕಿ ಕಡಿತಗೊಂಡಿರುವುದು ಪ್ರಕರಣಕ್ಕೆ ಮತ್ತಷ್ಟು ನಿಗೂಢತೆ ಮೂಡಿಸಿದೆ.

    Also Read  ಅಕ್ರಮ ಗಡಿ ದಾಟಿದವರಿಗೆ ಈಗ ಭಾರತದಲ್ಲಿ ನೋ ಎಂಟ್ರಿ!ಬಾಂಗ್ಲಾ ಗಡಿಯಲ್ಲಿ ಎನ್‌ಆರ್‌ಸಿ ಅಸ್ತ್ರ: ರಾಜಕೀಯಕ್ಕಿಂತ ರಾಷ್ಟ್ರೀಯ ಭದ್ರತೆ ಮುಖ್ಯ

    ಪ್ರತ್ಯಕ್ಷದರ್ಶಿಗಳ ಮಾಹಿತಿ ಪ್ರಕಾರ, ಬಳಿಕ ಲಾವಣ್ಯ ಬಸ್‌ನಿಂದ ಇಳಿದ ತಕ್ಷಣವೇ ಆ ಯುವಕ ಕೂಡ ಅವರ ಹಿಂದೆ ಇಳಿದಿದ್ದಾನೆ. ತನ್ನ ಬ್ಯಾಗ್‌ನಲ್ಲಿದ್ದ ಹರಿತವಾದ ಆಯುಧವನ್ನು ಹೊರತೆಗೆದು ಏಕಾಏಕಿ ದಾಳಿ ನಡೆಸಿದ್ದಾನೆ. ಪ್ರಾಣ ಉಳಿಸಿಕೊಳ್ಳಲು ಲಾವಣ್ಯ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದರೂ, ಆರೋಪಿ ಬೆನ್ನಟ್ಟಿ ಹೋಗಿ ಹಲವು ಬಾರಿ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ದಾಳಿ ನಡೆಸಿದ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ.

    ತೀವ್ರ ರಕ್ತಸ್ರಾವಗೊಂಡ ಲಾವಣ್ಯ ಅವರನ್ನು ತಕ್ಷಣ ಬಂಟ್ವಾಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ಜನನಿಬಿಡ ಬಸ್ ನಿಲ್ದಾಣದಲ್ಲೇ ನಡೆದ ಈ ಭೀಕರ ಘಟನೆ ಪ್ರಯಾಣಿಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆಯೇ ಬಂಟ್ವಾಳ ಉಪವಿಭಾಗದ ಹಿರಿಯ ಪೊಲೀಸ್ ಅಧಿಕಾರಿಗಳು, ನಗರ ಠಾಣೆ ಇನ್ಸ್‌ಪೆಕ್ಟರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಗರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಚೇತನ್ಪತ್ತೆಗಾಗಿ ವಿಶೇಷ ಶೋಧ ಕಾರ್ಯಾಚರಣೆ ಆರಂಭಿಸಲಾಗಿದೆ. ಕೊಲೆಯ ಹಿಂದಿನ ನಿಖರ ಕಾರಣ, ವೈಯಕ್ತಿಕ ವೈಷಮ್ಯವೇ ಅಥವಾ ಇತರ ಯಾವುದೇ ಕಾರಣವಿದೆಯೇ ಎಂಬ ಎಲ್ಲಾ ಆಯಾಮಗಳಲ್ಲಿ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

    ##Bantwal #Lavanya #DakshinaKannada #CrimeNews #KarnatakaNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ವಾಹನ ಸವಾರರಿಗೆ ಸರ್ಕಾರದ ಮತ್ತೆ 50% ಫೈನ್ ರಿಯಾಯಿತಿ!ಸಿಹಿ ಸುದ್ದಿ… ಆದರೆ ಜನ ಕೇಳುತ್ತಿರುವ ಕಹಿ ಪ್ರಶ್ನೆಗಳಿಗೂ ಉತ್ತರಿಸಿ… ಉಲ್ಲಂಘಿಸುವವರಿಗೆ ರಿಯಾಯಿತಿ…ಹಾಗೇ ನಿಯಮ ಪಾಲಿಸುವವರಿಗೆ ಬಹುಮಾನ ಉಂಟಾ…?!!!!
    ಮಂಗಳೂರಿನಲ್ಲಿ ಜೂನಿಯರ್ ವಿದ್ಯಾರ್ಥಿಗಳ ಮೇಲೆ ಗ್ಯಾಂಗ್ ಹಲ್ಲೆ:…ಕಾಲೇಜು ವಿದ್ಯಾರ್ಥಿಗಳ ರ‍್ಯಾಗಿಂಗ್ ಸಂಸ್ಕೃತಿಗೆ ಬ್ರೇಕ್ ಬೇಕು
    ಡೆಲಿವರಿ ಬಾಯ್ ಗೆ “₹500 ಟಿಪ್… !” video viral ಅಸಲಿ ಕಥೆ ಏನು..!?
