📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಬಡ ಕುಟುಂಬಕ್ಕೆ ವಂಚನೆ : ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಎಫ್‌ಐಆರ್ ದಾಖಲು!

    ಜಾಯಿಂಟ್ ವೆಂಚರ್ ಹೆಸರಲ್ಲಿ 16.75 ಸೆಂಟ್ಸ್ ಜಾಗ ಪಡೆದು ಮೋಸ ಎಂಬ ಆರೋಪ; 13 ವರ್ಷಗಳಿಂದ ಮನೆಗಾಗಿ ಕಾಯುತ್ತಿರುವ ಕುಟುಂಬ

    ಮಂಗಳೂರು, ಅ. 22: ನಗರದ ಅತ್ತಾವರ ಸಮೀಪದ ಮಾರ್ನಮಿಕಟ್ಟೆ ಸರ್ಕಲ್ ಬಳಿ ಬಡ ಕುಟುಂಬವೊಂದಕ್ಕೆ ಸೇರಿದ 16.75 ಸೆಂಟ್ಸ್ ಜಾಗವನ್ನು ಜಾಯಿಂಟ್ ವೆಂಚರ್ ಮೂಲಕ ಅಪಾರ್ಟ್‌ಮೆಂಟ್ ನಿರ್ಮಿಸುವ ಉದ್ದೇಶದಿಂದ ಪಡೆದು, ಒಪ್ಪಂದದಂತೆ ಮನೆಗಳನ್ನು ನೀಡದೆ ವಂಚಿಸಿದ್ದಾರೆ ಎಂಬ ಆರೋಪದಡಿ ರಿಯಲ್ ಎಸ್ಟೇಟ್ ಬಿಲ್ಡರ್ ಡೊನಾಲ್ಡ್ ಪಿಂಟೋ ವಿರುದ್ಧ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

    2013ರಲ್ಲಿ 66 ವರ್ಷದ ಮಹಿಳೆ ವಸಂತ ಹಾಗೂ ಅವರ ಕುಟುಂಬಸ್ಥರಿಗೆ ಸೇರಿದ ಜಾಗವನ್ನು ಡೊನಾಲ್ಡ್ ಪಿಂಟೋ ಕರಾರು ಪತ್ರದ ಮೂಲಕ ಪಡೆದಿದ್ದರು ಎನ್ನಲಾಗಿದೆ. ಜಾಗದಲ್ಲಿ ಅಪಾರ್ಟ್‌ಮೆಂಟ್ ನಿರ್ಮಿಸಿ, ದೂರುದಾರ ಮಹಿಳೆಗೆ ಎರಡು ಮನೆಗಳನ್ನು ಹಾಗೂ ಅವರ ಸಂಬಂಧಿ ವಸುಮತಿಗೆ ಒಂದು ಮನೆಯನ್ನು ನೀಡುವುದಾಗಿ ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

    Also Read  ಬೋಳಿಯಾರಿನಲ್ಲಿ ಸಣ್ಣ ಗಲಾಟೆಗೆ ಇಬ್ಬರ ಬಲಿ ಪ್ರಕರಣಕ್ಕೆ ಟ್ವಿಸ್ಟ್..! ಪಿಕಪ್ ಚಾಲಕನೇ ಕೊಲೆಗಾರ…?!

    ಮಹಿಳೆಗೆ ತಿಳಿಯದ ಭಾಷೆಯಲ್ಲಿ ನೋಂದಣಿ?

    2013ರ ಮೇ 7ರಂದು ಕುಟುಂಬದ ಹೆಸರಿನಲ್ಲಿ 99.90 ಲಕ್ಷ ರೂ. ಮೊತ್ತದ ಕರಾರು ಪತ್ರ ಮಾಡಲಾಗಿತ್ತು ಎನ್ನಲಾಗಿದೆ. ಆದರೆ, ಉಪನೋಂದಣಾಧಿಕಾರಿ ಕಚೇರಿಯಲ್ಲಿ ಮಹಿಳೆಗೆ ತಿಳಿಯದ ಇಂಗ್ಲಿಷ್ ಭಾಷೆಯಲ್ಲಿ 47 ಲಕ್ಷ ರೂ.ಗೆ ಜಾಗ ಮಾರಾಟ ಮಾಡಿರುವುದಾಗಿ ನೋಂದಣಿ ಮಾಡಲಾಗಿದೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

