📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಗಾಯತ್ರಿ ಶಾಂತೇಗೌಡ ಸಚಿವ ಸ್ಥಾನ ವಿವಾದ: ರಾಜಕೀಯ ಚರ್ಚೆಗೆ ಹೊಸ ತಿರುವು…. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಗುರುತರ ಆರೋಪ

    ಕರ್ನಾಟಕ ರಾಜಕೀಯದಲ್ಲಿ ಸಚಿವ ಸಂಪುಟ ವಿಸ್ತರಣೆ ಹಾಗೂ ಸಚಿವ ಸ್ಥಾನ ಹಂಚಿಕೆ ಯಾವಾಗಲೂ ಚರ್ಚೆಗೆ ಕಾರಣವಾಗುತ್ತವೆ. ನಿನ್ನೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಬೇಕಿದ್ದ ಗಾಯತ್ರಿ ಯವರು ಕೊನೆಯ ಗಳಿಗೆಯಲ್ಲಿ ಸಚಿವ ಸ್ಥಾನ ವಂಚಿತರಾಗುವ ಸನ್ನಿವೇಶ ನಿರ್ಮಾಣವಾಯಿತು. ಕಾಂಗ್ರೆಸ್‌ನ ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಸಿಗದಿರುವುದು ರಾಜಕೀಯ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

    ಗಾಯತ್ರಿ ಶಾಂತೇಗೌಡ ಅವರು ವಿಧಾನ ಪರಿಷತ್ ಸದಸ್ಯತ್ವಕ್ಕಾಗಿ ಕಾನೂನು ಹೋರಾಟ ನಡೆಸಿ ಕೊನೆಗೆ ಸದಸ್ಯೆಯಾಗಿ ಆಯ್ಕೆಯಾಗಿದ್ದರು. ಇದಾದ ಬಳಿಕ ಸಚಿವ ಸಂಪುಟ ವಿಸ್ತರಣೆಯಲ್ಲಿ ಅವರಿಗೆ ಸ್ಥಾನ ಸಿಗುವ ಸಾಧ್ಯತೆ ಇದೆ ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದ್ದವು. ಆದರೆ ಅಂತಿಮ ಪಟ್ಟಿಯಲ್ಲಿ ಅವರ ಹೆಸರು ಇರಲಿಲ್ಲ.

    Also Read  “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್

    ಈ ಬೆಳವಣಿಗೆಯ ಬೆನ್ನಲ್ಲೇ ಸಾಮಾಜಿಕ ಜಾಲತಾಣಗಳಲ್ಲಿ ಹಾಗೂ ಕೆಲವು ರಾಜಕೀಯ ವಲಯಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ. ಕೆಲವರು, “ಕುರುಬ ಸಮುದಾಯದ ಮತ್ತೊಬ್ಬ ನಾಯಕಿ ಬೆಳೆಯುವುದನ್ನು ಸಹಿಸದ ಕಾರಣ, ಅವರಿಗೆ ಸಚಿವ ಸ್ಥಾನ ತಪ್ಪಿಸಲಾಗಿದೆ” ಎಂದು ಆರೋಪಿಸುತ್ತಿದ್ದಾರೆ. ಸಿದ್ದರಾಮಯ್ಯನವರು ಕುರುಬ ಸಮಾಜದ ಪ್ರಶ್ನಾತೀತ ನಾಯಕರು ನಿಜ. ಸಹಜವಾಗಿ ಪಕ್ಷದ ಪ್ರಮುಖ ನಾಯಕರಾಗಿರುವ ನನಗೆ, ನನ್ನ ಗಮನಕ್ಕೆ ತಾರದೆ ನಮ್ಮ ಸಮುದಾಯದ ಹೆಣ್ಣು ಮಗಳಿಗೆ ಸಚಿವ ಸ್ಥಾನ ನೀಡಲು ಹೊರಟಿರುವುದು ಇರಿಸು ಮುರುಸು ತಂದಿರಬಹುದು. ಹಾಗಾಗಿಯೇ ಅದನ್ನು ಪ್ರತಿಭಟಿಸುವುದಕ್ಕೋಸ್ಕರವೇ ಸಿದ್ದರಾಮಯ್ಯನವರು ನಿನ್ನೆ ನಡೆದ ಸಂಪುಟ ವಿಸ್ತರಣೆಯ ಕಾರ್ಯಕ್ರಮಕ್ಕೆ ಗೈರುಹಾಜರಾಗಿದ್ದರು ಎನ್ನಲಾಗುತ್ತದೆ. ಅವರ ಕೋಪ ತಣಿಸುವುದಕ್ಕಾಗಿ ಕೊನೆ ಗಳಿಗೆಯಲ್ಲಿ ಗಾಯತ್ರಿ ಶಾಂತವೀರ ಗೌಡರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕೊಡಲಿಲ್ಲ ಎನ್ನಲಾಗುತ್ತದೆ.

