📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    SIR ನಲ್ಲಿ ಹೆಸರು ಕೈಬಿಟ್ಟವರಿಗೆ 7 ರಾಜ್ಯಗಳ ಮತದಾರರಿಗೆ ಮರುಸೇರ್ಪಡೆಗೆ ಕೊನೆಯ ಅವಕಾಶ!

    ಮತದಾರರ ಪಟ್ಟಿಯಲ್ಲಿ ಹೆಸರು ಇಲ್ಲವೇ? ಆತಂಕ ಬೇಡ. ವಿಶೇಷ ಸಮಗ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಗೈರು, ಸ್ಥಳಾಂತರ, ಮೃತಪಟ್ಟವರು ಅಥವಾ ನಕಲಿ ಮತದಾರರು ಎಂಬ ಕಾರಣಕ್ಕೆ ಪಟ್ಟಿಯಿಂದ ಕೈಬಿಡಲಾದವರ ಪೈಕಿ ಅರ್ಹ ಮತದಾರರಿಗೆ ಮತ್ತೆ ಹೆಸರು ಸೇರ್ಪಡೆಗೊಳಿಸಲು ಚುನಾವಣಾ ಆಯೋಗ ಅವಕಾಶ ಕಲ್ಪಿಸಿದೆ.ಆದರೆ ಕರ್ನಾಟಕಕ್ಕೆ ಈ ಹೊಸ ಅವಕಾಶ ಅನ್ವಯಿಸುತ್ತದೆ ಎಂದು ಚುನಾವಣಾ ಆಯೋಗ ಇನ್ನೂ ಅಧಿಕೃತವಾಗಿ ಘೋಷಿಸಿಲ್ಲ.

    • ಈ ಸುದ್ದಿಯ ಪ್ರಮುಖ ಹೈಲೈಟ್ಸ್
      SIR ಪಟ್ಟಿಯಿಂದ ಹೆಸರು ಕೈಬಿಟ್ಟ ಅರ್ಹ ಮತದಾರರಿಗೆ ಮರುಸೇರ್ಪಡೆಗೆ ಅವಕಾಶ.
      ಮೊದಲ ಹಂತದಲ್ಲಿ 7 ರಾಜ್ಯಗಳಿಗೆ ಮಾತ್ರ ಅವಕಾಶ.
      ಕರ್ನಾಟಕಕ್ಕೂ ವಿಸ್ತರಣೆಯಾಗುವ ಸಾಧ್ಯತೆ.
      BLOಗಳಿಂದ ಮತದಾರರಿಗೆ ನೇರ ಸಂಪರ್ಕ.
      ಎಸ್‌ಐಆರ್ ಹೋರಾಟಕ್ಕೆ ಗೈರು: ಕರ್ನಾಟಕದ 6 ಯುವ ಕಾಂಗ್ರೆಸ್ ಪದಾಧಿಕಾರಿಗಳಿಗೆ ಅಮಾನತು.
      ಅಮಾನತುಗೊಂಡವರಲ್ಲಿ ಸಚಿವರ ಪುತ್ರನೂ ಸೇರಿದ್ದಾರೆ.
    Also Read  2026 ವಿಧಾನಸಭೆ ಚುನಾವಣೆ – ಮುಖ್ಯ ಮಾಹಿತಿ

    7 ರಾಜ್ಯಗಳ ಮತದಾರರಿಗೆ ಅವಕಾಶ

    ಮಹಾರಾಷ್ಟ್ರ, ಹರಿಯಾಣ, ಆಂಧ್ರಪ್ರದೇಶ, ಜಾರ್ಖಂಡ್, ತೆಲಂಗಾಣ, ನಾಗಾಲ್ಯಾಂಡ್ ಮತ್ತು ದಿಲ್ಲಿ ರಾಜ್ಯಗಳ ಮತದಾರರಿಗೆ ಈ ಅವಕಾಶ ಅನ್ವಯಿಸಲಿದೆ. ಕೈಬಿಡಲಾದವರು ಹಳೆಯ EPIC (ಮತದಾರರ ಗುರುತಿನ ಚೀಟಿ) ಸಂಖ್ಯೆಯೊಂದಿಗೆ ಅಗತ್ಯ ನಮೂನೆ ಭರ್ತಿ ಮಾಡಿ ಖುದ್ದಾಗಿ ಅಥವಾ ECI Net ಪೋರ್ಟಲ್/ಆ್ಯಪ್ ಮೂಲಕ ಮರುಸಲ್ಲಿಸಬಹುದು. ಮುಂದಿನ ದಿನಗಳಲ್ಲಿ ಕರ್ನಾಟಕಕ್ಕೂ ಈ ಅವಕಾಶ ವಿಸ್ತರಣೆಯಾಗುವ ಸಾಧ್ಯತೆಯಿದೆ.