    ತಸ್ಲಿಮಳ ಹಣೆಗೆ ಸಿಂಧೂರವಿಟ್ಟ ಕೇಶವ, ಬುರ್ಖಾ ತೆಗೆದಿಟ್ಟ ತಸ್ಲೀಮಾ
    “ಡಾಲರ್ ಐಡಿ” ಹೆಸರಿನಲ್ಲಿ ಶೇರ್ ಮಾರ್ಕೆಟಿಂಗ್ ವಂಚನೆ – 30.90 ಲಕ್ಷ ರೂ. ವಂಚನೆ- ನಾಲ್ವರ ಮೇಲೆ ಪ್ರಕರಣ ದಾಖಲು
    ಬಾವಿ ಮುಖ್ಯಮಂತ್ರಿ ಆಪ್ತನ ಭೀಕರ ಹತ್ಯೆ ಹಿಂದೆ ಯಾರು?
    ಬಾಲಕಾರ್ಮಿಕ ಪತ್ತೆ : ಮಾಲೀಕನಿಗೆ ಜೈಲು, ದಂಡ
    ಹತ್ತು ವರ್ಷದ ಮಗಳ ಹುಟ್ಟುಹಬ್ಬದ ಸಂಭ್ರಮ…  ವಿಧಿಯಾಟದಲ್ಲಿ ಕಣ್ಣೀರಾಗಿ ಮಾರ್ಪಟ್ಟ ದುರಂತ ಕಥೆ
    ಲೈಫ್‌ಗಾರ್ಡ್ ಇಲ್ಲದ ಕಡಲಿಗೆ 14ರ ಬಾಲಕ…ಶ್ರೇಯಸ್ ಬಲಿ!
    “ಅಂಕಗಳು ಭವಿಷ್ಯ ನಿರ್ಧರಿಸುವುದಿಲ್ಲ” B.Tech ನಲ್ಲಿ 24 ವಿಷಯ ಫೇಲ್ ಆದರೂ IPS ಆದ ಸಮೀರ್ ಶರ್ಮಾ
    ವಿದೇಶಿಗರ ಮೇಲೆ ನಿಗಾ ಇಟ್ಟ ಕೇಂದ್ರ ಗೃಹ ಇಲಾಖೆ! ನಿಯಮ ಮೀರಿದರೆ ಕಠಿಣ ಕ್ರಮ ಗ್ಯಾರಂಟಿ! 
    ಬೈಜು ರವೀಂದ್ರನ್ ಗೆ ಕೊನೆಗೂ ಜೈಲು ಶಿಕ್ಷೆ …!ಮುಳುಗಿಯೇ ಹೋಯ್ತು ಬೈಜೂಸ್!ಕೋಟಿ ಕೋಟಿ ಲೂಟಿ ಮಾಡಿ ಕ್ರಿಕೆಟ್ ಜರ್ಸಿಯಿಂದ ಜೈಲಿನ ಕೈದಿ ನಂಬರ್ ವರೆಗೆ….ಬೈಜೂಸ್ ಸಾಮ್ರಾಜ್ಯದ ರೋಚಕ ಪತನದ inside story
    ಮಹಿಳೆಯರೇ, ಬಿರುಬಿಸಿಲು ಹಾಗಂತ ನೀರು ಕೇಳ್ಕೊಂಡು ಬಂದ್ರು… ಯಾರೋ ಪಾಪ ಅಂದ್ರೆ ಅಪರಿಚಿತರಿಗೆ…!ಒಂಟಿಯಾಗಿ ಇದ್ದಾಗ ಹೆಚ್ಚು ಜಾಗ್ರತಾಗಿರಿ.
    ದೊಡ್ಡ ಮಿಕವನ್ನೇ ಬಲೆಗೆ ಹಾಕಿದ  ಲೋಕಾಯುಕ್ತ ಪೊಲೀಸರು 
    ತಮಿಳು ರಾಜಕೀಯ ರಣರಂಗದಲ್ಲಿ “ವಿಜಯ”ಗಾಥೆ 118 ದಾಟಿದ TVK  ವಿಜಯ್ ಕೈ ಹಿಡಿದ ಮೈತ್ರಿ ಪಕ್ಷಗಳು!
    ದೆಹಲಿ ಹೋಟೆಲ್ ಭೀಕರ ಅಗ್ನಿ ದುರಂತ!ಹೊತ್ತಿ ಉರಿದ ಹೋಟೆಲ್‌ನಲ್ಲಿ 21 ಮಂದಿ ಸಜೀವ ದಹನ..