    ಹಳೆಯ ಮನೆಯಿಂದ ಕುಟುಂಬವನ್ನು ತೆರವುಗೊಳಿಸಿದ ಬಳಿಕ ಬಾಡಿಗೆ ಮನೆಯಲ್ಲಿ ಇರಿಸಿ, ಬಾಡಿಗೆ ಹಣವನ್ನು ನೀಡುವುದಾಗಿ ಭರವಸೆ ನೀಡಲಾಗಿತ್ತು. ಆದರೆ, ಬಾಡಿಗೆ ಹಣವನ್ನೂ ಸರಿಯಾಗಿ ಪಾವತಿಸದೆ ಸಂತ್ರಸ್ತ ಕುಟುಂಬವನ್ನು ಸಂಕಷ್ಟಕ್ಕೆ ತಳ್ಳಲಾಗಿದೆ ಎಂಬುದು ಅವರ ಆರೋಪವಾಗಿದೆ.

    ನಾಲ್ಕು ಅಂತಸ್ತಿನ ಕಟ್ಟಡ ನಿರ್ಮಾಣ, 12 ಫ್ಲ್ಯಾಟ್‌ಗಳ ಮಾರಾಟದ ಆರೋಪ!

    ಸಂಬಂಧಿತ ಜಾಗದಲ್ಲಿ ನಾಲ್ಕು ಅಂತಸ್ತಿನ ಬೃಹತ್ ಅಪಾರ್ಟ್‌ಮೆಂಟ್ ನಿರ್ಮಾಣವಾಗಿದ್ದು, ಒಟ್ಟು 12 ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಟ್ಟಡದ ಕೆಳ ಅಂತಸ್ತಿನ ರಸ್ತೆ ಬದಿಯ ಜಾಗವನ್ನು ವಾಣಿಜ್ಯ ಉದ್ದೇಶಕ್ಕೆ ಬಳಸಲಾಗಿದೆ ಎನ್ನಲಾಗಿದೆ.

    Also Read  ಗೋಲ್ಡ್ ಪ್ರಿಯರಿಗೆ ಗುಡ್ ನ್ಯೂಸ್! ಇಳಿದ ಚಿನ್ನದ ಬೆಲೆ….!ಖರೀದಿದಾರರಿಗೆ ಬಂಪರ್ ರಿಲೀಫ್.

    ಆದರೆ, ಒಪ್ಪಂದದ ಪ್ರಕಾರ ತಮಗೆ ಸೇರಬೇಕಿದ್ದ ಮನೆಗಳನ್ನು ಈವರೆಗೂ ನೀಡಿಲ್ಲ. ಮನೆ ಕೊಡಿಸುವುದಾಗಿ ಭರವಸೆ ನೀಡುತ್ತಾ ಬಂದಿರುವ ಬಿಲ್ಡರ್, ಕಂತುಗಳ ರೂಪದಲ್ಲಿ ಕೇವಲ 17 ಲಕ್ಷ ರೂ. ಮಾತ್ರ ಪಾವತಿಸಿದ್ದಾರೆ ಎಂದು ಸಂತ್ರಸ್ತ ಕುಟುಂಬ ಆರೋಪಿಸಿದೆ.

    ಪೊಲೀಸ್ ಕಮಿಷನರ್‌ಗೂ ಮನವಿ ಸಲ್ಲಿಸಿದ್ದ ಕುಟುಂಬ

    ತಮಗಾದ ಅನ್ಯಾಯದ ಕುರಿತು ಸುಮಾರು ಒಂದು ವರ್ಷದ ಹಿಂದೆಯೇ ಕುಟುಂಬಸ್ಥರು ಮಂಗಳೂರು ಪೊಲೀಸ್ ಕಮಿಷನರ್ ಅವರನ್ನು ಭೇಟಿಯಾಗಿ ಅಹವಾಲು ಸಲ್ಲಿಸಿದ್ದರು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಬಿಲ್ಡರ್‌ನನ್ನು ಪಾಂಡೇಶ್ವರ ಪೊಲೀಸ್ ಠಾಣೆಗೆ ಕರೆಸಲಾಗಿತ್ತು. ಈ ವೇಳೆ ಮೂರು ತಿಂಗಳೊಳಗೆ ಮನೆ ಒದಗಿಸುವುದಾಗಿ ಮುಚ್ಚಳಿಕೆ ಬರೆದುಕೊಟ್ಟಿದ್ದರೂ, ಭರವಸೆ ಈಡೇರಿಸಿಲ್ಲ ಎಂದು ಕುಟುಂಬಸ್ಥರು ದೂರಿದ್ದಾರೆ.