    ಬಿಎಲ್‌ಒಗಳಿಂದ ನೇರ ಸಂಪರ್ಕ

    ಮತದಾರರಿಗೆ ಅನುಕೂಲವಾಗುವಂತೆ ಬೂತ್ ಮಟ್ಟದ ಅಧಿಕಾರಿಗಳು (BLO) ವಾಟ್ಸ್‌ಆ್ಯಪ್, SMS, ಇ-ಮೇಲ್ ಅಥವಾ ನೇರವಾಗಿ ಸಂಪರ್ಕಿಸಿ ನಮೂನೆಗಳನ್ನು ಒದಗಿಸಲಿದ್ದಾರೆ. ಒಂದೇ ರಾಜ್ಯದೊಳಗೆ ವಿಳಾಸ ಬದಲಾಯಿಸಿದವರು ಹೊಸ ವಿಳಾಸದ ಪುರಾವೆಯೊಂದಿಗೆ ನಮೂನೆ ಸಲ್ಲಿಸಬಹುದು. ವಸತಿಹೀನರ ವಿಷಯದಲ್ಲಿ ಬಿಎಲ್‌ಒಗಳ ಸ್ಥಳ ಪರಿಶೀಲನಾ ವರದಿಯನ್ನೂ ವಿಳಾಸದ ಪುರಾವೆಯಾಗಿ ಪರಿಗಣಿಸಲಾಗುತ್ತದೆ.

    Also Read  ಸಾಲಗಾರರಿಗೆ ಶಾಕ್ ....RBI ಬಡ್ಡಿ ಹೆಚ್ಚಳ-EMI ಮತ್ತೆ ಏರಿಕೆ..!?

    ಮಹತ್ವದ ಅಂಶ: ಕೈಬಿಡಲಾದ ಮತದಾರರ ಪಟ್ಟಿಯನ್ನು ಕಾರಣಗಳ ಸಹಿತ ಸಾರ್ವಜನಿಕವಾಗಿ ಪ್ರಕಟಿಸಲಾಗುತ್ತದೆ. ಅರ್ಹ ಮತದಾರರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಈ ಅವಕಾಶ ಕಲ್ಪಿಸಲಾಗಿದೆ.

    ಈ ನಡುವೆ ದಿಲ್ಲಿಯಲ್ಲಿ ನಡೆದ ಕಾಂಗ್ರೆಸ್‌ನ ಎಸ್‌ಐಆರ್ ವಿರೋಧಿ ಹೋರಾಟ ಹಾಗೂ ಪಕ್ಷದ ಪ್ರಮುಖ ಕಾರ್ಯಕ್ರಮಗಳಿಗೆ ಗೈರುಹಾಜರಾದ ಹಿನ್ನೆಲೆಯಲ್ಲಿ ಕರ್ನಾಟಕದ ಆರು ಯುವ ಕಾಂಗ್ರೆಸ್ ಪದಾಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

    ಅಮಾನತುಗೊಂಡವರಲ್ಲಿ ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಅವರ ಪುತ್ರ ಹಾಗೂ ಹಾವೇರಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ದರ್ಶನಕುಮಾರ ಲಮಾಣಿ ಕೂಡ ಸೇರಿದ್ದಾರೆ. ಈ ಬೆಳವಣಿಗೆ ಹಾವೇರಿ ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸಿದೆ.

