📍 Karavali Maruta
  • LOGIN
  • ತಾಜಾಸುದ್ದಿಗಳು ಕರಾವಳಿ ರಾಜ್ಯ ರಾಜಕೀಯ ಕ್ರೈಂ ಕ್ರೀಡೆ ವಿದೇಶ ಮನರಂಜನೆ ಲೇಖನ

    ಪೆಟ್ರೋಲ್ ಬಂಕ್‌ನಲ್ಲಿ ಅಳತೆ ಮೋಸ? ಗ್ರಾಹಕರೇ ಎಚ್ಚರ!

    ಪೆಟ್ರೋಲ್, ಡೀಸೆಲ್ ತುಂಬಿಸುವಾಗ ನಾವು ಪಾವತಿಸುವ ಹಣಕ್ಕೆ ಸರಿಯಾದ ಪ್ರಮಾಣದ ಇಂಧನ ಸಿಗುತ್ತಿದೆಯೇ? ಎಂಬ ಪ್ರಶ್ನೆ ಇದೀಗ ಗಂಭೀರವಾಗಿದೆ.

    ರಾಜ್ಯದ ಪೆಟ್ರೋಲ್ ಬಂಕ್‌ಗಳಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ನಡೆಸಿದ ತಪಾಸಣೆಯಲ್ಲಿ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ಬೆಳಕಿಗೆ ಬಂದಿದೆ. ರಾಜ್ಯದಲ್ಲಿರುವ ಒಟ್ಟು 5,946 ಬಂಕ್‌ಗಳ ಪೈಕಿ ಈವರೆಗೆ 805 ಬಂಕ್‌ಗಳಲ್ಲಿ ತಪಾಸಣೆ ನಡೆಸಲಾಗಿದೆ. ಈ ಪೈಕಿ 768 ಬಂಕ್‌ಗಳಲ್ಲಿ ಅಳತೆಗೆ ಸಂಬಂಧಿಸಿದ ಲೋಪಗಳು ಪತ್ತೆಯಾಗಿವೆ ಎಂದು ಸಚಿವ ರಿಜ್ವಾನ್ ಅರ್ಷದ್ ತಿಳಿಸಿದ್ದಾರೆ.

    ಅಳತೆ ವ್ಯತ್ಯಾಸ ಕಂಡುಬಂದ ಬಂಕ್‌ಗಳ ವಿರುದ್ಧ ಪ್ರಕರಣ ದಾಖಲಿಸುವ ಕ್ರಮ ಕೈಗೊಳ್ಳಲಾಗಿದೆ. ನಿಯಮ ಉಲ್ಲಂಘನೆ ಮುಂದುವರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

    ಗ್ರಾಹಕರಿಗಾಗಿ ಹೊಸ ವ್ಯವಸ್ಥೆ

    ಪೆಟ್ರೋಲ್ ಬಂಕ್‌ಗಳಲ್ಲಿ ಕ್ಯಾಲಿಬರೇಷನ್ ಹಾಗೂ ಪರಿಶೀಲನೆಯ ದಿನಾಂಕವನ್ನು ಸಾರ್ವಜನಿಕರಿಗೆ ಸ್ಪಷ್ಟವಾಗಿ ಕಾಣುವಂತೆ ಪ್ರದರ್ಶಿಸುವ ವ್ಯವಸ್ಥೆ ಮಾಡಲಾಗುತ್ತಿದೆ.

    ಅನುಮಾನ ಬಂದರೆ ಗ್ರಾಹಕರು ನಿಗದಿತ ಮಾಪಕಗಳ ಮೂಲಕ ಇಂಧನದ ಪ್ರಮಾಣವನ್ನು ಪರಿಶೀಲಿಸುವ ಅವಕಾಶ ಕಲ್ಪಿಸಲಾಗುತ್ತದೆ.

    ಇದಲ್ಲದೆ, ರಾಜ್ಯದ ಪೆಟ್ರೋಲ್ ಬಂಕ್‌ಗಳ ಸರಕಾರದ ಪ್ರಮಾಣೀಕೃತ ಮಾಹಿತಿಯನ್ನು ಒಳಗೊಂಡ ಆನ್‌ಲೈನ್ ಡ್ಯಾಶ್‌ಬೋರ್ಡ್ಆರಂಭಿಸುವ ಯೋಜನೆಯೂ ಇದೆ.

