📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಕೇಂದ್ರದ ಮೌನ ಮತ್ತು ಪ್ರಜಾಪ್ರಭುತ್ವದ ಅಣಕಕ್ಕೆ ಜಂತರ್ ಮಂತರ್‌ನಲ್ಲಿ ಧಗಧಗಿಸುತ್ತದ ನೀಟ್ (NEET) ಕಿಚ್ಚು…!

    ಲಕ್ಷಾಂತರ ವಿದ್ಯಾರ್ಥಿಗಳ ಕಣ್ಣೀರಿಗೆ ಕರಗದ ಕೇಂದ್ರದ ಮೌನ!

    ದೇಶದ ಭವಿಷ್ಯವನ್ನು ರೂಪಿಸಬೇಕಾದ ಯುವ ಸಮೂಹ ಇಂದು ರಸ್ತೆಯಲ್ಲಿ ನಿಂತು ಕಣ್ಣೀರು ಹಾಕುತ್ತಿದೆ. ವೈದ್ಯರಾಗುವ ಕನಸು ಹೊತ್ತು ಹಗಲಿರುಳು ಶ್ರಮಿಸಿದ ಲಕ್ಷಾಂತರ ಆಕಾಂಕ್ಷಿಗಳು ಮತ್ತು ಅವರ ಪೋಷಕರು ನೀಟ್ (NEET) ಪರೀಕ್ಷೆಯ ಸರಣಿ ಅಕ್ರಮಗಳು ಹಾಗೂ ಪ್ರಶ್ನೆಪತ್ರಿಕೆ ಸೋರಿಕೆಯಿಂದ ಕಂಗಾಲಾಗಿ,ಎದುರಾದ ಸಂದರ್ಭಗಳನ್ನ ನೆನಪಿಸಿಕೊಳ್ಳಲು , ಅದರಿಂದ ಹೊರಬರಲು ಪರಿತಪಿಸುತ್ತಿದ್ದಾರೆ..

    ಹೌದು …ಇದು ವ್ಯವಸ್ಥೆಯ ಲೋಪದೋಷವೇ..!ಆದರೆ ಯಾವುದೇ ಆಡಳಿತ ಪಕ್ಷ ಬೇಕುಂತ ತನ್ನ ಅಧೀನದಲ್ಲಿರುವ ವ್ಯವಸ್ಥೆಗಳಲ್ಲಿ ಲೋಪದೋಷಗಳನ್ನು ತಾನಾಗಿಯೇ ಸೃಷ್ಟಿಸಿ ತನ್ನ ಮುಖಕ್ಕೆ ಮಸಿ ಬಳಿದುಕೊಳ್ಳುವ ಬಾಲಿಶ ಕೆಲಸಗಳನ್ನ,ನಿರ್ಧಾರಗಳನ್ನ ಯಾವತ್ತಿಗೂ ಮಾಡಲಾರದು..ಹಾಗೇ ಲೋಪಗಳನ್ನ ಕಂಡು ಕಾಣದಂತೆ ಮೈ ಮರೀಲು ಬಾರದು… ಇನ್ನೂ ಗಮನಕ್ಕೆ ಬಾರದೆ NEET ನಂತಹ ದೊಡ್ಡ ಲೋಪದೋಷಗಳಾದಾಗ ಸಂಬಂಧಪಟ್ಟವರು ಅದನ್ನ ತ್ವರಿತವಾಗಿ ಸ್ಪಂದಿಸಿ ಪರಿಹರಿಸಿ ಸಂಧಾನ ಸಮಾಧಾನ ಮಾಡುವಂತ ಪರಿಹಾರ ಮಾರ್ಗಗಳತ್ತ ಆ ಕ್ಷಣಕ್ಕೆ ಮಾಡಬೇಕಾದುದು ಅತ್ಯಗತ್ಯ..