    ಅಮಾನತುಗೊಂಡ ಇತರ ಪದಾಧಿಕಾರಿಗಳೆಂದರೆ ಕೆಪಿವೈಸಿಸಿ ರಾಜ್ಯ ಕಾರ್ಯದರ್ಶಿಗಳಾದ ಅಬ್ದುಲ್ ಅಜೀಜ್, ಸೂರಜ್ ಆವಟಿ, ಪವನ ಸಾಲಿಯಾನ್, ಅಭಿಷೇಕ ಸಿ. ಹಾಗೂ ಉತ್ತರ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸುಬ್ರಹ್ಮಣ್ಯ ಸಿರ್ಸಿಕರ.

    Also Read  MRPLನಲ್ಲಿ ಭಾರೀ ಸ್ಫೋಟದ ಸದ್ದು “ಬಾಯ್ಲರ್ ಬ್ಲಾಸ್ಟ್”…!ಕಾಟಿಪಳ್ಳ, ಜೋಕಟ್ಟೆ , ಕೃಷ್ಣಾಪುರದ ಜನರಲ್ಲಿ ಆತಂಕ — ಫೇಸ್‌-3 ಘಟಕದ ಬಳಿ ಘಟನೆ ಶಂಕೆ

    ಪಕ್ಷದ ಕಾರ್ಯಕ್ರಮಗಳಲ್ಲಿ ನಿರಂತರ ಗೈರುಹಾಜರಿ ಹಾಗೂ ಸಂಘಟನಾತ್ಮಕ ಜವಾಬ್ದಾರಿಗಳನ್ನು ನಿರ್ಲಕ್ಷಿಸಿರುವುದನ್ನು ಗಂಭೀರವಾಗಿ ಪರಿಗಣಿಸಿ ಭಾರತೀಯ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ನಾಯಕತ್ವ ಈ ಕ್ರಮ ಕೈಗೊಂಡಿದೆ.

    ##SIR #VoterList #ElectionCommission #VoterRights #KarnatakaPolitics #YouthCongress #Haveri #UttaraKannada