    ನ್ಯಾಯಕ್ಕಾಗಿ ಹಲವು ವರ್ಷಗಳಿಂದ ಕಾಯುತ್ತಿದ್ದ ಕುಟುಂಬದ ದೂರಿನ ಆಧಾರದಲ್ಲಿ ಇದೀಗ ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    Also Read  8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ

    ಬಿಲ್ಡರ್ ನಾಪತ್ತೆ? ಬ್ಯಾಂಕ್ ಸಾಲದ ಸುಳಿಯಲ್ಲಿ ಆಸ್ತಿ!

    ಮಾರ್ನಮಿಕಟ್ಟೆ ಸರ್ಕಲ್ ಬಳಿಯ ಅಪಾರ್ಟ್‌ಮೆಂಟ್ ಕುರಿತು ಸ್ಥಳೀಯರು ನೀಡಿರುವ ಮಾಹಿತಿಯ ಪ್ರಕಾರ, ಕಟ್ಟಡದಲ್ಲಿರುವ 11 ಫ್ಲ್ಯಾಟ್‌ಗಳಿಗೆ ಸಂಬಂಧಿಸಿದಂತೆ ಬ್ಯಾಂಕ್ ಸಾಲದ ವಿಚಾರವಿದ್ದು, ಅವುಗಳನ್ನು ಜಪ್ತಿ ಮಾಡಲಾಗಿದೆ ಎನ್ನಲಾಗಿದೆ. ಇದೇ ವೇಳೆ, ಡೊನಾಲ್ಡ್ ಪಿಂಟೋ ಅವರಿಗೆ ಸೇರಿದ ಸಮೀಪದ ಸ್ವಂತ ಮನೆಯೂ ಬ್ಯಾಂಕ್ ಸಾಲದ ಹಿನ್ನೆಲೆಯಲ್ಲಿ ಜಪ್ತಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

    ಬಿಲ್ಡರ್ ಡೊನಾಲ್ಡ್ ಪಿಂಟೋ ಸದ್ಯ ನಾಪತ್ತೆಯಾಗಿದ್ದಾರೆ ಎಂಬ ಮಾಹಿತಿಯೂ ಸ್ಥಳೀಯರ ಮೂಲಕ ದೊರಕುತ್ತಿದೆ.

    ಒಟ್ಟಿನಲ್ಲಿ, ಜಾಗವನ್ನು ನೀಡಿದ ಬಡ ಕುಟುಂಬಕ್ಕೆ ಒಪ್ಪಂದದಂತೆ ಮನೆಗಳು ಸಿಗದೆ ಸಂಕಷ್ಟ ಎದುರಾಗಿದೆ ಎಂಬ ಆರೋಪ ಗಂಭೀರ ಚರ್ಚೆಗೆ ಕಾರಣವಾಗಿದೆ. ಪ್ರಕರಣದ ತನಿಖೆಯಿಂದ ಒಪ್ಪಂದದ ನೈಜ ಸ್ವರೂಪ, ಹಣಕಾಸಿನ ವ್ಯವಹಾರಗಳು ಹಾಗೂ ಸಂತ್ರಸ್ತ ಕುಟುಂಬಕ್ಕೆ ನ್ಯಾಯ ದೊರೆಯುವ ಸಾಧ್ಯತೆಗಳ ಕುರಿತು ಸ್ಪಷ್ಟತೆ ಸಿಗಬೇಕಿದೆ.