    ಮರುಪರೀಕ್ಷೆಯ ನಾಟಕ ನಡೆದರೂ ವಿದ್ಯಾರ್ಥಿಗಳ ಅಮೂಲ್ಯ ಸಮಯ, ಹಣ ಹಾಗೂ ಮಾನಸಿಕ ನೆಮ್ಮದಿ ಈಗಾಗಲೇ ಹರಾಜಾಗಿದೆ. ಪರೀಕ್ಷಾ ವ್ಯವಸ್ಥೆಯ ಈ ಮಹಾ ವೈಫಲ್ಯದ ಒತ್ತಡ ತಡೆಯಲಾರದೆ 20ಕ್ಕೂ ಹೆಚ್ಚು ಯುವ ಜೀವಗಳು ಆತ್ಮಹತ್ಯೆಯ ಹಾದಿ ಹಿಡಿದಿರುವುದು ದೇಶದ ಶಿಕ್ಷಣ ವ್ಯವಸ್ಥೆಗೆ ಅಂಟಿದ ಕಳಂಕ. ಈ ವ್ಯವಸ್ಥಿತ ಅನ್ಯಾಯದ ವಿರುದ್ಧ ದೇಶದ ಸಾಕ್ಷಿಪ್ರಜ್ಞೆಯಾಗಿ ನಿಂತಿರುವ ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತ, ಲಡಾಖ್‌ನ ವಿಜ್ಞಾನಿ ಸೋನಂ ವಾಂಗ್ಚುಕ್ ದೆಹಲಿಯ ಜಂತರ್ ಮಂತರ್‌ನಲ್ಲಿ ಕಳೆದ 18 ದಿನಗಳಿಂದ ಅನ್ನಾಹಾರ ತ್ಯಜಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

    Also Read  ಭಾರತದ ಟ್ರಾಫಿಕ್ ಕಿರಿಕಿರಿಗೆ ಇದುವರೆಗೂ ಯಾರೂ ಯೋಚಿಸದ ಮಾಸ್ಟರ್ ಪ್ಲಾನ್!ಉಬರ್ ಡ್ರೈವರ್ ಕೊಟ್ಟ ಐಡಿಯಾ ಕೇಳಿದ್ರೆ ನೀವೂ ಹೌದಲ್ವಾ ಅಂತೀರಾ….

    ಆದ್ರೆ,ಲಕ್ಷಾಂತರ ವೈದ್ಯಕೀಯ ಆಕಾಂಕ್ಷಿಗಳು ಮತ್ತು ಅವರ ಪೋಷಕರು ಸುರಿಸುತ್ತಿರುವ ಕಣ್ಣೀರು ದೇಶದ ರಾಜಧಾನಿಯ ಬೀದಿಗಳಲ್ಲಿ ಪ್ರತಿಧ್ವನಿಸುತ್ತಿದ್ದರೂ, ಅಧಿಕಾರದ ಗದ್ದುಗೆಯಲ್ಲಿ ಕುಳಿತವರು ಮೌನಕ್ಕೆ ಶರಣಾಗಿರುವುದು ಪ್ರಜಾಪ್ರಭುತ್ವದ ಅತಿದೊಡ್ಡ ದುರಂತ. 

    ಗಡಿಯ ಕಾವಲುಗಾರನಿಗೆ ನೆರವಾದ ಕೈಗಳು ಇಂದು ಗರಬಡಿದ ವ್ಯವಸ್ಥೆಯ ವಿರುದ್ಧ!

    ಸೋನಂ ವಾಂಗ್ಚುಕ್ ಎಂದರೆ ಕೇವಲ ಒಬ್ಬ ಹೋರಾಟಗಾರನಲ್ಲ; ಅವರು ಹಿಮಾಲಯದ ತಪ್ಪಲಿನಲ್ಲಿ ಅದ್ಭುತಗಳನ್ನು ಸೃಷ್ಟಿಸಿದ ಅಪ್ಪಟ ದೇಶಪ್ರೇಮಿ. ಮೈನಸ್ ಡಿಗ್ರಿ ಚಳಿಯಲ್ಲಿ ಭಾರತದ ಗಡಿ ಕಾಯುವ ಯೋಧರಿಗಾಗಿ ಸೋಲಾರ್ ಟೆಂಟ್‌ಗಳನ್ನು ಆವಿಷ್ಕರಿಸಿ ಬೆಚ್ಚನೆಯ ಆಸರೆ ನೀಡಿದವರು, ಲಡಾಖ್‌ನ ಬರಡು ಭೂಮಿಯಲ್ಲಿ ಕೃಷಿಗಾಗಿ ‘ಐಸ್ ಸ್ತೂಪ’ಗಳ ಮೂಲಕ ನೀರು ಸಂಗ್ರಹಿಸಿದ ಅಪ್ರತಿಮ ವಿಜ್ಞಾನಿ. ‘3 ಈಡಿಯಟ್ಸ್’ ಸಿನಿಮಾದ ಪ್ರಸಿದ್ಧ ‘ಪುಂಸುಕ್ ವಾಂಗ್ಡು’ ಪಾತ್ರಕ್ಕೆ ಪ್ರೇರಣೆಯಾದ ಈ ಸಾಧಕ ಇಂದು ವಿದ್ಯಾರ್ಥಿಗಳ ಬದುಕಿಗೆ ಬೆಳಕಾಗಲು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ದೆಹಲಿಯ ಚಳಿಗಾಲದ ರಸ್ತೆಯಲ್ಲಿ ಮಲಗಿದ್ದಾರೆ. ಅವರು ಕೇಳುತ್ತಿರುವುದು ತಮಗಾಗಿ ಯಾವುದೇ ಸ್ವಾರ್ಥದ ಬೇಡಿಕೆಯನ್ನಲ್ಲ; ದೇಶದ ಭವಿಷ್ಯವನ್ನು ಬಲಿಪೀಠಕ್ಕಿಟ್ಟ ನೀಟ್ ಹಗರಣದ ನೈತಿಕ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಬೇಕು ಮತ್ತು ನೊಂದ ವಿದ್ಯಾರ್ಥಿಗಳ ಕುಟುಂಬಗಳಿಗೆ ನ್ಯಾಯ ಸಿಗಬೇಕು ಎಂಬ ಕನಿಷ್ಠ ಮಾನವೀಯತೆಯನ್ನು ಮಾತ್ರ.