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ತಮಿಳುನಾಡು ಮುಖ್ಯಮಂತ್ರಿ ವಿಜಯ್, ಚಧುರಂಗದಾಟದಲ್ಲಿ ಲಾಂಗ್ ಟೈಮ್ ಉಳಿಯುವರೇ?
    ರೀಲ್ಸ್ ನೋಡುವ ಕೈಗಳೇ… ದೇಶ ಕಟ್ಟುವ ಕೈಗಳಾಗಬಹುದು.ಡ್ರಗ್ಸ್ ,ಮೊಬೈಲ್ ,ವ್ಯಸನಗಳು ನಿಮ್ಮ ಕನಸುಗಳನ್ನು ಕದಿಯುವ ಮೊದಲು… ಯುವಕರೇ ಎಚ್ಚರಗೊಳ್ಳಿ!
    ಇಎಸ್ಐ ರೋಗಿಗಳಿಗೆ ತೊಂದರೆ ನೀಡದೇ ಚಿಕಿತ್ಸೆ ನೀಡಿ ಎಂದ ಕೇಂದ್ರ ಸರ್ಕಾರ- ಸಚಿವೆಗೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕೃತಜ್ಞತೆ
    ದೇವಳದ ಗೋಲ್ಮಾಲ್ ತಡೆಗೆ ಉಪ-ಮುಖ್ಯಮಂತ್ರಿ ಬುಲಾವ್!
    ವಾಜಪೇಯಿ ಸರ್ಕಾರದ  ಕನಸಿನ ಯೋಜನೆ ನದಿ ಜೋಡಣೆ ವಿರೋಧಿಸಿ ಶಿರಸಿಯಲ್ಲಿ ಸಹಿ ಸಂಗ್ರಹ ಅಭಿಯಾನ
    ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
    ಪ್ರತಿಭಟನೆಯ ಹಕ್ಕು ಸಂವಿಧಾನ ನೀಡಿದೆ… ಆದರೆ ಅದರ ಹೆಸರಿನಲ್ಲಿ ನಡೆದ ಎಲ್ಲವನ್ನೂ ತನಿಖೆ ಮಾಡುವುದು ಸರ್ಕಾರದ ಕರ್ತವ್ಯ!
    ಲಖನೌ ಅಗ್ನಿ ದುರಂತದ ಕೊನೆ ಕ್ಷಣದ ಫೋನ್ ಕರೆಗಳು …”ಅಪ್ಪಾ,ಪ್ಲೀಸ್ ನನ್ನನ್ನು ಉಳಿಸು…” – “ನನ್ನ ಮಗನ ಬಳಿ ಹೋಗಲು ಬಿಡಿ…”
    ಒಬ್ಬರೇ ಹಾಗಾಗಿ ಕಾರಿನಲ್ಲಿ ಯಾಕೆ? ಫ್ಲೈಟ್ ಫೇರ್ ಜಾಸ್ತಿ ಇದೆ..ಟ್ರೈನ್ ಲೇಟ್ ಆಗುತ್ತೆ..so ಹೆಗೋಗೋಣ….!? ಹೀಗೂ ಹೋಗ್ಬಹುದು ತಿಳ್ಕೊಳ್ಳಿ..
    ಅಯೋಧ್ಯೆಯಲ್ಲಿ ನ್ಯಾಯಕ್ಕಾಗಿ ವಕೀಲರ ಮೆರವಣಿಗೆ..ಭುಗಿಲೆದ್ದ ಪ್ರತಿಭಟನೆ..ಕಠಿಣ ಕ್ರಮಕ್ಕೆ ಆಗ್ರಹ
    ಸುಪ್ರೀಂ ಕೋರ್ಟ್‌ನಲ್ಲಿ ಗದ್ದಲ: ದಾಖಲೆ ಎಸೆದು ಅವಾಚ್ಯ ಶಬ್ದ ಬಳಕೆ ಯಾಕೆ?- ಅರ್ಜಿದಾರನ ಅರ್ಜಿ ವಜಾ
    ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಹಿಗ್ಗಾಮುಗ್ಗ ಜಾಡಿಸಿದ ಹೆಚ್ ವಿಶ್ವನಾಥ್
    ಆಪಲ್‌ಗೆ ಭಾರತದಲ್ಲಿ ದೊಡ್ಡ ಕಾನೂನು ಶಾಕ್? App Store ನಿಯಮಗಳ ಮೇಲೆ ಆಪಲ್ vs ಭಾರತ CCI ಜಟಾಪಟಿ 
    ಟೈಗರ್ ಶ್ರಾಫ್‌ಗೆ ಗುಂಡಿನ ಟಾರ್ಗೆಟ್! ಕೋಟಾದಲ್ಲಿ ಸಿಕ್ಕಿಬಿದ್ದ ಮೂವರು; ದಾಳಿಯ ಹಿಂದಿದೆಯೇ ಬಿಷ್ಣೋಯ್ ಗ್ಯಾಂಗ್?
    ಜಬಲ್ಪುರ್ ದುರಂತಕ್ಕೆ ಹೊಣೆ ಯಾರು? ಕ್ರಮ ಏನು?