    ಅಳತೆಯಲ್ಲಿ ಮೋಸ ಕಂಡುಬಂದರೆ ಗ್ರಾಹಕರು 1800 5991100 ಟೋಲ್‌ಫ್ರೀ ಸಹಾಯವಾಣಿಗೆ ದೂರು ದಾಖಲಿಸಬಹುದು.

    ವ್ಯವಸ್ಥೆ ಎಷ್ಟೇ ಜಾಗೃತವಾದರೂ…

    ವ್ಯವಸ್ಥೆ ಎಷ್ಟೇ ಜಾಗೃತವಾದರೂ, ಅದನ್ನು ಮೀರಲು ಕೆಲವರು ಹೊಸ ದಾರಿಗಳನ್ನು ಹುಡುಕುತ್ತಲೇ ಇರುತ್ತಾರೆ.

    ಕೆಲವರು ಚಾಪೆ ಕೆಳಗೆ ತೂರಿದರೆ, ಇನ್ನು ಕೆಲವರು ರಂಗೋಲಿ ಕೆಳಗೆ ತೂರಿಸುತ್ತಾರೆ; ಮತ್ತೊಬ್ಬರು ಅದಕ್ಕೂ ಮೀರಿಸಿ ಹೊಸ ಹೊಸ ದಾರಿಯನ್ನೇ ಸೃಷ್ಟಿಸಿಕೊಂಡು ಬಿಡುತ್ತಾರೆ.

    ಅಂದರೆ ಮೋಸಕ್ಕೆ ನೂರಾರು ದಾರಿಗಳಿರಬಹುದು… ಆದರೆ ಸತ್ಯದ ದಾರಿಯಲ್ಲಿ ನಡೆಯುವವನಿಗೆ ನ್ಯಾಯ, ನಿಷ್ಠೆ ಮತ್ತು ಸರಿ–ತಪ್ಪಿನ ಅರಿವೇ ದಾರಿ.

    ಕೊನೆಗೆ ಈ ವ್ಯವಸ್ಥೆಯಲ್ಲಿನ ಯಾವುದೇ ಲೋಪದ ಹೊರೆ ಬೀಳೋದು ಸಾಮಾನ್ಯ ಜನರ ಜೇಬಿನ ಮೇಲೆಯೇ.
    ಆದ್ದರಿಂದ ಗ್ರಾಹಕರು ಎಚ್ಚರವಾಗಿರುವುದು, ಪ್ರಶ್ನಿಸುವುದು ಮತ್ತು ಮೋಸ ಕಂಡರೆ ದೂರು ನೀಡುವುದು—ಇದೇ ವಂಚನೆಗೆ ಕಡಿವಾಣ ಹಾಕುವ ಮೊದಲ ಹೆಜ್ಜೆ.

    ##PetrolPump #PetrolFraud #FuelFraud #ConsumerRights #ConsumerAwareness #KarnatakaNews #PublicAwareness