    ಅಂದು ಜನರ ಧ್ವನಿ, ಇಂದು ಉದಾಸೀನ: ರಾಜಕಾರಣಿಗಳ ಬದಲಾದ ಭಾಷೆ!

    ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಅಧಿಕಾರ ರಾಜಕಾರಣಿಗಳ ಭಾಷೆಯನ್ನು ಎಷ್ಟು ಬೇಗ ಬದಲಾಯಿಸುತ್ತದೆ ಎಂಬ ದ್ವಂದ್ವ ಬಯಲಾಗುತ್ತದೆ. 2011ರಲ್ಲಿ ಇದೇ ಜಂತರ್ ಮಂತರ್‌ನಲ್ಲಿ ಅಣ್ಣಾ ಹಜಾರೆ ಭ್ರಷ್ಟಾಚಾರದ ವಿರುದ್ಧ ಉಪವಾಸ ಕುಳಿತಾಗ, ಅಂದಿನ ವಿರೋಧ ಪಕ್ಷದಲ್ಲಿದ್ದ ಇವತ್ತಿನ ಆಡಳಿತಗಾರರು “ಸರ್ಕಾರ ಯಾಕೆ ಕಿವುಡಾಗಿದೆ? ಇದು ಇಡೀ ದೇಶದ ಜನರ ಸತ್ಯಾಗ್ರಹ” ಎಂದು ಸಂಸತ್ತಿನಲ್ಲಿ ಅಬ್ಬರಿಸಿದ್ದರು. ಅಂದು ಆಡಳಿತದಲ್ಲಿದ್ದ ಕಾಂಗ್ರೆಸ್ ಸರ್ಕಾರ ಅಣ್ಣಾ ಹಜಾರೆಯವರ ಬೇಡಿಕೆಯನ್ನು ಸ್ವೀಕರಿಸಿ ಗೌರವಿಸಿತ್ತು.

    Also Read  30ಕ್ಕೂ ಹೆಚ್ಚು ರಾಕ್ಷಸರ ಕಪಿಮುಷ್ಟಿಯಲ್ಲಿ ನಲುಗಿದ 13 ವರ್ಷದ ಮಗು!-ಶ್ರೀಗಂಗಾನಗರದ ಪೈಶಾಚಿಕ ಕೃತ್ಯ

    ಆದರೆ ಇಂದು, ಅದೇ ಜಂತರ್ ಮಂತರ್‌ನಲ್ಲಿ ಒಬ್ಬ ಗಾಂಧಿವಾದಿ ವಿಜ್ಞಾನಿ ಪ್ರಾಣ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದರೂ ಕೇಂದ್ರ ಸರ್ಕಾರ ಅತ್ತ ತಿರುಗಿಯೂ ನೋಡುತ್ತಿಲ್ಲ. ಅಷ್ಟೇ ಅಲ್ಲ, ಅಂದು ಸತ್ಯಾಗ್ರಹವನ್ನು ಕೊಂಡಾಡಿದವರೇ ಇಂದು ನ್ಯಾಯ ಕೇಳುತ್ತಿರುವ ಹೋರಾಟಗಾರರನ್ನು ಕಟುವಾದ ಪದಗಳಿಂದ ನಿಂದಿಸುತ್ತಿರುವುದು ಸೈದ್ಧಾಂತಿಕ ಅಹಂಕಾರದ ಪರಮಾವಧಿ.