    Also Read  ಕೋವಿಡ್ ಶೀಲ್ಡ್ ಸೈಡ್ ಎಫೆಕ್ಟ್ ಒಪ್ಪಿಕೊಂಡ ಕಂಪನಿ

    ಇದೇ ವೇಳೆ, ಸಿದ್ದರಾಮಯ್ಯ ಅವರ ವಿರುದ್ಧ ಅವರದ್ದೇ ಟೀಕೆಯನ್ನು ಇಟ್ಟುಕೊಂಡು ಸಾಮಾಜಿಕ ತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಹಿಂದೆ ಸಿದ್ದರಾಮಯ್ಯನವರು ಹೇಳಿದ್ದರೂ ಎನ್ನಲಾದ “ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಯಲು ಬಿಡಲಿಲ್ಲ” ಎಂಬ ರಾಜಕೀಯ ಟೀಕೆಯನ್ನೂ ಕೆಲವರು ಈಗ ನೆನಪಿಸುತ್ತಿದ್ದಾರೆ. ಒಬ್ಬರ ಮೇಲೆ ಮಾಡಿದ್ದ ಆರೋಪಗಳು ಈಗ ಅವರ ಮೇಲೆಯೇ ಅನ್ವಯಿಸುತ್ತಿವೆಯೇ ಎಂಬ ಪ್ರಶ್ನೆಯನ್ನು ವಿರೋಧಿಗಳು ಮುಂದಿಡುತ್ತಿದ್ದಾರೆ. ಅವರು ಹೇಳುವಂತೆ, ಸಿದ್ದರಾಮಯ್ಯನವರು ಕುರುಬ ಸಮಾಜದ ಹೆಣ್ಣು ಮಗಳು ಮೇಲೆ ಬರದಂತೆ ತಡೆದಿದ್ದಾರೆ ಎಂಬ ಆರೋಪವನ್ನು ಮಾಡುತ್ತಿದ್ದಾರೆ ಈಗ. ಅವತ್ತು ದೇವೇಗೌಡರಿಗೆ ಆರೋಪ ಮಾಡಿದವರು ಈಗ ಇವರು ಮಾಡಿದ್ದೇನು ಎಂದು ಪ್ರಶ್ನೆ ಸುತ್ತಿದ್ದಾರೆ.

    ಕಾಂಗ್ರೆಸ್ ಪಕ್ಷದಿಂದ ಈ ವಿಷಯದ ಕುರಿತು ಯಾವುದೇ ಅಧಿಕೃತ ಸ್ಪಷ್ಟನೆ ಹೊರಬಿದ್ದಿಲ್ಲ. ಸಚಿವ ಸ್ಥಾನ ಹಂಚಿಕೆ ಹಲವು ರಾಜಕೀಯ, ಪ್ರಾದೇಶಿಕ, ಸಾಮಾಜಿಕ ಹಾಗೂ ಸಂಘಟನಾ ಸಮೀಕರಣಗಳ ಆಧಾರದ ಮೇಲೆ ನಡೆಯುವ ಪ್ರಕ್ರಿಯೆಯಾಗಿದ್ದು, ಒಬ್ಬ ವ್ಯಕ್ತಿಯ ನಿರ್ಧಾರ ಮಾತ್ರವೇ ಕಾರಣ ಎಂದು ಹೇಳಲು ಸಾಧ್ಯವಿಲ್ಲ.

    Also Read  ಸಾಲಗಾರರಿಗೆ ಶಾಕ್ ....RBI ಬಡ್ಡಿ ಹೆಚ್ಚಳ-EMI ಮತ್ತೆ ಏರಿಕೆ..!?

    ಗಾಯತ್ರಿ ಶಾಂತೇಗೌಡ ಅವರಿಗೆ ಸಚಿವ ಸ್ಥಾನ ಸಿಗದಿರುವುದು ಕುರುಬ ಸಮುದಾಯದಲ್ಲಿ ನಿರಾಸೆ ಉಂಟುಮಾಡಿದೆಯೇ ಎಂಬ ಪ್ರಶ್ನೆಯೂ ರಾಜಕೀಯ ಚರ್ಚೆಯ ಭಾಗವಾಗಿದೆ.

