📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ನಾಹೀದಾ( ‘ರಾಮಕ್ಕ’)ಗೆ ಧರ್ಮ ಮೀರಿದ ಸೀಮಂತ! ಹಾರೈಸಿದ ಮುಸ್ಲಿಂ ಸಮುದಾಯ!ಜನರ ಪ್ರೀತಿಯ ಉಡುಗೊರೆ…

    ಹಿಂದೂ-ಮುಸ್ಲಿಂ ಸೇರಿ ಸೀಮಂತ… ‘ರಾಮಕ್ಕ’ಗೆ ಜನರ ಪ್ರೀತಿಯ ಉಡುಗೊರೆ!

    ತುಮಕೂರು: ಅದು ಕೇವಲ ಸೀಮಂತ ಕಾರ್ಯಕ್ರಮವಾಗಿರಲಿಲ್ಲ… ಧರ್ಮದ ಗಡಿಗಳನ್ನು ಮೀರಿ ಮನುಷ್ಯತ್ವ ಒಂದಾದ ಅಪರೂಪದ ಕ್ಷಣವಾಗಿತ್ತು. ಕೊರಟಗೆರೆಯ ಜನರ ಪ್ರೀತಿಗೆ ಪಾತ್ರರಾಗಿರುವ ತುಮಕೂರು ಉಪವಿಭಾಗಾಧಿಕಾರಿ ನಾಹೀದಾ ಜಮ್‌ಜಮ್ ಅವರಿಗೆ ಹಿಂದೂ-ಮುಸ್ಲಿಂ ಸೇರಿದಂತೆ ವಿವಿಧ ಸಮುದಾಯದವರು ಸೇರಿ ಸೀಮಂತ ನೆರವೇರಿಸಿ ಹಾರೈಸಿದರು.

    ಒಂದೆಡೆ ಹಿಂದೂ ಸಂಪ್ರದಾಯದಂತೆ ಬಳೆ, ಸೀರೆ, ಹಣ್ಣು-ಹಂಪಲು, ಅಕ್ಷತೆ, ತೆಂಗಿನಕಾಯಿ, ಸಿಹಿತಿಂಡಿ ಸೇರಿದಂತೆ ಮಡಿಲು ತುಂಬಿದರೆ, ಮತ್ತೊಂದೆಡೆ ಮುಸ್ಲಿಂ ಸಮುದಾಯದವರು ಉಡುಗೊರೆ ನೀಡಿ ಶುಭ ಹಾರೈಸಿದರು. ಹೀಗೆ ಆಚರಣೆಗಳು ಬೇರೆಬೇರೆ ಇದ್ದರೂ ಹಾರೈಕೆಯ ಮನಸ್ಸು ಒಂದೇ ಆಗಿತ್ತು.

    ಕೊರಟಗೆರೆಯಲ್ಲಿ ‘ರಾಮಕ್ಕ’ ಎಂದೇ ಆತ್ಮೀಯವಾಗಿ ಕರೆಯಲ್ಪಡುವ ನಾಹೀದಾ ಅವರಿಗೆ ಸಿಕ್ಕ ಈ ಗೌರವ, ಅವರು ಅಧಿಕಾರಿಯಾಗಿದ್ದಾಗ ಜನರೊಂದಿಗೆ ಬೆಳೆಸಿಕೊಂಡ ಬಾಂಧವ್ಯಕ್ಕೆ ಸಾಕ್ಷಿಯಾಯಿತು.

    Also Read  ಇಂದು ಮಂಗಳೂರಲ್ಲಿ ತಲೆಮೇಲೆ ಸುತ್ತು ಹೊಡೆದಂತೆ ಬಾರಿ ಶಬ್ದದೊಂದಿಗೆ ಹೆಲಿಕಾಪ್ಟರ್‌..!ಆಶ್ಚರ್ಯ ಮತ್ತು ಆತಂಕದ ಹಿಂದಿದೆ ಭದ್ರತಾ ‘ಮೆಗಾ ಡ್ರಿಲ್’ ..!ಅಸಲಿ ಕಾರಣವೇನು

    ಸಿದ್ದರಬೆಟ್ಟದ ಸಿದ್ದೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿರುವ ನಾಹೀದಾ, ಗೊರವನಹಳ್ಳಿ ಮಹಾಲಕ್ಷ್ಮೀ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದ್ದಾರೆ. ದೇವಾಲಯ, ಮಸೀದಿ, ಚರ್ಚ್ ಎಂಬ ಭೇದವಿಲ್ಲದೆ ಎಲ್ಲ ಧರ್ಮಗಳಿಗೂ ಗೌರವ ತೋರಿಸಿರುವ ಅವರ ನಡೆ ಕೂಡ ಜನರೊಂದಿಗೆ ಆತ್ಮೀಯತೆ ಬೆಳೆಸಲು ಕಾರಣವಾಗಿದೆ.