    ಸೇಡಿನ ರಾಜಕಾರಣಕ್ಕೆ ಬಲಿಯಾಗ್ತಾರ ಸೋನಮ್..!?

    ಲಡಾಖ್‌ಗೆ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡಿದ ಕಾರಣಕ್ಕೆ ಇದೇ ಕೇಂದ್ರ ಸರ್ಕಾರ ಕಳೆದ ವರ್ಷ ಸೋನಂ ವಾಂಗ್ಚುಕ್ ಅವರನ್ನು ರಾಷ್ಟ್ರೀಯ ಭದ್ರತಾ ಕಾಯ್ದೆಯಡಿ ರಾಜಸ್ಥಾನದ ಜೈಲಿನಲ್ಲಿಟ್ಟಿತ್ತು. ಸುಪ್ರೀಂ ಕೋರ್ಟ್‌ನಲ್ಲಿ ಹೆಬಿಯಸ್ ಕಾರ್ಪಸ್ ಅರ್ಜಿ ವಿಚಾರಣೆಗೆ ಬರುವ ಮುನ್ನವೇ ಮುಖಭಂಗ ತಪ್ಪಿಸಿಕೊಳ್ಳಲು ಸರ್ಕಾರ ಅವರನ್ನು ದಿಢೀರ್ ಬಿಡುಗಡೆ ಮಾಡಿತ್ತು. ಇಂದು ನೀಟ್ ಅಕ್ರಮದ ವಿರುದ್ಧ ಅವರು ಧ್ವನಿ ಎತ್ತಿದಾಗ ಸರ್ಕಾರ ತೋರುತ್ತಿರುವ ಕ್ರೂರ ನಿರ್ಲಕ್ಷ್ಯವು ಆ ಹಳೆಯ ಸೇಡನ್ನು ತೀರಿಸಿಕೊಳ್ಳುತ್ತಿರುವಂತೆ ಭಾಸವಾಗುತ್ತಿದೆ.

    Also Read  ವಿಜಯ್ ತಳಪತಿ ಸಂಗೀತಾ ವಿಚ್ಛೇದನ ವಿಚಾರ: 27 ವರ್ಷದ ದಾಂಪತ್ಯಕ್ಕೆ ತೆರೆ? ₹250 ಕೋಟಿ ಸೆಟ್ಲ್‌ಮೆಂಟ್ ಚರ್ಚೆ!!

    ಅಹಿಂಸಾತ್ಮಕ ಮಾದರಿಯ ಅತ್ಯುನ್ನತ ಪ್ರತಿಭಟನೆಯಾದ ‘ನಿರಾಹಾರ ಸತ್ಯಾಗ್ರಹ’ವನ್ನು ಪ್ರಭುತ್ವವು ತನ್ನ ಅಹಂನಿಂದ ಹೀಗೆಯೇ ಅಲಕ್ಷಿಸುತ್ತಾ ಹೋದರೆ, ಜನಸಾಮಾನ್ಯರು ಪ್ರಜಾಪ್ರಭುತ್ವದ ವ್ಯವಸ್ಥೆಯ ಮೇಲಿನ ನಂಬಿಕೆಯನ್ನೇ ಕಳೆದುಕೊಳ್ಳುತ್ತಾರೆ.

    ರಾಜಕೀಯ ಸಿದ್ಧಾಂತಗಳು ಬರುತ್ತವೆ ಮತ್ತು ಹೋಗುತ್ತವೆ, ಆದರೆ ಒಮ್ಮೆ ಕಮರಿಹೋದ ವಿದ್ಯಾರ್ಥಿಗಳ ಭವಿಷ್ಯ ಮತ್ತು ದೇಶದ ಮೇಲಿನ ನಂಬಿಕೆ ಮತ್ತೆ ಮರಳಿ ಬಾರದು. ಕೇಂದ್ರ ಸರ್ಕಾರ ತಕ್ಷಣ ಮೌನ ಮುರಿದು ಮಾತುಕತೆಗೆ ಮುಂದಾಗಲಿ.ಪ್ರಜೆಗಳ ಅಳಲನ್ನು ತಾಯ್ತನದ ಮನಸ್ಸಿನಿಂದ ಆಲಿಸುವುದೇ ನಿಜವಾದ ‘ರಾಜಧರ್ಮ’.