    ….ಕೃಪೆ

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಹೆಡ್‌ಲೈಟ್ ಇಲ್ಲ… ಮೊಬೈಲ್ ಟಾರ್ಚ್‌ನಲ್ಲೇ ಓಡಿದ ಸರ್ಕಾರಿ ಬಸ್!
    ಡಿಕೆಶಿ ಸೈಲೆಂಟ್ ಆಪರೇಷನ್ ಮಿಸ್ ಫೈರ್ ಆಗಿದ್ದೆಲ್ಲಿ?ರಾಷ್ಟ್ರ ರಾಜಧಾನಿಯಲ್ಲಿ ಕರ್ನಾಟಕ ಕಾಂಗ್ರೆಸ್ ಹೈ-ವೋಲ್ಟೇಜ್ ಹರಟೆ…!
    ಕಾಂಗ್ರೆಸ್ ನಿಂದ ”MLC ಮಾಡಿಸುತ್ತೇನೆ” ಎಂದು 1.5 ಕೋಟಿ ವಂಚನೆ ಆರೋಪ
    ಅಧಿಕಾರಕ್ಕಿಂತ ಕೆಲಸ ಮುಖ್ಯ ಎನ್ನುವ ನಾಯಕ? ಕೃಷ್ಣ ಬೈರೇಗೌಡರ ನಡೆ, ಕೆಲಸ ಈಗ ಎಲ್ಲರ ಗಮನ ಸೆಳೆತಿದೆ..
    ಟೂರ್ plan ಮಾಡ್ತಿದ್ದೀರಾ ?ಸ್ಥಳವೇ ಇಲ್ಲದ address ಗೆ online book ಮಾಡಿ ಮೋಸ ಹೋಗ್ಬೇಡಿ…
    ವರದಕ್ಷಿಣೆ ಕಿರುಕುಳ ಪ್ರಕರಣ ಹೈಕೋರ್ಟ್‌ನ ಮಹತ್ವದ ತೀರ್ಪು…!ಕಾನೂನಿನ ದುರುಪಯೋಗಕ್ಕೆ ಹೈಕೋರ್ಟ್ ಬ್ರೇಕ್..!
    ಡ್ರೋನ್ ದಾಳಿ, ಪ್ರತಿದಾಳಿ ಮಧ್ಯಪ್ರಾಚ್ಯದಲ್ಲಿ ಹೈ-ವೋಲ್ಟೇಜ್ ಡ್ರಾಮಾ!
    ಒಂದು ಕ್ಲಿಕ್, ಒಂದು ಆಟ… ಕುಟುಂಬದ ಭವಿಷ್ಯವೇ ನಾಶವಾಗುವ ಅಪಾಯದ ಬೆಟ್ಟಿಂಗ್ ಜಾಲ -!ಸಾವಿರಾರು ಬೆಟ್ಟಿಂಗ್ ಆ್ಯಪ್‌ಗಳಿಗೆ ಸದ್ಯದಲ್ಲೇ ಬ್ರೇಕ್ ….
    ಉಡುಪಿ ನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ನಗರ ಸಭೆ ಎರಡೂ ಕಮಾಯಿಗೆ ಕುಳಿತು ಕೊಂಡಿದೆಯಾ?
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    ಮೋದಿ ಅವರ ನಿರ್ಧಾರಗಳು“ದೀರ್ಘಕಾಲೀನ ಅಭಿವೃದ್ಧಿಗೆ ಜವಾಬ್ದಾರಿಯುತ ನೀತಿಗಳು” ಆತಂಕದ ಸೂಚನೆ ಅಲ್ಲ-ಎಸ್.ಎಸ್. ನಾಯಕ್
    ಹಾಸನದಲ್ಲಿ ಮೀಸಲಾತಿ ವಿಚಾರಕ್ಕೆ ವಾಕ್ಸಮರ: ರೇವಣ್ಣ–ಶಿವಲಿಂಗೇಗೌಡ ತಿರುಗೇಟು
    ಬೆಳ್ತಂಗಡಿ: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆಟೋ ಚಾಲಕ ಅಂದರ್!
    ₹1270 ಕೋಟಿ ಕಾನ್ಟ್ರಾಕ್ಟ್ ಹಗರಣ -CM ಖಾಂಡು ಕುಟುಂಬ ವಿಚಾರಣೆ-ಸುಪ್ರೀಂಕೋರ್ಟ್ ಸಿಬಿಐಗೆ ಆದೇಶ..