    2021ರಿಂದ 2023ರವರೆಗೆ ಕೊರಟಗೆರೆ ತಹಸೀಲ್ದಾರ್ ಆಗಿದ್ದ ಅವಧಿಯಲ್ಲಿ ನಾಹೀದಾ ಹಲವು ಜನಪರ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಕೊರೊನಾ ಕಾಲದಲ್ಲಿ ಗರ್ಭಿಣಿಯಾಗಿದ್ದರೂ ಕರ್ತವ್ಯಕ್ಕೆ ಹಾಜರಾಗಿ ಕೆಲಸ ಮಾಡಿದ್ದ ಅವರು, ಆಂಬ್ಯುಲೆನ್ಸ್ ಸೇವೆಯಲ್ಲಿನ ಅಕ್ರಮವನ್ನು ಬಯಲಿಗೆಳೆಯುವ ಮೂಲಕ ಗಮನ ಸೆಳೆದಿದ್ದರು.

    ಹಕ್ಕಿಪಿಕ್ಕಿ ಸಮುದಾಯದ ವಸತಿ ವಿಚಾರ, ಕಾರ್ಮಿಕರ ರಕ್ಷಣೆ, ಹಿರಿಯ ನಾಗರಿಕರಿಗೆ ನ್ಯಾಯಾಲಯದ ಸೇವೆ ತಲುಪಿಸುವಂತಹ ಹಲವು ಕಾರ್ಯಗಳು ಅವರ ಜನಪರ ಸೇವೆಯ ನೆನಪುಗಳಾಗಿ ಉಳಿದಿವೆ.

    Also Read  ಕಪ್ಪೆ ಚಿಪ್ಪು ದುರಂತಕ್ಕೆ ಮತ್ತೆರಡು ಜೀವ ಬಲಿ, ಬಲಿಯ ಸಂಖ್ಯೆ ಏರುವ ಸಾಧ್ಯತೆ

    ಹೀಗಾಗಿಯೇ ಸೀಮಂತದ ದಿನ ‘ಅಧಿಕಾರಿ’ ಎಂಬ ಅಂತರವೇ ಇರಲಿಲ್ಲ. ಕೊರಟಗೆರೆಯ ಜನರಿಗೆ ಅವರು ‘ನಮ್ಮ ರಾಮಕ್ಕ’. ಧರ್ಮ ಬೇರೆ… ಸಂಪ್ರದಾಯ ಬೇರೆ… ಆದರೆ ಪ್ರೀತಿ ಒಂದೇ ಎಂಬ ಸಂದೇಶವನ್ನು ಈ ಸೀಮಂತ ಕಾರ್ಯಕ್ರಮ ಸಾರಿತು.

    ದ್ವೇಷಕ್ಕೆ ಜಾಗವಿಲ್ಲ… ಪ್ರೀತಿಗೆ ಗಡಿ ಇಲ್ಲ. ಕೊರಟಗೆರೆಯ ‘ರಾಮಕ್ಕ’ಗೆ ಜನರು ನೀಡಿದ ಈ ಸೀಮಂತ, ಸೌಹಾರ್ದತೆಯ ಸುಂದರ ಚಿತ್ರಣವಾಗಿ ಗಮನ ಸೆಳೆಯಿತು.

    ##NahidaJamJam #Koratagere #Tumakuru #Ramakka #CommunalHarmony #HinduMuslimUnity #Souharda #KarnatakaNews #ViralNews #LocalNews