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಸಂಸತ್ತಿನಲ್ಲಿ ಪ್ರಶ್ನೆ ಎದುರಿಸಲು ಆಗದೆ,  ಪ್ರಶ್ನೆಯನ್ನೇ ಕೇಳದಂತೆ ಮಾಡಿದರು – ರಾಹುಲ್ ಗಾಂಧಿ
    ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಯು.ಟಿ. ಖಾದರ್ – ಕಳಪೆ ಆಹಾರಕ್ಕೆ ಕಟ್ಟುನಿಟ್ಟು,ಕರ್ನಾಟಕದ ಆಹಾರ ಸುರಕ್ಷತೆಗೆ ಜಾಗತಿಕ ಮಟ್ಟದ ಯೋಜನೆ!
    ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
    ಉಡುಪಿ ಜಿಲ್ಲೆಯಲ್ಲಿ ಕಟಾವಿಗೆ ಬಂದ ಭತ್ತದ ಗದ್ದೆಗೆ ನೀರು ರೈತನಿಗೆ ನಷ್ಟ… ಜಿಲ್ಲಾಡಳಿತ ಪರಿಹಾರ ಕೊಡುತ್ತದೆಯೇ?
    ಸರ್ಕಾರಿ ವೈದ್ಯರ ಅನರ್ದಿಷ್ಟಾವಧಿ ಮುಷ್ಕರ ರದ್ದು
    ಭಾರತದ ‘ಗೋಲ್ಡನ್ ಗರ್ಲ್’ ಮೀರಾಬಾಯಿ ಚಾನು ಮತ್ತೊಮ್ಮೆ ಇತಿಹಾಸ ಬರೆದಿದ್ದಾರೆ! 
    ಪರಸ್ತ್ರೀ ಹುಂಡಿಗೆ  ಒಂದುವರೆ ಕೋಟಿ ಅಪಾರ್ಟ್ಮೆಂಟ್, ಮಾಜಿ ಶಾಸಕನ ರಂಗಿನಾಟ 
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    🩸 4 ಲಕ್ಷ ವಿದ್ಯಾರ್ಥಿಗಳು…!!??ಕರ್ನಾಟಕದ ‘ಜೀವ ರಕ್ಷಕ’ Blood Donor Pool!ಏನಿದು ಜೆನ್ ಜಿ ಹೊಸ ಸೋಚ್…
    ಬಂಟರ ಸಮುದಾಯದಲ್ಲೊಂದು ಹೀನ ಸಂಪ್ರದಾಯ-ವರದಕ್ಷಿಣೆಗಾಗಿ ಹಿಂಸೆ, ಹಲ್ಲೆ.. ಬೆದರಿಕೆ!
    “ಜಾಗತಿಕ ಸವಾಲುಗಳ ನಡುವೆಯೂ ಭಾರತದ GDP ರಾಕೆಟ್ ವೇಗ! 7.8% ಬೆಳವಣಿಗೆಗೆ ವಿಶ್ವವೇ ಬೆರಗು!”
    ಕೇವಲ ₹7ರ ದುರಾಸೆ… ₹7 ಲಕ್ಷದ ಹೊರೆ!ಗ್ರಾಹಕರಿಂದ ಹೆಚ್ಚುವರಿ ಹಣ ವಸೂಲಿ ಮಾಡಿದ ಅಂಗಡಿಗೆ ಭಾರೀ ದಂಡ; ವ್ಯಾಪಾರಿಗಳಿಗೆ ಕಠಿಣ ಎಚ್ಚರಿಕೆ
    ಸುಳ್ಯ:  ಕರ್ತವ್ಯದಲ್ಲಿದ್ದ ಉಪನ್ಯಾಸಕ ಕುಸಿದು ಬಿದ್ದು ಸಾವು
    ಉದ್ಯಮಿ ಸಿಜೆ ರಾಯ್ ಆತ್ಮಹತ್ಯೆ, ನಿರೀಕ್ಷಿತ ತನಿಖೆ