    COMMENTS

    Login with Gmail to comment

    ಇನ್ನಷ್ಟು ಸುದ್ದಿ

    ನಿಮ್ಮ ಮಾತು ಕೇಳಿ ರಾಜೀನಾಮೆ ನೀಡಿದ್ದೇನೆ. ಈಗ ನನ್ನ ಬೇಡಿಕೆ ಈಡೇರಿಸುವುದು ನಿಮ್ಮ ಸರದಿ  ಎಂದ ಸಿದ್ದರಾಮಯ್ಯ
    ವಿಶಾಖಪಟ್ಟಣಂ ಉಕ್ಕಿನ ಕಾರ್ಖಾನೆ ದುರಂತ:ಕೆಲವೇ ಕ್ಷಣಗಳಲ್ಲಿ ಎಂಟು ಜೀವಗಳನ್ನು ನುಂಗಿದ ಉಕ್ಕಿನ ಬೆಂಕಿ!ಕೆಲಸಕ್ಕೆ ಹೋದವರು ಮನೆಗೆ ಮರಳಲಿಲ್ಲ… 
    ಕಾರ್ಕಳ ಮಹಾಮಸ್ತಕಾಭಿಷೇಕಕ್ಕೆ ₹1.59 ಕೋಟಿ ಅನುದಾನ: ಮೊದಲ ಕಂತು ಬಿಡುಗಡೆ…
    ಯುದ್ಧ: ಯಾವುದೇ ಜಾಗತಿಕ ನಾಯಕರ ಮಾತುಕತೆ ಫಲಪ್ರದವಾಗದೇ?!
    ಘೋರ ಭಾನುವಾರ, ಒಂದೇ ಕುಟುಂಬದ ಎಂಟು ಮಹಿಳೆಯರ ದುರ್ಮರಣ
    ಶಸ್ತ್ರಚಿಕಿತ್ಸೆಯ ಪಿತಾಮಹ ಮಹಾನ್ ವೈದ್ಯ….ಸುಶ್ರುತನನ್ನ ಜಗತ್ತು ಗೌರವಿಸಿದ ಕ್ಷಣ…ಆಧುನಿಕ ವೈದ್ಯಕೀಯದ ಬೇರುಗಳು ಭಾರತದಲ್ಲೇ…
    2 ನಿಮಿಷ ತಡವಾದರೆ ಒಂದು ವರ್ಷ ಶಿಕ್ಷೆಯೇ? –ವಿದ್ಯಾರ್ಥಿಯ ಭವಿಷ್ಯಕ್ಕಿಂತ ಗಡಿಯಾರದ ಮುಳ್ಳು ದೊಡ್ಡದಾಯಿತೇ? 
    ಅಗತ್ಯ ಮಾಹಿತಿ ಇಲ್ಲಿದೆ ಓದಿ..!“ಎಲ್‌ಪಿಜಿ ಬುಕಿಂಗ್‌ಗೆ ಹೊಸ ನಂಬರ್‌ಗಳು: ಆತಂಕ ಬೇಡ, ಸರಬರಾಜು ಶೀಘ್ರ ಸಾಮಾನ್ಯಕ್ಕೆ!”
    AAP ಸದ್ದು ಮಂಗಳೂರಲ್ಲೂ! ಜನರ ಸಮಸ್ಯೆಗೆ ನೇರ ಹೋರಾಟ
    ಕರ್ನಾಟಕದಲ್ಲಿ ತಾಪಮಾನ ಅಪಾಯ ಮಟ್ಟಕ್ಕೆ!ಆಸ್ಪತ್ರೆಗಳಲ್ಲಿ ವಿಶೇಷ ಹೀಟ್ ಸ್ಟ್ರೋಕ್ ರೂಮ್‌ಗಳು-ಆರೋಗ್ಯ ಇಲಾಖೆ ತುರ್ತು ಕ್ರಮ ಜಾರಿ
    ಸರ್ಕಾರಿ ಆಸ್ಪತ್ರೆಗಳ ಖಾಸಗೀಕರಣಕ್ಕೆ ಆಪ್ ತೀವ್ರ ವಿರೋಧ-ಒಪ್ಪಂದ ಬಹಿರಂಗಪಡಿಸುವಂತೆ ಆಗ್ರಹ
    ದುಬೈ ಕನಸು… ಜೈಲು ವಾಸ್ತವ!ಡ್ರಗ್ ಮಾಫಿಯಾದ ಗುರಿಯೇ ಯುವಕರು..!!ಭವಿಷ್ಯ ಕಳೆದುಕೊಳ್ಳುವ ಮುನ್ನ ಎಚ್ಚರ!
    “ಸೌಜನ್ಯಾ ಕೇಸ್ ಮತ್ತೆ ಓಪನ್!”14 ವರ್ಷಗಳ ಬಳಿಕ ಸೌಜನ್ಯಾ ಪ್ರಕರಣಕ್ಕೆ ಮತ್ತೆ ಮರುಜೀವ!ಸುಪ್ರೀಂ ‘ರೀ-ಸ್ಟಾರ್ಟ್’!