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ಪಶ್ಚಿಮ ಘಟ್ಟದ ಕಸ್ತೂರಿರಂಗನ್ ವರದಿಗೆ ಬ್ರೇಕ್?…ವಿಶೇಷ ಅಧಿವೇಶನಕ್ಕೆ ಸರ್ಕಾರ ಸಿದ್ಧತೆ
    ಕರ್ನಾಟಕ–ತಮಿಳುನಾಡು ಮೇಕೆದಾಟು ವಾದ ವಿರೋಧಕ್ಕೆ ಕರ್ನಾಟಕದ ಆಹ್ವಾನ ಸ್ವೀಕರಿಸಿ ವಿಜಯ್ ಬೆಂಗಳೂರಿಗೆ? ಇಂದು ಬೆಂಗಳೂರಿನಲ್ಲಿ ಮಹತ್ವದ ಚರ್ಚೆ!
    ಮುಖ್ಯಮಂತ್ರಿ ಮಾಧ್ಯಮ ಕಾರ್ಯದರ್ಶಿಯ ನೂತನ ಕಚೇರಿ ಉದ್ಘಾಟನೆ
    ಸಿಟಿ ಬಸ್ ಫೋಲ್ಡಿಂಗ್ ಬಾಗಿಲು ಕಡ್ಡಾಯ: ಸುರಕ್ಷತೆಗೆ ಹೆಜ್ಜೆ, ಆದರೆ ಸವಾಲುಗಳೇನು? ಪರಿಹಾರ ಹೇಗೆ?
    ಇಂದು ಬೆಳ್ಳಂ ಬೆಳಗ್ಗೆ ಪಲ್ಟಿ ಯಾದ ಬಸ್… ಒಬ್ಬ ಸಾವು ಹಲವರಿಗೆ ಗಾಯ
    ಪೆಟ್ರೋಲ್ ಡೀಸೆಲ್ ದರ ಏರಿಕೆ ತಡೆಯಲು ಕೇಂದ್ರದ ಮಹತ್ವದ ಕ್ರಮ 
    MRPL ಗೇಟ್‌ ಮುಂದೆ ಭಾರೀ ಪ್ರತಿಭಟನೆ- ಬೆಳ್ಳಂಬೆಳಗ್ಗೆ ಸೇರಿದ ಜನಸಮೂಹ
    ಚಿನ್ನ ಮತ್ತು ಬೆಳ್ಳಿ ಮಾರುಕಟ್ಟೆ ಜಿಗಿತ-ಸುಂಕ ಏರಿಕೆಯಿಂದ ಬೆಲೆಯಲ್ಲಿ ಭಾರೀ ಏರಿಕೆ ಗ್ರಾಹಕರಿಗೆ ಹೊರೆ.
    ಮಾದಕ ವಸ್ತು ಮಾರಾಟ ಮಾಡಲು ಯತ್ನಿಸುತ್ತಿದ್ದ ಆರೋಪಿಯ ಬಂಧನ
    ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಬರೆ ಹಾಕಿದ ರಾಜ್ಯ ಸರ್ಕಾರ!
    ಚುನಾವಣಾ ಆಯೋಗ ಸರ್ವಾಧಿಕಾರಿಯಾಗುತ್ತಿದೆ ಎಂಬ ಅನುಮಾನದ ಸುತ್ತ….
    ಅಮೇರಿಕಾ ಅಧ್ಯಕ್ಷರ ಮೇಲೆ ಎರಡನೆಯ ಬಾರಿ ಗುಂಡಿನ ದಾಳಿ
    ಶಿವಮೊಗ್ಗದಲ್ಲಿ17 ವರ್ಷದ ಬಾಲಕಿ ನಾಪತ್ತೆ ಎಂದು ನಂಬಿಸಿದ್ದ ಬೆಚ್ಚಿಬೀಳಿಸಿದ ರಹಸ್ಯ ಬಯಲು ..!ಶವವನ್ನು ಸೂಟ್‌ಕೇಸ್‌ನಲ್ಲಿ ಸಾಗಿಸಿ ಕಾಡಿಗೆ ಎಸೆದರು..!
    ಶೃಂಗೇರಿ ವಿಧಾನಸಭೆಯ ಮರುಕೌಂಟಿಂಗ್ ನಲ್ಲಿ ನಡೆದ ಲಪಡಾಗಳೇನು?
    ದಿಶಾ ಸಾಲಿಯನ್ ಕೇಸ್‌ ರೀಓಪನ್‌…ಸುಶಾಂತ್ ಸಿಂಗ್ ಸಾವಿನ ಪ್ರಶ್ನೆಗಳಿಗೆ ಸಿಗುತ್ತಾ ಉತ್ತರ?
    ಹೊಸ ರಾಜಕೀಯ ಕ್ರಾಂತಿ! ಅಸ್ಸಾಂ ಕುದಿಯುತ್ತಿದೆ…ಹಿಂದುತ್ವ vs ಗುರುತು ರಾಜಕೀಯ…!