    ಮಂಗಳೂರು ಕಮಿಷನರ್ ವಿರುದ್ಧ ಎಸ್ಪಿ ಕಾಶಿನಾಥ್ ದೂರು ಕೊಡುತ್ತಿರುವುದು ಯಾಕೆ?
    ದೈವದ ನ್ಯಾಯ ತಡವಾಗಬಹುದು… ಆದರೆ ತಪ್ಪದು!”ತುಳುನಾಡಿನ ದೈವಶಕ್ತಿ – ನಂಬಿಕೆಗೆ ಸಾಕ್ಷಿಯಾದ ನಿಜಘಟನೆ ..
    ಬಲಪಂಥೀಯರ ಜೊತೆ ಮುಖ್ಯಮಂತ್ರಿಗಳ ಸ್ನೇಹ : ಅಭದ್ರತೆ ಯಾರಿಗೆಲ್ಲ?
    ಸ್ಪೇನ್ ಅಧ್ಯಕ್ಷರ ವಿರುದ್ಧ ಟ್ರಂಪ್ ಗುಡುಗು 
    ನಿದ್ದೆಯಲ್ಲಿದ್ದ ವಿದ್ಯಾರ್ಥಿಗಳ ಮೇಲೆ ಕುಸಿದ ಕಟ್ಟಡ ಸಾವು ಆರಕ್ಕೆ..!ದಿಲ್ಲಿ ಪಿಜಿ ದುರಂತ ದೇಶದ ಹಳೆಯ ಕಟ್ಟಡಗಳಿಗೆ ಎಚ್ಚರಿಕೆಯ ಗಂಟೆ..!
    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
    ಶಾಲೆಗಳ ದುಸ್ಥಿತಿ ತೋರಿಸಲು CJP ಸಜ್ಜು; ‘ಹೊರಗಿನವರಿಗೆ ನೋ ಎಂಟ್ರಿ’ ಎಂದ ರಾಜಸ್ಥಾನ ಸರ್ಕಾರ!
    ನಾಗಪ್ರತಿಷ್ಠಾ ಮಂಟಪದ ಎದುರು ನಡೆದಾಡಲು ಸ್ಥಳವಿಲ್ಲದಷ್ಟು ಭಕ್ತಾದಿಗಳು …
    ಅಕ್ರಮ ಭೂಕಬಳಿಕೆ: ಡಿಸಿ ಕೋರ್ಟ್ ಆದೇಶದ ವಿರುದ್ಧದ ರಿಟ್  ಹೈಕೋರ್ಟನಲ್ಲಿ ವಜಾ
    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
    ಕೆಪಿಎಸ್‌ಸಿ ನೇಮಕಾತಿ ಹಗರಣ: ಮಾಜಿ ಅಧ್ಯಕ್ಷ ಸಾಹುಕಾರ್‌, ಸದಸ್ಯೆ ಗೀತಾ ಇ.ಡಿ. ಬಂಧನ
    ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    “ಗೃಹಲಕ್ಷ್ಮಿಗೆ 3 ವರ್ಷಗಳ ಸಂಭ್ರಮ…!–ಆದರೆ ಹಣಕ್ಕಾಗಿ ಕಾಯುತ್ತಿರುವ ಗೃಹಲಕ್ಷ್ಮಿಯರು”ಪಿಂಕ್ ಲೈಟ್‌ನಲ್ಲಿ ಗೃಹಲಕ್ಷ್ಮಿ … ಖಾತೆಯಲ್ಲಿ ಹಣ ಮಾತ್ರ ಇಲ್ಲ!
    “ರಾಜಕಾರಣಿಗಳ ಮಕ್ಕಳೂ ಸರ್ಕಾರಿ ಶಾಲೆಗೆ! ಇಸ್ರೋ ವಿಜ್ಞಾನಿಗೆ ಶಿಕ್ಷಣದ ಚುಕ್ಕಾಣಿ, ಸಿಎಂ ವಿಜಯ್‌ನ ಹೊಸ ಹೆಜ್ಜೆ ದೇಶದ ಗಮನ ಸೆಳೆದಿದೆ
    2 ಲಕ್ಷಕ್ಕೆ ಮಗುವಿನ ಜೀವದ ಬೆಲೆ ಕಟ್ಟಬೇಡಿ!” – ಹೈಕೋರ್ಟ್ ನ್ಯಾಯಮೂರ್ತಿ ಎಂ. ನಾಗಪ್ರಸನ್ನರ ಮಾನವೀಯ ನಿಲುವಿಗೆ ದೇಶಾದ್ಯಂತ ಮೆಚ್ಚುಗೆ