    ಕರ್ನಾಟಕದಲ್ಲಿ AI ಆವಿಷ್ಕಾರಕ್ಕೆ ಹೊಸ ಹೆಜ್ಜೆ: ಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾದ Anthropic ತಂಡ
    “ಮಂಜಿನ ನಡುವೆ ಕ್ಷಣಾರ್ಧದಲ್ಲಿ ಮಾಯವಾದ ಮಗಳು”ಶ್ರೀನಂದಾ ಶವವಾಗಿ ಪತ್ತೆ…!
    ಡಿಜಿಟಲ್ ದಿಗ್ಗಜರಿಗೆ ₹2 ಕೋಟಿ ಲೀಗಲ್ ನೋಟಿಸ್ ಶಾಕ್!ಯೂಟ್ಯೂಬ್ ಸ್ಟಾರ್ vs ಟಿವಿ ಸ್ಟಾರ್ ನಡುವಿನ ಕಾನೂನು ಸಮರ!
    ಆರೋಪಿ ಸಮೀರ್ ಮುಲ್ಲಾ ಸ್ಫೋಟಕ ಹೇಳಿಕೆ-ಖುಷಿ ಒಳ್ಳೆ ಹುಡುಗಿ-🔥 ಹುಬ್ಬಳ್ಳಿ ಲವ್ ಜಿಹಾದ್ ಅಲ್ಲ ಎಂದ ಪೊಲೀಸರು : ಇದೀಗ ಹೊಸ ಟ್ವಿಸ್ಟ್!
    “ಸಂತೋಷ್ Kumar” ಯಾರು? ಸಾವಿರ ಕಾರ್ಡ್‌ಗಳಲ್ಲಿ ಒಂದೇ ಹೆಸರು..!₹95 ಕೋಟಿ ಅಮೆರಿಕಾ ಹಣ,1000 ಡೆಬಿಟ್ ಕಾರ್ಡ್‌ಗಳು!ಬಯಲಾಯ್ತು ಕರ್ನಾಟಕದಲ್ಲಿ ಭಾರೀ ನಕ್ಸಲ್-ಮತಾಂತರ ಜಾಲ?
    ಮಕ್ಕಳ ಕೈಗೆ AI ಕೊಡುವ ಮುನ್ನ ಸರ್ಕಾರ ಯೋಚಿಸಬೇಕಾದ ಗಂಭೀರ ವಿಷಯಗಳೇನು…?!!
    “ಪ್ರೇಮ ಕಥೆ ತಿರುವು: ಗಂಡನ ಜೀವವೇ ಟಾರ್ಗೆಟ್!”ಬ್ಯಾಂಕ್ ಅಧಿಕಾರಿ ಪತ್ನಿ taxi ಚಾಲಕನೊಂದಿಗೆ ಸೇರಿ killing plan
    ದಕ್ಷಿಣ ಕನ್ನಡದ 14 ವರ್ಷದ ಎಲ್ಲ ಬಾಲಕಿಯರು ಉಚಿತ HPV ಲಸಿಕೆ ಹಾಕಿಸಿಕೊಳ್ಳಲು ಸಂಸದರ ಕರೆ
    ಬೆಳ್ತಂಗಡಿ: 16ರ ಹರೆಯದ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಗರ್ಭಿಣಿ ಮಾಡಿದ್ದ ಆಟೋ ಚಾಲಕ ಅಂದರ್!
    50ಕ್ಕೂ ಹೆಚ್ಚು ಆಟೋ ಚಾಲಕರ ದಿನನಿತ್ಯದ ಆರೋಗ್ಯದ ಬದುಕಿಗೆ ಮುಳುವಾದ ದೇರಳಕಟ್ಟೆ ಜಂಕ್ಷನ್ ದುರ್ನಾತ! 
    ಫೈವ್ ಸ್ಟಾರ್ ಹೋಟೆಲ್‌ಗಳಲ್ಲೇ ಹಾಳಾದ ಹಾಲು, ಕೊಳೆತ ತರಕಾರಿ ಪತ್ತೆ!ಫುಡ್ ಸೇಫ್ಟಿ ದಾಳಿ ಅಧಿಕಾರಿಗಳೇ ಬೆಚ್ಚಿಬಿದ್ದರು….!
    ಮಗನಿಗೆ IAS ಬೇಡವೇ ಬೇಡ ಎಂದ ಮುಂಡೆ ಮಾತು ಸಂಚಲನ!ವ್ಯವಸ್ಥೆಯ ವಿರುದ್ಧ ಆಕ್ರೋಶ!…..!
    ನೀವು Fit…ಆದ್ರೆ ನಿಮ್ಮ ಹೃದಯ ?ಮನೆಯಲ್ಲಿಯೇ 5 ನಿಮಿಷದಲ್ಲಿ ಪರೀಕ್ಷಿಸಿಕೊಳ್ಳಿ ನಿಮ್ಮ ಹೃದಯದ ಆರೋಗ್ಯ!
    ಜೀತಕ್ಕಿಟ್ಟುಕೊಂಡು ದರ್ಬಾರ್ ನಡೆಸುತ್ತಿದ್ದ ರಜನಿಶೆಟ್ಟಿಯ ಬಂಧನ
    ಹೈಕೋರ್ಟ್‌ ಅಂಗಳಕ್ಕೆ ಮೂವರು ಹೊಸ ಮುಖ!ಆ ಮೂವರು ನ್ಯಾಯಾಂಗ ಅಧಿಕಾರಿಗಳು ಯಾರೆಲ್ಲಾ..ಹೇಗೆ ಆಯ್ಕೆ..