    ಧರ್ಮ-ರಾಜಕೀಯ ಮೀರಿದ ಒಗ್ಗಟ್ಟನ್ನ ಪ್ರದರ್ಶಿಸುವ ಸಮಯ…!

    ಇದು ಕೇವಲ ಸೋನಂ ವಾಂಗ್ಚುಕ್ ಅವರ ವೈಯಕ್ತಿಕ ಹೋರಾಟವಲ್ಲ; ಇದು ದೇಶದ ಪ್ರತಿಯೊಬ್ಬ ಪೋಷಕರ ಮತ್ತು ವಿದ್ಯಾರ್ಥಿಯ ಆತ್ಮಗೌರವದ ಪ್ರಶ್ನೆ. ಶಿಕ್ಷಣ ವ್ಯವಸ್ಥೆಯ ಅತಿಯಾದ ಕೇಂದ್ರೀಕರಣ ಮತ್ತು ಖಾಸಗೀಕರಣದಿಂದಾಗಿ ಬಡ ಹಾಗೂ ಮಧ್ಯಮ ವರ್ಗದ ಮಕ್ಕಳಿಗೆ ಉನ್ನತ ಶಿಕ್ಷಣ ಮರೀಚಿಕೆಯಾಗುತ್ತಿದೆ. ಪರೀಕ್ಷೆಗಳಲ್ಲಿ ಪಾರದರ್ಶಕತೆ ತರುವುದು, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸುವುದು, ನೀಟ್ ಪರೀಕ್ಷೆಯನ್ನು ರದ್ದುಪಡಿಸಿ ರಾಜ್ಯಗಳಿಗೆ ವಿಕೇಂದ್ರೀಕರಣದ ನ್ಯಾಯ ಒದಗಿಸುವುದು ಮತ್ತು ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಅನುದಾನ ನೀಡುವುದು ಇಂದಿನ ತುರ್ತು ಅಗತ್ಯವಾಗಿದೆ. ಧರ್ಮ, ಜಾತಿ, ರಾಜಕೀಯ ಪಕ್ಷಗಳ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು, ದೇಶದ ಭವಿಷ್ಯಕ್ಕಾಗಿ ಧ್ವನಿ ಎತ್ತಿರುವ ವಾಂಗ್ಚುಕ್ ಅವರಿಗೆ ಇಡೀ ದೇಶ ಬೆಂಬಲವಾಗಿ ನಿಲ್ಲಬೇಕಿದೆ.

    ರಾಷ್ಟ್ರಪತಿಗಳು ತಕ್ಷಣವೇ ಮಧ್ಯಪ್ರವೇಶಿಸಿ ವಾಂಗ್ಚುಕ್ ಅವರ ಪ್ರಾಣವನ್ನು ರಕ್ಷಿಸಬೇಕು ಮತ್ತು ದೇಶದ ಶಿಕ್ಷಣ ವ್ಯವಸ್ಥೆಯನ್ನು ಶುದ್ಧೀಕರಿಸಲು ಸರ್ಕಾರಕ್ಕೆ ಆದೇಶಿಸಬೇಕು.

    #NEETControversy #SonamWangchuk #JusticeForStudents #JantarMantarProtest #EducationReform