    ಮಂಗಳೂರಿನಲ್ಲಿ ಐತಿಹಾಸಿಕ ಸಚಿವ ಸಂಪುಟ ಸಭೆ ಸೆ.18ಕ್ಕೆ..!
    ಅರೆ ವಾ..! ಕರ್ನಾಟಕದ ಜನರಿಗೆ ಫ್ಯಾನ್ಸಿ ನಂಬರ್‌ಗಳೇ ಫೇವರಿಟ್…RTOಗೆ ₹118 ಕೋಟಿ ಆದಾಯ!
    ದೆಹಲಿ ಕೆಂಪುಕೋಟೆ ಸ್ಫೋಟಕ್ಕೆ AQIS ಸಂಪರ್ಕ: UNSC ವರದಿಯಿಂದ ಬೆಚ್ಚಿಬಿದ್ದ ಭದ್ರತಾ ವಲಯ
    ಕೊನೆಕ್ಷಣದ ಹೃದಯ ಕಲುಕುವ ಹರೀಶ್ ರಾಣಾ – ದಯಾಮರಣvedio
    ಕಾಂಗ್ರೆಸ್–ಮುಸ್ಲಿಂ ಸಮುದಾಯ ಸಂಬಂಧದಲ್ಲಿ ದೊಡ್ಡ ಬಿರುಕು?
    ಘರ್ಷಣೆಗಳ ನಡುವೆಯೂ ಜನರ ಮತದ ಹಕ್ಕು ಅಚಲ…ಸಂಕ್ಷಿಪ್ತ ನೋಟ..
    ಕುಂದಾಪುರದಲ್ಲಿ ಗುಂಡಿನ ದಾಳಿ: ಬಾರ್ಕೂರು ಮೂಲದ ಐವನ್ ರಿಚರ್ಡ್ ಮಸ್ಕರೇನಸ್ ಹತ್ಯೆ
    ಹನಿಟ್ರ್ಯಾಪ್ ಕ್ವೀನ್ ಜೀನತ್ ಇಬ್ರಾಹಿಂ ಗೆ ನ್ಯಾಯಾಂಗ ಬಂಧನ- ಟ್ರ್ಯಾಪ್ ನಲ್ಲಿ ಹೊಸ ಹೊಸ ಹೆಸರುಗಳು !!!?
    ಎಚ್ಚರ… ನಿಮ್ಮಸುತ್ತಮುತ್ತ ಏನು ನಡೆಯುತ್ತಿದೆ ಗೊತ್ತಿರಲಿ! 🚨Be Aware… Stay Alert… Save Youth!
    “ಅಮ್ಮನ ನೋವು ನೋಡಲಾಗಲಿಲ್ಲ…” ನಾಲ್ಕನೇ ಮಹಡಿಯಿಂದ ತಳ್ಳಿದ ಮಗ …
    ಮಹಿಳಾ ಕಾನ್ಸ್‌ಟೇಬಲ್ ಮೇಲೆ ಪೊಲೀಸ್ ಠಾಣೆಯಲ್ಲಿ ಮಾರಣಾಂತಿಕ ಹಲ್ಲೆ
    “ಬಾದಾಮಿ ತಿಂದರೆ ಮೆಮೊರಿ ಹೆಚ್ಚಾಗಿ, ನನ್ನ ಫೈಲ್ ಎಲ್ಲಿ ಇದೆ ಎಂದು ನೆನಪಾಗಬಹುದು”-ಹಣ ಕೊಡದೇ ಕೆಲಸ ಆಗೋದಿಲ್ಲ ಎಂಬ ಭ್ರಷ್ಟ ವ್ಯವಸ್ಥೆ ಇನ್ನೂ ಬಲವಾಗಿ ಜೀವಂತವಾಗಿದೆ…!
    ಶಾಸಕ ಹ್ಯಾರಿಸ್ ಮೇಲೆ ಪ್ರಕರಣ ದಾಖಲು
    ತಮಿಳು ರಾಜಕೀಯ ರಣರಂಗದಲ್ಲಿ “ವಿಜಯ”ಗಾಥೆ 118 ದಾಟಿದ TVK  ವಿಜಯ್ ಕೈ ಹಿಡಿದ ಮೈತ್ರಿ ಪಕ್ಷಗಳು!
    ವಿಟ್ಲದಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ವಿರೋಧಿ ಜಾಗೃತಿ ಕಾರ್ಯಕ್ರಮ
    ಭಾರತದ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಅನ್ನೋ ಇತಿಹಾಸ ಬರೆಯಲಿದ್ದಾರೆ ‘ಡಿ ಕೆ ಶಿ’!
    ನೂರರ ಸಂಭ್ರಮದಲ್ಲಿ “ಜೈ” ತುಳು ಸಿನಿಮಾ