    ಶಾಲಾ ವಾಹನಗಳ ಸುರಕ್ಷತೆ ಬಗ್ಗೆ ಜೆಡಿಎಸ್ ಆಗ್ರಹ
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ಉಂಡ ಮನೆಗೇ ಕನ್ನ ಹಾಕಿದ ದ್ರೋಹಿಗಳು 
    ಕಸ ಸಾಗಾಣಿಕೆ ಟೆಂಡರ್‌ನಲ್ಲಿ ₹133 ಕೋಟಿ ಅಕ್ರಮ ಆರೋಪ
    ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
    ಇಂದಿನ ಆಧುನಿಕ ಯುಗದಲ್ಲೂ ಗಂಡನ ಮನೆಯಲ್ಲಿ ಹೆಣ್ಣೊಬ್ಬಳ ನರಕಯಾತನೆಯ ನೈಜ ದೃಶ್ಯ ತಂದೆಯೇ ಕಣ್ಣಾರೆ ನೋಡಿದರೇ ….ಕಣ್ಣೀರು ತಡೆಯಲು ಸಾಧ್ಯವಿಲ್ಲ…..
    ಮೂಡಬಿದಿರೆ ಇನ್‌ಸ್ಪೆಕ್ಟರ್ ಪ್ರಕರಣಕ್ಕೆ ಟ್ವಿಸ್ಟ್: ಆರೋಪ ಮಾಡಿದ ಮಹಿಳೆಯ ವಿರುದ್ಧವೇ ಸಹೋದರಿಯ ಬಾಂಬ್!
    ಖಾಸಗಿ ಆಸ್ಪತ್ರೆಯ ಜೊತೆಗಿನ ಒಪ್ಪಂದ ರದ್ದುಪಡಿಸಲು ಆಗ್ರಹಿಸಿ ಪ್ರತಿಭಟನೆ
    “ಫುಟ್‌ಪಾತ್ ಯಾರದ್ದು? ಪಾದಚಾರಿಗಳ ಹಕ್ಕೋ, ಹೊಟ್ಟೆಪಾಡಿನ ಹೋರಾಟವೋ?”
    ಉತ್ತರ ಪ್ರದೇಶದಲ್ಲಿ ಸುಮಾರು 90ಕ್ಕೂ ಹೆಚ್ಚು ಜನರು ಬಲಿ ಹೃದಯವಿದ್ರಾವಕ ಪರಿಸ್ಥಿತಿ…ಭಾರೀ ಮಳೆ, ಬಿರುಗಾಳಿ ಮತ್ತು ಕುಸಿದ ಮನೆಗಳು
    ಸಾಮಾಜಿಕ ಜಾಲತಾಣದಲ್ಲಿ ಕೋಮು ಪ್ರಚೋದನೆಯ ಪೋಸ್ಟ್ ಗಳನ್ನು ಹಾಕಿದ ಆರೋಪಿಯ ಬಂಧನ
    ಡೈಮಂಡ್ ನೆಕ್ಲೇಸ್, ಕಿವಿಯೋಲೆಗಳು, ಚಿನ್ನದ ಚೈನ್, ಪ್ಲಾಟಿನಂ ಉಂಗುರ ಕಳವು…!
    ತೆರಿಗೆ ನಮ್ಮದು… ಪಾಲು ಬೇರೆ ರಾಜ್ಯಗಳಿಗೆ!
    ಕಾಂಗ್ರೆಸ್ ಮೇಲಿನ ಕೋಪ ತಣ್ಣಗಾಗಿಲ್ಲ….. ಜನಪರ ಯೋಜನೆ ಮುಂದುವರೆಸಲು ಸ್ಟಾಲಿನ್ ಮನವಿ
    ಫಾರ್ಮ್-7 ವಿವಾದ ಸ್ಫೋಟ: 52 ಮಂದಿಯ ವಿರುದ್ಧ FIR-ಮತದಾರರ ಹೆಸರು ಅಳಿಸುವ ಆರೋಪಕ್ಕೆ ತನಿಖೆ ಆಗ್ರಹ
    🚨 ದೇಶಾದ್ಯಂತ ಉಗ್ರ ಜಾಲದ ಮೇಲೆ ದೊಡ್ಡ ದಾಳಿ: ಕರ್ನಾಟಕದ ಬಳ್ಳಾರಿಯ ಅಬ್ದುಲ್ ಸಲಾಂ ಸೇರಿದಂತೆ 7 ರಾಜ್ಯಗಳಲ್ಲಿ 12 ಮಂದಿ ಬಂಧನ — ಯುವಕರಿಗೆ ಎಚ್ಚರಿಕೆ!