    ಸಾಲು ಸಾಲು ಹೀನ ಕೃತ್ಯದ ಆರೋಪಿ….ಸೈನೈಡ್ ಮೋಹನ್ ಖುಲಾಸೆ! ಸಾಕ್ಷ್ಯಗಳ ಕೊಂಡಿ ಜೋಡಿಸಲು ಪ್ರಾಸಿಕ್ಯೂಷನ್ ವಿಫಲ
    ಬೆಂಗಳೂರಿನಲ್ಲಿ₹2,384 ಕೋಟಿ GSTದಂಧೆ ಭೇದಿಸಿದ ಇಲಾಖೆ.. ಭರ್ಜರಿ ದಾಳಿ! ಭಾರೀ GST ಸ್ಕ್ಯಾಂ .. ಹಲವರು ಬಲೆಗೆ ಬೀಳುವ ಸಾಧ್ಯತೆ!…
    ಅಮೆರಿಕಾ ವಿರುದ್ಧ ‘ಪೈರಸಿ’ ಆರೋಪ: ಇರಾನ್ ಯುಎನ್‌ಗೆ ದೂರು
    ಮಂಗಳೂರು ಸಿಟಿ ಪೊಲೀಸರ ಭರ್ಜರಿ ಬೇಟೆ – ನಿಷೇಧಿತ ಎಂಡಿಎಂ, ಗಾಂಜಾ ಮರಾಟಗಾರರ ಬಂಧನ
    ಪರಮೇಶ್ವರ ವಿರುದ್ಧ FIR-₹500 ಬೆಟ್ಟಿಂಗ್ ಹೇಳಿಕೆಗೆ ಕಾನೂನು ಕ್ರಮ.
    ಸಾಲ ಮರುಪಾವತಿ ವಿಚಾರಕ್ಕೆ ಜಾಲ್ಸೂರು ರಸ್ತೆಯಲ್ಲೇ ಗಲಾಟೆ ಹಲ್ಲೆ
    ಮುಖವಾಡ ಧರಿಸಿದವರನ್ನು ನಂಬುವ ಮುನ್ನ ನೂರು ಬಾರಿ ಯೋಚಿಸಿ…!
    ಬಾಲಗರ್ಭಿಣಿಯರ ಸಂಖ್ಯೆ 5975….!!
    ಬಂಟ್ವಾಳದಲ್ಲಿ ಸಿನಿಮೀಯ ರೀತಿಯಲ್ಲಿ ದರೋಡೆ: ತಲವಾರು ತೋರಿಸಿ ₹8.52 ಲಕ್ಷ ದೋಚಿದ ದುಷ್ಕರ್ಮಿಗಳು… ಪ್ರಕರಣದ ಸುತ್ತ ಸಂಶಯದ ಹುತ್ತ
    ವಿಶ್ವಕಪ್‌ನಲ್ಲಿ ಪಾಕಿಸ್ತಾನವನ್ನು ಪುಡಿಗೈದ ಭಾರತದ ವನಿತೆಯರು !ಆರಂಭವೇ ವಿಜಯದ ಘರ್ಜನೆ!
    ರೂಪಾಯಿಗೆ ತೈಲದ ಬಿಸಿ! RBI ಅಖಾಡಕ್ಕಿಳಿಯುತ್ತಾ?ತೈಲ ಬೆಲೆ ಏರಿಕೆ ಎಫೆಕ್ಟ್ -ಡಾಲರ್ ಎದುರು ರೂಪಾಯಿ ದುರ್ಬಲ!
    ಮತ್ತೆ ಹೊತ್ತಿ ಉರಿದ ಮಧ್ಯಪ್ರಾಚ್ಯ: ಇಸ್ರೇಲ್ ಪ್ರಧಾನಿ ನೆತನ್ಯಾಹು ಹೇಳಿಕೆ ಬೆನ್ನಲ್ಲೇ ಲೆಬನಾನ್ ಮತ್ತು ಗಾಜಾದಲ್ಲಿ ಹೆಚ್ಚಿದ ಭೀಕರ ಯುದ್ಧದ ತೀವ್ರತೆ.
    ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
    ದಯಾಮರಣ ಕೇಳಿದ್ದ ತುಮಕೂರು ರಾಬಿಯಾ ಇನ್ನಿಲ್ಲ …!ಪರಮೇಶ್ವರ್ ಮುಂದೆ ಕಣ್ಣೀರಿಟ್ಟಿದ್ದ ಮಹಿಳೆ ಇಬ್ಬರು ಮಕ್ಕಳೊಂದಿಗೆ ವಿಷಸೇವಿಸಿ ಕೊನೆಯುಸಿರು…‘ಮನೆ’ ಸಿಕ್ಕರೂ ಬದುಕು ಉಳಿಯಲಿಲ್ಲ!