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಕೇರಳ ಸರ್ಕಾರ ರಚನೆಯ ಕಗ್ಗಂಟು.. ಸಿಎಂ ಅಭ್ಯರ್ಥಿ ಆಯ್ಕೆಗೆ ಕಸರತ್ತು… ಕಾಂಗ್ರೆಸ್ ದುರ್ಬಲತೆಗೆ ಸಾಕ್ಷಿ
    ಬಂಟ್ವಾಳದಲ್ಲಿ ಶಾಲಾ ಬಸ್ ಮೇಲೆ ಉರುಳಿದ ಬೃಹತ್ ಮರ; ಪುಟ್ಟ ಜೀವವೊಂದು ಬಲಿ.. ಕೆಲವು ಮಕ್ಕಳಿಗೆ ಗಾಯ..
    ಕರಾವಳಿಯಲ್ಲಿ ವಾಪಸ್ ಆದ ಮುಂಗಾರು: ಜುಲೈ 6ರವರೆಗೆ ಆರೆಂಜ್ ಅಲರ್ಟ್ – ಜನರಿಗೆ ಎಚ್ಚರಿಕೆ
    ಶಾಲೆಯ ಮೊದಲ ದಿನವೇ ಕಣ್ಣೀರು ತರಿಸಿದ ಫಿಲಿಪೈನ್ಸ್‌ ಭೂಕಂಪ ಸೃಷ್ಟಿಸಿದ ಭೀಕರತೆ ಮುಗ್ಧ ಮಕ್ಕಳನ್ನು ಆವರಿಸಿದ ಭೀತಿ..
    8 ವರ್ಷಗಳಿಂದ ತಲೆಮರೆಸಿಕೊಂಡಿದ್ದ ವಾರಂಟ್ ಆರೋಪಿಯ ಬಂಧನ
    ಈಶ್ವರ್ ಮಲ್ಪೆ ತಂಡಕ್ಕೆ MAHE ಸಂಸ್ಥೆಯಿಂದ ಅಮೂಲ್ಯ ರಕ್ಷಣಾ ವಾಹನ ಕೊಡುಗೆ-ಜೀವ ಉಳಿಸುವ ಸೇವೆಗೆ ಮತ್ತಷ್ಟು ಶಕ್ತಿ
    ನಾಸಿಕ್‌ನ Tata Consultancy Services ಕಚೇರಿಯಲ್ಲಿ ಗಂಭೀರ ಆರೋಪಗಳ ನಡುವೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ — ಸುರಕ್ಷತೆಗೆ ಮೊದಲ ಆದ್ಯತೆ.
    MRPL ವಿರುದ್ಧ ಜನಹೋರಾಟದ ಎಚ್ಚರಿಕೆ – ಮೇ 1ರಿಂದ ಅನಿರ್ದಿಷ್ಟ ಧರಣಿಗೆ ಸಮಿತಿ ಸಜ್ಜು..
    ನಾಲ್ಕು ದಶಕಗಳ ಕಾಲ ರೋಗಿಗಳಿಗೆ ಜೀವ ನೀಡಿದ ವೈದ್ಯನೇ ಇಂದು ಯಾಕೆ ತನ್ನ ಜೀವ ತಾನೇ ತೆಗೆದುಕೊಂಡರು …
    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ
    ಭೋಪಾಲ್ ತ್ವಿಷಾ ಶರ್ಮಾ ಪ್ರಕರಣ ಪೋಷಕರ ಪಟ್ಟು-ಅಂತ್ಯಕ್ರಿಯೆ ಮಾಡುವುದಿಲ್ಲ “ನ್ಯಾಯ ಸಿಗುವವರೆಗೂ ನಾವು ದೇಹವನ್ನು ಸ್ವೀಕರಿಸುವುದಿಲ್ಲ” 
    🚨 ಬೈಂದೂರಿನಲ್ಲಿ ಭಯಾನಕ ದಾಳಿ! ಕತ್ತಿಯಿಂದ ಹಲ್ಲೆ – ಆರೋಪಿ ಬಂಧನ
    ಎರಡು ಭೀಕರ ಕ್ಷಣಗಳು!ಒಂದು ರನ್‌ವೇಯಲ್ಲಿ ಸಾವು… ಮತ್ತೊಂದು ರನ್‌ವೇಯಲ್ಲಿ ಅದ್ಭುತ ಪಾರು!
    ಅಮ್ಮನ ಅಂತ್ಯಕ್ರಿಯೆಯಲ್ಲಿ ಗಳಗಳನೇ ಕಣ್ಣೀರಿಟ್ಟು,ಚಿತೆಯ ಮುಂದೆ ಕುಸಿದುಬಿದ್ದ ಚಿನ್ಮಯ್ ದಾಸ್!ಐದು ಗಂಟೆಯ ಪೆರೋಲ್… ಜೈಲಿನಿಂದ ಬಂದ ಸನ್ಯಾಸಿ ಮಗ…