    14ರ ಸೊಂಟಕ್ಕೆ ಕೈ ಹಾಕಿದ ಮದರಸಾ ಮೌಲ್ವಿಗೆ 20 ವರ್ಷ ಕಠಿಣ ಶಿಕ್ಷೆ
    “ವಿ ದಿ ಲೀಡರ್ಸ್”ಅಣ್ಣಾಮಲೈ ಮಾಸ್ಟರ್ ಪ್ಲಾನ್!ಸಿನಿಮಾ ವರ್ಚಸ್ಸಿನ ಟಿವಿಕೆ (TVk) ಯನ್ನ ಮಕಾಡೆ ಮಲಗಿಸಲು ಸಜ್ಜಾಗ್ತಾ ಇದೆಯಾ..?
    ಕಾಸರಗೋಡು ಕನ್ನಡ ಶಾಲೆಗಳ ಉಳಿವಿಗೆ ಆಗ್ರಹ — ಜಿಲ್ಲಾಧಿಕಾರಿಗೆ ಮನವಿ
    ಉಡುಪಿಯ ಆರು ತಹಶೀಲ್ದಾರ್ ಕಚೇರಿಗಳಿಗೆ ಲೋಕಾಯುಕ್ತ ಪೊಲೀಸರ ದಾಳಿ… ದಾಳಿಯ ಬಿಸಿ ತಟ್ಟುತ್ತದಾ ಅಧಿಕಾರಿಗಳಿಗೆ?
    ಚಿನ್ನ ಖರೀದಿಸುವ ಕಾಲ ಹೋಯ್ತಾ? ಗಗನಕ್ಕೇರಿದ ದರ ಕೇಳಿ ಬೆಚ್ಚಿಬಿದ್ದ ಜನ!ಒಂದೂವರೆ ಲಕ್ಷ ರೂಪಾಯಿ ಗಡಿದಾಟಿತಾ …?ಬೆಳ್ಳಿಎರಡೇ ದಿನದಲ್ಲಿ ಆರು ಸಾವಿರ ಏರಿಕೆ
    ಬಾಲ್ಯದ ಗೆಳೆಯನ ಬಲೆಗೆ ಬಿದ್ದ ವಾಯುಸೇನೆ ಅಧಿಕಾರಿಯ ಪತ್ನಿ?! ಲೈಂಗಿಕ ಬ್ಲ್ಯಾಕ್‌ಮೇಲ್,’ಕಬೂಲ್ ಹೈ’ ಹೇಳುವಂತೆ ಒತ್ತಾಯ!
    ಸ್ವಾತಂತ್ರ್ಯ ದಿನಾಚರಣೆಗೂ ಮುನ್ನ ದೆಹಲಿ ಹೈಕೋರ್ಟ್, ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ: ಭದ್ರತೆ ಬಿಗಿ
    ಪ್ರಜ್ವಲ್ ರೇವಣ್ಣ ಕೇಸ್‌ಗೆ ಬಿಗ್ ಟ್ವಿಸ್ಟ್: ಸಾಕ್ಷಿಗೆ ಬೆದರಿಕೆ ಕರೆ!
    ಹೆಸರು ಬದಲಾವಣೆ ಪಶ್ಚಿಮ ಬಂಗಾಳ ಪೆಂಡಿಂಗ್, ಕೇರಳ ಪ್ರಗತಿಯಲ್ಲಿ
    ಬಾಲ್ಯದಲ್ಲೇ ಕಲಿಯಲಿ ಹಣದ ಲೆಕ್ಕ!ಮಕ್ಕಳಿಗಿನ್ನು ಪುಸ್ತಕದ ಜೊತೆ ‘ಹಣದ ಜ್ಞಾನ’! 956 ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಹಣಕಾಸು ಸಾಕ್ಷರತಾ ಪಾಠ
    ಮೇ 22 ಮಂಗಳೂರು ಎಂದಿಗೂ ಮರೆಯದ ದಿನ…
    ಆಂಬುಲೆನ್ಸ್ ಡ್ರೈವರ್ ನ ಸಮಾಜ ಸೇವೆಯ ಕಾರ್ಯ ಶ್ಲಾಘನಿಯ – ಸುದೇಶ್ ಕುಮಾರ್
    ಈ ಬಾರಿ ಮಕ್ಕಳೊಟ್ಟಿಗೆ PUC ಎಕ್ಸಾಮ್ ಪಾಸಾದಅಮ್ಮಂದಿರೇ ಮನಸ್ಸಿದ್ದರೆ ಮಾರ್ಗ ಇದೆ ಅನ್ನೋದಕ್ಕೆ…ಪ್ರೇರಣೆ…!
    ಪ.ಪಂ ಮುಖ್ಯಾಧಿಕಾರಿ – 1 ಲಕ್ಷ ಲಂಚ ಸ್ವೀಕಾರದ ವೇಳೆ ರೆಡ್ ಹ್ಯಾಂಡ್!