    ಭಾರತೀಯ ಸೇನೆಯ ನೆರವಿಗೆ ಡ್ರೋನ್ ನರ್ಸಿಂಗ್ ಹೋಮ್! ದುರ್ಗಮ ಪ್ರದೇಶಗಳಲ್ಲೂ ಸಿಗಲಿದೆ ಅತ್ಯಾಧುನಿಕ ವೈದ್ಯಕೀಯ ಚಿಕಿತ್ಸೆ
    “ಪ್ರಜಾಪ್ರಭುತ್ವದ ಮೇಲೆ ದಾಳಿ”ಸುಪ್ರೀಂ ಕೋರ್ಟ್ ಕಿಡಿ: ಇದು ಪ್ರತಿಭಟನೆ ಅಲ್ಲ, ಸಂಚು!”
    ಐಸಿಸಿ ಟ್ವೆಂಟಿ-20 ವಿಶ್ವಕಪ್ ಮೂಡಿಗೇರಿಸಿಕೊಂಡ ಭಾರತ
    “ಪತ್ನಿ ಮನೆಗೆಲಸದ ಸೇವಕಿ ಅಲ್ಲ!” — ಮದುವೆ ಎಂದರೆ ಹೆಂಡತಿಯ ಸ್ವಾತಂತ್ರ್ಯ ಕಸಿಯುವ ಪರವಾನಗಿ ಅಲ್ಲ: ಹೈಕೋರ್ಟ್
    ‘ಹೊಸ Form 6’ಗೆ ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿಲ್ಲ! CJI ಸ್ಪಷ್ಟನೆ
    ₹10,000ಕ್ಕೆ NEET-UG 2026 ಪ್ರಶ್ನೆಪತ್ರಿಕೆ? ದೇಶವೇ ಬೆಚ್ಚಿಬಿದ್ದ ಲೀಕ್ ಸ್ಕಾಂಡಲ್!ಟೆಲಿಗ್ರಾಂ ಸೀಕ್ರೆಟ್ ಚಾಟ್ ವೈರಲ್…22 ಲಕ್ಷ ವಿದ್ಯಾರ್ಥಿಗಳ ಕನಸಿಗೆ ದೊಡ್ಡ ಹೊಡೆತ — NEET 2026 ರದ್ದು!
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
    Train Travel ಇಷ್ಟನಾ? ಹಾಗಾದ್ರೆ ಈ ಸುದ್ದಿ ತಿಳ್ಕೊಳ್ಳಿ!ಬೆಂಗಳೂರು–ಮಂಗಳೂರು ಗೋವಾ ವಂದೇ ಭಾರತ್….!?
    ಲಖನೌ ಅಗ್ನಿ ದುರಂತದ ಕೊನೆ ಕ್ಷಣದ ಫೋನ್ ಕರೆಗಳು …”ಅಪ್ಪಾ,ಪ್ಲೀಸ್ ನನ್ನನ್ನು ಉಳಿಸು…” – “ನನ್ನ ಮಗನ ಬಳಿ ಹೋಗಲು ಬಿಡಿ…”
    ಬರೋಬ್ಬರಿ ₹50 ಲಕ್ಷ ಲಂಚ! ತಹಶೀಲ್ದಾರ್ ಲೋಕಾಯುಕ್ತ ಬಲೆಗೆ
    ಅಂಡಮಾನ್ ಸಮುದ್ರದಲ್ಲಿ ಸಿಕ್ಕಿದ ಖಜಾನೆ! ಭಾರತದ ಇಂಧನ ಭವಿಷ್ಯ ಬದಲಾಗುತ್ತಿದೆಯೇ?
    ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ  ಕೊನೆಗೂ ರಾಜೀನಾಮೆ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಕೋರ್ಟ್ ವಿಡಿಯೊ ವೈರಲ್‌ಗೆ ಬ್ರೇಕ್: ಸುಪ್ರೀಂ ಕೋರ್ಟ್ ಆದೇಶದ ಬಗ್ಗೆ ಜನಾಭಿಪ್ರಾಯ ಏನು?
    Side Income ಇಂದು ಆಯ್ಕೆ ಅಲ್ಲ, ಅಗತ್ಯ …ಹಣ ಗಳಿಸಿ… ನಿದ್ರೆಯಲ್ಲೂ!ಒಂದು ಸಂಬಳ ಸಾಕಾಗದ ಕಾಲ ಇದು.
    ಆನ್‌ಲೈನ್ ಗೋಲ್ಡ್ ಮಾರ್ಕೆಟ್ ಹೂಡಿಕೆಯಲ್ಲಿ ಮೋಸ- ಮಹಿಳೆಗೆ ₹10.55 ಲಕ್ಷ ನಷ್ಟ